ಬೇಸಿಗೆಯ ಹಣ್ಣುಗಳಲ್ಲಿ ಅತಿ ಹೆಚ್ಚು ಜನರ ನೆಚ್ಚಿನ ಫಲವೆಂದರೆ ಕಲ್ಲಂಗಡಿ. ವಾಸ್ತವವಾಗಿ, ಈ ನೀರಿನಿದ ಕೂಡಿದ ರಸಭರಿತ ಹಣ್ಣಿಗೆ ಯಾವುದೇ ಪರಿಚಯದ ಅಗತ್ಯವೇ ಇಲ್ಲ ಮತ್ತು ಇದು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮತ್ತು ಅಗ್ಗದ ದರದಲ್ಲಿ ಲಭ್ಯವಿದೆ. ಬೇಸಿಗೆಯ ಬೇಗೆ ತಣಿಸಲು ಕಲ್ಲಂಗಡಿ ಹಣ್ಣಿಗಿಂತ ಪ್ರಶಸ್ತವಾದ ಫಲ ಇನ್ನೊಂದಿಲ್ಲ. ನಾವು ಕೆಂಪಗಿನ ತಿರುಳನ್ನು ಮಾತ್ರವೇ ಸೇವಿಸಿ ಬೀಜಗಳನ್ನು ಎಸೆದುಬಿಡುತ್ತೇವೆ. ಆದರೆ ಈ ಬೀಜಗಳಲ್ಲಿಯೂ ಅದ್ಭುತ ಪೋಷಕಾಂಶಗಳಿವೆ.

ಹೆಚ್ಚಾಗಿ ನಾವು ಹಣ್ಣುಗಳನ್ನು ತಿಂದು ಅದರ ಬೀಜ ಅಥವಾ ಸಿಪ್ಪೆಗಳನ್ನು ಬಿಸಾಡುತ್ತೇವೆ . ಅದರಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಕೆಲವೊಂದು ಹಣ್ಣುಗಳಲ್ಲಿ ಅವುಗಳ ಬೀಜ ಹಾಗೂ ಸಿಪ್ಪೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಅಡಗಿರುತ್ತದೆ. ಇಂತಹ ಒಂದು ಹಣ್ಣೆಂದರೆ ಕಲ್ಲಂಗಡಿ ಹಣ್ಣು. ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ, ಈ ಹಣ್ಣು ಬೇಸಿಗೆಯಲ್ಲಿ ತುಂಬಾ ಉಪಯುಕ್ತ. ಇದರಲ್ಲಿ ಇರುವಂತಹ ಹೆಚ್ಚಿನ ನೀರಿನಾಂಶವು ದೇಹದ ಬಾಯಾರಿಕೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಹೊಟ್ಟೆಯನ್ನು ತುಂಬಿಸುವುದು. ಆದರೆ ಇದರಲ್ಲಿರುವ ಬೀಜಗಳನ್ನು ನಾವು ಉಗಿಯುತ್ತೇವೆ. ಆದರೆ ಈ ಬೀಜಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ ಎಂದು ನಮಗೆ ತಿಳಿದಿಲ್ಲ. ತ್ವಚೆಯನ್ನು ತಂಪಾಗಿಸುವ ಕಲ್ಲಂಗಡಿ ಹಣ್ಣಿನ ಫೇಸ್ ಪ್ಯಾಕ್ ಮುಖದ ಕಾಂತಿ ಹೆಚ್ಚುವುದು.

ಆದರೆ ಈ ಚಿಕ್ಕ ಕಪ್ಪು ಬೀಜಗಳೂ ನಿಜವಾಗಿ ಹಲವು ಬಗೆಯ ಪೋಷಣೆ ನೀಡುತ್ತವೆ. ಕಲ್ಲಂಗಡಿ ಹಣ್ಣು ದೊಡ್ಡ ಗಾತ್ರದ ಫಲವಾಗಿದ್ದರೂ ಹಣ್ಣಿನೊಳಗಿನ ಬೀಜಗಳು ಮಾತ್ರ ಚಿಕ್ಕದಾಗಿದ್ದು ಕೆಲವು ಮಾಂತ್ರಿಕ ಗುಣಗಳನ್ನು ಹೊಂದಿವೆ. ಇದನ್ನು ನಮ್ಮ ಆರೋಗ್ಯ ವೃದ್ದಿಸಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಈ ಬೀಜಗಳಲ್ಲಿ ಕ್ಯಾಲೊರಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಇವೆ ಮತ್ತು ತಾಮ್ರ, ಸತು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ, ಫೋಲೇಟ್ ಇತ್ಯಾದಿ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ಇವೆಲ್ಲವೂ ವಿವಿಧ ರೀತಿಯಲ್ಲಿ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತವೆ.

