ಎಣ್ಣೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎಣ್ಣೆಯನ್ನು ಬಳಸದೇ ಅಡಿಗೆ ಮಾಡುವುದು ಕಷ್ಟ. ಎಣ್ಣೆಯಲ್ಲಿ ತುಂಬಾ ವಿಧಗಳಿವೆ. ಆದರೆ ತಿನ್ನುವ ಎಣ್ಣೆಯ ಬಗ್ಗೆ ನಾವು ಇಲ್ಲಿ ತಿಳಿಯೋಣ. ಬಹಳಷ್ಟು ವ್ಯೆದ್ಯರು ಹೇಳುತ್ತಾರೆ ಎಣ್ಣೆಯನ್ನು ಕಡಿಮೆ ಬಳಸಿ. ಹೃದಯದ ಕಾಯಿಲೆ ಬರಬಹುದು. ಕೊಲೆಸ್ಟ್ರಾಲ್ ಹೆಚ್ಚಾಗಬಹುದು ಎಂದು.ಆದರೆ ಈ ಸಂಶೋಧನೆ ಮಾಡಿದವರು ಪಾಶ್ಚಾತ್ಯರು. ಅಂದರೆ ಯುರೋಪಿಯನ್ ದೇಶದವರು. ಎಣ್ಣೆಯನ್ನು ತುಂಬಾ ಬಳಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಹೃದಯದ ಸಮಸ್ಯೆಗಳು ಬರುತ್ತವೆ. ಆದರೆ ಅವರ ಪ್ರಕಾರ ಫ್ಯಾಟ್ ಅಂದರೆ ಚೀಸ್ ಮತ್ತು ಡಾಲ್ಡಾ. ಅವರು ತುಂಬಾ ಬಳಸುತ್ತಾರೆ.
ಆದರೆ ನಮ್ಮ ದೇಶದವರು ತಿಳಿದಿರುವುದು ಫ್ಯಾಟ್ ಅಂದ್ರೆ ಎಣ್ಣೆ, ತುಪ್ಪ, ಹಾಲು. ತುಪ್ಪ ಹಾಲಿನಲ್ಲಿ ಇರುವುದು ಒಳ್ಳೆ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ಅಲ್ಲ. ಇದನ್ನು ಧೈರ್ಯವಾಗಿ ಎಲ್ಲರೂ ಕೂಡ ಬಳಸಬಹುದು. ಹಾಲನ್ನು ಬಳಸದ ಮನೆಗಳೇ ಇಲ್ಲ. ಹಳೇ ಕಾಲದವರು ತಿಂಡಿಗಳನ್ನು ಮಾಡುವಾಗ ಶೇಂಗಾಎಣ್ಣೆ, ಸಾಸಿವೆಎಣ್ಣೆ, ಒಳ್ಳೆಣ್ಣೆ, ಕೊಬ್ಬರಿ ಎಣ್ಣೆ ಎಲ್ಲವನ್ನೂ ಕೂಡ ಬಳಸುತ್ತಿದ್ದರು.
ಆದ್ದರಿಂದ ನಮ್ಮ ಭಾರತೀಯರು ಎಣ್ಣೆಯನ್ನು ಉಪಯೋಗಿಸಲು ಹೆದರುವ ಚಿಂತೆ ಬೇಡ. ಏಕೆಂದರೆ ಗ್ರಂಥಗಳಲ್ಲಿ ಉಲ್ಲೇಖ ಇದೆ. ಎಣ್ಣೆ ದೇಹಕ್ಕೆ ಅವಶ್ಯ. ಎಣ್ಣೆಯ ಬಳಕೆ ಕಡಿಮೆ ಆಗಿ ಇಂದು 20, 30 ವರ್ಷದ ಯುವಕರಲ್ಲಿ ಸಂಧಿನೋವು ಶುರುವಾಗಿದೆ. ಕಾಲು ಗಂಟಿನಲ್ಲಿ ಒಂದು ರೀತಿಯ ಎಣ್ಣೆ ಇರುತ್ತದೆ. ಅದು ಕಾಲಿನ ಆರೋಗ್ಯ ಕಾಪಾಡುತ್ತದೆ. ಅದು ಕಡಿಮೆಯಾದಾಗ ಕಾಲುಗಂಟಿನ ನೋವು ಶುರುವಾಗುತ್ತದೆ.
ಹಿಮಾಲಯದ ತಪ್ಪಲಿನಲ್ಲಿ ಇರುವವವರು ಸಾಸಿವೆ ಎಣ್ಣೆಯನ್ನು ಹೆಚ್ಚು ಬಳಸಬೇಕು. ನಾವು ಕರ್ನಾಟಕದವರು ಶೇಂಗಾ ಎಣ್ಣೆಯನ್ನು ಹೆಚ್ಚಾಗಿ ಉಪಯೋಗ ಮಾಡಬೇಕು. ಕರಾವಳಿ ಪ್ರದೇಶದಲ್ಲಿ ಇರುವವರು ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡಬೇಕು.ಆದ್ದರಿಂದ ಎಣ್ಣೆಯನ್ನು ಎಲ್ಲರೂ ಕೂಡ ಹಿತ ಮಿತವಾಗಿ ಆಹಾರದಲ್ಲಿ ಉಪಯೋಗಿಸುವುದು ಆರೋಗ್ಯಕರ.