ಇಂದು ಜಗತ್ತು ಸ್ಪರ್ಧಾತ್ಮಕವಾಗಿದೆ, ಎಲ್ಲ ಕ್ಷೇತ್ರದಲ್ಲಿ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ಮುಂದೆ ಬರುವವರನ್ನು ಜಗತ್ತು ಸನ್ಮಾನಿಸುತ್ತದೆ. ಮಹಿಳೆಯರ ಸೌಂದರ್ಯ ಸ್ಪರ್ಧೆ ಜಗತ್ತಿನಾದ್ಯಂತ ನಡೆಯುತ್ತಿದೆ. ಇಂತಹ ಸೌಂದರ್ಯ ಸ್ಪರ್ಧೆಗಳು ಹೇಗೆ, ಎಲ್ಲಿ ಹುಟ್ಟಿಕೊಂಡಿತು ಹಾಗೂ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳನ್ನು ಹೇಗೆ ಪರೀಕ್ಷೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮಹಿಳೆಯರ ಸೌಂದರ್ಯ ಸ್ಪರ್ಧೆ ಜಿಲ್ಲೆ, ರಾಜ್ಯ, ಅಂತರಾಜ್ಯ, ಅಂತರಾಷ್ಟ್ರ, ಖಂಡ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಹೀಗೆ ವಿವಿಧ ಹಂತದವರೆಗೂ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಹಲವು ಯುವತಿಯರು ಭಾಗವಹಿಸುತ್ತಾರೆ, ಅವರಲ್ಲಿ ಒಬ್ಬರು ಗೆಲ್ಲುತ್ತಾರೆ. ಅವರನ್ನು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿರುದು ನೀಡಿ ಸನ್ಮಾನಿಸಲಾಗುತ್ತದೆ. ಸೌಂದರ್ಯ ಎಂಬ ಪದಕ್ಕೆ ನಿರ್ದಿಷ್ಟ ಅರ್ಥವಿಲ್ಲ. ಒಬ್ಬೊಬ್ಬರ ಕಲ್ಪನೆಯಲ್ಲಿ ಒಂದೊಂದು ಅರ್ಥವಿದೆ, ನೋಡುಗರ ಆಸಕ್ತಿ, ದೃಷ್ಟಿಯ ಮೇಲೆ ಅವಲಂಬಿತವಾಗಿದೆ. ಮಿಸ್ ವರ್ಲ್ಡ್ ಎಂಬ ಸೌಂದರ್ಯ ಸ್ಪರ್ಧೆ ಫ್ಯಾಮಿಲಿ ಬೇಸ್ ಮೇಲೆ ನಡೆಯುತ್ತದೆ. ಎರಿಕ್ ಡೋಗ್ಲಾಸ್ ಮಾರ್ಲಿ ಎಂಬ ಬ್ರಿಟನ್ ಮೂಲದ ವ್ಯಕ್ತಿ ಮಿಸ್ ವರ್ಲ್ಡ್ ಸ್ಪರ್ಧೆಯ ಸಂಸ್ಥಾಪಕರು. 1959 ರಲ್ಲಿ ಬ್ರಿಟನ್ ನಲ್ಲಿ ಈ ಸ್ಪರ್ಧೆ ಪ್ರಾರಂಭವಾಯಿತು. ನಂತರ ಪ್ರತಿ ವರ್ಷ ಈ ಸ್ಪರ್ಧೆ ನಡೆಯಿತು ಅಲ್ಲದೆ ಜಗತ್ತಿನ ನಾನಾ ಮೂಲೆಗಳಿಂದ ಸ್ಪರ್ಧಿಗಳನ್ನು ಆಹ್ವಾನಿಸಲಾಯಿತು. ನಂತರ ಇದು ಅಂತರಾಷ್ಟ್ರೀಯ ಮಾನ್ಯತೆ ಪಡೆಯಿತು. ಈ ಸ್ಪರ್ಧೆಗೆ 18 ವರ್ಷ ಮೇಲ್ಪಟ್ಟು 27ವರ್ಷ ಒಳಗಿನ ಮದುವೆಯಾಗದ ಯುವತಿಯರು ಮಾತ್ರ ಭಾಗವಹಿಸಬಹುದು. ಈ ಸ್ಪರ್ಧೆಗೆ ಭಾಗವಹಿಸುವ ಯುವತಿಯರ ದೇಹದ ಅಂಗಾಂಗಗಳು ಇಷ್ಟೆ ಅಳತೆಯಲ್ಲಿ ಇರಬೇಕು ಎಂಬ ನಿಯಮವಿದೆ. ಈ ಸ್ಪರ್ಧೆಗೆ ಒಂದು ದೇಶದಿಂದ ಒಬ್ಬರನ್ನು ಮಾತ್ರ ಆರಿಸಲಾಗುತ್ತದೆ. ಇದರಿಂದ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ ಇದರಿಂದ ಈ ಶೋ ಮಾರ್ಕೆಟಿಂಗ್ ಸುಲಭವಾಗುತ್ತದೆ. ಮಿಸ್ ಬಿಕಿನಿ ಎಂಬ ಪ್ರತ್ಯೇಕ ವಿಭಾಗವಿದೆ ಅಲ್ಲಿ ಅರೆನಗ್ನ ಸೌಂದರ್ಯ ಸ್ಪರ್ಧೆ ನಡೆಯುತ್ತದೆ. ಅಂದು ಎಲ್ಲ ಕಡೆ ಯುವತಿಯರು ಕಡಿಮೆ ಬಟ್ಟೆ ಧರಿಸುವಂತಿರಲಿಲ್ಲ 70 ರ ದಶಕದಲ್ಲಿ ಬ್ರಿಟನ್ ನಲ್ಲಿ ಕೆಲವು ಸಂಸ್ಥೆಗಳು ಮಹಿಳೆಯರಿಗೆ ಬಟ್ಟೆ ತಯಾರಿಸಿ ಅದರ ಮಾರ್ಕೆಟಿಂಗ್ ಈ ಸ್ಪರ್ಧೆಯ ಮೂಲಕ ಮಾಡಲಾಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಯುವತಿಯರ ಫೋಟೋ ವಿಡಿಯೋಗಳು ಟೀವಿ, ಪೇಪರ್ ಗಳಲ್ಲಿ ಹರಿದಾಡಿದವು. ವಿಡಿಯೋ ಕೃಪೆ: Kannada tech for you
ಸ್ಪರ್ಧೆಯಲ್ಲಿ ಯುವತಿಯರ ಒಂದೊಂದು ಅಂಗಗಳಿಗೆ ಬೇರೆ ಬೇರೆ ಅಂಕಗಳನ್ನು ಕೊಟ್ಟು ಅಂಕಗಳ ಮೂಲಕ ಆರಿಸಲಾಗುತ್ತದೆ. ನಮ್ಮ ದೇಶದ ಹೆಣ್ಣು ಮಕ್ಕಳ ದೇಹದ ಅಂಗಾಂಗಗಳ ಬಗ್ಗೆ ವಿದೇಶಿಯರು ಚರ್ಚೆ ಮಾಡಿ ಅಂಕ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸಬೇಕು. ಭಾರತದಂತಹ ಸಾಂಪ್ರದಾಯಿಕ ದೇಶಗಳ ಯುವತಿಯರೆ ಇಂತಹ ಅನಾಗರಿಕ ಸ್ಪರ್ಧೆಗೆ ಹೆಚ್ಚು ಭಾಗವಹಿಸುತ್ತಿರುವುದು ವಿಷಾದನೀಯ. ಇತ್ತೀಚೆಗೆ ಪರ್ಸ್ನಾಲಟಿ ಟೆಸ್ಟ್ ಎಂದು ಮಾಡಲಾಗುತ್ತದೆ. ಯುವತಿ ತಾನು ಅರೆನಗ್ನಳಾಗಿರುವುದನ್ನು ಎಲ್ಲರೂ ನೋಡಿದರೂ ನನಗೆ ಯಾವ ಮುಜುಗರ ಇಲ್ಲ ಎಂಬುದನ್ನು, ತನ್ನ ಆತ್ಮವಿಶ್ವಾಸವನ್ನು ತೋರಿಸುವುದೆ ಪರ್ಸ್ನಾಲಟಿ ಟೆಸ್ಟ್. ಇಂತಹ ಅನಾಗರಿಕ ಸ್ಪರ್ಧೆಯ ಬಗ್ಗೆ ಯಾರೂ ಮಾತನಾಡದೆ ಇರುವುದು ವಿಪರ್ಯಾಸವೇ ಸರಿ.