ಮೇ 8 ರಿಂದ 14 ರವರೆಗೆ ಈ ವಾರ ಪುಣ್ಯಕರವಾದ ವಾರವಾಗಿದೆ. ಈ ವಾರದಲ್ಲಿ ಯಾವ ದಿನಗಳಲ್ಲಿ ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಯಾವ ದಿನಗಳಲ್ಲಿ ಯಾವ ರಾಶಿಯವರಿಗೆ ಕೆಟ್ಟ ಸಮಯ ಬರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಗ್ರಹಗತಿ ಬದಲಾವಣೆಯಿಂದ ಪ್ರತಿಯೊಂದು ವಾರದಲ್ಲಿಯೂ ಅವರವರ ರಾಶಿಗೆ ತಕ್ಕಂತೆ ಬದಲಾವಣೆಗಳನ್ನು ನೋಡಬೇಕಾಗುತ್ತದೆ. ಅದರಂತೆ ಮೇ 8 ನೇ ತಾರೀಖಿನಿಂದ 14 ನೇ ತಾರೀಖಿನವರೆಗೆ ಈ ವಾರದಲ್ಲಿ ಯಾವ ರಾಶಿಯವರಿಗೆ ಯಾವ ರೀತಿಯ ಪರಿಣಾಮ ಇರುತ್ತದೆ ಎಂಬುದನ್ನು ತಿಳಿಯಬೇಕು. ಮೇಷ ರಾಶಿಯವರಿಗೆ ಈ ವಾರದ ಮೊದಲೆರಡು ದಿನ ನೆಮ್ಮದಿ ಕಡಿಮೆ ಆಗುತ್ತದೆ. ಮನೆ ಹಾಗೂ ವ್ಯವಹಾರ ಎರಡನ್ನೂ ಸಮತೋಲನವಾಗಿ ನೋಡಬೇಕಾಗುತ್ತದೆ. ವಾರದ ಮದ್ಯದ ಮೂರು ದಿನ ಮೇಷ ರಾಶಿಯವರ ಮನಸ್ಥಿತಿ ಸುಧಾರಿಸುತ್ತದೆ. ಪ್ರೀತಿ ಪ್ರಕರಣದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಯಶಸ್ಸು ಲಭಿಸುತ್ತದೆ. ವಾರದ ಕೊನೆಯಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ, ವ್ಯವಹಾರಗಳಲ್ಲಿ ಜಯ ಸಾಧಿಸುತ್ತಾರೆ. ಈ ರಾಶಿಯವರ ವಿರುದ್ಧ ಯಾರೂ ಮಾತನಾಡುವುದಿಲ್ಲ.

ವೃಷಭ ರಾಶಿಗೆ ಈ ವಾರದ ಮೊದಲೆರಡು ದಿನ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸಾಮಾಜಿಕ ವ್ಯವಹಾರಗಳಲ್ಲಿ ಗೆಲುವು ಸಾಧಿಸುತ್ತಾರೆ. ಬಂಧುಗಳಿಂದ ಅಕ್ಕರೆ, ಪ್ರೀತಿ ಸಿಗುತ್ತದೆ. ಈ ರಾಶಿಯವರಿಗೆ ಈ ವಾರ ಓಡಾಟ ಹೆಚ್ಚಿರುತ್ತದೆ. ವಾರದ ಮದ್ಯದ ಮೂರು ದಿನಗಳು ಒತ್ತಡದ ವಾತಾವರಣ ಕಂಡುಬರುತ್ತದೆ. ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿದರೆ ಒತ್ತಡ ಉಂಟಾಗುವುದಿಲ್ಲ. ರಿಯಲ್ ಎಸ್ಟೇಟ್, ಕೋರ್ಟ್, ಕಛೇರಿಗಳ ವ್ಯವಹಾರ ಮಾಡುತ್ತಿರುವವರು ಎಚ್ಚರಿಕೆಯಿಂದ ವ್ಯವಹರಿಸಬೇಕು.

