ಏಪ್ರಿಲ್ 29 ರಿಂದ ಶನಿ ಬದಲಾವಣೆ ಯಾವ ರಾಶಿಗೆ ಶುಭಫಲ? 12 ರಾಶಿಗಳ ಭವಿಷ್ಯ

0 2

2022 ಏಪ್ರಿಲ್ 29, 7-44 ನಿಮಿಷಕ್ಕೆ ಶನಿ ಮಹಾದೇವ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ. ಶನಿಯ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಅಪಾಯವಿದೆ, ಯಾವ ರಾಶಿಯವರಿಗೆ ಒಳ್ಳೆಯದಾಗುತ್ತದೆ ಹಾಗೂ ಶನಿಕಾಟವನ್ನು ತಡೆಯಲು ಮಾಡಬೇಕಾದ ಪರಿಹಾರವನ್ನು ಈ ಲೇಖನದಲ್ಲಿ ನೋಡೋಣ.

ಶನಿ ಮಹಾದೇವ ಎರಡು ವರೆ ವರ್ಷಗಳಿಗೆ ಒಮ್ಮೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತಾನೆ. ಶನಿಯ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊದಲ ರಾಶಿ ಮೇಷ ರಾಶಿಗೆ ಶನಿ ಲಾಭ ಸ್ಥಾನದಲ್ಲಿ ಇದ್ದು ಮೇಷ ರಾಶಿಯವರಿಗೆ ಶುಭ ತರುತ್ತಾನೆ. ಮೇಷ ರಾಶಿಯವರು ಮಾಡುವ ಪ್ರಯತ್ನಗಳಿಗೆ ಶನಿಯ ಆಶೀರ್ವಾದ ಇರುತ್ತದೆ. ವೃಷಭ ರಾಶಿಗೆ ಶನಿ ಪರಮ ಯೋಗ ಕಾರಕನಾಗಿದ್ದಾನೆ. ಈ ರಾಶಿಯವರು ಹೊಸ ಕೆಲಸ ಮಾಡುವವರು ಮಾಡಬಹುದು. ಶುಭಕಾರ್ಯ, ಉದ್ಯೋಗದಲ್ಲಿ ಬಡ್ತಿ, ಹೊಸ ಕೆಲಸಕ್ಕೆ ಜಯ ಮೊದಲಾದ ಶುಭ ಫಲ ಶನಿಯಿಂದ ಈ ರಾಶಿಯವರಿಗೆ ಸಿಗಲಿದೆ.

ಮಿಥುನ ರಾಶಿಯವರು ಅಷ್ಟಮ ಶನಿಯಿಂದ ಮುಕ್ತಿ ಪಡೆಯುತ್ತಾರೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಒಳ್ಳೆಯದಾಗಲಿದೆ. ಬಹಳ ವರ್ಷಗಳಿಂದ ಮಾಡಬೇಕೆಂದಿರುವ ಕೆಲಸ ಈಡೇರಲಿದೆ. ಕರ್ಕಾಟಕ ರಾಶಿಯವರಿಗೆ ಅಷ್ಠಮದಲ್ಲಿ ಶನಿ ಬರುವುದರಿಂದ ಬಹಳ ದುಃಖವನ್ನು ಕೊಡುತ್ತಾನೆ. ಕರ್ಕಾಟಕ ರಾಶಿಯವರಿಗೆ ಮಾನ ಹಾನಿ, ಕೌಟುಂಬಿಕ ವಿರಸ, ಧನ ನಷ್ಟ ಕಂಡುಬರುತ್ತದೆ. ಅವರವರ ಜಾತಕದಲ್ಲಿ ಶುಭವಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ದೇಹಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇರುತ್ತದೆ, ಮಾತಿನಿಂದ ದುಃಖ ಬರಬಹುದು, ಬಂಧುಗಳಿಂದ ವಿರೋಧ ಕಂಡುಬರುತ್ತದೆ.

