ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲ ಒಂದು ಸಮಸ್ಯೆ ಇರುತ್ತದೆ‌. ಬಹಳ ದಪ್ಪಗಿರುವವರಿಗೆ ತೆಳ್ಳಗಾಗಬೇಕು ಎಂದು ಇರುತ್ತದೆ. ತೆಳ್ಳಗಿರುವವರಿಗೆ ದಪ್ಪ ಆಗುವುದು ಹೇಗೆ ಎಂಬ ಚಿಂತೆ. ಏನೇ ಆದರೂ ಆರೋಗ್ಯಕರವಾಗಿ ತೆಳ್ಳಗಾಗಬೇಕು ಅಥವಾ ದಪ್ಪ ಆಗಬೇಕು. ಮನೆಯಲ್ಲಿ ಸುಲಭವಾಗಿ ಒಂದು ವಾರದಲ್ಲಿ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಅಧಿಕ ತೂಕವಿದ್ದರು ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ವಯಸ್ಸು ಹಾಗೂ ಎತ್ತರಕ್ಕೆ ತಕ್ಕ ತೂಕ ಇಲ್ಲದೆ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಹೈಪರ್ ಥೈರಾಯ್ಡ್, ಡಯಾಬಿಟೀಸ್ ಹೀಗೆ ಹಲವು ಕಾರಣಗಳಿಂದ ಬಹಳಷ್ಟು ಜನರು ತೆಳ್ಳಗಿರುತ್ತಾರೆ. ಇಂತವರು ಹೆಚ್ಚು ತಿನ್ನುವುದರಿಂದ ದಪ್ಪ ಆಗುತ್ತೇವೆ ಎಂದು ತಿಳಿದುಕೊಂಡಿರುತ್ತಾರೆ ಆದರೆ ಯಾರೇ ಆಗಲಿ ಜಂಕ್ ಫುಡ್ ತಿನ್ನುವುದರಿಂದ ಹೊಟ್ಟೆಯಲ್ಲಿ ಬೊಜ್ಜು ಬರುತ್ತದೆ ಹೊರತು ಆರೋಗ್ಯಕರವಾಗಿ ದಪ್ಪ ಆಗುವುದಿಲ್ಲ. ಕೆಲವರು ತೂಕವನ್ನು ಹೆಚ್ಚಿಸಿಕೊಳ್ಳಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಅದು ಸರಿಯಾದ ಕ್ರಮವಲ್ಲ ಅಲ್ಲದೆ ಅಡ್ದ ಪರಿಣಾಮ ಉಂಟಾಗುತ್ತದೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ದಿನಕ್ಕೆ 2,000 ಕ್ಯಾಲೋರಿ ಖರ್ಚಾಗುತ್ತದೆ ತೂಕ ಹೆಚ್ಚಿಸಿಕೊಳ್ಳಲು ಅದಕ್ಕಿಂತ ಹೆಚ್ಚಿನ ಕ್ಯಾಲೋರಿಯನ್ನು ಸೇವಿಸಬೇಕು. ಬಾಳೇಹಣ್ಣು, ಹಾಲು, ಪನೀರ್, ಖರ್ಜೂರ, ಒಣದ್ರಾಕ್ಷಿ, ಅಂಜೂರ, ತುಪ್ಪ ಇವುಗಳನ್ನು ಹೆಚ್ಚು ಸೇವಿಸಬೇಕು. ಇವುಗಳನ್ನು ಸೇವಿಸುವುದರಿಂದ ಕಡಿಮೆ ಸಮಯದಲ್ಲಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಬೆಳಗ್ಗೆ ಒಂದು ಲೋಟ ಹಾಲಿನಲ್ಲಿ ಎರಡು ಬಾಳೆಹಣ್ಣನ್ನು ಬೆರೆಸಿ ತಿನ್ನಬೇಕು ಅದರಲ್ಲೂ ಕಪ್ಪು ಚುಕ್ಕೆ ಇರುವ ಬಾಳೆಹಣ್ಣು ಒಳ್ಳೆಯದು ಇದರಿಂದ ತೂಕ ಸುಲಭವಾಗಿ ಹೆಚ್ಚುತ್ತದೆ. ಬಾಳೆಹಣ್ಣಿನಲ್ಲಿ ಕ್ಯಾಲೋರಿ ಹೆಚ್ಚು ಇರುತ್ತದೆ, ಇದಕ್ಕೆ ತುಪ್ಪ ಸೇರಿಸಿ ಮಿಕ್ಸಿಗೆ ಹಾಕಿ ಜ್ಯೂಸ್ ನಂತೆ ಮಾಡಿ ಸೇವಿಸುವುದು ಉತ್ತಮ. ಬೆಳಗಿನ ಸಮಯದಲ್ಲಿ ಕ್ಯಾಲೋರಿ ಹೆಚ್ಚಿರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು, ತೂಕ ಹೆಚ್ಚುತ್ತದೆ ಹಾಗೂ ಶಕ್ತಿ ಸಿಗುತ್ತದೆ.

