ಪೌಷ್ಟಿಕಾಂಶಗಳು ಮನುಷ್ಯನ ದೇಹಕ್ಕೆ ಅತ್ಯವಶ್ಯಕ. ಪೌಷ್ಟಿಕಾಂಶಗಳು ಸರಿಯಾಗಿದ್ದರೆ ಮಾತ್ರ ದೇಹದ ಬೆಳವಣಿಗೆ ಸರಿಯಾಗುತ್ತದೆ. ಚಿಕ್ಕ ಮಕ್ಕಳು ಸರಿಯಾಗಿ ಬೆಳೆಯಬೇಕೆಂದರೆ ಪೌಷ್ಟಿಕಾಂಶಗಳು ಬೇಕೇ ಬೇಕು. ಹಾಗೆಯೇ ದೊಡ್ಡವರು ಬಹಳ ಚಟುವಟಿಕೆಯಿಂದ ಇರಬೇಕು ಎಂದರೆ ಪೌಷ್ಟಿಕಾಂಶಗಳು ಅತ್ಯವಶ್ಯಕ. ಆದ್ದರಿಂದ ಪೌಷ್ಠಿಕಾಂಶಗಳು ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಒಳ್ಳೆಯದು. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊಟ್ಟೆ ಇದನ್ನು ಆಹಾರಗಳಲ್ಲಿ ಬಳಸುತ್ತಾರೆ. ಆದರೆ ಇದನ್ನು ಎಲ್ಲರೂ ಸೇವಿಸುವುದಿಲ್ಲ. ಮೊಟ್ಟೆ ಇದು ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಆದ್ದರಿಂದ ಇದನ್ನು ತಿಂದರೆ ಆರೋಗ್ಯವನ್ನು ಬಹಳ ಚೆನ್ನಾಗಿ ಇಟ್ಟುಕೊಳ್ಳಬಹುದು. ಇದನ್ನು ದಿನನಿತ್ಯ ಬಳಸಿದರೆ ಒಳ್ಳೆಯದು. ಹಾಗೆಯೇ ನಂತರದಲ್ಲಿ ಚಿಕನ್ ಬೃಸ್ಟ್. ಇದು ಸಹ ಅತಿ ಹೆಚ್ಚಿನ ಪೌಷ್ಟಿಕ ಅಂಶಗಳನ್ನು ಹೊಂದಿರುತ್ತದೆ. ಇದರಲ್ಲಿ ಯಾವುದೇ ರೀತಿಯ ಕೊಲೆಸ್ಟ್ರಾಲ್ ಪ್ರಮಾಣ ಇರುವುದಿಲ್ಲ.
ಆದ್ದರಿಂದ ಇದನ್ನು ಸಹ ದಿನನಿತ್ಯ ಸೇವನೆ ಮಾಡಬಹುದು. ಇದನ್ನು ವಾರಕ್ಕೆ ಮೂರು ಬಾರಿಯಾದರೂ ಸೇವನೆ ಮಾಡಬೇಕು. ಇದರಿಂದ ದೇಹದ ಮಾಂಸಖಂಡಗಳು ಗಟ್ಟಿಯಾಗಿರುತ್ತವೆ. ಹಾಗೆಯೇ ಅತ್ಯಂತ ಚಟುವಟಿಕೆಯಿಂದ ಕೂಡ ಇರಬಹುದು. ಹಾಗೆಯೇ ಓಟ್ಸ್. ಇದನ್ನು ಎಲ್ಲರೂ ತಿನ್ನಲು ಇಷ್ಟಪಡುವುದಿಲ್ಲ. ಏಕೆಂದರೆ ಇದು ತಿನ್ನಲು ರುಚಿ ಅನಿಸುವುದಿಲ್ಲ. ಹಾಗಾಗಿ ಬಾಳೆಹಣ್ಣು ಮತ್ತು ಡ್ರೈಫ್ರೂಟ್ಸ್ ಗಳ ಜೊತೆ ಇದನ್ನು ಸೇರಿಸಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಹಾಗೆಯೇ ಅತಿಹೆಚ್ಚು ಪೌಷ್ಟಿಕಾಂಶಗಳುಳ್ಳ ಆಹಾರಗಳಲ್ಲಿ ಬ್ಲಾಕ್ ಬೀನ್ಸ್ ಕೂಡ ಒಂದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ ಅನೇಕ ರೋಗಗಳನ್ನು ತಡೆಗಟ್ಟುತ್ತದೆ. ಆದ್ದರಿಂದ ಕಡೆಯದಾಗಿ ಹೇಳುವುದೇನೆಂದರೆ ತಿನ್ನುವಾಗ ಒಳ್ಳೆಯ ಆಹಾರ ಪದಾರ್ಥಗಳನ್ನು ಅಂದರೆ ಪೌಷ್ಟಿಕಾಂಶಗಳುಳ್ಳ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಇದರಿಂದ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬಹುದು.