ಮದುವೆಗೆ ಸೂಕ್ತವಾದ ವಯಸ್ಸು ಯಾವುದು ಎನ್ನುವ ವಿಷಯದ ಬಗ್ಗೆ ಸ್ತ್ರೀ ರೋಗ ತಜ್ಞೆ ಆಗಿರುವ ಡಾಕ್ಟರ್ ಪದ್ಮಿನಿ ಪ್ರಸಾದ್ ಅವರು ಎನು ಹೇಳಿದ್ದಾರೆ ಎನ್ನುವುದನ್ನು ನಾವಿಲ್ಲಿ ತಿಳಿಯೋಣ.

ಮದುವೆ ಆಗೋಕೆ ಗಂಡು ಹಾಗೂ ಹೆಣ್ಣು ಇಬ್ಬರಿಗೂ ಸರಿಯಾದ ವಯಸ್ಸು ಯಾವುದು ಎನ್ನುವ ವಿಷಯದ ಬಗ್ಗೆ ನಮ್ಮಲ್ಲಿ ಇನ್ನೂ ಸಹ ಸಾಕಷ್ಟು ಗೊಂದಲಗಳು ಇವೆ. ಮೊದಲೆಲ್ಲ ಬಾಲ್ಯ ವಿವಾಹ , ತೊಟ್ಟಿಲು ವಿವಾಹ ಜಾರಿಯಲ್ಲಿ ಇದ್ದಿತ್ತು. ಹುಡುಗ ಹಾಗೂ ಹುಡುಗಿ ಇಬ್ಬರೂ ಪ್ರಬುದ್ಧ ವಯಸ್ಸಿಗೆ ಬರುವ ಮೊದಲೇ ಎಷ್ಟೋ ಮದುವೆಗಳು ಆಗಿರುತ್ತಿದ್ದವು ಇನ್ನು ಈಗಿನ ಕಾಲದಲ್ಲಿ ಮದುವೆಯ ವಯಸ್ಸು ಮೀರಿದ್ದರೂ ಕೂಡಾ ಎಷ್ಟೋ ಜನರಿಗೆ ಮದುವೆ ಆಗಿರಲ್ಲ. ನಮ್ಮ ಸಮಾಜ ಸಾಕಷ್ಟು ಬದಲಾವಣೆ ಹೊಂದಿದೆ. ಹಾಗಾದರೆ ಮದುವೆ ಆಗೋಕೆ ಸೂಕ್ತವಾದ ವಯಸ್ಸು ಯಾವುದು? ಕಾನೂನಿನ ಪ್ರಕಾರ, ಮದುವೆ ಆಗಲು ಒಂದು ಹುಡುಗಿ ಗೆ ಇಪ್ಪತ್ತೊಂದು ವರ್ಷ ಹಾಗೂ ಹುಡುಗಿಗೆ ಹದಿನೆಂಟು ವರ್ಷ ಆಗಿರಬೇಕು ಎಂದಿದೆ. ಒಂದು ಕಡೆ ಬಾಲ್ಯ ವಿವಾಹವನ್ನೂ ಕೆಲವು ಕಡೆ ನಾನು ಈಗಲೂ ಕೂಡಾ ಕಾಣಬಹುದು ಇನ್ನೊಂದು ಕಡೆ ವಯಸ್ಸು ಮೀರಿ ನಲವತ್ತು ವರ್ಷ ಆದರೂ ಕೂಡಾ ಹಲವಾರು ಕಾರಣಗಳಿಗೆ ಇನ್ನೂ ಅವಿವಾಹಿತರಾಗಿಯೇ ಇರುವ ಎಷ್ಟೋ ಜನರನ್ನು ನಾವು ಕಾಣುತ್ತೇವೆ.

