Marriage astrology: ಮದುವೆಯೆಂಬುದು ಕೇವಲ ಗಂಡು ಹೆಣ್ಣಿನ ನಡುವಿನ ಬಾಂಧವ್ಯವಾಗಿರದೆ ಅದು ಎರಡು ಮನೆತನಗಳ ಬೆಸುಗೆ ಆಗಬೇಕು ಎನ್ನುವುದನ್ನು ಹಿರಿಯರು ಹೇಳುತ್ತಾರೆ. ಯಾವ ರಾಶಿಗೆ ಯಾವ ರಾಶಿಯವರೊಡನೆ ವಿವಾಹವಾದರೆ (Marriage) ಅವರ ಬದುಕು ಸುಂದರವಾಗಿ ಇರುತ್ತದೆ ಎನ್ನುವುದನ್ನು ಹಿರಿಯರು ತಮ್ಮ ಅನುಭವಗಳಿಂದ ನೋಡಿ ಮುಂದಿನ ಪೀಳಿಗೆಗೆ ತಿಳಿಸಿ ಹೋಗಿದ್ದಾರೆ. ಅಂತೆಯೇ ವೃಷಭ ರಾಶಿಯವರಿಗೆ ಯಾವ ರಾಶಿಯವರೊಡನೆ ವಿವಾಹ (Marriage life) ಜೀವನವು ಹೊಂದಾಣಿಕೆಯನ್ನು ತರುತ್ತದೆ ಎಂದು ನೋಡೊಣ ಬನ್ನಿ
Marriage astrology Taurus
ವೃಷಭ ರಾಶಿಯೊಂದಿಗೆ ಮೊದಲ ರಾಶಿಯಾದ ಮೇಷರಾಶಿಯನ್ನು ಹೊಂದಿಸಿ ನೋಡಿದಾಗ, ಮೇಷ ರಾಶಿಯನ್ನು ಮಂಗಳನು ಹಾಗೂ ವೃಷಭ ರಾಶಿಯನ್ನು ಶುಕ್ರನು ಆಳುತ್ತಾರೆ. ಎರಡು ರಾಶಿಗಳು ಪ್ರಾಮಾಣಿಕತೆಯಿಂದ ಕೂಡಿದ ಸ್ಥಿರ ಸಂಬಂಧವನ್ನು ಹೊಂದುತ್ತವೆ. ಇವರಿಬ್ಬರ ಸಕಾರಾತ್ಮಕ ಸಂಬಂಧವು ಇವರ ಬಾಂಧವ್ಯವನ್ನು ವೃದ್ಧಿಸುತ್ತದೆ. ವೃಷಭ ರಾಶಿಯೊಂದಿಗೆ ವೃಷಭ ರಾಶಿಯವರ ಬಾಂಧವ್ಯವು ಎಚ್ಚರಿಕೆಯಿಂದ ಕೂಡಿರುತ್ತದೆ. ಇ ಎರಡು ರಾಶಯವರ ವಿವಾಹದ ಮೊದಲು ಸಾಕಷ್ಟು ಯೋಚನೆ ಮಾಡುವುದು ಅಗತ್ಯವಿದೆ.
