ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಬಳಕೆ ಮಾಡದ ಜನರೇ ಇಲ್ಲ ಚಿಕ್ಕ ಮಕ್ಕಳಿಂದ ಹಿಡಿದು ಇಳಿವಯಸ್ಸಿನ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳು ಹಾಗೂ ಅವುಗಳಲ್ಲಿ ವಾಟ್ಸಪ್. ಸ್ಮಾರ್ಟ್ ಫೋನ್ ವಾಟ್ಸಪ್ ಬಳಕೆ ಆರಂಭ ಆದಾಗಿನಿಂದ ಎಲ್ಲರೂ ಇದರ ದಾಸರಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೀಗಾಗಿ ವಾಟ್ಸಪ್ ಅಂತೂ ನಮ್ಮ ದಿನನಿತ್ಯದ ಒಂದು ಅವಿಭಾಜ್ಯ ಅಂಗವಾಗಿದೆ ಎಂದೇ ಹೇಳಬಹುದು. ನಾವು ಪ್ರತಿನಿತ್ಯ ಬಳಸುವ ವಾಟ್ಸಪ್ ನಲ್ಲಿ ಸಾಕಷ್ಟು ಅಪ್ಡೇಟ್ ಬರುತ್ತಲೇ ಇರುತ್ತವೆ. ನಾವು ವಾಟ್ಸಪ್ ಬಳಕೆ ಮಾಡುವಾಗ ಪ್ರತಿಯೊಬ್ಬರೂ ಡಿಪಿ ಅಂದರೆ ಡಿಸ್ಪ್ಲೇ ಪಿಕ್ಚರ್ ಇದನ್ನು ಚೇಂಜ್ ಮಾಡುತ್ತಲೇ ಇರುತ್ತೇವೆ ಇದರ ಬಗ್ಗೆ ಒಂದು ಪುಟ್ಟ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವು ವಾಟ್ಸಪ್ ಡಿಪಿ ಚೇಂಜ್ ಮಾಡುವಾಗ ನಮಗೆ ನಾವು ಸಂಪೂರ್ಣ ಫೋಟೋ ಇಡಬೇಕು ಎಂದರೆ ಕೆಲವೊಮ್ಮೆ ಅದು ಬರುವುದಿಲ್ಲ ಹೀಗಿದ್ದಾಗ ನಾವು ಈ ಒಂದು ಅಪ್ಲಿಕೇಶನ್ ಬಳಸಿಕೊಂಡು ಕೆಲವು ಟ್ರಿಕ್ ಗಳನ್ನು ಬಳಸಿಕೊಂಡು ಪೂರ್ತಿ ಫೋಟೋವನ್ನು ವಾಟ್ಸಪ್ ಡಿಪಿ ಗೆ ಬಳಸಿಕೊಳ್ಳಬಹುದು. ಹಾಗಿದ್ದರೆ ಏನದು ಆ ಟ್ರಿಕ್? ಎನ್ನುವುದನ್ನು ಮುಂದೆ ನೋಡೋಣ.
ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ WhatsCrop ಎಂದು ಟೈಪ್ ಮಾಡಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ಮೂಲಕ ನಾವು ನಮ್ಮ ವಾಟ್ಸಪ್ ಡಿಪಿ ಅನ್ನು ಸರಿಯಾಗಿ ಫುಲ್ ಫೋಟೋ ಇಡಬಹುದು. WhatsCrop ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅಪ್ಲಿಕೇಶನ್ ಓಪನ್ ಮಾಡಿದಾಗ ಒಂದು ವೃತ್ತಾಕಾರದ ಜಾಗ ಕಾಣಿಸುತ್ತದೆ. ಅಲ್ಲೇ ಕೆಳಗಡೆ ಫೋಟೋಸ್ ಎನ್ನುವ ಆಯ್ಕೆ ಸಿಗುತ್ತದೆ ಅಲ್ಲಿ ಸೆಲೆಕ್ಟ್ ಫೋಟೋಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು ಹಾಗೂ ನಿಮಗೆ ಬೇಕಾದ ಫೋಟೋ ಆಯ್ದುಕೊಳ್ಳಬೇಕು. ಫೋಟೋ ಸೆಲೆಕ್ಟ್ ಮಾಡಿಕೊಂಡ ನಂತರ ಕೆಲವು ಸೂಚನೆಗಳನ್ನು ನೀಡುತ್ತದೆ ಅಲ್ಲಿ ನೆಕ್ಸ್ಟ್ ಅನ್ನೋ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ನೀವು ಆಯ್ಕೆ ಮಾಡಿದ ಫೋಟೋ ವೃತ್ತಾಕಾರದ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಆಮೇಲೆ ಪೆನ್ಸಿಲ್ ಗುರುತು ಕಾಣುವಲ್ಲಿ ಕ್ಲಿಕ್ ಮಾಡಿಕೊಂಡು background color ಅಲ್ಲಿ ಕ್ಲಿಕ್ ಮಾಡಿ ಹಾಗೂ ಓಕೆ ಮಾಡಿಕೊಂಡು , ಮತ್ತೆ ಪೆನ್ಸಿಲ್ ಗುರುತು ಕಾಣುವಲ್ಲಿ ಕ್ಲಿಕ್ ಮಾಡಿಕೊಂಡು white border ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ಕೊನೆಯದಾಗಿ ಮತ್ತೆ ಇನ್ನೊಮ್ಮೆ ಪೆನ್ಸಿಲ್ ಗುರುತು ಕಾಣುವಲ್ಲಿ ಕ್ಲಿಕ್ ಮಾಡಿಕೊಂಡು background blurred ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಇಷ್ಟು ಮಾಡಿಕೊಂಡಾಗ ನಮಗೆ ಬೇಕಾದ ಫೋಟೋ ಸರಿಯಾಗಿ ಬಂದಿರುತ್ತದೆ. ನಂತರ ವೃತಾಕರದ ಜಾಗದಲ್ಲಿ ಬರುವಷ್ಟು ಫೋಟೋವನ್ನು ಸೆಟ್ ಮಾಡಿಕೊಂಡು ಫೋಟೋವನ್ನು ನೇರವಾಗಿ ವಾಟ್ಸಪ್ ಡಿಪಿಗೆ ಸೆಟ್ ಮಾಡಲೂ ಬಹುದು ಇಲ್ಲವಾದಲ್ಲಿ ನಿಮ್ಮ ಗ್ಯಾಲರಿಗೆ ಶೇರ್ ಮಾಡಿಕೊಂಡು ನಂತರ ವಾಟ್ಸಪ್ ಡಿಪಿ ಗೆ ಸೆಟ್ ಮಾಡಲೂಬಹುದು.