ಮೊದಲಾಗಿದ್ದರೆ, ಬೋರ್’ವೆಲ್ ನೀರನ್ನು ಕುಡಿಯುತ್ತಿದ್ದರು. ಈಗ ಫಿಲ್ಟರ್ ನೀರು ಮಾತ್ರ ಜನರು ಕುಡಿಯೋದು. ಬಹುಕಾಲದಿಂದ ಹೆಸರು ಮಾಡಿರುವುದು ನಮ್ಮ ಬಿಸಿಲೆರಿ ವಾಟರ್. ಹಳ್ಳಿ ಇರಲಿ ಇಲ್ಲವೇ ಸಿಟಿ ಇರಲಿ ಮನಸ್ಸು ಮಾಡಿದರೆ ಯಾವುದೇ? ಉದ್ಯಮವನ್ನು ಬೇಕಾದರೂ ಮಾಡಿ, ಅದರಿಂದ ಯಶಸ್ಸು ಪಡೆಯಬಹುದು ಎನ್ನುವುದಕ್ಕೆ ಇವತ್ತಿನ ಯುವ ಪೀಳಿಗೆಯ ಯುವಕರು ಮಾದರಿಯಾಗಿದ್ದಾರೆ.

ಕೋವಿಡ್ – 19 ಸಮಯದಲ್ಲಿ ಸಿಟಿ ತೊರೆದು ಹಳ್ಳಿಗಳ ಕಡೆ ಮುಖ ಮಾಡಿದ ಯುವಕರು ಅವರದ್ದೇ ಸ್ವಂತ ಉದ್ಯಮ ಮಾಡಲು ಪ್ರಾರಂಭ ಮಾಡಿದರು, ಅದರಿಂದ ಯಾರಿಗಾದರೂ ಅವರದ್ದೇ ಸ್ವ ಉದ್ಯಮ ಶುರು ಮಾಡಲು ಆಸೆ ಇದ್ದರೆ, ಆ ರೀತಿಯ ಜನರಿಗೆ ಇದು ಒಂದು ಉತ್ತಮ ಡೀಲರ್ಶಿಪ್. ಇದು, ಬಿಸಲರಿ ಬಾಟಲ್ ಮಾರಾಟ ಮಾಡುವ ಡೀಲರ್ಶಿಪ್ (Bisleri water bottle dealership). ದೇಶದಲ್ಲಿ ವಾಟರ್ ಬಾಟಲ್ ಪೂರೈಕೆ ಮಾಡುವ ಹೆಚ್ಚು ಸುಪ್ರಸಿದ್ದ ಕಂಪನಿ ಬಿಸ್ಲರಿ.

ಯಾರಾದರೂ ಈ ಕಂಪನಿಯ ಫ್ರಾಂಚೈಸಿ (bisleri company franchise) ಪಡೆದುಕೊಂಡರೆ ಸುಲಭವಾಗಿ ಹಣ ಗಳಿಕೆ ಮಾಡಬಹುದು. ಎಲ್ಲರಿಗೂ ಅವರದ್ದೇ, ಸ್ವ ಉದ್ಯಮ ಪ್ರಾರಂಭ ಮಾಡಬೇಕು ಎನ್ನುವ ಬಯಕೆ ಇರುತ್ತದೆ, ಆದರೆ ಅದಕ್ಕೆ ಸರಿಯಾದ ಪ್ಲಾನ್ ಅವರ ಬಳಿ ಇರುವುದಿಲ್ಲ, ಅದರ ಸಲುವಾಗಿ ಯಾರಾದರೂ ಚಿಂತೆ ಮಾಡುತ್ತಿದ್ದರೆ. ಈ ಡೀಲರ್ಶಿಪ್ ಒಂದು ಅತ್ಯುತ್ತಮ ಆಯ್ಕೆಯಾಗಿ ಇರುತ್ತದೆ.

