Virgo Marriage Horoscope 2024: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ 2024 ರಲ್ಲಿ ಕನ್ಯಾ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ವೈವಾಹಿಕ ಜೀವನದಲ್ಲಿ ಸುಖವಾಗಿ ಇದ್ದಾಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ ಆಗುತ್ತದೆ

ಕನ್ಯಾ ರಾಶಿಯವರಿಗೆ ಈ ಹೊಸ ವರ್ಷದಲ್ಲಿ ಕೇತುವಿನಿಂದಾಗಿ ವೈವಾಹಿಕ ಜೀವನದಲ್ಲಿ ಏರಿಳಿತಗಳು ಕಂಡು ಬರುತ್ತದೆ. ವಿವಾಹದ ನಂತರದಲ್ಲಿ ಸುಖವಾಗಿ ಇದ್ದಾಗ ಮಾತ್ರ ಜೀವನಕ್ಕೊಂದು ಅರ್ಥ ಬರುತ್ತದೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಕಂಡು ಬರಬಾರದು ಭಿನ್ನಾಭಿಪ್ರಾಯ ಕಂಡು ಬಂದರೂ ಸಹ ಬಹು ಬೇಗನೆ ಸರಿಪಡಿಸಿಕೊಳ್ಳಬೇಕು ಪರಸ್ಪರ ಹೊಂದಾಣಿಕೆಯ ಮನೋಭಾವ ಕಂಡು ಬಂದರೆ ವೈವಾಹಿಕ ಜೀವನ ಸುಖಮಯವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ 2024ರಲ್ಲಿ ಕನ್ಯಾ ರಾಶಿಯವರು ಪ್ರೇಮ ವಿವಾಹ ಮತ್ತು ವೈವಾಹಿಕ ಜೀವನದ ಬಗ್ಗೆ ತಿಳಿದುಕೊಳ್ಳೋಣ.

2024 ರಲ್ಲಿ ಕನ್ಯಾ ರಾಶಿಯವರ ಪ್ರೇಮ ಜೀವನವು ವರ್ಷದ ಆರಂಭದಲ್ಲಿ ಮಿಶ್ರ ಫಲಿತಾಂಶದಿಂದ ಕೂಡಿ ಇರುತ್ತದೆ ಕೆಲವೊಂದು ಭಾವನೆಗಳನ್ನು ಹಿಡಿದು ಇಟ್ಟುಕೊಳ್ಳಬೇಕು ಪ್ರೀತಿ ಪಾತ್ರರಿಗೆ ಮಾತುಗಳು ಒರಟಾಗಿ ಕಂಡು ಬರುವ ಸಾಧ್ಯತೆ ಇರುತ್ತದೆ ಅಸಮಾಧಾನ ಕಂಡು ಬರುವ ಸಾಧ್ಯತೆ ಇರುತ್ತದೆ ಹೇಳುವಂತಹ ಮಾತನ್ನು ಸಡನ್ ಆಗಿ ಹೇಳಬಾರದು ಆಡುವ ಮಾತು ಪ್ರೀತಿ ಪಾತ್ರರಿಗೆ hurt ಆಗುವ ಸಾಧ್ಯತೆ ಇರುತ್ತದೆ ಮಾತನಾಡುವಾಗ ಬಹಳ ಜಾಗೃತವಾಗಿ ಇರಬೇಕು 2024 ರಲ್ಲಿ ಕೇತುವಿನ ಉಪಸ್ಥಿತಿಯ ಅಂತರ್ಮುಖಿಯಾಗಿ ಮಾಡುತ್ತದೆ ಅಂದರೆ ಪ್ರೀತಿ ಪಾತ್ರರಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ

ಪ್ರೀತಿ ಪಾತ್ರರು ಅಸಮಾಧಾನವನ್ನು ಇಟ್ಟುಕೊಂಡಿರುತ್ತಾರೆ ಏನನ್ನೋ ಮುಚ್ಚಿ ಇಡುತಿದ್ದಾರೆ ಎನ್ನುವ ಭಾವನೆ ಕಂಡು ಬರುತ್ತದೆ ಪ್ರೀತಿಯ ವಿಷಯದಲ್ಲಿ ಕನ್ಯಾ ರಾಶಿಯವರಿಗೆ ಮಿಶ್ರ ಫಲಿತಾಂಶ ಲಭಿಸುತ್ತದೆ .ಜನವರಿ ತಿಂಗಳಲ್ಲಿ ಪ್ರೀತಿಯ ವಿಷಯದಲ್ಲಿ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಪ್ರೀತಿಯ ವಿಚಾರವಾಗಿ ಅನುಕೂಲಕರವಾಗಿ ಇರುತ್ತದೆ ಪ್ರೀತಿ ಪಾತ್ರರೊಂದಿಗೆ ಪ್ರಣಯದ ಪೂರ್ತಿ ಸುಖವನ್ನು ಪಡೆದುಕೊಳ್ಳುತ್ತಾರೆ ವರ್ಷದ ದ್ವಿತೀಯ ಭಾಗದಲ್ಲಿ ಪ್ರೀತಿ ಪಾತ್ರರೊಂದಿಗೆ ವಿವಾಹ ಆಗುವ ಯೋಗ ಕಂಡು ಬರುತ್ತದೆ ಮದುವೆ ಎನ್ನುವುದಕ್ಕೆ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕು ಎಲ್ಲ ತಯಾರಿಗಳನ್ನು ಸಹ ವರ್ಷದ ದ್ವಿತೀಯ ಭಾಗದಲ್ಲಿ ಕನ್ಯಾ ರಾಶಿಯವರು ಮಾಡಿಕೊಳ್ಳುತ್ತಾರೆ ಹೊಸ ಜೀವನದ ಆರಂಭದಲ್ಲಿ ಸ್ವಲ್ಪ ಜಾಗೃತವಾಗಿರಬೇಕು .

