Virgo Horoscope October: ದ್ವಾದಶ ರಾಶಿಗಳಲ್ಲಿ ಪ್ರಮುಖವಾದ ರಾಶಿಗಳಲ್ಲಿ ಒಂದಾದ ಕನ್ಯಾ ರಾಶಿಯು ತನ್ನದೆ ಆದ ಸ್ಥಾನವನ್ನು ಹೊಂದಿದೆ. ಕನ್ಯಾ ರಾಶಿಯಲ್ಲಿ ಜನಿಸಿದವರು ಉತ್ತರ, ಚಿತ್ತ, ಹಸ್ತಾ ನಕ್ಷತ್ರದಲ್ಲಿ ಜನಿಸಿರುತ್ತಾರೆ. ಕನ್ಯಾ ರಾಶಿಯವರ ಅಕ್ಟೋಬರ್ ತಿಂಗಳಿನ ಮಾಸ ಭವಿಷ್ಯ ಗ್ರಹಗಳ ಚಲನೆ ಅದರ ಪರಿಣಾಮಗಳು ಹಾಗೂ ಉದ್ಯೋಗ ಶಿಕ್ಷಣ ಮದುವೆ ಕೌಟುಂಬಿಕ ವಿಚಾರ ಮುಂತಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮಾಸ ಭವಿಷ್ಯ ನೋಡುವಾಗ ಗ್ರಹಗಳ ಸಂಚಾರದ ಬಗ್ಗೆ ತಿಳಿಯಬೇಕು. ಅಕ್ಟೋಬರ್ ತಿಂಗಳಿನಲ್ಲಿ ಬುಧ ಗ್ರಹ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಾನೆ, ಶುಕ್ರ ಗ್ರಹ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ, ಈ ತಿಂಗಳ 3 ನೇ ತಾರೀಖಿನಂದು ಕುಜ ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡಲಿದ್ದಾರೆ ಅಕ್ಟೋಬರ್ 18 ನೆ ತಾರೀಖನಂದು ರವಿ ಗ್ರಹ ಹಾಗೂ ಬುಧ ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡುತ್ತಾರೆ, ಮುಖ್ಯವಾಗಿ ಈ ತಿಂಗಳಿನ 30ನೆ ತಾರೀಖಿನಂದು ರಾಹು ಗ್ರಹ ಮೀನ ರಾಶಿಗೆ ಕೇತು ಗ್ರಹ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾರೆ. ಈ ರೀತಿಯ ಗ್ರಹಗಳ ಬದಲಾವಣೆಯಿಂದ ಕನ್ಯಾ ರಾಶಿಯವರಿಗೆ ಯಾವ ರೀತಿಯ ಫಲ ಸಿಗಲಿದೆ ಎಂದು ನೋಡುವುದಾದರೆ ಈ ರಾಶಿಯ ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳು ಅತ್ಯುತ್ತಮ ಸಮಯವಾಗಿದೆ ಓದಿದ್ದು ತಲೆಗೆ ಹತ್ತುತ್ತದೆ ಪರೀಕ್ಷೆಗಳಲ್ಲಿ ಸ್ವಲ್ಪ ಪ್ರಯತ್ನ ಪಟ್ಟರೂ ಉತ್ತಮ ಅಂಕಗಳನ್ನು ಗಳಿಸಬಹುದು.

ಅಕ್ಟೋಬರ್ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಹಣಕಾಸಿನ ಆಗಮನ ಹೆಚ್ಚಾಗುತ್ತದೆ, ಬಹಳ ದಿನಗಳಿಂದ ಅಂದುಕೊಂಡ ಕೆಲಸ ನಿಂತಿರುತ್ತದೆ ಅಂತ ಕೆಲಸವೂ ಅಕ್ಟೋಬರ್ ತಿಂಗಳಿನಲ್ಲಿ ಕೈಗೂಡುವ ಸಾಧ್ಯತೆ ಇದೆ. ಕನ್ಯಾ ರಾಶಿಯವರು ಅಕ್ಟೋಬರ್ ತಿಂಗಳಲ್ಲಿ ಪ್ರಯಾಣ ಮಾಡುವ ಪ್ರವಾಸಕ್ಕೆ ಹೋಗುವ ಸಂದರ್ಭಗಳು ಬರಬಹುದು. ಈ ರಾಶಿಯವರ ಮನೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಈ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಹಣವನ್ನು ಹೂಡಿಕೆ ಮಾಡುವುದು ಅಥವಾ ಹೆಚ್ಚು ಮೊತ್ತದ ಹಣವನ್ನು ಪರಿಚಯ ಇಲ್ಲದವರಿಗೆ ಕೊಡುವುದು ಮಾಡಬೇಡಿ ಈ ಸಮಯ ಸೂಕ್ತವಾಗಿಲ್ಲ .