ಯಾವುದೇ ಕೆಲಸದ ಮೇಲೆ ವಿದೇಶಕ್ಕೆ ಹೋಗುವುದು, ಇತರೆ ಕೌಟುಂಬಿಕ ಕಲಹಗಳು ಅಥವಾ ಸರಿಯಾದ ಸಂಗಾತಿಯೂ ಸಿಗದೆ ಇರಬಹುದು ಈ ರೀತಿಯ ಹಲವಾರು ಕಾರಣಗಳಿಗೆ ಕೂಡಾ ಹಲವಾರು ಜನರ ಮದುವೆಯ ವಯಸ್ಸು ಮುಂದೂಡುತ್ತಲೇ ಇದೆ. ಹೀಗಿದ್ದಾಗ ಮದುವೆ ಆಗೋಕೆ ಸರಿಯಾದ ಅಥವಾ ಸೂಕ್ತವಾದ ವಯಸ್ಸು ಯಾವುದು? ಸೂಕ್ತವಾದ ವಯಸ್ಸು ಎಂದರೆ ಕಾನೂನು ರೀತಿಯಲ್ಲಿ ಮದುವೆ ಆಗಲೂ ನಿಗದಿಪಡಿಸಿದ ವಯಸ್ಸು ಒಂದಾದರೆ ಇನ್ನು ಮದುವೆ ಆಗುವ ಹುಡುಗ ಅಥವಾ ಹುಡುಗಿಯ ಸಾಮಾನ್ಯ ವಿಧ್ಯೆ , ಉದ್ಯೋಗ ಅಥವಾ ಅವರ ಮದುವೆ ಬಗ್ಗೆ ಇರುವ ಮನಸ್ಥಿತಿ ಇವುಗಳು ಒಂದು ಹಂತಕ್ಕೆ ಬರುವವರೆಗೆ, ಅವರ ಕಾಲಮೇಲೆ ಅವರು ನಿಂತುಕೊಳ್ಳುವ ಹಂತಕ್ಕೆ ಬಂದು, ದೈಹಿಕವಾಗಿ. ಮಾನಸಿಕವಾಗಿ ಹಾಗೂ ಆರ್ಥಿಕವಾಗಿಯೂ ಕೂಡಾ ತಮ್ಮ ಬಾಳ ಸಂಗಾತಿಯ ಜೊತೆ ಸರಿದೂಗಿಸಿಕೊಂಡು ಹೋಗುವ ನಿಭಾಯಿಸುವ ಸಮಯವನ್ನು ಮದುವೆಯಾಗಲು ಸೂಕ್ತ ವಯಸ್ಸು ಎನ್ನಬಹುದು. ಇದರ ಜೊತೆಗೆ ಪ್ರಕೃತಿ ದತ್ತವಾದ ಸಂತಾನೋತ್ಪತ್ತಿ ವಿಷಯ ಬಂದಾಗ ಸಂತಾನೋತ್ಪತ್ತಿಗೆ ಸೂಕ್ತವಾದ ವಯಸ್ಸು ಇಪ್ಪತ್ತರಿಂದ ಮೂವತ್ತು ವರ್ಷದವರೆಗೆ ಸೂಕ್ತ ಎನ್ನಬಹುದು. ಈ ಸಮಯದಲ್ಲಿ ಗರ್ಭಧಾರಣೆ ಶಕ್ತಿ ಕೂಡಾ ಹೆಚ್ಚಾಗಿ ಇರುವುದರಿಂದ ಮುಂದಿನ ಪೀಳಿಗೆ ಸದೃಢವಾಗಿ ಇರುತ್ತದೆ.

ಆದರೆ ಯಾವುದೇ ಕಾರಣಕ್ಕೂ ಕೂಡಾ ಮದುವೆ ಮಾಡಿಕೊಳ್ಳುವ ವಯಸ್ಸು ಮೀರಿದೆ ಎಂದು ಮದುವೆ ಆಗಲೇ ಬಾರದು ಎನ್ನುವ ಪದ್ಧತಿ ಅಥವಾ ನಿಯಮ ಎಲ್ಲಿಯೂ ಇಲ್ಲ ಮೂವತ್ತು ನಲವತ್ತು ವರ್ಷ ದಾಟಿದ ಮೇಲೆ ಕೂಡಾ ಮದುವೆ ಆಗಬಹುದು. ಬರೀ ಸಂತಾನೋತ್ಪತ್ತಿಗಾಗಿ ಮಾತ್ರವೇ ಮದುವೆ ಇರುವುದಲ್ಲ ಇನ್ನಿತರೆ ಅವರವರ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಲು ಸುಖ ದುಃಖಗಳನ್ನು ಹಂಚಿಕೊಳ್ಳಲು ಒಂದು ಸಂಗತಿಯ ಅವಶ್ಯಕತೆ ಇರುತ್ತದೆ. ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ನಡೆಸಲು ಅವರ ಸಂತೋಷ, ಪರಸ್ಪರ ಪ್ರೀತಿ, ವಿಶ್ವಾಸಕ್ಕಾಗಿ ಯಾವ ವಯಸ್ಸಿನಲ್ಲಿ ಬೇಕಿದ್ದರೂ ಮದುವೆ ಆಗಬಹುದು. ಇನ್ನು ತಡವಾಗಿ ಮದುವೆ ಆಗಿ, ಗರ್ಭಧಾರಣೆಗೆ ಏನಾದರೂ ತೊಡಕು ಇದ್ದರೂ ಕೂಡಾ ಆಧುನಿಕ ತಂತ್ರಜ್ಞಾನದ ಸಹಾಯದಿಂದ ವೈದ್ಯಕೀಯ ಸೌಲಭ್ಯಗಳಿಂದ ಗರ್ಭಧಾರಣೆ ಆಗುವಂತೆ ಅಂತಹ ಸೌಲಭ್ಯವನ್ನು ಒದಗಿಸಬಹುದು. ಆದರೂ ಸಹಜ ರೀತಿಯಲ್ಲಿ ಸಂತಾನೋತ್ಪತ್ತಿಗಾಗಿ ಇಪ್ಪತ್ತರಿಂದ ಇಪ್ಪತೈದು ವರ್ಷ ವಯಸ್ಸು ಉತ್ತಮ ಎನ್ನಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!