ವಾರದ ಕೊನೆಯಲ್ಲಿ ನೆಮ್ಮದಿ ಸಿಗುತ್ತದೆ. ವೃಷಭ ರಾಶಿಯ ಕಲಾವಿದರಿಗೆ ಇದು ಒಳ್ಳೆಯ ಸಮಯವಾಗಿದೆ. ಮಿಥುನ ರಾಶಿಯವರಿಗೆ ವಾರದ ಮೊದಲೆರಡು ದಿನ ನೆಮ್ಮದಿ, ಕುಟುಂಬದಲ್ಲಿ ಸಂತೋಷ ಕಂಡುಬರುತ್ತದೆ. ಈ ರಾಶಿಯವರು ಮನೆಯವರೊಂದಿಗೆ ಆದಷ್ಟು ಸಮಯವನ್ನು ಕಳೆಯವುದು ಒಳ್ಳೆಯದು. ವಾರದ ಮದ್ಯದ ಮೂರು ದಿನಗಳಲ್ಲಿ ಈ ರಾಶಿಯವರು ತಮ್ಮ ಕುಟುಂಬದವರಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಮೀಡಿಯಾ, ಕಮ್ಯುನಿಕೇಷನ್ ಕ್ಷೇತ್ರದಲ್ಲಿ ಇರುವವರಿಗೆ ಇದು ಒಳ್ಳೆಯ ಸಮಯವಾಗಿದೆ. ವಾರದ ಕೊನೆಯಲ್ಲಿ ಮನಸ್ಸಿನಲ್ಲಿ ಗೊಂದಲ ನಿರ್ಮಾಣವಾಗಿರುತ್ತದೆ. ಮುಖ್ಯ ನಿರ್ಧಾರವನ್ನು ವಾರದ ಕೊನೆಯಲ್ಲಿ ತೆಗೆದುಕೊಳ್ಳಬಾರದು.

ಕರ್ಕಾಟಕ ರಾಶಿಯವರಿಗೆ ಈ ವಾರದ ಮೊದಲೆರಡು ದಿನ ಮನಸ್ಸಿಗೆ ಸಂತೋಷ ಸಿಗುತ್ತದೆ ಹಾಗೂ ಕುಟುಂಬದಲ್ಲಿಯೂ ಸಂತೋಷ ನಿರ್ಮಾಣವಾಗುತ್ತದೆ. ವಾರದ ಮದ್ಯದ ಮೂರು ದಿನಗಳಲ್ಲಿ ಈ ರಾಶಿಯವರು ತಮ್ಮ ಸಂತೋಷವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುತ್ತಾರೆ. ಕುಟುಂಬದಲ್ಲಿ ಸಂಭ್ರಮ ಕಂಡುಬರುತ್ತದೆ. ಈ ರಾಶಿಯವರಿಗೆ ವಾರದ ಕೊನೆಯ ಎರಡು ದಿನ ಒಳ್ಳೆಯದಾಗುತ್ತದೆ ಹೊರಗಡೆ ಹೋಗಿ ಸಾಧಿಸುವ ವಾತಾವರಣ ನಿರ್ಮಾಣವಾಗುತ್ತದೆ.

ಸಿಂಹ ರಾಶಿಯವರಿಗೆ ವಾರದ ಮೊದಲ ಎರಡು ದಿನಗಳಲ್ಲಿ ನೆಮ್ಮದಿ ಕಡಿಮೆಯಾಗುತ್ತದೆ. ಮಿತ್ರರಲ್ಲಿ ಮನಸ್ತಾಪ ಕಂಡುಬರುತ್ತದೆ. ಈ ರಾಶಿಯವರಿಗೆ ವಾರದ ಮದ್ಯದ ಮೂರು ದಿನಗಳಲ್ಲಿ ಬೇಕಾದ ಮಾರ್ಗದರ್ಶನ ಸಿಗುತ್ತದೆ. ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ಸಮಯ ಇದಾಗಿದೆ. ವಾರದ ಕೊನೆಯಲ್ಲಿ ಸಿಂಹ ರಾಶಿಯವರು ಕುಟುಂಬದವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಿ.

