Venus transit in Libra: ನವೆಂಬರ್ 30ನೇ ತಾರೀಕಿನಂದು ಶುಕ್ರನು ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ ಶುಕ್ರನ ಈ ಬದಲಾವಣೆಯು ಕೆಲವೊಂದು ರಾಶಿಗಳ ಮೇಲೆ ಶುಭ ಪರಿಣಾಮವನ್ನ ಉಂಟು ಮಾಡುತ್ತದೆ ಮತ್ತು ಇನ್ನು ಕೆಲವು ರಾಶಿಗಳು ಅಶುಭ ಫಲಿತಾಂಶಗಳನ್ನು ಪಡೆಯಲಿದೆ ತುಲಾ ರಾಶಿಯಲ್ಲಿನ ಶುಕ್ರನ ಪ್ರವೇಶವು ಮುಂಬರುವ ದಿನಗಳಲ್ಲಿ 12 ರಾಶಿಗಳ ಮೇಲೆ ಹೇಗೆ ಪರಿಣಾಮವನ್ನು ಬೀರಲಿವೆ ಎಂಬುದನ್ನು ಈ ಕೆಳಗೆ ನಾವು ತಿಳಿದುಕೊಳ್ಳೋಣ.
ನವೆಂಬರ್ 30ನೇ ತಾರೀಕು ಶುಕ್ರನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಮಾಡಲಿರುವ ಶುಕ್ರನು ಈ ಮೂಲಕ ಕೆಲವು ರಾಶಿಗಳ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮವನ್ನು ಬಿರಿದ್ದಾನೆ. ಮೊದಲನೆಯದಾಗಿ ಮೇಷ ರಾಶಿಯವರಿಗೆ ಶುಕ್ರನ ಈ ಸಂಚಾರವು ಯಾವ ರೀತಿ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ನೋಡೋಣ.
ಮೇಷ ರಾಶಿಯವರಿಗೆ ಶುಕ್ರನ ಸಂಚಾರದಿಂದ ಮನಸ್ಸು ಶಾಂತವಾಗಿ ಇರುತ್ತದೆ ನಿಮ್ಮ ಆತ್ಮವಿಶ್ವಾಸ ಈ ಸಂದರ್ಭದಲ್ಲಿ ಹೆಚ್ಚಾಗುತ್ತದೆ ಹಾಗೆಯೇ ನಿಮ್ಮ ಉದ್ಯೋಗದ ವಿಚಾರದಲ್ಲಿ ನೀವು ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ನಿಮ್ಮ ದೃಢವಾದ ನಿರ್ಧಾರ ಹಾಗೂ ಆಡಳಿತಾತ್ಮಕ ಯೋಚನೆ ನಿಮ್ಮನ್ನು ಮುನ್ನಡೆಸಲು ಸಹಾಯಕವಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಸಹಚರರಿಂದ ನೀವು ಬೆಂಬಲವನ್ನು ಸಹ ಪಡೆಯುತ್ತೀರಿ ಆದರೆ ಈ ಸಮಯದಲ್ಲಿ ಹೆಚ್ಚಿನ ಓಡಾಟ ಉಂಟಾಗುವ ಸಾಧ್ಯತೆ ನಿಮ್ಮಲ್ಲಿ ಕಂಡುಬರುತ್ತದೆ.
ಇನ್ನು ವೃಷಭ ರಾಶಿಯನ್ನು ನೋಡೋದಾದರೆ ಈ ಸಮಯದಲ್ಲಿ ವೃಷಭ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಆದರೆ ನಿಮ್ಮ ಮನಸ್ಸು ಸ್ವಲ್ಪ ಗೊಂದಲಕ್ಕೆ ಒಳಗಾಗಬಹುದು ಹಾಗಾಗಿ ನಿಮ್ಮ ಮಾನಸಿಕ ನೆಮ್ಮದಿಯು ಸಹ ಕೆಡಬಹುದು ಆದ್ದರಿಂದ ಸ್ವಲ್ಪ ತಾಳ್ಮೆಯಿಂದ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ತೊಡಗುವುದು ಉತ್ತಮ ಹಾಗೆ ವಿಶೇಷವಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಮಿಥುನ ರಾಶಿ. ಮಿಥುನ ರಾಶಿಗೆ ಸೇರಿದ ಜನರ ಮನಸ್ಸು ಈ ಸಮಯದಲ್ಲಿ ಸಂತೋಷದಿಂದ ಕೂಡಿರುತ್ತದೆ. ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುವುದರ ಜೊತೆಗೆ ನಿಮ್ಮ ಕೀರ್ತಿಯು ಸಹ ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತದೆ. ನಿಮ್ಮ ಕುಟುಂಬದ ಜೀವನವು ಸಹ ಆನಂದಮಯವಾಗಿರುತ್ತದೆ ನೀವು ನಿಮ್ಮ ಅಧಿಕಾರಿಗಳಿಂದ ಕೆಲಸದಲ್ಲಿ ಬೆಂಬಲವನ್ನು ಸಹ ಪಡೆಯುತ್ತೀರಿ ಜೊತೆಗೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಹೊಂದಲು ಸಹ ಸಾಧ್ಯವಾಗುತ್ತದೆ.
