Viral Video: ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ (Gym) ಜಿಮ್ ಗೆ ಹೋಗಿ (Workout) ವರ್ಕೌಟ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ಳಬೇಕು ಎನ್ನುವ ಜ್ಞಾನ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಸೋಶಿಯಲ್ ಮೀಡಿಯಾಗಳಲ್ಲಿ (Social Media) ಕೂಡ ಇಂತಹ ವಿಡಿಯೋಗಳನ್ನು ನೀವು ಹೆಚ್ಚಾಗಿ ನೋಡಬಹುದಾಗಿದೆ. ಯುವಕರು ಹಾಗೂ ಯುವತಿಯರು ಜಿಮ್ ನಲ್ಲಿ ದೈಹಿಕ ಕಸರತ್ತು ಮಾಡಿರುವಂತಹ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಪ್ಲೋಡ್ ಮಾಡುವ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.
ಕೆಲವೊಂದು ವಿಡಿಯೋಗಳು ಯಾವ ರೀತಿಯಲ್ಲಿ ವೈರಲ್ ಆಗುತ್ತದೆ ಎಂದರೆ ಪ್ರತಿಯೊಬ್ಬರೂ ಕೂಡ ಆ ವಿಡಿಯೋದಲ್ಲಿರುವ ವ್ಯಕ್ತಿಗಳ ಕುರಿತಂತೆ ತಿಳಿಯಲು ಇನ್ನಷ್ಟು ಕಾತರರಾಗಿರುತ್ತಾರೆ. ಅಂತ ಹುದ್ದೆ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆ ವಿಡಿಯೋ ವೈರಲ್ ಆಗಿರುವುದಕ್ಕೆ ವಿಶೇಷ ಕಾರಣವೂ ಕೂಡ ಬಂದಿದೆ. ಹಾಗಿದ್ದರೆ ಅದೇನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪುರುಷರಷ್ಟೇ ಮಹಿಳೆಯರು ಕೂಡ ಇಂದಿನ ದಿನಗಳಲ್ಲಿ ದೈಹಿಕ ದಾರ್ಢ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ. ಅವರಲ್ಲಿ ಒಬ್ಬರಾಗಿರುವ ರೀನಾ ಸಿಂಗ್ ಅವರ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಮಿತ್ರರೇ ರೀನಾ ಸಿಂಗ್ ಅವರು ಜಿಮ್ ಟ್ರೈನರ್ ಕೂಡ ಆಗಿದ್ದು ಅವರು ಕಾಣಿಸಿಕೊಂಡಿರುವ ಒಂದು ವಿಭಿನ್ನ ಹಾಗೂ ವಿಚಿತ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನವನ್ನು ಸೆಳೆದಿದೆ.
ಸಾಮಾನ್ಯವಾಗಿ ಎಲ್ಲರೂ ಜಿಮ್ ವರ್ಕ್ ಔಟ್ ಮಾಡಬೇಕಾದರೆ ಅದಕ್ಕೆ ತಕ್ಕನಾಗಿರುವ ಸ್ಪೋರ್ಟ್ಸ್ ಬಟ್ಟೆಗಳನ್ನು ಹಾಕಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ ಆದರೆ ಇಲ್ಲಿ ಭಾರತದ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆಯನ್ನು ಉಟ್ಟುಕೊಂಡು ವರ್ಕೌಟ್ ಮಾಡಲಾಗಿದೆ.
ಹೌದು ಮಿತ್ರರೇ ರೀನಾ ಸಿಂಗ್ ಅವರು ಸೀರೆಯನ್ನು ಉಟ್ಟಿಕೊಂಡು ವರ್ಕೌಟ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಅತ್ಯಂತ ಭಾರವಾದ ಟ್ರ್ಯಾಕ್ಟರ್ ಟೈಯರ್ ಅನ್ನೋ ರೀನಾ ಸಿಂಗ್ ಅವರು ಎತ್ತುಕೊಂಡು ದೈಹಿಕ ವ್ಯಾಯಾಮ ಮಾಡುತ್ತಿರುವುದು ಎಲ್ಲರ ಗಮನವನ್ನು ಸೆಳೆದಿದ್ದು ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಪಡೆದಿದೆ. ಈ ರೀತಿ ದೇಸಿಯಾಗಿ ಕೂಡ ವರ್ಕೌಟ್ ಮಾಡಬಹುದು ಎಂಬುದನ್ನು ರೀನಾ ಸಿಂಗ್ ತೋರಿಸಿಕೊಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.