ಕರ್ಕಾಟಕ ರಾಶಿಯವರು ಶನಿ ಮಹಾತ್ಮನ ಆರಾಧನೆ, ಶ್ಲೋಕ ಪಠಣ, ಯಜ್ಞ ಯಾಗಾದಿಗಳನ್ನು ಮಾಡಬೇಕಾಗುತ್ತದೆ. ಸಿಂಹ ರಾಶಿಯವರಿಗೆ ಶನಿ ಬದಲಾವಣೆಯಿಂದ ಮಿಶ್ರ ಫಲ ಸಿಗಲಿದೆ. ಸಿಂಹ ರಾಶಿಯ ರಾಶ್ಯಾಧಿಪತಿ ಸೂರ್ಯ ಶನಿಯ ವೈರಿ ಆದ್ದರಿಂದ ಶನಿ ಸಿಂಹ ರಾಶಿಗೆ ಹೆಚ್ಚಿನ ಶುಭಕರನಾಗಿರುವುದಿಲ್ಲ. ಸಿಂಹ ರಾಶಿಯವರಿಗೆ ಉದ್ವೇಗ, ಚಿಂತೆ ಸಣ್ಣ ಪುಟ್ಟ ಸಮಸ್ಯೆ ಕಂಡುಬರುತ್ತದೆ.

ಕನ್ಯಾ ರಾಶಿಯವರಿಗೆ ಪಂಚಮ ಶನಿ ಕಾಟದಿಂದ ಮುಕ್ತಿ ಸಿಗಲಿದೆ. ಕನ್ಯಾ ರಾಶಿಯವರಿಗೆ ಶತ್ರುಗಳು ನಾಶವಾಗುತ್ತಾರೆ, ಬಂಧುಗಳು ಹತ್ತಿರವಾಗುತ್ತಾರೆ. ಸಂಪತ್ತು ಬರುತ್ತದೆ, ಒಳ್ಳೆಯ ಸ್ನೇಹಿತರು ಸಿಗುತ್ತಾರೆ. ಕನ್ಯಾ ರಾಶಿಗೆ ಒಳ್ಳೆಯದಾಗುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಲು ಅವಕಾಶ ಕೊಡುತ್ತಾನೆ. ತುಲಾ ರಾಶಿಯವರಿಗೆ ಪಂಚಮದಲ್ಲಿ ಶನಿ ಬಂದು ಕನಿಷ್ಟ ಮಟ್ಟದಲ್ಲಿ ಆದರೂ ಕೆಟ್ಟ ಫಲ ಕೊಡುತ್ತಾನೆ. ಮಕ್ಕಳಿಂದ ಈ ರಾಶಿಯವರಿಗೆ ದುಃಖ ಕೊಡುತ್ತಾನೆ. ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಮ ಶನಿ ನಡೆಯುತ್ತಿದೆ. ಶನಿ ಅಷ್ಟಮದಲ್ಲಿದ್ದಾಗ ಏನು ತೊಂದರೆ ಆಗುತ್ತದೆಯೊ ಅದರ ಅರ್ಧದಷ್ಟು ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಸ್ವಲ್ಪ ಮಟ್ಟಿಗೆ ವೃಶ್ಚಿಕ ರಾಶಿಯವರಿಗೆ ಚಿಂತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಚಿಂತೆ, ಮಾತೃ ಸ್ಥಾನದಲ್ಲಿ ಇರುವವರಿಗೆ ತೊಂದರೆ ಇರುತ್ತದೆ.

ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಮಾಡಿ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ. ದುರಭ್ಯಾಸಗಳನ್ನು ಕಲಿಯುವ ಸಾಧ್ಯತೆ ಇರುತ್ತದೆ. ವಾಹನಗಳನ್ನು ಚಲಾಯಿಸುವಾಗ ಈ ರಾಶಿಯವರು ಎಚ್ಚರಿಕೆ ವಹಿಸಬೇಕು. ಧನು ರಾಶಿಯವರು ಸಾಡೆ ಸಾಥ್ ಅನುಭವಿಸಿ ಈಗ ಮುಕ್ತಿ ಪಡೆದಿದ್ದಾರೆ. ಧನು ರಾಶಿಯವರು ಶನಿ ದೆಸೆ ಬಿಡುಗಡೆ ಆಗುವಾಗ ಒಳ್ಳೆಯದನ್ನು ಮಾಡುತ್ತಾನೆ. ಕೆಲಸ ಇಲ್ಲದವರಿಗೆ ಕೆಲಸ ಸಿಗುತ್ತದೆ, ಆರ್ಥಿಕ ಲಾಭ, ಶುಭಕಾರ್ಯ ನಡೆಯುತ್ತದೆ. ಮಕರ ರಾಶಿಯವರಿಗೆ ಸಾಡೆ ಸಾಥ್ ನಡೆಯುತ್ತಿದೆ. ಮಕರ ರಾಶಿಯವರು 5 ವರ್ಷಗಳ ಸಾಡೆ ಸಾಥ ಶನಿ ಅನುಭವಿಸಿದ್ದಾರೆ ಮುಂದಿನ ಎರಡು ವರೆ ವರ್ಷಗಳ ಕಾಲ ಅನುಭವಿಸಬೇಕಾಗುತ್ತದೆ, ಈ ಸಮಯದಲ್ಲಿ ಶನಿಯಿಂದ ಮಕರ ರಾಶಿಯವರಿಗೆ ಮಿಶ್ರ ಫಲ ಸಿಗಲಿದೆ.

