December Horoscope For Kannada Prediction: ಡಿಸೆಂಬರ್ ತಿಂಗಳಲ್ಲಿ ಕೆಲವೊಂದು ರಾಶಿಗಳಿಗೆ ಇರುವ ದೋಷಗಳನ್ನು ಯಾವ ರೀತಿಯಲ್ಲಿ ಪರಿಹಾರ ಮಾಡಿಕೊಳ್ಳಬೇಕು ಹಾಗೂ ಯಾವ ರೀತಿಯ ದೋಷಗಳನ್ನು ಈ ರಾಶಿಗಳು ಹೊಂದಿರಲಿದೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ.

ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಸ್ವಲ್ಪ ನಿದ್ರೆ ಕಡಿಮೆಯಾಗುವಂತದ್ದು ಕಂಡು ಬರುತ್ತದೆ ಅನೇಕ ಆಲೋಚನೆಗಳು ನಿಮ್ಮ ನಿದ್ರೆಯನ್ನು ಹಾಳು ಮಾಡಬಹುದು ಇನ್ನು ಮೇಷ ರಾಶಿಯವರಿಗೆ ಸ್ವಲ್ಪ ಒಳ್ಳೆಯ ವಿಚಾರ ಏನೆಂದರೆ ನೀವು ಯಾತ್ರಾ ಕ್ಷೇತ್ರಗಳಿಗೆ ಭೇಟಿ ನೀಡುವಂತಹ ಅವಕಾಶಗಳನ್ನು ಪಡೆಯುತ್ತೀರಿ ಅದರಿಂದ ನೀವು ನಿಮ್ಮ ಆರೋಗ್ಯದ ಕಡೆ ಸಹ ಗಮನವನ್ನು ಹರಿಸಬೇಕು ಇನ್ನು ಮೇಷ ರಾಶಿಯವರಿಗೆ ಪರಿಹಾರ ಅಂದರೆ ನಾಲ್ಕು ಭಾನುವಾರಗಳ ಕಾಲ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸ್ವಲ್ಪ ಬೆಣ್ಣೆಯನ್ನ ದಾನ ಮಾಡಿ ಭಕ್ತಿಯಿಂದ ಬೇಡಿಕೊಂಡರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಇನ್ನು ವೃಷಭ ರಾಶಿಯವರಿಗೆ ಪ್ರಯಾಣದ ವಿಚಾರದಲ್ಲಿ ಉತ್ತಮ ಸಮಯ ಇದಾಗಿದೆ ಇನ್ನೂ ಒಂದುವರೆ ವರ್ಷಗಳ ಕಾಲ ನಿಮ್ಮ ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನೀವು ಪಡೆಯುತ್ತೀರಿ ಅದರಿಂದ ಕೈಲಾದಷ್ಟು ಒಳ್ಳೆಯ ಕಾರ್ಯಗಳನ್ನು ನೀವು ಮಾಡಬೇಕು. ಇನ್ನು ಕೆಲವೊಂದು ವೃಷಭ ರಾಶಿಯವರ ಜೀವನದಲ್ಲಿ ಆಕಸ್ಮಿಕ ಧನ ಲಾಭ ಉಂಟಾಗುವ ಸಾಧ್ಯತೆ ಕೂಡ ಇದೆ. ಹಾಗೆ ನಿಮ್ಮ ರಾಶಿಯವರ ಪರಿಹಾರ ನೋಡುವುದಾದರೆ ಶಿವನ ದೇವಸ್ಥಾನಕ್ಕೆ ಪ್ರತಿ ಸೋಮವಾರ ಹೋಗಿ ಒಣದ್ರಾಕ್ಷಿಯನ್ನು ನೀಡಿ ಅರ್ಚನೆ ಮಾಡಿಸಿ ಹಾಗೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಸಾಧ್ಯವಾದರೆ ಶಿವನ ದೇವಸ್ಥಾನಕ್ಕೆ ಅಥವಾ ಕಾಲಭೈರವನ ದೇವಸ್ಥಾನಕ್ಕೆ ಭೇಟಿಕೊಟ್ಟು ನಿಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಿ ಇದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

