ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಶ್ಚಿಕ ರಾಶಿಯವರ ಮೇ ತಿಂಗಳ ಮಾಸಿಕ ಭವಿಷ್ಯವನ್ನು ತಿಳಿಯೋಣ. ಮೇ ತಿಂಗಳಿನ 1ನೇ ತಾರೀಖು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. 1೦ ನೇ ತಾರೀಖು ಮೇಷ ರಾಶಿಗೆ ಬುಧ ಗ್ರಹ ಪ್ರವೇಶ ಮಾಡುತ್ತದೆ. 14 ನೇ ತಾರೀಖು ರವಿ ಗ್ರಹ ವೃಷಭ ರಾಶಿಗೆ ಪ್ರವೇಶ ಮಾಡುವನು. 19 ನೇ ತಾರೀಖು ಶುಕ್ರ ಗ್ರಹ ವೃಷಭ ರಾಶಿಗೆ ಪ್ರವೇಶಿಸುತ್ತಾನೆ.
10 ನೇ ತಾರೀಖು ಅಕ್ಷಯ ತೃತೀಯ.ಇದು ಗುರು ಗ್ರಹ, ಶುಕ್ರ ಗ್ರಹ ಮತ್ತು ರವಿ ಗ್ರಹದ ಸಂಯೋಜನೆ. ಇದು ವೃಶ್ಚಿಕ ರಾಶಿಯವರಿಗೆ ಯಾವ ರೀತಿಯ ಫಲ ಕೊಡುತ್ತದೆ ಎಂದು ತಿಳಿಯೋಣ.
ಸಪ್ತಮ ಗುರು ನೇರ ದೃಷ್ಟಿ ವೃಶ್ಚಿಕ ರಾಶಿಯ ಮೇಲೆ ಇರುವ ಕಾರಣ ಎಲ್ಲಾ ರೀತಿಯ ಪಾಪ ನಾಶ ಆಗುತ್ತದೆ. ಈ ರಾಶಿಯ ಜನರು ಬೇರೆ ಜನರ ಜೊತೆ ಸ್ಪರ್ಧೆ ಮಾಡುವರು ಅದು ಕೂಡ ವ್ಯಾಪಾರ ವ್ಯವಹಾರಗಳಲ್ಲಿ. ಉದ್ಯೋಗದ ಕಾರ್ಯ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿ ಆಗುತ್ತದೆ. ಮನೆಯ ಒಳಗೆ ಮತ್ತು ಹೊರಗೆ ಮನ್ನಣೆಗಳು ಹೆಚ್ಚಾಗುತ್ತವೆ. ಅಪವಾದ, ಅಪನಿಂದನೇ, ಅಪಕೀರ್ತಿ ಎಲ್ಲಾ ದೂರ ಆಗುತ್ತದೆ.
ಒಳ್ಳೆಯ ಮಂಗಳ ಫಲಗಳು ಲಭಿಸುತ್ತದೆ. ಎಲ್ಲಾ ರೀತಿಯ ತೊಂದರೆಗಳು ದೂರ ಆಗುತ್ತವೆ. ಸಂಸಾರದಲ್ಲಿ ಇರುವ ಅಂತರ ಕಲಹಗಳು ದೂರ ಆಗುತ್ತವೆ. ಮನಸ್ತಾಪಗಳು ಎಲ್ಲಾ ಸರಿ ಆಗುತ್ತವೆ. ದೂರವಾದ ಎಲ್ಲಾ ಸಂಬಂಧ ಬಂದು ಸೇರಿಕೊಳ್ಳುತ್ತವೆ. ಎಲ್ಲಾ ಕೆಲಸದಲ್ಲಿ ಗೆಲವು ಪಡೆಯಲು ಒಳ್ಳೆಯ ಕಾಲ ಇದು. ಬಂಧುಗಳೇ ಶತ್ರುಗಳು ಅವರಿಂದ, ಅಂತರ ಕಾಯ್ದುಕೊಳ್ಳುವುದು ಉತ್ತಮ.
ವಾಹನ ಮಾರಾಟ ಮಾಡುವುದರಿಂದ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ಖರ್ಚು ವೆಚ್ಚ ಕಡಿಮೆ ಆಗುತ್ತದೆ. ಶ್ರಮ ಕೂಡ ಕಡಿಮೆ ಆಗುತ್ತದೆ ಅದರ ಪ್ರತಿಫಲ ಚೆನ್ನಾಗಿ ಸಿಗುತ್ತದೆ. ಶುಭ ಕಾರ್ಯ ಮತ್ತು ಶುಭ ಸಮಾರಂಭ ಈ ರಾಶಿಯವರ ಬದುಕಿನಲ್ಲಿ ನಡೆಯುತ್ತದೆ.
ವಿಧವಾ ವಿವಾಹ ಆಗಲು ಬಯಸುವ ಸ್ತ್ರೀಯರಿಗೆ ಇದು, ಒಳ್ಳೆ ಕಾಲ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಜನರಿಗೆ, ವಕೀಲ ವೃತ್ತಿ ಮಾಡುವ ಜನರಿಗೆ, ಐ ಟಿ ಸೆಕ್ಟರ್’ನಲ್ಲಿ ಕೆಲಸ ಮಾಡುವ ಜನರಿಗೆ, ಗಾರ್ಮೆಂಟ್ಸ್ ನಡೆಸುವ ಜನರಿಗೆ, ಪುಸ್ತಕ ವ್ಯಾಪಾರ ಮಾಡುವ ಜನರಿಗೆ, ಪ್ರಕಾಶಕರಿಗೆ, ಮುದ್ರಣ ಮಾಡುವವರಿಗೆ, ಬಳೆ ವ್ಯಾಪಾರ ಮಾಡುವವರಿಗೆ ಎಲ್ಲರಿಗೂ ಈ ತಿಂಗಳು ಹೆಚ್ಚಿನ ವ್ಯಾಪಾರ ಆಗುತ್ತದೆ. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.