ಕುಂಭ ರಾಶಿಯವರಿಗೆ ಶನಿ ಜನ್ಮದಲ್ಲಿ ಇದ್ದಾನೆ ಇದರಿಂದ ಮಾನಸಿಕ ಒತ್ತಡ, ದೇಹದ ಆರೋಗ್ಯದಲ್ಲಿ ಏರುಪೇರು, ಚಿಂತೆ ಕಂಡುಬರುತ್ತದೆ. ಕುಂಭ ರಾಶಿಯವರು ಶನಿ ದೇವರನ್ನು ಆರಾಧಿಸಬೇಕು, ಕ್ಷೇತ್ರ ದರ್ಶನ ಮಾಡಬೇಕು ಇದರಿಂದ ಕೆಟ್ಟ ಪರಿಣಾಮ ಕಡಿಮೆ ಆಗುತ್ತದೆ. ಮೀನ ರಾಶಿಯವರಿಗೆ ಸಾಡೆ ಸಾಥ್ ಶನಿ ಪ್ರಾರಂಭವಾಗುತ್ತದೆ, ಮೀನ ರಾಶಿಯವರಲ್ಲಿ ಜಾತಕದಲ್ಲಿ ಶನಿ ಯಾವ ರೀತಿ ಇದ್ದಾನೆ ಎಂಬುದರ ಆಧಾರದ ಮೇಲೆ ಅವನ ಪ್ರಭಾವ ಎಷ್ಟು ಎನ್ನುವುದು ತಿಳಿಯುತ್ತದೆ. ಮೀನ ರಾಶಿಯವರಿಗೆ ಧನ ವ್ಯಯ, ದುಃಖ, ಅಪವಾದ, ಕೆಟ್ಟ ಛಟಗಳನ್ನು ಕಲಿಯುವ ಸಾಧ್ಯತೆ ಇರುತ್ತದೆ.

ಪ್ರತಿದಿನ ಈ ರಾಶಿಯವರು ಶನಿ ಶ್ಲೋಕವನ್ನು ಪಠಿಸಬೇಕು, ಅಂಧರು, ವಿಕಲಚೇತನರ ಬಗ್ಗೆ ಕರುಣೆ ತೋರಿಸಬೇಕು. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕಬ್ಬಿಣದ ಬಾಂಡ್ಲಿಯಲ್ಲಿ ಸ್ವಲ್ಪ ಎಳ್ಳು, ಕಪ್ಪು ವಸ್ತ್ರ, ದಕ್ಷಿಣೆಯಿಟ್ಟು ವಿಪ್ರರಿಗೆ ಶನಿವಾರದ ದಿನ ಸೂರ್ಯಾಸ್ತದ ನಂತರ ದಾನವಾಗಿ ಕೊಟ್ಟು ಪ್ರಾರ್ಥನೆ ಮಾಡಬೇಕು. ಶನಿ ದೇವರ ಕ್ಷೇತ್ರ ದರ್ಶನ ಮಾಡಬೇಕು. ಆಂಜನೇಯನ ಆರಾಧನೆ ಮಾಡುವವರಿಗೆ ಶನಿಯಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಸಿಗುತ್ತದೆ. ಗಣೇಶನನ್ನು ಧ್ಯಾನ ಮಾಡಬೇಕು, ಜೊತೆಗೆ ಶನಿ ದೇವರ ಮಂತ್ರ ಪಠಣ ಮಾಡಬೇಕು. ಛಾಯಾ ದೇವಿಯ ದೇವಸ್ಥಾನದ ದರ್ಶನ ಪಡೆಯುವುದು ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ರಾಶಿ ಯಾವುದು ಆ ರಾಶಿಗೆ ಶನಿ ದೇವನ ಪ್ರಭಾವ ಹೇಗಿದೆ ಎಂಬುದನ್ನು ತಿಳಿಯಿರಿ.

Leave A Reply

Your email address will not be published.