Astrology for Virgo: 12 ರಾಶಿ ಚಕ್ರದಲ್ಲಿ 6ನೇ ದಾಗಿ ಬರುವಂತಹ ರಾಶಿ ಯಾವುದೆಂದರೆ ಅದು ಕನ್ಯಾ ರಾಶಿ, ಇಲ್ಲಿ ನಾವು ಕನ್ಯಾ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ.ಕನ್ಯ ರಾಶಿಯನ್ನು ಬುಧ ಗ್ರಹ ಆಳುತ್ತಾನೆ. ಕನ್ಯಾರಾಶಿಯ ಅಂಶ ಭೂಮಿ, ಆಳುವ ಗ್ರಹ ಬುಧ, ಬಣ್ಣ ಬೂದ್ ಬಣ್ಣ ಮತ್ತು ತಿಳಿ ಹಳದಿ, ಗುಣ ರೂಪಾಂತರ. ಅತ್ಯುತ್ತಮವಾಗಿ ಕನ್ಯಾ ರಾಶಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಾಶಿ ಚಕ್ರಗಳು ಮೀನ ಮತ್ತು ಕರ್ಕಾಟಕ ರಾಶಿ. ಅದೃಷ್ಟ ಸಂಖ್ಯೆ 5, 14, 23, 32.
ಕನ್ಯಾ ರಾಶಿಯ ನಕ್ಷತ್ರ ಪುಂಜವು ಬ್ಯಾಬಿಲೋನಿಯಂ ಸಮಾಜದಲ್ಲಿ ಶಲಾ ದೇವತೆಯೊಂದಿಗೆ ಸಂಬಂಧ ಹೊಂದಿತ್ತು ಅಂತ ಹೇಳಲಾಗುತ್ತದೆ. ಬೆಬಿಲೋನಿಯಲ್ರವರಿಗೆ ಈ ದೇವಿ ಫಲವತ್ತತೆ,ಸುಗ್ಗಿಯ ಮೇಲಿನ ಆಳ್ವಿಕೆಯನ್ನು ಪ್ರತಿನಿಧಿಸುತ್ತದೆ. ಗ್ರೀಕ್ ಪುರಾಣದಲ್ಲಿ ಕನ್ಯಾ ರಾಶಿಯನ್ನು ಡಿಮಿಟರ್ ದೇವತೆಯೊಂದಿಗೆ ಸಂಪರ್ಕಿಸಲಾಗಿದೆ
Kannada Astrology For Virgo predictions
ಈ ದೇವತೆ ಭೂಮಿ ಹಾಗೂ ಕೃಷಿಗೆ ಸಂಬಂಧಿಸಿದ ಆರಂಭಿಕ ರೋಮನ್ ಸಂಸ್ಕೃತಿಯ ಮೂಲಕ ಕನ್ಯಾ ರಾಶಿ ಕೃಷಿಗಳ ಆಡಳಿತಗಾರಳಾಗಿದ್ದಳು ಇಂದಿಗೂ ಕೂಡ ಅಲ್ಲಿ ಕನ್ಯಾ ರಾಶಿಯ ನೆಡುವುದು, ಬೆಳೆಯುವುದು, ಕೊಯ್ಲು ಮಾಡುವ ಬೆಳೆ ಮತ್ತು ಗಿಡ ಮೂಲಿಕ ಔಷಧಿಗಳ ಜೊತೆ ಈ ರಾಶಿಗೆ ಸಂಪರ್ಕ ಹೊಂದಿದೆ.
Virgo ಕನ್ಯಾ ರಾಶಿಯವರು ಸುಂದರವಾಗಿ ಆಕರ್ಷಿಕ ಸೌಂದರ್ಯವನ್ನು ಹೊಂದಿರುತ್ತಾರೆ, ಇವರಿಗೆ ನಾಚಿಕೆ ಸ್ವಭಾವ ಇರುತ್ತದೆ ಆದರೆ ಇವರು ಯಾರನ್ನಾದರೂ ಬಹಳ ಸುಲಭವಾಗಿ ಆಕರ್ಷಿಸುತ್ತಾರೆ. ಇವರು ತಮ್ಮ ವರ್ಷಕ್ಕಿಂತ ಚಿಕ್ಕವರ ತರ ಕಾಣಿಸುತ್ತಾರೆ ಹಾಗೂ ಅವರ ಮುಖದಲ್ಲಿ ಮುಗ್ಧತೆ ಎದ್ದು ಕಾಣಿಸುತ್ತದೆ. ಇವರು ಬುದ್ಧಿವಂತರಾಗಿದ್ದು ಬಹಳ ಸ್ವಚ್ಛವಾಗಿರಲು ಇಷ್ಟಪಡುತ್ತಾರೆ
ಇವರು ತಮ್ಮ ಆಹಾರ ಮತ್ತು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಬಯಸುತ್ತಾರೆ ಇವರ ಕೆಲಸ ತುಂಬಾ ಶಿಸ್ತು ಬದ್ಧವಾಗಿರುತ್ತದೆ.ಇವರು ಬುದ್ಧಿವಂತರಾಗಿರುವುದರಿಂದ ಇವರಿಗೆ ಮೋಸ ಮಾಡುವುದು ಬಹಳ ಕಷ್ಟ ಮತ್ತು ಪ್ರಾಮಾಣಿಕರು ಹಾಗೂ ಚಟುವಟಿಕೆಯುಳ್ಳಂತಹ ವ್ಯಕ್ತಿಗಳಾಗಿರುತ್ತಾರೆ.
