ವಾಹನ ಸವಾರರೆ ನಿಮ್ಮ ಬಳಿ ಇರಲಿ ಈ ದಾಖಲೆ ಇಲ್ಲದಿದ್ದರೆ ಬೀಳುತ್ತೆ ಬಾರಿ ಮೊತ್ತದ ದಂಡ

0 2

ರಾಜ್ಯ ಸಾರಿಗೆ ಇಲಾಖೆಯ ಪ್ರಕಾರ, ಚಾಲಕನು ಪಿಯುಸಿ ಪ್ರಮಾಣಪತ್ರವನ್ನು  ಹೊಂದಿಲ್ಲದಿದ್ದರೆ, ವಾಹನ ಮಾಲೀಕರು ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ. ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ನಿಯಂತ್ರಿಸಲು ಹೆಚ್ಚಿನ ಪ್ರಮಾಣದಲ್ಲಿ ದಂಡ ಹಾಕುವುದೇ ಪರಿಹಾರವೆಂದು ಸರ್ಕಾರ ಭಾವಿಸಿದೆ.

ಆದರೆ ಸಾಕಷ್ಟು ಪ್ರಮಾಣದ ದಂಡ ವಸೂಲಿ ಸಮಾಜದಲ್ಲಿ ಭ್ರಷ್ಟಚಾರಕ್ಕೆ ಅನುವು ಮಾಡಿಕೊಡುತ್ತದೆ. ಆದರೆ ಈಗ ಇದೇ ರೀತಿ ಇನ್ನೊಂದು ಕಾನೂನನ್ನು ಜಾರಿಗೆ ತಂದಿದ್ದು ಇದರ ಪ್ರಕಾರ ವಾಹನ ಚಲಾಯಿಸುವಾಗ ಈ ದಾಖಲೆಗಳು ಸವಾರರ ಬಳಿ ಇಲ್ಲವಾದರೆ 10 ಸಾವಿರ ರೂಪಾಯಿ ದಂಡ ಬೀಳಲಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಾಜ್ಯ ಸಾರಿಗೆ ಇಲಾಖೆಯ ಪ್ರಕಾರ, ಚಾಲಕನು ಪಿಯುಸಿ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ, ವಾಹನ ಮಾಲೀಕರು ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂಪಾಯಿಯವರೆಗೆ ದಂಡ ಅಥವಾ ಈ ಎರಡನ್ನೂ ಎದುರಿಸಬೇಕಾಗುತ್ತದೆ.  ಮಾಲಿನ್ಯವನ್ನು ನಿಯಂತ್ರಿಸುವ ಮತ್ತು ದೆಹಲಿಯ ವಾಯು ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನದಲ್ಲಿ, ದೆಹಲಿಯಲ್ಲಿರುವ ಎಲ್ಲಾ ಮೋಟಾರು ವಾಹನ ಮಾಲೀಕರು ತಮ್ಮ ವಾಹನಗಳನ್ನು ನಿಯಂತ್ರಣದಲ್ಲಿಡುವಂತೆ, ಸರ್ಕಾರವು ಹೊರಡಿಸಿದ ನೋಟಿಸ್‌ನಲ್ಲಿ,  ಸಾರಿಗೆ ಇಲಾಖೆ ಹೇಳಿದೆ.

ಚಳಿಗಾಲದಲ್ಲಿ ಮಾಲಿನ್ಯದ ಮಟ್ಟವನ್ನು ನಿರ್ವಹಿಸಲು ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಚಾಲನೆ ಮಾಡುವಾಗ PUC ಅಂದರೆ ವ್ಯಾಲಿಡ್ ಪೊಲ್ಯುಶನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ವಾಹನ ಮಾಲೀಕರಿಗೆ ದೆಹಲಿ ಸಾರಿಗೆ ಇಲಾಖೆಯು ಮನವಿ ಮಾಡಿದೆ. ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ, ಶಿಕ್ಷೆಗೆ ಪಾತ್ರರಾಗಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ವಾಹನ ಸವಾರರೂ ಸಹ ಪೊಲ್ಯುಶನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ನಿಯಮಗಳನ್ನು ಉಲ್ಲಂಘಿಸಿದರೆ, ಪರವಾನಗಿ ರದ್ದಾಗಬಹುದು.

ಪಿಯುಸಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಹೇಗೆ? ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಪಿಯುಸಿ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ, ಅದನ್ನು ತಕ್ಷಣವೇ ಪಡೆಯಬೇಕಾಗುತ್ತದೆ. ವಾಹನಗಳನ್ನು ಪರೀಕ್ಷಿಸಲು, ಸಾರಿಗೆ ಇಲಾಖೆಯಿಂದ ಗುರುತಿಸಲ್ಪಟ್ಟಿರುವ 900 ಕ್ಕೂ ಹೆಚ್ಚು ಮಾಲಿನ್ಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಬಹುದು. ಇವುಗಳನ್ನು ಪೆಟ್ರೋಲ್ ಪಂಪ್‌ಗಳು ಮತ್ತು ವರ್ಕ್ ಶಾಪ್ ಗಳಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ವಾಹನ ಚಾಲಕರು ಪಿಯುಸಿ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.

ಪಿಯುಸಿ ಪ್ರಮಾಣಪತ್ರ ಶುಲ್ಕ ಒಂದೊಂದು ವಾಹನಕ್ಕೂ ಒಂದೊಂದು ರೀತಿಯಾಗಿ ಇದ್ದು ಶುಲ್ಕಗಳು ಈ ರೀತಿಯಾಗಿ ಇರುತ್ತವೆ. ಪೆಟ್ರೋಲ್ ಮತ್ತು CNG ಚಲಿಸುವ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕ 60 ಮತ್ತು ರೂಪಾಯಿ ನಾಲ್ಕು ಚಕ್ರದ ವಾಹನಗಳಿಗೆ 80 ರೂಪಯಿ ವಿಧಿಸಲಾಗುತ್ತದೆ. ಡೀಸೆಲ್ ವಾಹನಗಳಿಗೆ ಮಾಲಿನ್ಯ ಪರೀಕ್ಷಾ ಪ್ರಮಾಣಪತ್ರದ ಶುಲ್ಕ 100 ರೂ. ಆಗಿರುತ್ತದೆ.

ಇನ್ನೂ ಸರ್ಕಾರ ಒಂದು ಸೂಚನೆಯನ್ನು ಹೊರಡಿಸಿದ್ದು ಈ ಸೂಚನೆಯ ಪ್ರಕಾರ, ಎಲ್ಲಾ ನೋಂದಾಯಿತ ವಾಹನ ಮಾಲೀಕರು ಯಾವುದೇ ರೀತಿಯ ದಂಡ ಅಥವಾ ಜೈಲುವಾಸ ಅಥವಾ ಚಾಲನಾ ಪರವಾನಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಇವುಗಳನ್ನು ರದ್ದಾಗುವುದನ್ನು ತಪ್ಪಿಸಲು ಸಾರಿಗೆ ಇಲಾಖೆಯಿಂದ ಗುರುತಿಸಲ್ಪಟ್ಟ ಅಧಿಕೃತ ಮಾಲಿನ್ಯ ಪರೀಕ್ಷಾ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. 

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.