ವೃಶ್ಚಿಕ ರಾಶಿ ಹಾಗೂ ವೃಶ್ಚಿಕ ಲಗ್ನದವರ ಗುಣ ಸ್ವಭಾವ ತಿಳಿಯಬೇಕಾದರೆ ಆ ರಾಶಿಯ ರಾಶ್ಯಾಧಿಪತಿಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವಿಭಿನ್ನ ಗುಣಸ್ವಭಾವ ಭವಿಷ್ಯವನ್ನು ಹೊಂದಿರುತ್ತಾರೆ ಅದರಂತೆ ವೃಶ್ಚಿಕ ರಾಶಿಯವರ ಗುಣ ಸ್ವಭಾವ ಹೇಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.
ವೃಶ್ಚಿಕ ರಾಶಿ ಜಲತತ್ವ ರಾಶಿಯಾಗಿದ್ದು, ಈ ರಾಶಿಯ ರಾಶ್ಯಾಧಿಪತಿ ಮಂಗಳ ಗ್ರಹವಾಗಿರುತ್ತದೆ. ಇವರ ವ್ಯಕ್ತಿತ್ವ ಸುಂದರವಾಗಿರುತ್ತದೆ. ಇವರು ಹಠವಾದಿಗಳಾಗಿರುತ್ತಾರೆ ಹಾಗೂ ಸಾಹಸಿಗಳಾಗಿರುತ್ತಾರೆ. ಇವರು ತಮಗೆ ಇಷ್ಟವಾದ ದಾರಿಯಲ್ಲಿ ಹೋಗುತ್ತಾರೆ. ಬೇರೆಯವರ ಹಸ್ತಕ್ಷೇಪ ಇವರಿಗೆ ಇಷ್ಟವಾಗುವುದಿಲ್ಲ. ಇವರು ಪರಿಶ್ರಮಿಗಳಾಗಿರುತ್ತಾರೆ. ಇವರಿಗೆ ಯಾವ ಕೆಲಸ ಕೊಟ್ಟರು ಅದನ್ನು ವೇಗವಾಗಿ ಮಾಡಿ ಮುಗಿಸುತ್ತಾರೆ. ಇವರು ತಮಗೆ ವಹಿಸಿದ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಇವರು ಯಾವಾಗಲೂ ಏನಾದರೂ ಒಂದು ಕೆಲಸದಲ್ಲಿ ನಿರತರಾಗಿರುತ್ತಾರೆ. ಇವರು ಬಲಿಷ್ಟರಾಗಿರುತ್ತಾರೆ.
ಇವರಿಗೆ ಅನಾರೋಗ್ಯ ಕಾಡುವುದಿಲ್ಲ. ಇವರು ಯಾರಿಗಾದರೂ ಮಾತು ಕೊಟ್ಟರೆ ಅದನ್ನು ನೆರವೇರಿಸುತ್ತಾರೆ. ಇವರಿಗೆ ಸಿಟ್ಟು ಬೇಗ ಬರುತ್ತದೆ, ಸಣ್ಣ ಸಣ್ಣ ವಿಷಯಕ್ಕೆ ಸಿಟ್ಟು ಬರುತ್ತದೆ, ಸಿಟ್ಟು ಬಂದಾಗ ಇವರು ಸ್ಟ್ರೇಟ್ ಆಗಿ ಮಾತನಾಡುತ್ತಾರೆ. ಇದರಿಂದ ಇವರಿಗೂ ತೊಂದರೆ ಆಗುತ್ತದೆ ಅವರ ಮಾತಿನಿಂದ ಬೇರೆಯವರ ಮನಸಿಗೆ ನೋವಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿಯವರ ವಿರುದ್ದ ಯಾರಾದರೂ ಮಾತನಾಡಿದರೆ ಇವರು ಸಹಿಸುವುದಿಲ್ಲ ಪರಿಣಾಮದ ಬಗ್ಗೆ ಯೋಚನೆ ಮಾಡದೆ ವಾದಿಸುತ್ತಾರೆ. ಇವರು ನೋಡಲು ಹಾಗೂ ಇವರ ಮಾತು ಕಠೋರವಾಗಿರುತ್ತದೆ ಆದರೆ ಇವರ ಮನಸ್ಸು ಮೃದುವಾಗಿರುತ್ತದೆ. ಇವರು ಭಾವನಾಜೀವಿ ಆಗಿರುತ್ತಾರೆ. ಇವರು ತಮ್ಮ ಭಾವನೆಗಳನ್ನು ಬಚ್ಚಿಟ್ಟುಕೊಳ್ಳುತ್ತಾರೆ ಆದ್ದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇವರಿಗೆ ಬೇರೆಯವರಲ್ಲಿ ದೋಷ ಹುಡುಕುವ ಸ್ವಭಾವ ಇರಬಹುದು. ಇವರಿಗೆ ಅವರ ತಾಯಿಯೊಂದಿಗೆ ಅಟ್ಯಾಚ್ಮೆಂಟ್ ಹೆಚ್ಚಿರುತ್ತದೆ. ಇವರು ಜನರ ಜೊತೆ ಬೇಗ ಬೆರೆಯುತ್ತಾರೆ, ಇವರ ಜ್ಞಾಪಕ ಶಕ್ತಿ ಚೆನ್ನಾಗಿರುತ್ತದೆ.