ಭೂಮಿ ತತ್ವಕ್ಕೆ ಸೇರಿಯೂ ಬುಧ ಗ್ರಹದಲ್ಲಿ ಆಳಲ್ಪಡು ಏಕೈಕ ರಾಶಿ ಎಂದರೆ ಕನ್ಯ. ಬುಧನ ಸಂವಹನ ಹಾಗೂ ಯೋಜನಾ ವಿಧಾನಕ್ಕೆ ಸಂಬಂಧಿಸಿದಾಗಿದೆ ಹಾಗಾಗಿ ಕನ್ಯಾ ರಾಶಿ ಅವರು ಹುಟ್ಟು ಬುದ್ಧಿವಂತರು, ಒಳ್ಳೆಯ ಮಾತುಗಾರರು ಆಗಿರುತ್ತಾರೆ. ಕನ್ಯಾ ರಾಶಿಯವರು ಆರೋಗ್ಯ ಪ್ರಜ್ಞೆಯುಳ್ಳವರಾಗಿರುತ್ತಾರೆ ಮತ್ತು ಅವರು ತಮ್ಮ ನೈಸರ್ಗಿಕ ಪರಿಸರಕ್ಕೆ ಆದ್ಯತೆ ನೀಡುತ್ತಾರೆ.
ನೀವು ಕನ್ಯಾ ರಾಶಿಯವರಿಗೆ ಸಾಕಷ್ಟು ಹತ್ತಿರವಾದರೂ ಸಂತೋಷವಾಗಿ ನಿಮ್ಮ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ ನಿಮ್ಮ ಬಗ್ಗೆ ಕಾಳಜಿಯನ್ನುವಹಿಸುತ್ತಾರೆ. ಇವರು ತುಂಬಾ ವಿಶ್ವಾಸವುಳ್ಳಂತಹ ವ್ಯಕ್ತಿಗಳು ಹಾಗೂ ಕನ್ಯಾ ರಾಶಿಯನ್ನು ಗೋದಿ ಮತ್ತು ಕೃಷಿಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಇದು ಮಾನವನ ಜೀರ್ಣಾಂಗ ವ್ಯವಸ್ಥೆಯನ್ನು ಆಳುತ್ತದೆ ಕನ್ಯಾ ರಾಶಿ ಅವರು ಸ್ವಲ್ಪ ಹಟಮಾರಿ ಆಗಿರುತ್ತಾರೆ ಕಷ್ಟದಲ್ಲಿದ್ದಾಗಲೂ ಇನ್ನೊಬ್ಬರ ಸಹಾಯ ಬಯಸದೆ ಸ್ವಾವಲಂಬಿಗಳಾಗುತ್ತಾರೆ.
ಕನ್ಯಾ ರಾಶಿಯವರು ದುಃಖ ಜೀವಿಗಳು ಮತ್ತು ಜಿಪುಣರು ಎಂದು ಹೇಳುತ್ತಾರೆ. ಇವರು ಕೆಟ್ಟ ಸನ್ನಿವೇಶ ಬಂದರೆ ತುಂಬಾ ಸುಲಭವಾಗಿ ನಿಭಾಯಿಸಬಲ್ಲರು ಭಾವನೆಗಳು ಹೆಚ್ಚು ಬೆಲೆ ಕೊಡುವ ಈ ರಾಶಿಯವರು ಬೇರೆಯವರ ಕಷ್ಟಕ್ಕೆ ಮರುಗುತ್ತಾರೆ ಪ್ರಯಾಣದಲ್ಲಿ ಇವರಿಗೆ ಹೆಚ್ಚು ಖುಷಿ ಸಿಗುತ್ತದೆ ಕನ್ಯಾ ರಾಶಿಯವರಿಗೆ ಕಾಯಕವೇ ಕೈಲಾಸ ಕೆಲಸಕ್ಕೆ ಸ್ವಲ್ಪ ಆದ್ಯತೆ ಹೆಚ್ಚು ನೀಡುತ್ತಾರೆ.