ಕಲ್ಲಂಗಡಿ ಬೀಜಗಳಿಗೂ ಪ್ರಬಲ ರೋಗನಿರೋಧಕ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕೂ ಸಂಬಂಧ ಇರುವುದನ್ನು ಸಂಶೋಧನೆಗಳು ಖಚಿತಪಡಿಸಿವೆ. ಮೆಗ್ನೀಸಿಯಮ್ ಇರುವ ಕಾರಣ ಈ ಬೀಜಗಳು ಅಧಿಕ ರಕ್ತದೊತ್ತಡವನ್ನು ಸಹಾ ಸಾಮಾನ್ಯ ಮಟ್ಟಕ್ಕೆ ತರಲು ನೆರವಾಗುತ್ತವೆ, ಇದು ಹೃದಯದ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಕಲ್ಲಂಗಡಿ ಬೀಜಗಳನ್ನು ಪ್ರತಿದಿನ ಕೊಂಚ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಮತ್ತು ನಿಮ್ಮ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಕಲ್ಲಂಗಡಿ ಬೀಜಗಳಲ್ಲಿ ತಾಮ್ರ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ಮತ್ತು ಈ ಖನಿಜಗಳು ಇತರ ಸೂಕ್ಷ್ಮ ಪೋಷಕಾಂಶಗಳೊಂದಿಗೆ ನಮ್ಮ ಮೂಳೆಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಬೀಜಗಳು ನಮ್ಮ ಎಲುಬುಗಳನ್ನು ಬಲಪಡಿಸುತ್ತವೆ ಮತ್ತು ಮೂಳೆಯ ಸಾಂದ್ರತೆಯನ್ನು ಉತ್ತಮಪಡಿಸುತ್ತವೆ.

ಅಲ್ಲದೇ ಈ ಬೀಜಗಳನ್ನು ಹೆಚ್ಚು ಪೌಷ್ಠಿಕಾಂಶವೆಂದೂ ಪರಿಗಣಿಸಲಾಗುತ್ತದೆ ಏಕೆಂದರೆ ಅವು ಅಮೈನೋ ಆಮ್ಲಗಳು, ಪ್ರೋಟೀನುಗಳೂ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಿಂದ ಸಮೃದ್ಧವಾಗಿವೆ. ಈ ಎಲ್ಲಾ ಪೋಷಕಾಂಶಗಳು ಒಟ್ಟಾಗಿ ನಿಮ್ಮ ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಾನವ ದೇಹಕ್ಕೆ ಅಮೈನೊ ಆಮ್ಲಗಳು ಅತ್ಯಗತ್ಯವಾಗಿ ಬೇಕಾಗುತ್ತವೆ. ನಿಮ್ಮ ದೇಹವು ಈ ಆಮ್ಲಗಳನ್ನು ಗ್ಲುಟಮಿಕ್ ಮತ್ತು ಟ್ರೈಪ್ಟೊಫಾನ್ ಆಮ್ಲಗಳ ರೂಪದಲ್ಲಿ ಪಡೆಯುತ್ತದೆ. ಇದಕ್ಕಾಗಿ ಹಲವಾರು ಔಷಧಿಗಳು ದೊರೆಯುತ್ತವೆ. ಆದರೆ ವೈದ್ಯರು ಅವುಗಳ ಬದಲಿಗೆ ಸ್ವಾಭಾವಿಕ ಮೂಲಗಳಿಂದ ಈ ಆಮ್ಲಗಳನ್ನು ಪಡೆಯಿರಿ ಎಂದು ಸಲಹೆ ನೀಡುತ್ತಾರೆ. ಕಲ್ಲಂಗಡಿ ಬೀಜಗಳಲ್ಲಿ ಈ ಆಮ್ಲಗಳು ಸ್ವಾಭಾವಿಕವಾಗಿ ಅಡಗಿರುತ್ತವೆ. ಅದನ್ನು ಸೇವಿಸುವ ಮೂಲಕ ನೀವು ನಿಮ್ಮ ಜೀರ್ಣಾಂಗ ವ್ಯೂಹ, ಲೈಂ ಗಿಕ ಆರೋಗ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬಹುದು.

ಕಲ್ಲಂಗಡಿ ಬೀಜದಲ್ಲಿ ಲೈಕೊಪೆನ್ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ಪುರುಷರಲ್ಲಿ ಫಲವತ್ತತೆ ಮಟ್ಟವನ್ನು ಹೆಚ್ಚಿಸುವುದು. ಒಣಗಿಸಿದ ಕಲ್ಲಂಗಡಿ ಬೀಜಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಂಡು ತಿನ್ನಬೇಕು. ಕಲ್ಲಂಗಡಿ ಬೀಜಗಳನ್ನು ಒಣಗಿಸಿ ನಂತರ ಅದನ್ನು ಹಗುರವಾಗಿ ಹುರಿದು, ಸ್ನಾಕ್ಸ್ ಅಂತೆ ತಿನ್ನಬಹುದಾಗಿದೆ. ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವ ಆಗಿರುವುದಿಲ್ಲ ಉಪಯುಕ್ತ ವಿಚಾರಗಳ ಸಲುವಾಗಿ ಕೆಲವೊಂದು ಸಂಗ್ರಹ ಮಾಹಿತಿಯನ್ನು ಇಲ್ಲಿ ತಿಳಿಸಲು ಬಯಸುತ್ತೇವೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!