ಇವರು ಯಾವುದನ್ನು ಮರೆಯುವುದಿಲ್ಲ. ಇವರಿಗೆ ಯಾರಾದರೂ ಮೋಸ ಮಾಡಿದರೆ, ಶತ್ರುತ್ವ ಬೆಳೆಸಿಕೊಂಡರೆ ಚೆನ್ನಾಗಿ ನಿಭಾಯಿಸುತ್ತಾರೆ. ಇವರಿಗೆ ಸೇಡು ತೀರಿಸಿಕೊಳ್ಳುವ ಸ್ವಭಾವ ಇರುತ್ತದೆ. ಇವರು ನಿಯಮಗಳನ್ನು ಅನುಸರಿಸುತ್ತಾರೆ. ಇವರಿಗೆ ಧಾರ್ಮಿಕತೆಯಲ್ಲಿ ನಂಬಿಕೆ, ಆಸಕ್ತಿ ಇರುತ್ತದೆ. ಇವರು ಸ್ನೇಹಿತರು, ಕುಟುಂಬದವರ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ವಸ್ತುಗಳನ್ನು, ಧನ ಸಂಪತ್ತು ಸಂಗ್ರಹಿಸಲು ಆಸಕ್ತಿ ಹೊಂದಿರುತ್ತಾರೆ.
ವೃಶ್ಚಿಕ ರಾಶಿಯವರು ಪ್ರೀತಿಯ ವಿಷಯದಲ್ಲಿ ಭಾವನಾಜೀವಿ ಆಗಿರುತ್ತಾರೆ. ಇವರು ಉತ್ತಮ ಸಂಗಾತಿ ಆಗಿರುತ್ತಾರೆ. ಇವರಿಗೆ ಸಂಗಾತಿಯಿಂದ ನಿರೀಕ್ಷೆಗಳು ಹೆಚ್ಚಿರುತ್ತದೆ. ಇವರು ಬುದ್ಧಿವಂತ ಹಾಗೂ ಪ್ರಾಮಾಣಿಕ ಸಂಗಾತಿಯನ್ನು ಬಯಸುತ್ತಾರೆ. ಈ ರಾಶಿಯವರು ತಮ್ಮ ಕುಟುಂಬವನ್ನು ಕಾಳಜಿಯಿಂದ ನೋಡುತ್ತಾರೆ, ಇವರು ಉದಾರಿಗಳಾಗಿರುತ್ತಾರೆ. ವೃಶ್ಚಿಕ ರಾಶಿಯವರಿಗೆ ಏಕಾಗ್ರತೆ ಹೆಚ್ಚಿರುತ್ತದೆ, ಇವರು ಸ್ವಲ್ಪ ಮೂಡಿಯಾಗಿಯೂ ಇರುತ್ತಾರೆ. ಇವರು ಬೇರೆಯವರ ಮೇಲೆ ಅನುಮಾನ ಪಡುತ್ತಾರೆ, ಯಾರನ್ನಾದರೂ ನಂಬಲು ಸಮಯ ತೆಗೆದುಕೊಳ್ಳುತ್ತಾರೆ, ಸುಲಭವಾಗಿ ಯಾರನ್ನು ನಂಬುವುದಿಲ್ಲ. ಇವರಿಗೆ ಮೋಸ ಮಾಡುವುದು ಕಷ್ಟ. ಈ ರಾಶಿಯವರು ರಾಜನೀತಿಯಲ್ಲಿ ಚತುರರಾಗಿರುತ್ತಾರೆ. ಈ ರಾಶಿಯವರ ವಿಶೇಷ ಗುಣವೆಂದರೆ ಇವರು ಯಾರಿಗೂ ಹೆದರುವುದಿಲ್ಲ. ಇವರು ಬುದ್ಧಿವಂತರಾಗಿದ್ದು ಪ್ರಕೃತಿಯನ್ನು ಬಹಳ ಇಷ್ಟಪಡುತ್ತಾರೆ.