ಕನ್ಯಾ ರಾಶಿಯವರು ವಾರದ ಮೊದಲೆರಡು ದಿನ ಬಹಳ ಕೆಲಸದಲ್ಲಿ ತೊಡಗಿರುತ್ತಾರೆ. ಬಿಸಿನೆಸ್ಸ್ ಮಾಡುವವರಿಗೆ ಈ ಎರಡು ದಿನ ಉತ್ತಮವಾಗಿರುತ್ತದೆ. ವಾರದ ಮದ್ಯದ ಮೂರು ದಿನಗಳಲ್ಲಿ ಕೆಲಸದಲ್ಲಿ ಹಿಂದೇಟು ಹಾಕಬೇಕಾಗುತ್ತದೆ, ಬಿಸಿನೆಸ್ ಪಾರ್ಟ್ನರ್ ಗಳಲ್ಲಿ ಮನಸ್ತಾಪ ಕಂಡುಬರುತ್ತದೆ ಆದರೆ ಅದು ಹೆಚ್ಚು ಸಮಯ ಇರುವುದಿಲ್ಲ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಈ ರಾಶಿಯವರಿಗೆ ವಾರದ ಕೊನೆಯ ದಿನಗಳಲ್ಲಿ ಮನಸ್ಸಿಗೆ ನೆಮ್ಮದಿ ಕಂಡುಬರುತ್ತದೆ.

ತುಲಾ ರಾಶಿಯವರು ಈ ವಾರದ ಮೊದಲೆರಡು ದಿನಗಳಲ್ಲಿ ಕೆಲಸಗಳನ್ನು ನಿಗದಿತ ಸಮಯದೊಳಗೆ ಮುಗಿಸಿಕೊಂಡರೆ ಒತ್ತಡದ ವಾತಾವರಣ ನಿರ್ಮಾಣವಾಗುವುದಿಲ್ಲ. ವಾರದ ಮಧ್ಯದ ಮೂರು ದಿನ ಕೆಲಸಕಾರ್ಯಗಳಲ್ಲಿ ತೊಡಗುವುದರಿಂದ ಮನೆಯವರಿಗೆ ಸಿಗುವುದಿಲ್ಲ. ಈ ಸಮಯದಲ್ಲಿ ತುಲಾ ರಾಶಿಯವರಿಗೆ ಧನಪ್ರಾಪ್ತಿ ಆಗುವ ಸಂಭವವಿದೆ. ವಾರದ ಕೊನೆಯ ಎರಡು ದಿನಗಳಲ್ಲಿ ನೆಮ್ಮದಿ ಸ್ವಲ್ಪ ಕಡಿಮೆಯಾಗುತ್ತದೆ, ಕೆಲಸದಲ್ಲಿ ತೊಡಕು ಕಂಡುಬರುತ್ತದೆ ಮಿತ್ರರಲ್ಲಿ ಸಣ್ಣಪುಟ್ಟ ಮನಸ್ತಾಪ ಕಂಡುಬರುತ್ತದೆ. ವೃಶ್ಚಿಕ ರಾಶಿಯವರಿಗೆ ವಾರದ ಮೊದಲೆರಡು ದಿನಗಳಲ್ಲಿ ಇದುವರೆಗಿನ ಗೊಂದಲಗಳಿಗೆ ಈಗ ಪರಿಹಾರ ಸಿಗುತ್ತದೆ. ಹಿರಿಯರ ಆಶೀರ್ವಾದ ಸಿಗುತ್ತದೆ. ದೇವರ ಹಾಗೂ ಹಿರಿಯರ ಸೇವೆ ಮಾಡುವುದನ್ನು ಮರೆಯಬಾರದು. ವಾರದ ಮದ್ಯದ ಮೂರು ದಿನ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಂಡುಬರುತ್ತದೆ. ಮನೆಯಲ್ಲಿಯೂ ಸಂತೋಷದ ವಾತಾವರಣ ಕಂಡುಬರುತ್ತದೆ. ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಳ್ಳಬೇಕು.