Venus transit in Libra 2023
ಕಟಕ ರಾಶಿ. ಕಟಕ ಕಾಶಿ ಅವರಿಗೆ ಈ ಸಂದರ್ಭದಲ್ಲಿ ಆತ್ಮವಿಶ್ವಾಸದ ಕೊರತೆ ಕಂಡು ಬರಲಿದ್ದು ಮಾನಸಿಕ ಒತ್ತಡಕ್ಕೆ ಒಳಗಾಗುತ್ತೀರಿ ಹಾಗಾಗಿ ನೀವು ಬಹಳ ಶಾಂತತೆಯಿಂದ ಇರಬೇಕು ನೀವು ಈ ಸಂದರ್ಭದಲ್ಲಿ ಅನಗತ್ಯ ಕೋಪವನ್ನ ತಪ್ಪಿಸಬೇಕು ನಿಮ್ಮ ಒತ್ತಡದ ಕೋಪವನ್ನು ಇನ್ನೊಬ್ಬರ ಮೇಲೆ ತೋರಿಸಿಕೊಳ್ಳುವುದು ಒಳ್ಳೆಯದಲ್ಲ ಹಾಗಾಗಿ ಆದಷ್ಟು ಶಾಂತತೆಯಿಂದ ಇರಲು ಪ್ರಯತ್ನ ಪಡಿ ಮತ್ತು ನಿಮ್ಮ ಸಂಭಾಷಣೆಯಲ್ಲಿ ಹಿಡಿತವನ್ನು ಇಟ್ಟುಕೊಳ್ಳಿ. ಇನ್ನು ಕಟಕ ರಾಶಿಯ ಜನರು ಶೈಕ್ಷಣಿಕ ಸಾಧನೆಯಲ್ಲಿ ಯಶಸ್ಸನ್ನ ಪಡೆಯಲು ಸಹ ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಹಠಾತ್ ಹಣವನ್ನು ಪಡೆಯುವಂತಹ ಯೋಗವನ್ನು ಸಹ ಕಟಕ ರಾಶಿಯವರು ಹೊಂದಿರುತ್ತಾರೆ.
ಸಿಂಹ ರಾಶಿ. ಶುಕ್ರನ ಸಂಚಾರದಿಂದ ಸಿಂಹ ರಾಶಿಯವರ ಮನಸ್ಸು ಆತ್ಮವಿಶ್ವಾಸದಿಂದ ಕೂಡಿರುತ್ತದೆ ಆದರೂ ಸಹ ಈ ಸಂದರ್ಭದಲ್ಲಿ ನಿಮ್ಮ ಮನಸ್ಸು ಅಸಮಾಧಾನಕ್ಕೆ ಒಳಗಾಗುತ್ತದೆ ಆದ್ದರಿಂದ ನಿಮ್ಮಲ್ಲಿ ಉಂಟಾಗುವ ಅತಿಯಾದ ಕೋಪ ಹಾಗೂ ಭವೋದ್ರಿಕವನ್ನ ನೀವು ತಪ್ಪಿಸಬೇಕು. ಸಮಾಜದಲ್ಲಿನ ಅನೇಕ ಜನರೊಂದಿಗೆ ನೀವು ಸಂಪರ್ಕವನ್ನು ಕಲ್ಪಿಸಿಕೊಳ್ಳುತ್ತೀರಿ ಹಾಗೂ ಸಿಂಹ ರಾಶಿಯವರಿಗೆ ಈ ಸಂದರ್ಭದಲ್ಲಿ ಪ್ರಯಾಣ ಮಾಡುವ ಸಾಧ್ಯತೆ ಕೂಡ ಕಂಡು ಬರಲಿದೆ.