Virgo Horoscope October 2023

ರಾಹು ಗ್ರಹ ಸಪ್ತಮ ಭಾವದಲ್ಲಿ ಹಾಗೂ ಕೇತು ಗ್ರಹ ನಿಮ್ಮ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ ಕಳೆದ ಒಂದುವರೆ ವರ್ಷದಲ್ಲಿ ರಾಹು ಹಾಗೂ ಕೇತು ಗ್ರಹದ ಬದಲಾವಣೆಯಿಂದ ಕನ್ಯಾ ರಾಶಿಯವರ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬಂದಿದ್ದವು ಜೊತೆಗೆ ಮಾತಿನ ವಿಷಯದಲ್ಲಿಯೂ ಸಮಸ್ಯೆಗಳು ಆಗಿದ್ದವು. ಮುಂದಿನ ಒಂದುವರೆ ವರ್ಷಗಳವರೆಗೆ ಕನ್ಯಾ ರಾಶಿಯವರು ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಬೇಕು. ದಂಪತಿಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಬುಧ ಗ್ರಹ ಕನ್ಯಾ ರಾಶಿಗೆ ಪ್ರವೇಶ ಮಾಡುವುದರಿಂದ ಸಂಬಂಧಿಕರಲ್ಲಿ ಬಂಧುಗಳಲ್ಲಿ ಮನಸ್ತಾಪಗಳು ಉಂಟಾಗಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಈ ಎರಡು ವಿಷಯವನ್ನು ಬಿಟ್ಟರೆ ಬುಧ ಗ್ರಹನಿಂದ ಕನ್ಯಾ ರಾಶಿಯವರಿಗೆ ಯಾವುದೆ ಸಮಸ್ಯೆ ಇರುವುದಿಲ್ಲ. ಅಕ್ಟೋಬರ್ ತಿಂಗಳಲ್ಲಿ ಬುಧ ಗ್ರಹ ಎರಡು ಸರಿ ಸಂಚಾರ ಮಾಡುವುದರಿಂದ 18ನೇ ತಾರೀಖಿನ ನಂತರ ಕನ್ಯಾ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಕುಜ ಗ್ರಹದ ಬದಲಾವಣೆಯಿಂದ ಕನ್ಯಾ ರಾಶಿಯವರಿಗೆ ಮೇಲಾಧಿಕಾರಿಗಳಿಂದ ಸಣ್ಣಪುಟ್ಟ ತೊಂದರೆಗಳಾಗಬಹುದು ಮೌಲ್ಯಯುತವಾದ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕಾಗುತ್ತದೆ, ಮನಸ್ಸಿಗೆ ಬೇಸರ ಉಂಟಾಗಬಹುದು.

ಶುಕ್ರ ಗ್ರಹದ ಬದಲಾವಣೆಯಿಂದ ಹಣಕಾಸಿನ ವಿಷಯದಲ್ಲಿ ಯಾವುದೆ ಸಮಸ್ಯೆ ಇಲ್ಲ ಹಣದ ಆಗಮನವಾಗುತ್ತದೆ ಆದರೆ ಉಳಿಸಿಕೊಳ್ಳುವಲ್ಲಿ ಜಾಗರೂಕರಾಗಿರಬೇಕು ಹಾಗೂ ಹಣಕಾಸು ವಿಷಯದಲ್ಲಿ ಮೋಸಗಳಾಗಬಹುದು ಅದರ ಬಗ್ಗೆ ಎಚ್ಚರದಿಂದಿರಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಕನ್ಯಾ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಯೋಚಿಸಬೇಕಾಗಿಲ್ಲ ಆರೋಗ್ಯದಿಂದಿರುತ್ತೀರಿ. ವಿದ್ಯಾರ್ಥಿಗಳಿಗೆ ಅಕ್ಟೋಬರ್ ತಿಂಗಳು ಉತ್ತಮ ಸಮಯವಾಗಿದೆ. ಕೌಟುಂಬಿಕ ವಿಷಯದಲ್ಲಿಯೂ ಕನ್ಯಾ ರಾಶಿಯವರು ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಯೋಚಿಸಬೇಕಾಗಿಲ್ಲ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಹಣಕಾಸಿನ ಆಗಮನವಾಗುತ್ತದೆ ಆದರೆ ಹಣಕಾಸಿನ ವಿನಿಯೋಗ ಯೋಜನೆ ಮಾಡುವಲ್ಲಿ ಜಾಗರೂಕತೆಯಿಂದ ಇರಬೇಕಾಗುತ್ತದೆ.

ಉದ್ಯೋಗದ ವಿಷಯದಲ್ಲಿ ಮೇಲಾಧಿಕಾರಿಗಳ ಜೊತೆ ಅಥವಾ ಸಹೋದ್ಯೋಗಿಗಳ ಜೊತೆ ಮನಸ್ತಾಪಗಳು ಉಂಟಾಗಬಹುದು ಆದ್ದರಿಂದ ಮಾತನಾಡುವಾಗ ಎಚ್ಚರದಿಂದ ಇರಬೇಕಾಗುತ್ತದೆ. ಉತ್ತರ ನಕ್ಷತ್ರದ ಎರಡು ಮೂರು ನಾಲ್ಕನೆ ಪಾದದಲ್ಲಿ ಜನಿಸಿದವರು ಶ್ರೀರಾಮದೇವರ ಆರಾಧನೆ ಮಾಡಬೇಕು. ಹಸ್ತ ನಕ್ಷತ್ರದಲ್ಲಿ ಜನಿಸಿದವರು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು, ಚಿತ್ತಾ ನಕ್ಷತ್ರದ ಒಂದು ಮತ್ತು ಎರಡನೆ ಪಾದದಲ್ಲಿ ಜನಿಸಿದವರು ಗಣಪತಿ ದೇವರ ಆರಾಧನೆ ಮಾಡುವುದರಿಂದ ಸಮಸ್ಯೆಗಳೆಲ್ಲ ದೂರವಾಗಿ ಅತ್ಯುತ್ತಮ ಫಲ ಸಿಗಲಿದೆ. ಈ ಮಾಹಿತಿ ಉಪಯುಕ್ತವಾಗಿದ್ದು ನಿಮ್ಮ ಪರಿಚಯ ಹಾಗೂ ಕುಟುಂಬದವರಲ್ಲಿ ಯಾರಾದರೂ ಕನ್ಯಾ ರಾಶಿಯವರಿದ್ದರೆ ಅವರಿಗೆ ಖಂಡಿತವಾಗಿಯೂ ತಿಳಿಸಿ ಹಾಗೆ ನಿಮ್ಮ ರಾಶಿ ಯಾವುದು ಎಂಬುದನ್ನು ನಮಗೆ ತಿಳಿಸಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *