ಕಲರ್ಸ್ ಕನ್ನಡದಲ್ಲಿ ಮೊದಲು ಅಗ್ನಿಸಾಕ್ಷಿ ಧಾರಾವಾಹಿ ಬರುತ್ತಿತ್ತು. ಅದರಲ್ಲಿ ಸಿದ್ಧಾರ್ಥ್ ಎಂಬ ಪಾತ್ರವನ್ನು ವಿಜಯಸೂರ್ಯ ಅವರು ಮಾಡಿದ್ದರು. ಅಂದಿನಿಂದ ವಿಜಯ್ ಸೂರ್ಯ ಅವರು ತುಂಬಾ ಪ್ರಖ್ಯಾತಿ ಪಡೆದಿದ್ದಾರೆ.  ನೋಡಿದ ಪ್ರತಿಯೊಂದು ಹುಡುಗಿಯರು ಅವರ ಅಂದಕ್ಕೆ ಆಕರ್ಷಿತರಾಗುವಂತೆ ವಿಜಯ್ ಸೂರ್ಯ ಅವರು ಇದ್ದಾರೆ. ಆದ್ದರಿಂದ ನಾವು ಇಲ್ಲಿ ವಿಜಯ್ ಸೂರ್ಯ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ವಿಜಯ್ ಸೂರ್ಯ ಅವರು ಅಗ್ನಿಸಾಕ್ಷಿ ಧಾರಾವಾಹಿಯಿಂದ ಬಹಳ ಪ್ರಖ್ಯಾತರಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಎಂಬ ಪಾತ್ರದಲ್ಲಿ ವೈಷ್ಣವಿ ಅವರು ನಟಿಸಿದ್ದರು. ಇವರ ಜೋಡಿ ಎಂದರೆ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಇವರ ದೃಶ್ಯಗಳು ಬಂತು ಎಂದರೆ ಯಾರೂ ಸಹ ಆ ದೃಶ್ಯವನ್ನು ಮಿಸ್ ಮಾಡದೇ ನೋಡುತ್ತಿದ್ದರು. ಆಗ ವಿಜಯ್ ಸೂರ್ಯ ಅವರಿಗೆ ವಿವಾಹವಾಗಿರಲಿಲ್ಲ. ಹಾಗೆಯೇ ಇವರು ಸಿನಿಮಾಗಳನ್ನು ಸಹ ಮಾಡಿದ್ದಾರೆ. ಮೊದಲು ಪ್ರೇಮಲೋಕ ಎಂಬ ಸಿನಿಮಾವನ್ನು ಮಾಡಿದ್ದಾರೆ. ನಂತರದಲ್ಲಿ ಇಷ್ಟಕಾಮ್ಯ ಎಂಬ ಸಿನಿಮಾವನ್ನು ಮಾಡಿದ್ದಾರೆ.

ಇದರಲ್ಲಿ ಮಯೂರಿ ಎಂಬ ನಟಿಯ ಜೊತೆ ನಟಿಸಿದ್ದಾರೆ. ಈಗ ವಿಜಯ್ ಸೂರ್ಯ ಅವರಿಗೆ ವಿವಾಹವಾಗಿದೆ. ವಿಜಯ್ ಸೂರ್ಯ ಅವರಿಗೆ ಎರಡೂ ಕೆನ್ನೆಯಲ್ಲಿ ಗುಳ್ಳೆಗಳು ಬೀಳುತ್ತವೆ. ಆದ್ದರಿಂದ ಅವರಿಗೆ ಗುಳಿ ಕೆನ್ನೆ ಇರುವ ಹುಡುಗಿಯನ್ನೇ ವಿವಾಹವಾಗಬೇಕು ಎಂದು ಆಸೆಪಟ್ಟಿದ್ದರು. ಹಾಗೆಯೇ ಗುಳಿಕೆನ್ನೆ ಇರುವ ಹುಡುಗಿಯೇ ಅವರಿಗೆ ಸಿಕ್ಕಿದ್ದಾಳೆ. ಈಗ ಅವರಿಬ್ಬರಿಗೆ ಒಂದು ಗಂಡು ಮಗು ಆಗಿದೆ. ಆ ಗಂಡು ಮಗು ಬಹಳ ಮುದ್ದಾಗಿದೆ. ವಿಶೇಷವೆಂದರೆ ಈ ಮಗುವಿಗೂ ಸಹ ಕೆನ್ನೆಯಲ್ಲಿ ಗುಳ್ಳೆಗಳು ಬೀಳುತ್ತವೆ.

ಇವರು ತಮ್ಮ ಮಗನ ಜೊತೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಫೋಟೋಗಳಲ್ಲಿ ಮೂವರಿಗೂ ಇರುವ ಗುಳಿಕೆನ್ನೆ ಬಹಳ ಸುಂದರವಾಗಿ ಕಾಣುತ್ತದೆ. ಈಗ ಜೊತೆ ಜೊತೆಯಲಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೊತೆ ಜೊತೆಯಲ್ಲಿ ಧಾರಾವಾಹಿ ಆರ್ಯವರ್ಧನ್ ಅವರ ನಟನೆಯಿಂದ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಇದರಲ್ಲಿ ಆರ್ಯವರ್ಧನ್ ಮತ್ತು ವಿಜಯ್ ಸೂರ್ಯ ಅವರು ಒಟ್ಟಿಗೆ ನಟಿಸಿ ಧಾರಾವಾಹಿಯ ಅತಿ ಹೆಚ್ಚಿನ ವೀಕ್ಷಣೆಗೆ ಕಾರಣವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!