ಈ ರಾಶಿಯವರಿಗೆ ವಾರದ ಕೊನೆಯಲ್ಲಿ ಸಂತೋಷ ಕಂಡುಬರುತ್ತದೆ. ಮಿತ್ರರಿಂದ ಧನಾಗಮ ಆಗುತ್ತದೆ. ಧನು ರಾಶಿಯವರಿಗೆ ವಾರದ ಮೊದಲೆರಡು ದಿನ ಬೇಸರ ಕಂಡುಬರುತ್ತದೆ. ವಾರದ ಮಧ್ಯದ ಮೂರು ದಿನ ಈ ರಾಶಿಯವರಿಗೆ ಸಂತೋಷ ಕಂಡುಬರುತ್ತದೆ ಹಾಗೂ ಭಾಗ್ಯೋದಯವಾಗುತ್ತದೆ. ಈ ರಾಶಿಯವರಿಗೆ ಕೊನೆಯ ಎರಡು ದಿನ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಂಡುಬಂದು ಒಳ್ಳೆಯದಾಗುತ್ತದೆ. ಮಕರ ರಾಶಿಗೆ ಈ ವಾರದ ಮೊದಲೆರಡು ದಿನಗಳಲ್ಲಿ ಬೇರೆಯವರು ಯಶಸ್ಸಿಗೆ ಕಾರಣರಾಗುತ್ತಾರೆ. ವಾರದ ಮದ್ಯದ ಮೂರು ದಿನಗಳಲ್ಲಿ ಈ ರಾಶಿಯವರಿಗೆ ಯೋಚನೆ ಕಂಡುಬರುತ್ತದೆ. ಈ ಸಮಯದಲ್ಲಿ ಮುಖ್ಯ ನಿರ್ಧಾರಗಳನ್ನು ಮಾಡಬೇಡಿ. ವಾರದ ಕೊನೆಯಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಮನಸ್ಸಿಗೆ ನೆಮ್ಮದಿ ಕಂಡುಬರುತ್ತದೆ. ದೇವರ ಹಾಗೂ ಹಿರಿಯರ ಆಶೀರ್ವಾದ ಪಡೆಯಿರಿ.

ಕುಂಭ ರಾಶಿಯವರು ಈ ವಾರದ ಮೊದಲೆರಡು ದಿನ ಸಾಮಾಜಿಕ ವ್ಯವಹಾರಗಳಲ್ಲಿ ಯಶಸ್ಸನ್ನು ಕಾಣುತ್ತಾರೆ. ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಹೆಲ್ತ್ ಫಿಟ್ನೆಸ್ ಬಿಸಿನೆಸ್ ಗಳಲ್ಲಿ ಇರುವವರಿಗೆ ಎರಡು ದಿನ ಉತ್ತಮವಾಗಿದೆ. ವಾರದ ಮದ್ಯದ ಮೂರು ದಿನಗಳಲ್ಲಿ ಯಶಸ್ಸಿಗೆ ಬೇರೆಯವರು ಕಾರಣರಾಗುತ್ತಾರೆ ಆದ್ದರಿಂದ ಇತರರೊಂದಿಗೆ ಉತ್ತಮವಾಗಿ ವ್ಯವಹರಿಸಬೇಕಾಗುತ್ತದೆ. ವಾರದ ಕೊನೆಯಲ್ಲಿ ಈ ರಾಶಿಯವರು ಕೆಲಸಗಳನ್ನು ನಿಧಾನ ಮಾಡಿದರೆ ಉತ್ತಮ.

ಮೀನ ರಾಶಿಯವರಿಗೆ ಈ ವಾರದ ಮೊದಲೆರಡು ದಿನ ನೆಮ್ಮದಿ, ಬೇರೆಯವರಿಂದ ಸಂತೋಷ ಕಂಡುಬರುತ್ತದೆ. ಪ್ರೀತಿಗೆ ಒಳಗಾಗುವುದರಿಂದ ದಾಂಪತ್ಯ ಜೀವನದಲ್ಲಿ ಯಶಸ್ಸು ಕಂಡುಬರುತ್ತದೆ. ಈ ರಾಶಿಯವರು ವಾರದ ಮದ್ಯದ ಮೂರು ದಿನಗಳಲ್ಲಿ ಸಾಮಾಜಿಕ ವಾತಾವರಣದಲ್ಲಿ ಗೆಲುವು ಸಾಧಿಸುತ್ತಾರೆ. ವಾರದ ಕೊನೆಯಲ್ಲಿ ಮನಸಿಗೆ ನೆಮ್ಮದಿ ಇರುತ್ತದೆ, ಇತರರೊಂದಿಗೆ ಸಹಕರಿಸಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *