ಹುಡುಗಿಯರು ಎಂದಿಗೂ ಸೌಂದರ್ಯ, ಅಲಂಕಾರ ಪ್ರಿಯರು. ಸುಂದರವಾದ ಉಡುಗೆ, ಅದಕ್ಕೆ ಒಪ್ಪುವ ಅಲಂಕಾರ ಮಾಡೊಕೊಳ್ಳುವುದೆಂದರೆ ತುಂಬಾ ಪ್ರೀತಿ. ಆದರೆ ತುಂಬಾ ತೆಳ್ಳಗಿನ ದೇಹ ಹೊಂದಿರುವ ಹೆಣ್ಣು ಮಕ್ಕಳಿಗೆ ಎಲ್ಲಾ ತರಹದ ಉಡುಪುಗಳು ಅಷ್ಟೇನೂ ಸುಂದರವಾಗಿ ಕಾಣುವುದಿಲ್ಲ. ಅಂತಹ ಹೆಣ್ಣು ಮಕ್ಕಳಿಗೆ ಇಲ್ಲಿ ದೇಹದ ತೂಕ ಹೆಚ್ಚಿಸಿಕೊಳ್ಳುವ ಮಾಹಿತಿ ನೀಡಲಾಗಿದೆ. ದೇಹದ ತೂಕ ಹೆಚ್ಚಿಸಿಕೊಳ್ಳುವ ಮಾರ್ಗ ಏನು ಎನ್ನುವುದನ್ನು ತಿಳಿಯೋಣ.
ಸಾಮಾನ್ಯವಾಗಿ ಪೌಡರ್ ಹಾಗೂ ಔಷಧಗಳನ್ನು ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ತೆಳ್ಳಗಿರುವ ಹೆಣ್ಣು ಮಕ್ಕಳು ಬಳಸುತ್ತಾರೆ. ಆದರೆ ಹೀಗೆ ತೆಗೆದುಕೊಳ್ಳುವ ಔಷಧ ಹಾಗೂ ಪೌಡರ್ ಗಳಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ತೆಳ್ಳಗಿರುವ ಹುಡುಗಿಯರಿಗಾಗಿ ಕೆಲವು ಆಹಾರಗಳು ಉತ್ತಮವಾಗಿದೆ. ತೂಕ ಹೆಚ್ಚಳಕ್ಕೆ ಹೊರಗಿನ ಜಂಕ್ ಪುಡ್ ಗಳು ತಿನ್ನುವುದು ಉತ್ತಮ ಎಂದುಕೊಳ್ಳುತ್ತಾರೆ. ಆದರೆ ಜಂಕ್ ಪುಡ್ ತಿನ್ನುವುದು ಕಡಿಮೆ ಮಾಡಿದಷ್ಟು ಒಳ್ಳೆಯದು. ಇದರಿಂದ ಮೆಟಬೊಲಿಸಂ ತಗ್ಗಿಸಿ ಆರೋಗ್ಯದಲ್ಲಿ ಏರುಪೇರು ಆಗುವಂತೆ ಮಾಡುತ್ತದೆ. ತೆಳ್ಳಗಿನ ಶರೀರ ಇರುವ ಹೆಣ್ಣು ಮಕ್ಕಳು ಆಹಾರದಲ್ಲಿ ಹೆಚ್ಚು ಪ್ರೊಟೀನ್ ಅಂಶ ಇರುವುದನ್ನು ಸೇವಿಸುವುದು ಒಳ್ಳೆಯದು. ಇದು ತೂಕ ಹೆಚ್ಚಿಸುವುದಲ್ಲದೆ ಸ್ನಾಯು ಹಾಗೂ ಮಾಂಸ ಖಂಡಗಳನ್ನು ಬಲಗೊಳಿಸುತ್ತದೆ.
ಹೆಣ್ಣುಮಕ್ಕಳು ಖರ್ಜೂರ, ಹಾಲು, ಚಿಸ್, ತುಪ್ಪ, ಬೆಣ್ಣೆ, ಪನ್ನೀರ್ ಇಂತಹ ವಸ್ತುಗಳ ಸೇವನೆ ತುಂಬಾ ಒಳ್ಳೆಯದು. ತೂಕ ಹೆಚ್ಚಿಸಲು ಪ್ರತಿ ದಿನ ಬೆಳಿಗ್ಗೆ ಬಾಳೆ ಹಣ್ಣಿನ ಮಿಲ್ಕ್ ಶೇಕ್ ಕುಡಿಯಬೇಕು. ತೆಳ್ಳಗಿರುವ ಹೆಣ್ಣು ಮಕ್ಕಳು ಅಂದವಾಗಿ ಕಾಣುವಂತೆ ಆಗಲು ಬಾದಾಮಿಯ ಸೇವನೆ ಅವಶ್ಯಕ. ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸಿಪ್ಪೆ ತೆಗೆದ ಬಾದಾಮಿ ಹಾಲಿನೊಂದಿಗೆ ಬೆರೆಸಿ ತಿನ್ನಬೇಕು. ಯಾಕೆಂದರೆ ಬಾದಾಮಿಯಲ್ಲಿ ಹೇರಳವಾಗಿರುವ ಇರುವ ಪ್ರೊಸ್ಪರಸ್, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಗಳು ದೇಹದ ತೂಕ ಹೆಚ್ಚಳಕ್ಕೆ ಅನುಕೂಲ ಮಾಡಿಕೊಡುತ್ತದೆ. ವೇಗವಾಗಿ ತೂಕ ಹೆಚ್ಚಾಗಲು, ಜೇನು ತುಪ್ಪವನ್ನು ಬಿಸಿಯಾದ ಹಾಲಿಗೆ ಬೆರೆಸಿ ಕುಡಿಯಬೇಕು. ಇದರಿಂದ ಜೀರ್ಣಶಕ್ತಿ ಕೂಡ ಚೆನ್ನಾಗಿ ಆಗುತ್ತದೆ. ಕಾರ್ಬೊಹೈಡ್ರೇಟ್ ಹೇರಳವಾಗಿರುವ ಆಲೂಗಡ್ಡೆ ಸೇವಿಸಬೇಕು. ಇದರಿಂದ ತೂಕ ಹೆಚ್ಚಾಗುವುದಲ್ಲದೆ, ಹೊಟ್ಟೆ ಸ್ವಚ್ಛವಾಗುತ್ತದೆ.
ತೂಕ ಕಡಿಮೆ ಇರುವ ಹೆಣ್ಣು ಮಕ್ಕಳು ಈ ಮನೆ ಮದ್ದುಗಳ ಪ್ರಯೋಗ ಖಂಡಿತ ಮಾಡಿ ನೋಡಿ. ಆದರೆ ಎಲ್ಲ ಔಷಧಿಗಳು ತಕ್ಷಣವೇ ಪರಿಹಾರ ಕೊಡಬೇಕು ಎಂದು ಭಾವಿಸದಿರಿ. ಔಷಧಿಗಳಿಗೂ ಸಮಯದ ಪರಿಮಿತಿ ಇರುತ್ತದೆ.