ಈ ಲೇಖನದ ಮೂಲಕ ನಾವು ಬೇಡವಾದ ವಸ್ತುಗಳ ಅಂದರೆ ಸ್ಕ್ರ್ಯಾಪ್ ಗೆ ಸಂಬಂಧಿಸಿದ ಒಂದು ಬಿಸಿನೆಸ್ ಬಗ್ಗೆ ತಿಳಿದುಕೊಳ್ಳೋಣ. ಆ ಬಿಸಿನೆಸ್ ಯಾವುದು ಅಂದರೆ ನಮ್ಮ ಏರಿಯಾದಲ್ಲಿ ಇರುವ ಬೇಡವಾದ ವೇಸ್ಟ್ ಸ್ಕ್ರಾಪ್ ಗಳನ್ನು ಒಟ್ಟುಗೂಡಿಸಿ ದೊಡ್ಡ ಕಂಪನಿಗಳಿಗೆ ಎಕ್ಸ್ಪೋರ್ಟ್ ಮಾಡುವ ಮೂಲಕ ನಾವು ಉತ್ತಮ ಲಾಭವನ್ನು ಗಳಿಸಬಹುದು. ಯಾವ ಸ್ಕ್ರಾಪ್ ಗಳನ್ನು ನಾವು ಒಟ್ಟುಗೂಡಿಸಿ ಮಾರಾಟ ಮಾಡಬೇಕು ಹೇಗೆ ಮಾಡುವುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬಿಸಿನೆಸ್ ಮಾಡಲು ಎಂತಹ ಸ್ಕ್ರಾಪ್ ಗಳನ್ನು ನಾವು ಒಟ್ಟುಗೂಡಿಸಬೇಕೆಂದರೆ ಕೊರೋಗೆಟೆಡ್ ಬಾಕ್ಸ್ಗಳನ್ನು ಕಲೆಕ್ಟ್ ಮಾಡಬೇಕು. ಈ ಕೊರೋಗೆಟೆಡ್ ಬಾಕ್ಸ್ಗಳನ್ನು ಹೆಚ್ಚಾಗಿ ಏನನ್ನಾದರೂ ಪ್ಯಾಕ್ ಮಾಡುವುದರ ಸಲುವಾಗಿ ಬಳಕೆ ಮಾಡಲಾಗುತ್ತದೆ. ಇಂತಹ ಬಾಕ್ಸ್ಗಳನ್ನು ಕಲೆಕ್ಟ್ ಮಾಡಿ ಕಂಪನಿಗಳಿಗೆ ಎಕ್ಸ್ಪೋರ್ಟ್ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬಹುದು. ಈ ಕೊರೋಗೆಟೆಡ್ ಬಾಕ್ಸ್ ಗಳು ಹೆಚ್ಚಾಗಿ ನಿಮ್ಮ ಏರಿಯಾದ ಕಿರಾಣಿ ಅಂಗಡಿಗಳಲ್ಲಿ ಹಾಗೂ ಹೋಲ್ಸೇಲ್ ಶಾಪ್ ಗಳಿಗೆ ಭೇಟಿ ನೀಡಿ ಅಲ್ಲಿಂದ ಇವುಗಳನ್ನು ಕಲೆಕ್ಟ್ ಮಾಡಬಹುದು. ನ್ಯೂಸ್ಪೇಪರ್ ಗಳನ್ನು ಮಾರಾಟ ಮಾಡುವವರ ಬಳಿಯು ಈ ಬಾಕ್ಸ್ಗಳು ಸಿಗುತ್ತದೆ. ಈ ರೀತಿಯಾಗಿ ಬಾಕ್ಸ್ಗಳನ್ನು ಕಲೆಕ್ಟ್ ಮಾಡಿದ ನಂತರ ನಾವು ಒಂದು ಮಶಿನ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಮಶೀನ್ ಒಂದೂವರೆ ಲಕ್ಷಕ್ಕೆ ಸಿಗುತ್ತದೆ ಹಾಗೂ ಒಂದೂವರೆ ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಕೂಡ ಮಷೀನ್ ದೊರೆಯುತ್ತದೆ. ಈ ಮಶಿನ್ನಿನ ಕೆಪ್ಯಾಸಿಟಿ ಹತ್ತು ಟನ್ ಇರುತ್ತದೆ. ಈ ಮಶೀನ್ ನಮಗೆ ಬಾಕ್ಸ್ ಗಳನ್ನು ಪ್ರೆಸ್ ಮಾಡಲು ಅವಶ್ಯವಿರುತ್ತದೆ.