ಜನರು ಯಾವುದೇ ಸ್ಥಳದಲ್ಲಿ ಬೇಕಾದರು ಈ ಬಿಸಿಲರಿ ವಾಟರ್ ಬಾಟಲ್ ಮಾರಾಟ ಮಾಡುವ ಡೀಲರ್ಶಿಪ್ ಪಡೆದುಕೊಂಡು ಹೆಚ್ಚಿನ ಹಣ ಗಳಿಕೆ ಮಾಡಬಹುದು.
ಬಿಸಿಲರಿ ಫ್ರಾಂಚೈಸಿ ಆರಂಭಿಸುವುದು ಹೇಗೆ? (How to get Bisleri franchise)
ಬಿಸಿಲಿರಿ ಕಂಪನಿ, ಆಲ್ ಓವರ್ ಇಂಡಿಯಾ 112 ಪ್ಲಾಂಟ್’ಗಳನ್ನು ಹೊಂದಿದೆ. ಇದರಲ್ಲಿ 13 ಪ್ಲಾಂಟ್’ಗಳನ್ನು ಮಾತ್ರ ಸ್ವಂತವಾಗಿ ನಿರ್ವಹಿಸುತ್ತಿದ್ದಾರೆ, ಉಳಿದ ಪ್ಲಾಂಟ್’ಗಳನ್ನು ಡೀಲರ್ಶಿಪ್’ಗೆ ಕೊಡಲಾಗಿದೆ.

ಬಿಸಿಲರಿ ಕಂಪನಿ ಭಾರತದ ತುಂಬ 4,500 ಡಿಸ್ಟ್ರಿಬ್ಯೂಟರ್ ಮತ್ತು 5,000 ಬಿಸಿಲರಿ ಬಾಟಲ್ ಪೂರೈಕೆ ಮಾಡುವ ಟ್ರಕ್ ಹೊಂದಿದೆ. ನೀರು ಯಾವುದೇ ಕಾರಣಕ್ಕೂ ಕಡಿಮೆಯಾಗದೆ ಇರುವ ದಿನ ಬಳಕೆ ಮಾಡುವ ಅತಿ ಬೇಡಿಕೆಯ ವಸ್ತು. ಅದರಿಂದ, ಬಿಸಿಲರಿ ಬಾಟಲ್ ಬಿಸಿನೆಸ್ ಕೂಡ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ.ನಷ್ಟ ಆಗುವುದು ಕಡಿಮೆ.

ಬಿಸಲರಿ ಬಿಸಿನೆಸ್ ಪ್ರಾರಂಭ ಮಾಡುವ ಆಸೆ ಇದ್ದವರು ಯಾವುದಕ್ಕೆ ಡೀಲರ್ಶಿಪ್ ತೆಗೆದುಕೊಳ್ಳುತವೀರಿ ಎನ್ನುವುದರ ಆಧಾರದ ಮೇಲೆ ಎಷ್ಟು ಸ್ಥಳಾವಕಾಶದ ಅವಶ್ಯಕತೆ ಇರುತ್ತದೆ ಎನ್ನುವ ನಿರ್ಧಾರ ಮಾಡಬಹುದು. ಕೇವಲ ಆಫೀಸ್ ಸ್ಪೇಸ್ ಅಷ್ಟೇ ಮಾಡಿಕೊಳ್ಳುವುದಿದ್ದರೆ 200 ರಿಂದ 300 ಸ್ಕ್ವೇರ್ ಫೀಟ್ ಜಾಗ ಇದ್ದರೆ ಸಾಕು. ಆದರೆ, ಹೊಸ ಪ್ಲಾಂಟ್ ಆರಂಭ ಮಾಡಬೇಕು ಎಂದರೆ ಹೆಚ್ಚಿನ ಸ್ಥಳ ಅಗತ್ಯ ಇರುತ್ತದೆ.

ನೀರಿನ ಬಾಟಲ್ ಸಂಗ್ರಹಣೆ ಮಾಡಲು ಟ್ರಕ್’ನಿಂದ ಲೋಡಿಂಗ್ ಅಂಡ್ ಅನ್’ಲೋಡಿಂಗ್ ಮಾಡಿಸಿಕೊಳ್ಳಲು ಸುಮಾರು 1,500 ರಿಂದ 2,000 ಸ್ಕ್ವೇರ್ ಫಿಟ್ ಜಾಗದ ಅಗತ್ಯ ಇರುತ್ತದೆ. ಅದರಿಂದ, ತುಂಬ ವಿಶಾಲವಾಗಿ ಇರುವ ಜಾಗ ಇದ್ದರೆ. ಈ ಡೀಲರ್ಶಿಪ್ ಪಡೆದುಕೊಂಡು ಸುಲಭವಾಗಿ ಕೆಲಸ ಮಾಡಬಹುದು.

