ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಹ್ಯಾಟ್ರಿಕ್ ಹೀರೋ ಆಗಿ ಕನ್ನಡದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಮೊದಲ ಪುತ್ರನಾಗಿ ಜನಿಸಿದ ಶಿವಣ್ಣ ಅವರ ತಂದೆ ಹಾಗೇನೆ ಅಭಿಮಾನಿಗಳೆ ನಮ್ಮ ಮನೆಯ ದೇವರು ಎನ್ನುತ್ತಾರೆ. ಹಾಗೆ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ ಮೊದಲು ಎದ್ದು ನಿಲ್ಲುವುದು ಅಂದರೆ ಅದು ಶಿವಣ್ಣ ಮಾತ್ರ. ಸಿನಿಮಾ ಡಬ್ಬಿಂಗ್ ವಿಚಾರದಲ್ಲಿಯೂ ಕೂಡ ಶಿವಣ್ಣ ತುಂಬಾನೇ ಹೋರಾಟ ಮಾಡಿದ್ದರು.
ಅವರ ಸರಳತೆಯನ್ನ, ಹಾಗೆ ಅವರ ಪ್ರೀತಿ ಅವರ ಸ್ನೇಹ ದೊಡ್ಡಮನೆಯ ಆ ಸಹೃದಯ ಹೃದಯತೆ ಎಲ್ಲರಿಗೂ ಬರುವುದಿಲ್ಲ.

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮೇ 19 ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. 1986 ಮೇ 19 ರಂದು ಶಿವರಾಜ್ ಕುಮಾರ್ ಹಾಗೂ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಎಷ್ಟೊಂದು ಏಳು ಬೀಳುಗಳು, ಸಂತೋಷ, ದುಃಖ ಎಲ್ಲವನ್ನು ಸಮನಾಗಿ ಸ್ವೀಕರಿಸುತ್ತಾ ಸುಂದರವಾಗಿ ಜೀವನ ಸಾಗಿಸುತ್ತಿದ್ದಾರೆ. ಇಂದಿಗೆ ಶಿವಣ್ಣ ಹಾಗೂ ಗೀತಾ ವಿವಾಹವಾಗಿ 36 ವರ್ಷಗಳು ಪೂರೈಸಿವೆ.

ಸದ್ಯ ಇಂದು ಶಿವಣ್ಣ ಹಾಗೂ ಗೀತಾ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಶಿವರಾಜ್ ಕುಮಾರ್‌ ಸಹೋದರ ರಾಘವೇಂದ್ರ ರಾಜಕುಮಾರ್ ಅಣ್ಣನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್‌ಕುಮಾರ್‌ ಹಾಗೂ ಗೀತಾರವರ ಮದುವೆಯ ಫೋಟೊವನ್ನು ಹಂಚಿಕೊಂಡು “ದೇವರು ಒಳ್ಳೆಯದು ಮಾಡಲಿ.” ಎಂದು ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

ಚಿತ್ರವನ್ನ ವೀಕ್ಷಿಸುವ ಅಭಿಮಾನಿ ದೇವರುಗಳಿಗೆ ಇವರು ಕೊಡುವ ಮರ್ಯಾದೆ ಅಷ್ಟಿಷ್ಟಲ್ಲ, ಎಲ್ಲದರಲ್ಲಿಯೂ ಕೂಡ ದೊಡ್ಡವರೆ ಎಂದು ನಾವು ಹೇಳಬಹುದು. ಸಾಕಷ್ಟು ಸಹಾಯ ಮಾಡುತ್ತ ಇಂದಿಗೂ ಕೂಡ ಕರ್ನಾಟಕ ಚಿತ್ರರಂಗದಲ್ಲಿ ದೊಡ್ಡದಾಗಿ ಸಾಧನೆ ಮಾಡುತ್ತಾ ಬಂದಿದೆ ರಾಜಣ್ಣ ಅವರ ಕುಟುಂಬ. ತಂದೆ ಹೇಳಿಕೊಟ್ಟ ದಾರಿಯಲ್ಲಿ ಶಿವಣ್ಣ ಅವರು ಕೂಡ ನಡೆದು ಬಂದಿದ್ದಾರೆ. ಇತ್ತೀಚಿಗೆ ಅವರ ಕುಟುಂಬದಲ್ಲಿ ಒಂದು ನಡೆಯಬಾರದ ಘಟನೆ ಅತಿಬೇಗನೆ ನಡೆಯಿತು.

