ದ್ವಾದಶ ರಾಶಿಗಳಲ್ಲಿ ಜನಿಸಿದವರು ಅವರವರ ರಾಶಿಗೆ ಅನುಗುಣವಾಗಿ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೆ ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗಳ ಚಲನೆಯಿಂದ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಒಂದೊಂದು ತಿಂಗಳಿನಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರ ಭವಿಷ್ಯ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ ಕನ್ಯಾ ರಾಶಿಯವರ ಮೇ ತಿಂಗಳಿನ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ
ಕನ್ಯಾ ರಾಶಿಯ ಅಧಿಪತಿ ಬುಧ ಅಸ್ತಮ ಸ್ಥಾನದಲ್ಲಿದ್ದಾನೆ, ಮೇ ತಿಂಗಳಿನಲ್ಲಿ ಗುರುಬಲ ಇರುವುದಿಲ್ಲ. ಕನ್ಯಾ ರಾಶಿಯವರಿಗೆ ಗುರುಬಲ ಇಲ್ಲ, ರಾಹು ಕೂಡ ಅಷ್ಟಮದಲ್ಲಿ ಇದ್ದಾನೆ ಅಷ್ಟಮದಲ್ಲಿ ಹೆಚ್ಚು ಗ್ರಹಗಳು ಇದ್ದಾಗ ತೊಂದರೆಗಳು ಜಾಸ್ತಿ ಆಗಿರುತ್ತದೆ ಆಕಸ್ಮಿಕ ಅವಘಡಗಳಾಗಬಹುದು ಕನ್ಯಾ ರಾಶಿಯವರ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು ಮೇ ತಿಂಗಳಲ್ಲಿ ಕನ್ಯಾ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕನ್ಯಾ ರಾಶಿಯವರು ಚರ್ಮವ್ಯಾಧಿಯಿಂದ ಬಳಲುತ್ತಿದ್ದರೆ ಮೇ ತಿಂಗಳಿನಲ್ಲಿ ಅದು ಹೆಚ್ಚಾಗಬಹುದು, ಅಲರ್ಜಿ ಸಮಸ್ಯೆ ಇನ್ಫೆಕ್ಷನ್ ಕಂಡುಬರುತ್ತದೆ. ಕರ್ಮಾಧಿಪತಿ ಸ್ಥಾನದಲ್ಲಿರುವ ಬುಧ ಅಸ್ತಮದಲ್ಲಿರುವುದರಿಂದ ಕೆಲಸದಲ್ಲಿ ಅಡೆತಡೆಯಾಗುತ್ತದೆ ಒಂದೆ ಕೆಲಸವನ್ನು ಮತ್ತೆ ಮತ್ತೆ ಮಾಡುವಂತಾಗುತ್ತದೆ, ಉದ್ಯೋಗದಲ್ಲಿ ಮಾಡಿದ ಕೆಲಸ ಸರಿಯಾಗದೆ ನಿಂದನೆಗೆ ಒಳಗಾಗಬೇಕಾಗುತ್ತದೆ ಇದರಿಂದ ಮಾನಸಿಕವಾಗಿ ಕುಗ್ಗುತ್ತಾರೆ. ಉದ್ಯೋಗದಲ್ಲಿ ಕಿರಿಕಿರಿಯಾಗುತ್ತದೆ ಆತುರದಿಂದ ಕೆಲಸ ಮಾಡದೆ ನಿಧಾನವಾಗಿ ಕೆಲಸ ಮಾಡಬೇಕಾಗುತ್ತದೆ.
ಇನ್ನು ಸ್ವಂತ ಉದ್ಯೋಗ ಮಾಡುತ್ತಿರುವ ಕನ್ಯಾ ರಾಶಿಯವರಿಗೆ ಹಣ ಬರುತ್ತದೆ ಆದರೆ ಸಡನ್ನಾಗಿ ಖರ್ಚಾಗುತ್ತದೆ. ಕನ್ಯಾ ರಾಶಿಯವರು ಹೆಚ್ಚು ನಕಾರಾತ್ಮಕ ಯೋಚನೆ ಮಾಡುತ್ತಾರೆ, ಒಬ್ಬರ ಬಗ್ಗೆ ಗೊತ್ತಿದ್ದು ಅವರಿಂದ ಮೋಸ ಹೋಗುವುದು, ಯೋಚನೆ ಮಾಡದೆ ನಿರ್ಧಾರ ಮಾಡುವುದು ಹೀಗೆ ಮಾಡುವುದಕ್ಕಿಂತ ನನ್ನಿಂದ ತಪ್ಪೆಲ್ಲಾಯಿತು ಎಂದು ಯೋಚಿಸಿ ಎಚ್ಚರ ವಹಿಸಬೇಕು. ರಾಹು ಅಷ್ಟಮದಲ್ಲಿ ಇರುವುದರಿಂದ ಬೆಲೆಬಾಳುವ ವಸ್ತುಗಳು ಕಳೆದು ಹೋಗಬಹುದು ವಸ್ತುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಮನೆಗೆ ಅಪರಿಚಿತರು ಬಂದರೆ ಅವರನ್ನು ಗಮನಿಸಬೇಕು.
