ಇವತ್ತಿನ ದಿನಗಳಲ್ಲಿ ತೂಕ ಹೆಚ್ಚು ಆಗುವುದು, ಬೊಜ್ಜು ಎಲ್ಲರಿಗೂ ಸಾಮಾನ್ಯವಾಗಿದ್ದು, ಬೊಜ್ಜಿನಿಂದ ಆಗುವ ಅಡ್ಡ ಪರಿಣಾಮಗಳು ತುಂಬಾನೇ ಇವೆ. ಬೊಜ್ಜಿನಿಂದ ಹಿಮ್ಮಡಿ ನೋವು, ಮಂಡಿ ನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅತಿಯಾದ ತೂಕ ಅಥವಾ ಬೊಜ್ಜಿನಿಂದ ಬಿಪಿ, ಶುಗರ್, ಹೃದಯ ರೋಗಗಳೂ ಬರಬಹುದು. ಕೆಲವರು ಸಣ್ಣಗೆ, ತೆಳ್ಳಗೆ ಇದ್ದರೂ ಸಹ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆಲ್ಲ ಕಾರಣ ನಮ್ಮ ದೇಹದ ಒಳಗೆ ಇರುವಂತಹ ಬೇಡವಾದ ಕಣ್ಣಿಗೆ ಕಾಣದ ಅನಗತ್ಯವಾದ ಕೊಬ್ಬು. ಇದನ್ನ ನಿವಾರಣೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ನಮ್ಮ ಹಿರಿಯರು ಒಂದು ಮಾತನ್ನು ಹೇಳುತ್ತಾರೆ. ಹಾಗೆಯೇ ಅದೇ ರೀತಿ ನಮ್ಮ ದೇಹದ ಕೆಟ್ಟ ಕೊಬ್ಬನ್ನು ಒಳ್ಳೆಯ ಕೊಬ್ಬಿನಿಂದ ತೆಗೆಯಬೇಕು. ಕೊಬ್ಬನ್ನು ಕರಗಿಸಲು ನಾವು ಕೆಲವೊಮ್ಮೆ ಉಪವಾಸ ಮಾಡುತ್ತೇವೆ. ಇದು ಕೇವಲ ನಮ್ಮ ದೇಹ ಶುದ್ಧಿಗೆ , ರೋಗ ನಿರ್ಮೂಲನೆ ಮಾಡಲೇ ಹೊರತು ಕೊಬ್ಬು ಕರಗಿಸಲು ಅಲ್ಲಾ. ಹಾಗಾಗಿ ನಾವು ಈಗ ತೆಗೆದುಕೊಳ್ಳುತ್ತಿರುವ ನಮ್ಮ ಆಹಾರಗಳಲ್ಲಿ ೯೦% ಅಷ್ಟು ಕಾರ್ಬೋ ಹೈಡ್ರೇಟ್, ೫% ಅಷ್ಟು ಪ್ರೊಟೀನ್ ಹಾಗೂ ೫% ಅಷ್ಟು ಕೊಬ್ಬು ಇರುತ್ತದೆ. ಇದನ್ನು ಕಡಿಮೆ ಮಾಡಿ, ನಮ್ಮ ದೇಹಕ್ಕೆ ಸುಮಾರು ಶೇಕಡಾ ೬೦ ರಷ್ಟು ಒಳ್ಳೆ ಕೊಬ್ಬು ಸಿಗುವ ಹಾಗೆ ಇರಬೇಕು, ಶೇಕಡಾ ೨೦ ರಷ್ಟು ಶಕ್ತಿ ಪ್ರೊಟೀನ್ ನಿಂದ ಬರಬೇಕು ಮತ್ತೆ ಶೇಕಡಾ ೨೦ ರಷ್ಟು ಶಕ್ತಿ ಕಾರ್ಬೋ ಹೈಡ್ರೇಟ್ ನಿಂದ ಸಿಗಬೇಕು. ನಾವು ಈ ಸೂತ್ರವನ್ನು ಪಾಲಿಸುವುದರಿಂದ ತಿಂಗಳಿಗೆ ಐದು ಕೆಜಿ ತೂಕವನ್ನು ಇಳಿಸಬಹದು.
ದಿನಕ್ಕೆ ಐದು ಚಮಚ ತುಪ್ಪ ಸೇವಿಸುವುದರಿಂದ ಒಂದು ಸಾವಿರ ಕ್ಯಾಲೋರಿ ಸಿಗುತ್ತದೆ ಇಲ್ಲಿಗೆ ನಮಗೆ ಅಗತ್ಯವಿರುವ ಅರ್ಧ ಕ್ಯಾಲೋರಿ ಬರೀ ತುಪ್ಪದಿಂದ ಸಿಗುತ್ತದೆ. ಇನ್ನು ಉಳಿದ ಅರ್ಧ ಕ್ಯಾಲೋರಿ ತೆಂಗಿನ ಕಾಯಿ, ತೆಂಗಿನ ಎಣ್ಣೆ, ಪಿಸ್ತಾ, ಶೇಂಗಾ, ಬಾದಾಮಿ, ಪಿಸ್ತಾ, ವಾಲ್ನಟ್ ಈ ರೀತಿಯ ಒಳ್ಳೆಯ ಕೊಬ್ಬಿನ ಅಂಶ ಇರುವ ಪದಾರ್ಥಗಳನ್ನು ತೆಗೆದುಕೊಂಡು ಇದರ ಮೂಲಕ ಕೆಟ್ಟ ಕೊಬ್ಬನ್ನು ಶಮನ ಮಾಡಬಹುದು. ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್ ಅನ್ನು ಬಳಸುವ ಮೂಲಕ ನಮ್ಮ ದೇಹದ ಕೆಟ್ಟ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಕೊಬ್ಬಿನಿಂದ ಕೊಬ್ಬನ್ನು ತೆಗೆಯಬೇಕು. ತುಪ್ಪ ಬೆಣ್ಣೆ ಮೊಸರು ಇವುಗಳ ಸೇವನೆ ಒಳ್ಳೆಯದು.