ನಮ್ಮ ಪ್ರೀತಿಯ ಅಪ್ಪು ಅವರನ್ನ ಅವರು ಮಾತ್ರವಲ್ಲದೆ ಕರುನಾಡೆ ಕಳೆದುಕೊಂಡು ಕಣ್ಣೀರು ಹಾಕಿತ್ತು. ಅಪ್ಪು ನೋವು ಪ್ರತಿದಿನ ಶಿವಣ್ಣ ಅವರ ಮುಖದಲ್ಲಿ ಕಾಣುತ್ತಿದೆ, ಈಗಲೂ ಕೂಡ ಶಿವಣ್ಣ ಅವರು ಅಪ್ಪು ಅಗಲಿಕೆಯಿಂದ ಇನ್ನೂ ಹೊರ ಬಂದಿಲ್ಲ, ಹಾಗೆ ಹೊರಬರುವುದು ಅನುಮಾನ ಎನ್ನಬಹುದು. ಶಿವಣ್ಣ ಮೊನ್ನೆ ನಾವು ಯಾವುದೇ ಖುಷಿಯ ಕಾರ್ಯಕ್ರಮಗಳನ್ನು ಹೆಚ್ಚಾಗಿ ಮಾಡುವುದಿಲ್ಲ ಎಂದು ಹೇಳಿದ್ದರು.

ಪ್ರತಿ ವರ್ಷ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕಳೆದೆರಡು ವರ್ಷದಿಂದ ಕೊರೊನಾ ಕಾರಣಕ್ಕೆ ಸರಳವಾಗಿಯೇ ಕುಟುಂಬಸ್ಥರ ಜೊತೆ ಆಚರಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಈ ಬಾರಿ ಕೂಡ ಸರಳವಾಗಿಯೇ ಆಚರಿಸಿಕೊಂಡಿದ್ದಾರೆ. ಶಿವಣ್ಣ ಹಾಗೂ ಗೀತಾಗೆ ಕುಟುಂಬಸ್ಥರು ಬಂಧುಗಳು ಹಾಗೂ ಅಭಿಮಾನಿ ದೇವರುಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ. ಇನ್ನು ನೂರಾರು ವರ್ಷ ಹೀಗೆ ಖುಷಿಯಾಗಿರಿ ಎಂದು ಹಾರೈಸುತ್ತಿದ್ದಾರೆ. ಇದೂವರೆಗೂ ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಬೀಳದಂತೆ ಒಂದಾಗಿ ಒಟ್ಟಾಗಿ ಕೂಡಿ ಬಾಳುತ್ತಿರುವ ಶಿವಣ್ಣ ಮತ್ತು ಗೀತಾರವರ ದಾಂಪತ್ಯ ಜೀವನ ಎಲ್ಲರಿಗೂ ಸ್ಫೂರ್ತಿಯಾಗಿದೆ.

ಗೀತಾ ಶಿವರಾಜ್ ಕುಮಾರ್‌ ಅಣ್ಣಾವ್ರ ಸೊಸೆಯಾಗಿ ಬಂದ ದಿನಗಳಿಂದ ಇಲ್ಲಿಯವರೆಗೂ ಸಂಸಾರ ಹೊರತು ಪಡಿಸಿದಂತೆ ಶಿವಣ್ಣನಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲೂ ಬೆಂಗಾವಲಾಗಿ ನಿಂತಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್‌ ವಿಧಿವಶರಾದ ಮೇಲೆ ಕುಟುಂಬದ ಹಿರಿಯರಾಗಿ ಶಿವಣ್ಣ ಹಾಗೂ ಗೀತಾ ಮುಂದೆ ನಿಂತು ನೋಡಿಕೊಂಡಿದ್ದಾರೆ. ಅದರಲ್ಲೂ ಶಕ್ತಿ ಧಾಮ ಸಂಸ್ಥೆಯ ಸಂಪೂರ್ಣ ಉಸ್ತುವಾರಿಯನ್ನು ಗೀತಾ ಶಿವರಾಜ್‌ ಕುಮಾರ್ ಹೊತ್ತುಕೊಂಡಿದ್ದರು.

ಇದಕ್ಕೆ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದರು. ಆದರೆ, ಅಪ್ಪು ಅಕಾಲಿಕ ನಿಧನ ಹೊಂದಿದ ಬಳಿಕ ಮತ್ತೆ ಶಿವಣ್ಣ ಹಾಗೂ ಗೀತಾರವರೇ ಈ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳು ಇಂದು ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ಮದುವೆ ವಾರ್ಷಿಕೋತ್ಸವದ ದಿನ, ಈ ದಿನವ ಆಚರಣೆ ಮಾಡಲೇಬೇಕು ಶಿವಣ್ಣ ನೀವು ಎಂದು ಅವರ ಮನೆಗೆ ಹೋಗಿ ಒತ್ತಾಯ ಮಾಡಿದ್ದಾರೆ.

ಆಗ ಅಭಿಮಾನಿಗಳಿಗೆ ನೋವಾಗುತ್ತದೆ, ನಾನು ಅವರ ಮಾತನ್ನು ನಡೆಸಲಿಲ್ಲ ಎಂದು ಅರಿತು ಶಿವಣ್ಣ ಸರಳವಾಗಿಯೇ 35ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿದ್ದಾರೆ. ಶಿವಣ್ಣ ಮತ್ತು ಪತ್ನಿ ಗೀತಾ ಶಿವರಾಜಕುಮಾರ್ ಅವರು 35 ವರ್ಷ ವಿವಾಹ ವಾರ್ಷಿಕೋತ್ಸವ ಮುಕ್ತಾಯ ಮಾಡಿದ್ದು, ಇಂದು 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!