ಕನ್ಯಾ ರಾಶಿಯವರು ಯಾರನ್ನು ಸುಲಭವಾಗಿ ನಂಬಬಾರದು, ಸ್ನೇಹಿತರು ಅಥವಾ ಬಂಧುಗಳು ಮೇಲ್ನೋಟಕ್ಕೆ ಉತ್ತಮವಾಗಿದ್ದು ಬೆನ್ನ ಹಿಂದೆ ಹೊಟ್ಟೆ ಕಿಚ್ಚು ಪಡುತ್ತಿರುತ್ತಾರೆ, ಸ್ನೇಹಿತರಿಂದ ಬಂಧುಗಳಿಂದ ಮೇ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಬೇಸರವಾಗಬಹುದು ಕನ್ಯಾ ರಾಶಿಯವರು ಇದಕ್ಕೆಲ್ಲ ತಲಕೆಡಿಸಿಕೊಳ್ಳಬಾರದು, ಬೇಸರ ಮಾಡಿಕೊಳ್ಳಬಾರದು ಆಡುವವರು ಆಡುತ್ತಾರೆ ನನ್ನ ಬಗ್ಗೆ ಎಂದು ತಿಳಿದುಕೊಳ್ಳಬೇಕು. ಕನ್ಯಾ ರಾಶಿಯವರು ಅತಿ ಬುದ್ಧಿವಂತರಾಗಿರುತ್ತಾರೆ ಆದರೆ ನಕಾರಾತ್ಮಕ ಯೋಚನೆ ಮಾಡುವುದು ಹೆಚ್ಚಾಗಿರುತ್ತದೆ, ನಕಾರಾತ್ಮಕ ಯೋಚನೆ ಮಾಡುವುದನ್ನು ಬಿಟ್ಟು ತಪ್ಪಾಗಿದ್ದಲ್ಲಿ ಹಾಗೂ ಮತ್ತೆ ತಪ್ಪಾಗದಂತೆ ನೋಡಿಕೊಳ್ಳಿ.
ಕನ್ಯಾ ರಾಶಿಯವರಿಗೆ ಸಂಗಾತಿಯೊಂದಿಗೆ ಸಣ್ಣ ಪುಟ್ಟ ಮನಸ್ತಾಪ ಬರುತ್ತದೆ, ಕುಟುಂಬದವರೊಂದಿಗೆ ಮನಸ್ತಾಪಗಳು ಇರುತ್ತದೆ. ಕನ್ಯಾ ರಾಶಿಯವರಿಗೆ ತಂದೆಯ ಸಹಕಾರ ಸಿಗುತ್ತದೆ ಸಮಸ್ಯೆ ಬಂದಾಗ ಸಲಹೆ ಕೊಡುತ್ತಾರೆ. ದಶಮದಲ್ಲಿರುವ ಶುಕ್ರನಿಂದ ಕನ್ಯಾ ರಾಶಿಯವರಿಗೆ ಲಾಭ ನಷ್ಟ ಏನೇ ಇದ್ದರೂ ಕೆಲಸ ಆಗುತ್ತದೆ ಕೆಲವು ಸಲ ಕನ್ಯಾ ರಾಶಿಯವರಿಗೆ ಏನೇ ಆದರೂ ತಲೆ ಕೆಡಿಸಿಕೊಳ್ಳದೆ ಕೆಲಸದ ಬಗ್ಗೆ ಗಮನ ಕೊಡಬೇಕೆಂದು ಅನಿಸುತ್ತದೆ, ಕೆಲಸ ಮಾಡಲು ಶುಕ್ರ ಪ್ರೇರೇಪಿಸುತ್ತಾನೆ. ಕನ್ಯಾ ರಾಶಿಯವರು ಪ್ರತಿ ಗುರುವಾರ ಕಡ್ಲೆಬೇಳೆಯನ್ನು ಯಾವುದಾದರೂ ದೇವಸ್ಥಾನಕ್ಕೆ ಕೊಡಬೇಕು ಹಾಗೆ ಪ್ರತಿ ಮಂಗಳವಾರ ತೊಗರಿಬೇಳೆಯನ್ನು ಯಾವುದಾದರೂ ದೇವಸ್ಥಾನಕ್ಕೆ ಕೊಡಬೇಕು. ಗುರು ಮಂತ್ರ ಹಾಗೂ ಸುಬ್ರಹ್ಮಣ್ಯ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಬೇಕು, ದುರ್ಗಾ ಕವಚ ಮಂತ್ರವನ್ನು ಪ್ರತಿದಿನ ಪಠಿಸಬೇಕು.