ಫ್ರಾಂಚೈಸಿ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು :-

  • ಆಧಾರ್ ಕಾರ್ಡ್
  • ವಿಳಾಸದ ಪುರಾವೆ
  • ಎಲ್ಲಿ ಆರಂಭಿಸುತ್ತೀರಿ ಎನ್ನುವ ಸ್ಥಳದ ಪುರಾವೆ
  • ಪ್ಯಾನ್ ಕಾರ್ಡ್ ಸಂಖ್ಯೆ
  • ಎನ್.ಓ.ಸಿ ಸರ್ಟಿಫಿಕೇಟ್
  • ಬ್ಯಾಂಕ್ ಖಾತೆಯ ವಿವರ
  • Gst ಸಂಖ್ಯೆ
  • ಕಚೇರಿಯ ಅಥವಾ ಗೋಡನ್ ಜಾಗಕ್ಕೆ ಇರುವ ಅಗ್ರಿಮೆಂಟ್ (ಸ್ವಂತದಲ್ಲದೆ ಬಾಡಿಗೆ ತೆಗೆದುಕೊಳ್ಳುವುದಾದರೆ. ಇದರ ಅಗತ್ಯ ಇರುತ್ತದೆ. )

ಬಿಸಿಲರಿ ವಾಟರ್ ಬಾಟಲ್ ಡೀಲರ್ಶಿಪ್ ತೆಗೆದುಕೊಳ್ಳುವುದು ಹೇಗೆ :-
ಮಾರ್ಕೆಟಿಂಗ್ ಸ್ಕಿಲ್ಸ್ (marketing skills) ಇರುವ ಜನರು, ಉತ್ತಮವಾಗಿ ಮಾತಾಡುವ ಕೌಶಲ್ಯ ಇದ್ದರೆ, ಸುಲಭವಾಗಿ ಈ ಡೀಲರ್ಶಿಪ್ ತೆಗೆದುಕೊಳ್ಳಬಹುದು. ಇನ್ನು ಬಂಡವಾಳದ ವಿಚಾರಕ್ಕೆ ಬಂದರೆ ₹2,00,000 ದಿಂದ ₹4,00,000 ರೂಪಾಯಿಗಳ ಆರಂಭಿಕ ಬಂಡವಾಳ ಬೇಕು.

ಅತ್ಯುತ್ತಮವಾದ ವ್ಯಾಪಾರ ಮಾಡುವ ಮನೋಭಾವ ಇದ್ದರೆ ಮತ್ತು ಆ ಚಾಕಚಕ್ಯತೆ ಇರುವವರು ಪ್ರತಿ ಮಾಸ 80,000 ಕ್ಕಿಂತ ಅಧಿಕ ಆದಾಯವನ್ನು ಗಳಿಕೆ ಮಾಡಿಕೊಳ್ಳಬಹುದು. ಇನ್ನು, ಬಿಸಿಲರಿ ವಾಟರ್ ಬಾಟಲ್ ಮಾರಾಟಕ್ಕೆ ಪ್ರತಿ ಬಾಟಲ್ ಮೇಲೆ 10% ನಷ್ಟು ಮಾರ್ಜಿನ್ ಸಿಗುತ್ತದೆ. ಹಾಗಾಗಿ ಉತ್ತಮ ಆದಾಯ ಖಂಡಿತ ಸಿಕ್ಕೆ ಸಿಗುತ್ತದೆ.

ಬಿಸಿಲರಿ ವಾಟರ್ ಬಾಟಲ್ ಡೀಲರ್ಶಿಪ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮತ್ತು ಅರ್ಜಿ ಸಲ್ಲಿಕೆ ಮಾಡಲು https://www.bisleri.com/distributor ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಆಸಕ್ತಿ ಇರುವ ಜನರು ಬಿಸ್ಲರಿ ವಾಟರ್ ಬಾಟಲ್ ಡೀಲರ್ಶಿಪ್ ತೆಗೆದುಕೊಂಡು ಉತ್ತಮ ಆದಾಯ ಗಳಿಕೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *