ವೀಳ್ಯದೆಲೆ ನಮ್ಮ ಭಾರತೀಯ ಪರಂಪರೆಯಲ್ಲಿ ತಾಂಬೂಲವಾಗಿ ಹೆಚ್ಚೆಚ್ಚು ಬಳಸಲ್ಪಡುತ್ತದೆ. ಊಟದ ನಂತರ ರಸಭರಿತವಾದ ತಾಂಬೂಲವನ್ನು ಜಗಿದು ಬಿಟ್ಟರೆ ಅದುವೇ ಪರಮಾವಧಿ ಕೆಲವರಿಗೆ. ಪಾಚಿ ಹಸುರಿನ, ತೆಳುವಿನ, ತಣ್ಣಗಿನ,ರಸಭರಿತವಾದ ಒಂದು ಎಲೆ. ಅಡಿಕೆ ಮತ್ತು ಸುಣ್ಣದ ಸಾಂಗತ್ಯದಿಂದ ತಾಂಬೂಲವೆಂದು ಕರೆಯಲ್ಪಡುತ್ತದೆ. ಆಸ್ಟೆಯೋಪೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗಕ್ಕೆ ವೀಳ್ಯದೆಲೆ ಮದ್ದು. ವೀಳ್ಯದ ರಸ ಸುಣ್ಣದಲ್ಲಿರುವ ಕ್ಯಾಲ್ಶಿಯಮ್ ಅಂಶಕ್ಕೆ ಬೆರೆತು ದೇಹದಲ್ಲಿ ಬಹುಬೇಗ ಹರಡಲ್ಪಡುವುದೇ ಇದಕ್ಕೆ ಕಾರಣ.
ಚಿಗುರು ವೀಳ್ಯದೆಲೆ, ವಾತಹರ, ಉದರ ವಾಯುಹರ ಮತ್ತು ಉತ್ತೇಜನಕಾರಿ. ಇದು ಕಾಮೋತ್ತೇಜಕವಾಗಿದ್ದು ಸೋಂಕನ್ನು ತಡೆಗಟ್ಟುವ ಗುಣವನ್ನೂ ಹೊಂದಿದೆ. ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆಯನ್ನು ಎದೆಯ ಮೇಲಿಡುವುದು ಪ್ರಯೋಜನಕಾರಿ.
ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲಾ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇಬೇಕು. ನಮ್ಮ ದಿನ ನಿತ್ಯದ ದೇವರ ಸಮರ್ಪಣೆಗೂ ಹಣ್ಣು ಕಾಯಿಗಳ ಜತೆಗೆ ಎಲೆ ಅಡಿಕೆ ಇರಲೇಬೇಕು,`ಫಲತಾಂಬೂಲ’ ಕೊಡುವಾಗ ತೆಂಗಿನ ಕಾಯಿಯ ಜತೆಗೆ ವೀಳ್ಯದೆಲೆ ಮತ್ತು ಅಡಿಕೆ ಇಡಲೇ ಬೇಕು. ವೀಳ್ಯದೆಲೆಯ ಮತ್ತಷ್ಟು ಪ್ರಯೋಜನಕಾರಿ ಬಗ್ಗೆ ಆಯುರ್ವೇದ ತಜ್ಞರಾದ ಹಾಗೂ ಯೋಗ ಗುರು ವೈದ್ಯ ಶ್ರೀ ಚನ್ನ ಬಸವಣ್ಣ ನವರ ತಿಳಿಸಿಕೊಟ್ಟಿದ್ದಾರೆ. ಅದರ ಕುರಿತಾಗಿ ಈ ಲೇಖನವನ್ನು ಓದಿ ನೋಡಿ.
ಅನ್ನನಾಳದಲ್ಲಿ ಉಂಟಾಗುವ ಇನ್ಫೆಕ್ಷನ್ ಗೆ ಮದ್ದು ಈ ತಾಂಬೂಲ ವೀಳ್ಯದೆಲೆಯಿಂದ ಕಫಾವಿಕಾರ ,ಪಿತ್ತವಿಕಾರ, ವಾತವಿಕಾರಗಳನ್ನು ಕೂಡ ನಿರ್ಮೂಲನೆ ಮಾಡಬಹುದು. ತ್ರಿದೋಷಿಶಾಮಕ ಎಂದೇ ಹೇಳಬಹುದು.ಮಕ್ಕಳಿಗೆ ಕಫ ಕಟ್ಟಿಕೊಂಡಾಗ ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ,ಸ್ವಲ್ಪ ಜೇನತುಪ್ಪ ಸೇರಿಸಿ ಅದಕ್ಕೆ ಸ್ವಲ್ಪ ದೊಡ್ಡ ಪತ್ರೆಯನ್ನು ಸೇರಿಸಿ ತಿನ್ನಿಸಿದರೆ ಕಫ ಕರಗುತ್ತದೆ. ಹಿಂದೆ ಮಕ್ಕಳಿಗೆ ಸ್ನಾನ ಮಾಡಿಸಿದ ಕೂಡಲೇ ಒಂದು ಕಪ್ಪು ವೀಳ್ಯೆದೆಲೆಯನ್ನು ಮಕ್ಕಳ ತಲೆಯ ನೆತ್ತಿಗೆ ಕಟ್ಟುತ್ತಿದ್ದರು ಇದರಿಂದ ಕಫ ,ಶೀತ ಕರಗಿಸುತ್ತದೆ ಎಂಬುದಾಗಿ ಹೇಳುತ್ತಾರೆ.
ವೀಳ್ಯೆದೆಲೆಯನ್ನು ಸೇವಿಸುತ್ತಾ ಬಂದರೆ ದೇಹದಲ್ಲಿ ಉಂಟಾಗಿರುವ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ದೇಹದಲ್ಲಿ ಏನಾದರೂ ರಕ್ತ ಸಂಚಲನಕ್ಕೆ ತೊಂದರೆ ಉಂಟಾದರೆ ವೀಳ್ಯದೆಲೆಯ ಸೇವನೆಯಿಂದ ಆ ತೊಂದರೆಯನ್ನು ಸರಿಪಡಿಸಬಹುದು. ರಕ್ತದ ಶುದ್ದಿಕರ ಕೂಡವಾಗುತ್ತದೆ.
ಇದನ್ನು ಆಹಾರದ ನಂತರ ತಾಂಬೂಲದ ರೀತಿಯಲ್ಲಿ ಸೇವಿಸಬಹುದು ಅಥವಾ ವೀಳ್ಯದೆಲೆಯನ್ನು ಜೆಜ್ಜಿ ರಸ ತೆಗೆದು ಖಾಲಿ ಹೊಟ್ಟೆಯಲ್ಲಿ ಬೇಕಾದರೂ ಸೇವಿಸಬಹುದು. ವೀಳ್ಯೆದೇಲೆಯಿಂದ ನಮ್ಮ ಚರ್ಮದ ಕಾಂತಿ ವೃದ್ದಿಯಾಗುತ್ತದೆ. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.ಜೊತೆಗೆ ಶ್ವಾಸಕೋಶಕ್ಕೆ ತಗುಲುವ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ನರಮಂಡಲ ಕ್ರಿಯಾಶೀಲವಾಗಿ ಇರುತ್ತದೆ. ಲೈಗಿಂಕ ಸಮಸ್ಯೆಗಳು ದೂರಾಗುತ್ತದೆ. ಹೀಗೆ ಹಲವಾರು ಪ್ರಯೋಜನಕಾರಿಯಾದ, ಲಾಭಕಾರಿಯಾದ ಈ ವೀಳ್ಯೆದೇಲೆಯನ್ನು ಆಹಾರದ ನಂತರ ಸೇವಿಸುದು ಉತ್ತಮ ವಿ. ಸೊ. ವೀಳ್ಯೆದೇಲೆಯ ಜೊತೆಗೆ ತಂಬಾಕು ಗುಟ್ಕಾ ಈ ತರಹ ಆರೋಗ್ಯಕ್ಕೆ ಹಾನಿಕಾರಕವಾದದ್ದನ್ನು ಸೇವಿಸದಿರಿ.