ವೃಷಭ ರಾಶಿಯೊಂದಿಗೆ ಮಿಥುನ ರಾಶಿಯನ್ನು ಹೊಂದಿಸುವುದು ಸ್ವಲ್ಪ ಕಷ್ಟದ ಕೆಲಸ. ಯಾಕೆಂದರೆ ಇಬ್ಬರಲ್ಲಿಯು ಸ್ವಾಭಿಮಾನವು ಹೆಚ್ಚಾಗಿರುತ್ತದೆ. ಅದು ಕೆಲವೊಮ್ಮೆ ಜಗಳಗಳಿಗೆ ಕಾರಣವಾಗಬಹುದು. ಇಬ್ಬರು ಸಹ ತಮ್ಮ ಸ್ವಭಾವವನ್ನು ಸ್ವಲ್ಪ ಮಟ್ಟಿಗೆ ಬದಲಿಸಿಕೊಂಡಲ್ಲಿ ಬದುಕು ಸುಂದರವಾಗುತ್ತದೆ. ವೃಷಭರಾಶಿಗೆ ಕಟಕ ರಾಶಿಯೊಂದಿಗೆ ಹೊಂದಾಣಿಕೆ ಹೇಗಿದೆ ಎಂದು ನೋಡೋಣ. ಕಟಕ ಹಾಗೂ ವೃಷಭ ರಾಶಿಯವರು ಸಂಬಂಧದ ಆರಂಭದಿಂದಲು ನಿಧಾನ ಪ್ರವತ್ತಿಯನ್ನು ಹೊಂದಿರುತ್ತಾರೆ. ಹಾಗೂ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಾರೆ. ಇವರಲ್ಲಿ ಹೊಂದಾಣಿಕೆಯು ಹೆಚ್ಚಾಗಿರುತ್ತದೆ.
ಸಿಂಹ ರಾಶಿ (Leo) ಹಾಗೂ ವೃಷಭ ರಾಶಿಯಲ್ಲಿ ಕಂಡು ಬರುವ ಸಾಮಾನ್ಯವಾಗಿ ಹೊಂದದ ಗುಣ ಲಕ್ಷಣವೆಂದರೆ, ಸಿಂಹ ರಾಶಿಯವರು ಸಹ ಜನರನ್ನು ತಮ್ಮತ್ತ ಸೆಳೆಯಲು ಬಯಸುತ್ತಾರೆ. ಹಾಗೂ ವೃಷಭ ರಾಶಿಯವರು ತಮ್ಮ ಹತ್ತಿರದ ಜನರ ಬಳಿ ಮಾತ್ರ ಆತ್ಮೀಯತೆಯನ್ನು ಹೊಂದಿರುತ್ತಾರೆ. ಇವರ ವೈಯ್ಯಕ್ತಿಕ ನಿಲುವಿನಿಂದಾಗಿ ಸಂಬಂಧದಲ್ಲಿ ಬಿರುಕು ಬಿಡುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ವೃಷಭ ರಾಶಿಯವರೊಂದಿಗೆ ಕನ್ಯಾರಾಶಿಯ ಸಂಬಂಧವು ಹೆಚ್ಚು ಭಾವನಾತ್ಮಕವಾಗಿ ಕೂಡಿರುತ್ತದೆ. ಇಲ್ಲಿ ಭಾವನೆಗಳೇ ದೊಡ್ಡ ಜಾಗವನ್ನು ಆಕ್ರಮಿಸಿಕೊಂಡಿರುತ್ತವೆ. ಹಾಗಾಗಿ ಸಂಗಾತಿಗಳ ನಡುವಲ್ಲಿ ಪ್ರೀತಿ ಪ್ರೇಮ ಅಗಾಧವಾಗಿ ತುಂಬಿರುತ್ತದೆ.
ವೃಷಭ ರಾಶಿಯವರೊಡನೆ ತುಲಾ ರಾಶಿಯವರು ವಿವಾಹವಾದರೆ ಪರಸ್ಪರ ರಕ್ಷಣೆ ಹಾಗೂ ಕಾಳಜಿಯನ್ನು ಮಾಡುತ್ತಾರೆ. ಇದು ಅಪರೂಪದ ಹೊಂದಾಣಿಕೆಯ ರಾಶಿಗಳಾಗಿದ್ದು, ಇಲ್ಲಿ ಅವರ ಸಾಮರ್ಥ್ಯಗಳೇ ಅವರ ದೌರ್ಬಲ್ಯ ಕೂಡ ಆಗಿರುತ್ತದೆ. ಆದ್ದರಿಂದ ಇಬ್ಬರು ಭಿನ್ನವಾಗಿ ಯೋಚಿಸುತ್ತಾರೆ. ಹಾಗಾಗಿ ಈ ಎರಡು ರಾಶಿಯಲ್ಲಿ ವಿವಾಹ ಅಷ್ಟೊಂದು ಯೋಗ್ಯವಲ್ಲ. ಇನ್ನು ವೃಷಭ ರಾಶಿಯೊಡನೆ ವೃಶ್ಚಿಕ ರಾಶಿಯವರ ವಿವಾಹ ಬಂಧನವು ಪರಸ್ಪರ ಆಕರ್ಷಣೆಯಿಂದ ಕೂಡಿರುತ್ತದೆ. ವೃಶ್ಚಿಕ ರಾಶಿಯವರು ಪ್ರಾಮಾಣಿಕವಾಗಿ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ.