ಇನ್ನು ಕನ್ಯಾ ರಾಶಿ. ಕನ್ಯಾ ರಾಶಿಯವರಿಗೆ ಶುಕ್ರನ ಈ ಸಂಚಾರದಿಂದ ಮನಸ್ಸಿನಲ್ಲಿ ನಿರಾಸೆ ಅಥವಾ ಅತೃಪ್ತಿ ಭಾವನೆ ಮೂಡುವಂತ ಸಾಧ್ಯತೆ ಇದೆ ಹಾಗಾಗಿ ಈ ಸಮಯದಲ್ಲಿ ನಿಮ್ಮ ಕೋಪದ ಮೇಲೆ ನೀವು ಹಿಡಿತವನ್ನು ಇಟ್ಟುಕೊಳ್ಳಬೇಕು ನಿಮ್ಮ ಆರೋಗ್ಯದಲ್ಲಿ ಸಹ ಏರುಪೇರು ಉಂಟಾಗುವ ಸಾಧ್ಯತೆಯಿದ್ದು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಜೀವನ ನಿರ್ವಹಣೆಯ ವಿಚಾರದಲ್ಲಿ ನಿಮಗೆ ಸ್ಪಷ್ಟತೆ ಇರುವುದಿಲ್ಲ ಏನೋ ಒಂದು ಗೊಂದಲದ ವಾತಾವರಣದಲ್ಲಿ ನೀವು ಸಿಲುಕಿಕೊಂಡಿರುತ್ತೀರಿ.
ಇನ್ನು ತುಲಾ ರಾಶಿ ತುಲಾ ರಾಶಿಯವರ ಅದೃಷ್ಟ ಶುಕ್ರನ ಈ ಸಂಚಾರದಿಂದ ತುಂಬಾ ಉತ್ತಮವಾಗಿ ಇರಲಿದ್ದು ನಿಮ್ಮ ರಾಶಿಯಲ್ಲಿಯೇ ಶುಕ್ರನ ಸಂಚಾರ ಆಗುವುದರಿಂದ ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಉತ್ತಮ ಬದಲಾವಣೆಯನ್ನು ಕಾಣುತ್ತೀರ ಜೊತೆಗೆ ಸ್ನೇಹಿತರಿಂದ ಎಲ್ಲಾ ಕೆಲಸಗಳಲ್ಲಿಯೂ ಬೆಂಬಲವನ್ನ ಪಡೆಯುತ್ತೀರಿ ಹಾಗೆಯೇ ನಿಮ್ಮಲ್ಲಿರುವ ಆಸ್ತಿ ಹೆಚ್ಚಿನ ಆದಾಯವನ್ನು ಸೃಷ್ಟಿ ಮಾಡುತ್ತದೆ.
ವೃಶ್ಚಿಕ ರಾಶಿ ಈ ರಾಶಿಯವರಿಗೆ ಶುಕ್ರನ ಬದಲಾವಣೆಯಿಂದಾಗಿ ಸಂಗೀತ ಸಾಹಿತ್ಯ ಹಾಗೂ ಇನ್ನಿತರ ಕಲಾ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ ವಿಶೇಷವಾಗಿ ನೀವು ಸ್ವಾವಲಂಬಿಗಳಾಗಿರುತ್ತೀರಿ ಮತ್ತು ನಿಮ್ಮ ಕುಟುಂಬದ ಜೀವನ ಉತ್ತಮವಾಗಿರುತ್ತದೆ ವೃಶ್ಚಿಕ ರಾಶಿಯ ಉದ್ಯೋಗದಲ್ಲಿರುವಂತಹ ಜನರು ಈ ಸಮಯದಲ್ಲಿ ಅಧಿಕಾರಿಗಳಿಂದ ಬೆಂಬಲವನ್ನ ಪಡೆಯಲು ಸಾಧ್ಯವಾಗುತ್ತದೆ.