ಇನ್ನು ಮಿಥುನ ರಾಶಿಯವರಿಗೆ ಈ ಡಿಸೆಂಬರ್ ತಿಂಗಳು ಬಹಳ ಚೆನ್ನಾಗಿ ಇರಲಿದ್ದು ನಿಮ್ಮ ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿರುತ್ತದೆ ಹಾಗೆ ವಿದ್ಯಾರ್ಥಿಗಳಿಗೂ ಸಹ ಈ ಸಮಯ ತುಂಬಾ ಚೆನ್ನಾಗಿ ಇರಲಿದ್ದು ಮಾನಸಿಕ ನೆಮ್ಮದಿ ನಿಮ್ಮದಾಗಲಿದೆ ಇಂಥ ಸಂದರ್ಭದಲ್ಲಿ ನೀವು ಹೆಚ್ಚು ಹೆಚ್ಚು ದಾನ ಧರ್ಮಗಳನ್ನು ಮಾಡಬೇಕು.
ಕರ್ಕಾಟಕ ರಾಶಿ ಅವರಿಗೂ ಸಹ ಡಿಸೆಂಬರ್ ತಿಂಗಳು ತುಂಬಾ ಚೆನ್ನಾಗಿ ಕಂಡುಬರುತ್ತಿದ್ದು. ನಿಮ್ಮಲ್ಲಿರುವ ಅಷ್ಟಮ ಶನಿಯ ಬಗ್ಗೆ ನೀವು ಚಿಂತೆ ಮಾಡುವ ಅಗತ್ಯ ಇಲ್ಲ ಆತನಿಂದ ನಿಮಗೆ ಕೆಡುಕು ಉಂಟಾಗುವುದಿಲ್ಲ ಅಥವಾ ನಿಮ್ಮ ಕರ್ಮಕ್ಕೆ ತಕ್ಕ ಪ್ರತಿಫಲವನ್ನ ನಿಮಗೆ ನೀಡುತ್ತಾನೆ. ಅದರಿಂದ ವೃದ್ಧಾಶ್ರಮಗಳಿಗೆ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ದಾನ ಮಾಡಿ ಇದರಿಂದ ಒಳ್ಳೆಯ ಪ್ರತಿಫಲವನ್ನು ಕಾಣಬಹುದು.

ಸಿಂಹ ರಾಶಿ ಈ ಡಿಸೆಂಬರ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ನಿಮ್ಮ ಮದುವೆ ಕಾರ್ಯಗಳಲ್ಲಿ ಸ್ವಲ್ಪ ವಿರಳ ಕಂಡು ಬರಬಹುದು ಆದರೂ ಸಹ ಸಮಯ ಕಳೆದಂತೆ ಮದುವೆ ಕಾರ್ಯಗಳು ಚೆನ್ನಾಗಿ ನಡೆಯುತ್ತವೆ. ನಿಮ್ಮ ರಾಶಿ ಅವರಿಗೆ ಪರಿಹಾರ ಏನೆಂದರೆ ಶಿವನ ದೇವಸ್ಥಾನಕ್ಕೆ ಪ್ರತಿ ಸೋಮವಾರ ಭೇಟಿ ಕೊಟ್ಟು ಹಾಲನ್ನ ಅಭಿಷೇಕಕ್ಕೆ ಕೊಟ್ಟು ಪೂಜೆ ಮಾಡಿಸಿ ಇದರಿಂದ ನೀವು ಅಂದುಕೊಂಡ ಕಾರ್ಯಗಳು ನೆರವೇರುತ್ತದೆ.
ಇನ್ನು ಕನ್ಯಾ ರಾಶಿಯವರು ಈ ತಿಂಗಳಿನಲ್ಲಿ ನಿಮ್ಮ ಮಾತಿನ ಮೇಲೆ ನಿಗಾ ವಹಿಸಬೇಕು ನೀವು ಮಾತನಾಡುವಾಗ ತಾಳ್ಮೆಯಿಂದ ಯೋಚಿಸಿ ಮಾತನಾಡಬೇಕು ಏಕೆಂದರೆ ಇದರಿಂದ ನಿಮ್ಮ ಘನತೆಯನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಕನ್ಯಾ ರಾಶಿಯವರು ಶುಕ್ರವಾರದ ದಿನ ಮಹಾಲಕ್ಷ್ಮಿಯ ದೇವಸ್ಥಾನಕ್ಕೆ ಹೋಗಿ ಸುಗಂಧ ಭರಿತ ಊದು ಕಡ್ಡಿಯನ್ನು ಹಚ್ಚಬೇಕು ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.