ಈ ಮಶೀನ್ ನಲ್ಲಿ ಕೊರೆಗೇಟೆಡ್ ಬಾಕ್ಸ್ ಗಳನ್ನು ಹಾಕಬೇಕು. ಇದರಲ್ಲಿ ಸಣ್ಣ ಸಣ್ಣ ಬಾಕ್ಸ್ ಗಳನ್ನು ಸಹ ಹಾಕಬಹುದು. ನಂತರ ಎಲ್ಲಾ ಬಾಕ್ಸ್ಗಳನ್ನು ಹಾಕಿ ಪ್ರೆಸ್ ಮಾಡಿ ಒಂದು ಶೇಪ್ ಗೆ ಬಂದ ನಂತರ ಗಟ್ಟಿಯಾದ ವಯರ್ ಸಹಾಯದಿಂದ ಕಟ್ಟಿ ಪ್ಯಾಕ್ ಮಾಡಬೇಕು. ನಂತರ ಮಶೀನ್ ನಿಂದ ಹೊರಗೆ ತೆಗೆಯಬೇಕು. ಈ ರೀತಿ ಮಾಡಿದ ಬಾಕ್ಸ್ಗಳನ್ನು ಹಲವಾರು ಕಂಪನಿಗಳು ತೆಗೆದುಕೊಳ್ಳುತ್ತವೆ. ಇನ್ನು ನಾವು ಈ ಬಿಸ್ನೆಸ್ ನಿಂದ ನಮಗೆ ಉಂಟಾಗುವ ಲಾಭಗಳ ಬಗ್ಗೆ ನೋಡುವುದಾದರೆ , ಒಂದು ಕೆಜಿ ಸ್ಕ್ರ್ಯಾಪ್ ಗಳನ್ನು ಐದು ರೂಪಾಯಿಗೆ ತರಬೇಕು. ಲೇಬರ್ ಖರ್ಚು ಎಲ್ಲಾ ಸೇರಿ ನಾಲ್ಕು ರೂಪಾಯಿ ಖರ್ಚು ಬೀಳುತ್ತದೆ. ಒಟ್ಟು ಖರ್ಚು ಒಂಭತ್ತು ರೂಪಾಯಿ ಬೀಳುತ್ತದೆ. ಇನ್ನು ನಮ್ಮಿಂದ ಸ್ಕ್ರ್ಯಾಪ್ ಗಳನ್ನು ಕಂಪನಿಗಳು ಹದಿನೈದು ರೂಪಾಯಿಗೆ ಕೊಂಡುಕೊಳ್ಳುತ್ತವೆ. ಇದರಿಂದ ನಮಗೆ ಒಂದು ಕೆಜಿ ಗೆ ಆರು ರೂಪಾಯಿ ಲಾಭ ದೊರೆಯುತ್ತದೆ. ಈ ರೀತಿಯಾಗಿ ಒಂದು ದಿನಕ್ಕೆ ಒಂದು ಸಾವಿರ ಕೆಜಿ ಕೊರೆಗೇಟೆಡ್ ಬಾಕ್ಸ್ ಗಳನ್ನು ಮಾರಾಟ ಮಾಡಿದರೆ ದಿನಕ್ಕೆ ಆರು ಸಾವಿರ ರೂಪಾಯಿ ಸಂಪಾದನೆ ಮಾಡಬಹುದು ಹಾಗೂ ಒಂದು ತಿಂಗಳಿಗೆ ಒಂದು ಲಕ್ಷದ ಎಂಭತ್ತು ಸಾವಿರ ರೂಪಾಯಿ ವರೆಗೂ ಸಂಪಾದನೆ ಮಾಡಬಹುದು.