2024 ಕೌಟುಂಬಿಕ ಜೀವನದ ಆರಂಭದಲ್ಲಿ ದುರ್ಬಲವಾಗಿರುತ್ತದೆ 4ನೆಯ ಮನೆಯಲ್ಲಿ ಮಂಗಳ ಹಾಗೂ ಸೂರ್ಯ ಇರುತ್ತಾರೆ.ಕುಟುಂಬ ಸದಸ್ಯರ ನಡುವೆ ಕ್ರೋಧ ಹೆಚ್ಚಾಗುತ್ತದೆ ಕುಟುಂಬ ಸದಸ್ಯರ ನಡುವೆ ಒತ್ತಡ ಹಾಗೂ ಜಗಳಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಆರಂಭದಲ್ಲಿ ಕಷ್ಟಗಳು ಕಂಡು ಬಂದರೂ ಸಹ ಕ್ರಮೇಣ ಸಮಸ್ಯೆ ನಿವಾರಣೆ ಆಗುತ್ತದೆ ಆರಂಭದ ತಿಂಗಳಲ್ಲಿ ತಾಯಿಯ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು ವರ್ಷದ ಆರಂಭದಲ್ಲಿ 8ನೆಯ ಮನೆಯಲ್ಲಿ 6ನೆಯ ಮನೆಯ ಅಧಿಪತಿ ಉಪಸ್ಥಿತಿ ಇರುವ ಕಾರಣದಿಂದಾಗಿ ಆರಂಭದಲ್ಲಿ ಒತ್ತಡಗಳು ಕಂಡು ಬರುತ್ತದೆ ತಾಯಿಯ ಆರೋಗ್ಯದಲ್ಲಿ ತೊಂದರೆಗಳು ಕಂಡು ಬರುತ್ತದೆ ಹಾಗಾಗಿ ಕನ್ಯಾ ರಾಶಿಯವರು ಜಾಗೃತವಾಗಿ ಇರಬೇಕು

ಏಪ್ರಿಲ್ ತಿಂಗಳಲ್ಲಿ ಕೌಟುಂಬಿಕ ಕಲಹಗಳು ಆಗುವ ಸಾಧ್ಯತೆ ಇರುತ್ತದೆ ಪರಸ್ಪರ ಸಾಮರಸ್ಯದಿಂದ ಇರಲು ಪ್ರಯತ್ನ ಮಾಡಬೇಕು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಜಾಗೃತವಾಗಿ ಇರಬೇಕು ವೈವಾಹಿಕ ಜೀವನವು ಏರಿಳಿತಗಳಿಂದ ಕೂಡಿ ಇರುತ್ತದೆ ಒತ್ತಡದ ವೈವಾಹಿಕ ಜೀವನವನ್ನು ಅನುಭವಿಸಬೇಕು ಇಡೀ ವರ್ಷ ಕೇತುವಿನ ಪ್ರಭಾವ ಇರುವುದರಿಂದ ವೈವಾಹಿಕ ಜೀವನ ಏರಿಳಿತಗಳಿಂದ ಕೂಡಿ ಇರುತ್ತದೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮಕ್ಕಳ ನಿರೀಕ್ಷೆಯಲ್ಲಿ ಇರುವಂತವರಿಗೆ ಈ ವರ್ಷದಲ್ಲಿ ಸಂತಾನ ಭಾಗ್ಯ ಪ್ರಾಪ್ತಿ ಆಗುತ್ತದೆ

ಹಾಗೆಯೇ ಕನ್ಯಾ ರಾಶಿಯವರ ಮಕ್ಕಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತೀರ್ಣರಾಗುವ ಸಾಧ್ಯತೆ ಇರುತ್ತದೆ ಹೀಗೆ 2024 ಕನ್ಯಾ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಹಾಗೆಯೇ ವೈವಾಹಿಕ ಜೀವನವು ಏರಿಳಿತಗಳಿಂದ ಕೂಡಿ ಇರುತ್ತದೆ ಹೀಗಾಗಿ ಕಷ್ಟ ಸುಖಗಳ ಸಮ್ಮಿಲನ ಕಂಡು ಬರುತ್ತದೆ ಹಾಗಾಗಿ 2024ರಲ್ಲಿ ಕನ್ಯಾ ರಾಶಿಯವರು ತಾಳ್ಮೆಯಿಂದ ಮಾತನಾಡಬೇಕು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!