ರಾತ್ರಿ ಮಲಗುವಾಗ ಒಂದು ಲೋಟ ಹಾಲಿಗೆ ಖರ್ಜೂರ ಸೇರಿಸಿ ಜ್ಯೂಸ್ ನಂತೆ ಮಾಡಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು, ಆರೋಗ್ಯಕರವಾಗಿ ತೂಕ ಹೆಚ್ಚುತ್ತದೆ ಅಲ್ಲದೆ ಮಸಲ್ ಬೆಳವಣಿಗೆಗೆ ಉಪಯುಕ್ತವಾಗಿದೆ. ಈ ರೀತಿ ಕುಡಿಯುವುದರಿಂದ ಮಹಿಳೆಯರಿಗೆ ಪೀರಿಯಡ್ ಸಮಸ್ಯೆಗಳಿದ್ದರೆ ಅದು ದೂರವಾಗುತ್ತದೆ. ಖರ್ಜೂರ ಇಲ್ಲವೆಂದರೆ ಉತ್ತತ್ತಿಯನ್ನು ಬಳಸಬಹುದು. ಒಂದು ಗ್ಲಾಸ್ ಹಾಲಿನಲ್ಲಿ 5-6 ಖರ್ಜೂರವನ್ನು 4-5 ಗಂಟೆವರೆಗೆ ನೆನೆಸಿಡಬೇಕು, ಊಟದ ನಂತರ ಸ್ವಲ್ಪ ಬಿಸಿ ಮಾಡಿ ಕುಡಿಯಬೇಕು ಹೀಗೆ ಬೆಳಗ್ಗೆ ಸಂಜೆ ಕುಡಿಯುವುದರಿಂದ ಒಂದು ವಾರದಲ್ಲಿ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬಹುದು. ರಾತ್ರಿ ಮಲಗುವಾಗ ಒಂದು ಹಿಡಿ ಒಣದ್ರಾಕ್ಷಿಯನ್ನು ನೆನೆಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು ಇದರಿಂದ ಶರೀರಕ್ಕೆ ಕ್ಯಾಲೋರಿ ದೊರೆಯುತ್ತದೆ ಹಾಗೂ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ದಿನದಲ್ಲಿ ಶೇಂಗಾವನ್ನು ಹೆಚ್ಚು ತಿನ್ನುವುದರಿಂದ ದೇಹಕ್ಕೆ 100-150 ಕ್ಯಾಲೋರಿ ದೊರೆಯುತ್ತದೆ. ಪೀನಟ್ ಬಟರ್ ಅನ್ನು ಬ್ರೆಡ್ ನೊಂದಿಗೆ ತಿನ್ನುವುದರಿಂದ ಶರೀರಕ್ಕೆ ಒಳ್ಳೆಯದು ಹಾಗೂ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಸೇವಿಸುವ ಆಹಾರದಲ್ಲಿ ಪ್ರೊಟೀನ್ ಜಾಸ್ತಿ ಇದ್ದರೆ ತೂಕ ಹೆಚ್ಚುತ್ತದೆ. ಬೇಳೆ ಕಾಳು, ‌ಮೊಟ್ಟೆ, ಹಾಲು ಹಾಗೂ ಅದರ ಉತ್ಪನ್ನಗಳನ್ನು ಹೆಚ್ಚು ಸೇವಿಸುವುದರಿಂದ ಶರೀರದ ತೂಕ ಹೆಚ್ಚುತ್ತದೆ. ಆಹಾರದ ಜೊತೆಗೆ ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಿದರೆ ಜೀರ್ಣಕ್ರಿಯೆ ಚುರುಕಾಗುತ್ತದೆ ಇದರಿಂದ ಆಹಾರ ಸರಿಯಾಗಿ ಜೀರ್ಣವಾಗಿ ದೇಹಕ್ಕೆ ಸೇರುತ್ತದೆ, ಮನಸ್ಸು ಶಾಂತವಾಗಿರುತ್ತದೆ. ಈ ಎಲ್ಲ ಅಂಶಗಳನ್ನು ತಪ್ಪದೇ ಪಾಲಿಸಿದರೆ ಆರೋಗ್ಯದ ಜೊತೆಗೆ ತೂಕ ಹೆಚ್ಚಾಗುವುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!