ವೃಷಭ ರಾಶಿಯೊಡನೆ ಧನಸ್ಸು ರಾಶಿಯ ಸಂಬಂಧದಲ್ಲಿ ಒಬ್ಬರನ್ನೊಬ್ಬರು ಅರಿತು ನಡೆಯಬೇಕಾಗದ ಅನಿವಾರ್ಯತೆ ಉಂಟಾಗುತ್ತದೆ. ಒಬ್ಬರಿಗೊಬ್ಬರು ಸಹಕಾರ ಭಾವದಿಂದ ಇದ್ದರೆ ಮಾತ್ರ ಸಂಬಂಧವು ಉಳಿಯಲು ಸಾಧ್ಯವಾಗುತ್ತದೆ. ವೃಷಭ ರಾಶಿಯೊಡನೆ ಮಕರ ರಾಶಿಯನ್ನು ಹೊಂದಿಸಿ ನೋಡಿದಾಗ, ಇಬ್ಬರ ಸಂಬಂಧವು ಗಂಭೀರ ಸ್ವರೂಪದ್ದಾಗಿರುತ್ತದೆ. ಇಬ್ಬರ ನಡುವೆ ಅಕರ್ಷಣೆ ಪ್ರೀತಿಗಳು ಯಥೇಚ್ಛವಾಗಿ ಇದ್ದು, ಜೀವನ ಪೂರ್ತಿ ಒಬ್ಬರಿಗೊಬ್ಬರು ಆಸರೆಯಾಗಿ ಇರುತ್ತಾರೆ.
ಇನ್ನು ಕುಂಭ ರಾಶಿಯೊಡನೆ ವೃಷಭ ರಾಶಿಯವರು ವಿವಾಹ ಆದಲ್ಲಿ, ಕುಂಭ ರಾಶಿಯವರು ಹೊಸ ಬದುಕನ್ನು ಆದರದಿಂದ ಸ್ವಾಗತಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ನಡವಳಿಕೆಯಲ್ಲಿ ಪ್ರಾಮಾಣಿಕವಾಗಿ ಇದ್ದರೆ ಸಂಬಂಧ ಚೆನ್ನಾಗಿರುತ್ತವೆ. ಕೊನೆಯದಾದ ರಾಶಿಯಾದ ಮೀನ ರಾಶಿಯವರಲ್ಲಿ ವೃಷಭ ರಾಶಿಯ ಸಂಬಂಧವು ಏರ್ಪಟ್ಟಲ್ಲಿ, ಪ್ರೀತಿ ಹಾಗೂ ಆರಾಧನೆಯಿಂದ ಕೂಡಿರುತ್ತದೆ. ಇಬ್ಬರು ಸಂಪೂರ್ಣ ಸಮರ್ಪಣೆಯಿಂದ ಬದುಕು ನಡೆಸುತ್ತಾರೆ. ಇಬ್ಬರ ನಡುವಿನ ಬಾಂಧವ್ಯವು ಬಹಳ ಸುಂದರವಾಗಿದ್ದು, ಎಲ್ಲಿಯೂ ಜಗಳ ತಂಟೆ ತಕರಾರುಗಳು ಬಾಧಿಸುವುದಿಲ್ಲ.
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456