ಯಾವುದೆ ವಿಷಯವಾದರೂ ಸರಿ ಅದರ ಆಳಕ್ಕೆ ಇಳಿದು ಸತ್ಯವನ್ನು ತಿಳಿಯುತ್ತಾರೆ. ಇವರು ತಮಗೆ ಸಿಗುವ ಅವಕಾಶಗಳನ್ನು ಚೆನ್ನಾಗಿ ಸದ್ಭಳಕೆ ಮಾಡಿಕೊಳ್ಳುತ್ತಾರೆ. ಇವರು ಬಹಳ ಯೋಚಿಸಿ ಹಣ ಖರ್ಚು ಮಾಡುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ರಹಸ್ಯವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವುದಿಲ್ಲ, ಒಂದು ವೇಳೆ ಹೇಳಿದರೆ ಎಲ್ಲಾ ವಿಷಯವನ್ನು ಹೇಳಿಬಿಡುತ್ತಾರೆ. ಇವರು ತಮ್ಮ ಜೀವನದಲ್ಲಿ ಯಾವುದೆ ಸಮಸ್ಯೆ ಬಂದರೂ ಧೈರ್ಯದಿಂದ ಎದುರಿಸುತ್ತಾರೆ. ಎಲ್ಲ ವಿಷಯದ ಬಗ್ಗೆ ಆಳವಾಗಿ ಯೋಚನೆ ಮಾಡುವುದರಿಂದ ಇವರ ಮನಸ್ಸು ಶಾಂತವಾಗಿರುತ್ತದೆ. ಇವರು ಒಂದು ಗುರಿಯನ್ನು ಹೊಂದಿ ಅದರತ್ತ ಕಾರ್ಯನಿರ್ವಹಿಸುತ್ತಾರೆ. ವೃಶ್ಚಿಕ ರಾಶಿಯವರು ರಾಜನೀತಿ, ಸಮಾಜಸೇವೆ, ಪೊಲೀಸ್, ಮಿಲಿಟರಿ, ಡಾಕ್ಟರ್, ಟೀಚರ್, ಅಗ್ನಿ ಸಂಬಂಧಿಸಿದ ಕೆಲಸ ಹಾಗೂ ಬಿಸಿನೆಸ್ ಮಾಡಬಹುದು.
ವೃಶ್ಚಿಕ ರಾಶಿಯವರಿಗೆ ಅಸಿಡಿಟಿ, ಅಲ್ಸರ್ ಹಾಗೂ ಕರುಳಿಗೆ ಸಂಬಂಧಿ ಖಾಯಿಲೆಗಳು ಬರಬಹುದಾಗಿದೆ. ವೃಶ್ಚಿಕರಾಶಿಯವರಿಗೆ ಸಿಟ್ಟು ಬಹಳ ಬೇಗನೆ ಬರುವುದರಿಂದ ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬೇಕು, ಮೃದುವಾಗಿ ಮಾತನಾಡುವುದು ಒಳ್ಳೆಯದು. ಆರೋಗ್ಯದ ವಿಷಯದಲ್ಲಿ ಖಾರವಾದ ಆಹಾರವನ್ನು ಹೆಚ್ಚು ಸೇವಿಸಬಾರದು. ಈ ರಾಶಿಯವರು ಮಂಗಳವಾರದಂದು ಸಾಲ ಪಡೆಯಬಾರದು. ಇವರು ಹನುಮ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಿಸಿದರೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ವೃಶ್ಚಿಕ ರಾಶಿಯವರಿಗೆ ತಿಳಿಸಿ.