ನಿಮ್ಮ ಮನೆಯಲ್ಲಿ ತುಳಸಿ ಗಿಡ ಇದ್ದರೆ ಅಪ್ಪಿತಪ್ಪಿ ಇಂತಹ ತಪ್ಪುಗಳನ್ನ ಮಾಡಬಾರದು. ತುಳಸಿ ಗಿಡ ಯಾರ ಮನೆಯಲ್ಲಿ ಇರುತ್ತೋ ಅಂತಹವರ ಮನೆಯಲ್ಲಿ ಆರೋಗ್ಯ, ಹಣಕಾಸಿನ ಸಮಸ್ಯೆ ಇರೋದಿಲ್ಲ. ತುಳಸಿ ಎಷ್ಟು ಚೆನ್ನಾಗಿ ಹಸಿರಾಗಿ ಬೆಳೆಯುತ್ತೋ ಅಷ್ಟೇ ಚೆನ್ನಾಗಿ ನಿಮ್ಮ ಮನೆ ಕೂಡ ಅಭಿವೃದ್ಧಿ ಹೊಂದುತ್ತದೆ.
ತುಳಸಿ ಗಿಡವನ್ನು ಎಲ್ಲರ ಮನೆ ಮುಂದೆ ಇಟ್ಟು ಪೂಜೆ ಮಾಡುತ್ತಾರೆ ಆದರೆ ಮಾವ್ದೋ ನೀರಿನಿಂದ ತುಳಸಿಯನ್ನು ತೊಳಯಬಾರದು.ಅದಕ್ಕೂ ಕೂಡ ಸಮಯ ಅನ್ನೋದು ಇರುತ್ತದೆ. ನೀವು ಸ್ನಾನ ಮಾಡಿದ ನಂತರವೇ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು.ತುಳಸಿ ಅಂದರೆ ದೇವರ ಸ್ವರೂಪವಾಗಿದೆ.
ತುಳಸಿ ಗಿಡವನ್ನು ಯಾವುದೇ ಕಾರಣಕ್ಕೂ ಎಂಜಲು ಕೈಯಿಂದ ಮುಟ್ಟಬೇಡಿ. ಅಥವಾ ಮುಟ್ಟಾದ ಮಹಿಳೆಯರು ತುಳಸಿ ಗಿಡದ ಸ್ಪರ್ಶ ಮಾಡಲೇಬಾರದು. ನಿಮ್ಮ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿಗಳು, ವಾಮಚಾರ ಆಗಿದ್ದಲ್ಲಿ ತುಳಸಿಗಿಡವು ಒಣಗುವುದರ ಮೂಲಕ ಸೂಚನೆಯನ್ನು ನೀಡುತ್ತದೆ ಅನಂತರ ತುಳಸಿ ಗಿಡವನ್ನು ಬದಲಾಯಿಸಬೇಕು.
ಪೂಜೆಗೇನಾದರೂ ತುಳಸಿ ಗಿಡದ ಎಲೆಗಳನ್ನು ಕೀಳುತ್ತಿದ್ದರೆ ಅದಕ್ಕೆಂದೆ ಬೇರೆ ಗಿಡವನ್ನು ಬೆಳಸಿ ಎಲೆಗಳನ್ನು ಕೀಳಬಹುದು. ಇನ್ನು ಯಾವ ದಿಕ್ಕಿನಲ್ಲಿ ತುಳಸಿ ಇಟ್ಟು ಪೂಜಿಸಬೇಕೆಂದರೆ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವಿಟ್ಟರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಶನಿವಾರ ಹಾಗೂ ಏಕಾದಶಿಯಂದು ತುಳಸಿ ದಳಗಳನ್ನು ಕೀಳಬಾರದು ಇದರಿಂದ ನಿಮ್ಮ ಏಳಿಗೆ ಸಾಧ್ಯವಾಗೋದಿಲ್ಲ. ನೀವು ತಪ್ಪದೇ ಹಬ್ಬಹರಿದಿನ ಏಕಾದಶಿ , ಶನಿವಾರದಂದು ಗೆಜ್ಜೆ ವಸ್ತ್ರಧರಿಸಿ ತುಳಸಿ ಪೂಜೆ ಮಾಡಿದ್ರೆ ಅತ್ಯದ್ಭುತ ಫಲ ದೊರೆಯುತ್ತದೆ.