ಧನು ರಾಶಿ. ಧನು ರಾಶಿಯವರ ಮನಸ್ಸು ಈ ಸಂದರ್ಭದಲ್ಲಿ ಸಂತೋಷದಿಂದ ಕೂಡಿರುತ್ತದೆ ಆದರೆ ಮನಸ್ಸಿನಲ್ಲಿ ಕೆಲವೊಂದು ಏರಿಳಿತಗಳು ಗೊಂದಲಗಳು ಸಹ ಕಂಡುಬರುತ್ತದೆ ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿಯನ್ನ ವಹಿಸಬೇಕಾಗುತ್ತದೆ ಏಕೆಂದರೆ ನಿಮ್ಮ ಕುಟುಂಬದವರ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಧನು ರಾಶಿಯವರು ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರು ಪ್ರಾಪಕವಾದ ಒಡನಾಟದಿಂದ ಹೆಚ್ಚಿನ ಲಾಭವನ್ನ ಪಡೆಯಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಉದ್ಯೋಗದಲ್ಲಿಯೂ ಸಹ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.
ಇನ್ನು ಮಕರ ರಾಶಿ. ಶುಕ್ರನ ಸಂಚಾರದಿಂದ ಮಕರ ರಾಶಿಯವರ ಆತ್ಮವಿಶ್ವಾಸವೇನು ಹೆಚ್ಚಾಗುತ್ತದೆ ಆದರೆ ಮನಸ್ಸು ದುರ್ಬಲವಾಗುತ್ತದೆ ನಿಮ್ಮ ತಂದೆ ತಾಯಿಯರ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿಯನ್ನು ಈ ಸಮಯದಲ್ಲಿ ನೀವು ವಹಿಸಬೇಕು ಈ ಅವಧಿಯಲ್ಲಿ ನಿಮ್ಮ ಜೀವನ ಸ್ವಲ್ಪ ಮಟ್ಟಿಗೆ ನೋವಿನಿಂದ ಕೂಡಿರುತ್ತದೆ ವ್ಯವಹಾರದ ವಿಚಾರದಲ್ಲಿ ನಿಮಗೆ ಉತ್ತಮವಾಗಿದ್ದರೂ ಸಹ ನಿಮ್ಮ ಕುಟುಂಬ ಹಾಗೂ ಜೀವನದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ನೋವನ್ನು ಕಾಣುತ್ತೀರಾ.
ಕುಂಭ ರಾಶಿ. ಕುಂಭ ರಾಶಿಯವರಿಗೆ ತುಲಾ ರಾಶಿಯಲ್ಲಿನ ಶುಕ್ರನ ಸಂಚಾರದಿಂದ ನವೆಂಬರ್ 30ನೇ ತಾರೀಖಿನ ನಂತರ ಕುಂಭ ರಾಶಿಯವರ ಮಾತಿನಲ್ಲಿ ಮಾಧುರ್ಯತೆ ಕಂಡು ಬರುತ್ತದೆ ಹಾಗೂ ನಿಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ ನೀವು ಸಹ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹಾಗೆಯೇ ಈ ಸಂದರ್ಭದಲ್ಲಿ ನಿಮ್ಮ ಪ್ರಯಾಣದ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ವ್ಯವಹಾರದಲ್ಲಿ ನೀವು ಹೆಚ್ಚಿನ ಗಮನವಹಿಸಿದರೆ ಉತ್ತಮವಾದ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ.
ಮೀನ ರಾಶಿ. ಮೀನ ರಾಶಿಯ ಜನರ ಮನಸ್ಸು ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತದೆ ಹಾಗೂ ಇಂತಹ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಕೂಡ ಗಳಿಸುತ್ತೀರಿ ಹಾಗೆಯೇ ಧಾರ್ಮಿಕ ಕಾರ್ಯಗಳಲ್ಲಿಯೂ ಸಹ ನಿಮ್ಮ ಆಸಕ್ತಿ ಹೆಚ್ಚಾಗಲಿದ್ದು ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ನೀವು ಭೇಟಿ ನೀಡುತ್ತಿರಿ ನಿಮ್ಮ ಉದ್ಯೋಗದಲ್ಲಿ ಪ್ರಗತಿಯನ್ನು ಕೂಡ ನೀವು ಕಾಣುವುದರ ಜೊತೆಗೆ ನಿಮ್ಮ ಆದಾಯವು ಕೂಡ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಮೇಲಾಧಿಕಾರಿಗಳಿಂದ ನಿಮಗೆ ಉತ್ತಮ ಬೆಂಬಲ ಈ ಸಮಯದಲ್ಲಿ ದೊರೆಯಲಿದ್ದು ನಿಮ್ಮ ಆದಾಯದ ಮೂಲವೂ ವೃದ್ಧಿಯಾಗುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.