ತುಲಾ ರಾಶಿಯವರಿಗೆ ಭೂಮಿಗೆ ಸಂಬಂಧಪಟ್ಟಂತಹ ವಿಚಾರದಲ್ಲಿ ನಿಮ್ಮ ಆಸೆಗಳು ಈಡೇರುವುದಿಲ್ಲ ಆದ್ದರಿಂದ ಸಾಧ್ಯವಾದಷ್ಟು ಮಂಗಳವಾರದ ದಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿಕೊಡಲು ಪ್ರಯತ್ನ ಮಾಡಿ ಹಾಗೆ ದೇವಸ್ಥಾನಕ್ಕೆ ಕೆಂಪು ಹೂವು ಹಾಗೂ ತೊಗರಿಬೇಳೆಯನ್ನು ನೀಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ವೃಶ್ಚಿಕ ರಾಶಿಯನ್ನು ನೋಡುವುದಾದರೆ ಡಿಸೆಂಬರ್ ತಿಂಗಳಿನಲ್ಲಿ ನಿಮ್ಮ ಆರೋಗ್ಯದ ವಿಚಾರದಲ್ಲಿ ಏರುಪೇರು ಕಂಡು ಬಂದು ಆಸ್ಪತ್ರೆಗೆ ಹಣದ ಖರ್ಚು ಉಂಟಾಗಬಹುದು ಅದರಿಂದ ನೀವು ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ ದಾಳಿಂಬೆ ಹಣ್ಣನ್ನು ಬಡವರಿಗೆ ಅಥವಾ ವಯಸ್ಕರಿಗೆ ದಾನ ಮಾಡಿ ಇದರಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ.

ಧನು ರಾಶಿ ಜನರಿಗೆ ಡಿಸಂಬರ್ ತಿಂಗಳಲ್ಲಿ ತಾಯಿಗೆ ಸಂಬಂಧಿಸಿದ ಕೆಲವೊಂದು ಖರ್ಚುಗಳು ಉಂಟಾಗಬಹುದು ಹಾಗೆಯೇ ನಿಮ್ಮ ಕಾರ್ಯ ಚಟುವಟಿಕೆಗಳ ಮೇಲು ಸಹ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು ಅದರಿಂದ ನೀವು ದುರ್ಗಾದೇವಿಯ ದೇವಸ್ಥಾನಕ್ಕೆ ಮಂಗಳವಾರ ಹೋಗಿ ಹಸಿರು ಬಳೆಗಳು ಅಥವಾ ಹಸಿರು ಬಣ್ಣದ ಸೀರೆಯನ್ನು ನೀಡಿ ಪೂಜಿ ಸಲ್ಲಿಸಿ ಇದರಿಂದ ಉತ್ತಮ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಮಕರ ರಾಶಿಯವರಿಗೆ ಈ ತಿಂಗಳಲ್ಲಿ ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತದೆ, ನೀವು ಅಂದುಕೊಂಡ ಕಾರ್ಯಗಳು ಈಡೇರಲು ತಡವಾಗುತ್ತದೆ. ಅದರಿಂದ ನೀವು ರೋಗಿಗಳಿಗೆ ಔಷಧಿಯನ್ನು ಕೊಡಿಸಲು ಪ್ರಯತ್ನ ಮಾಡಿ.

ಕುಂಭ ರಾಶಿಯವರು ತಮ್ಮ ಅತಿಯಾದ ಮಾತಿನಿಂದ ನಿಮ್ಮ ಕೆಲಸವನ್ನು ಕೆಡಿಸಿಕೊಳ್ಳುವಂತಹ ಸಂದರ್ಭವನ್ನು ತಂದುಕೊಳ್ಳುತ್ತೀರಿ ನೀವು ಈ ತಿಂಗಳ ನಾಲ್ಕು ಸೋಮವಾರ ಶಿವನ ದೇವಸ್ಥಾನಕ್ಕೆ ಹಾಲು ದಾನ ಮಾಡಿ ಇದರಿಂದ ನೀವು ಸಮಸ್ಯೆಗೆ ಸಿಲುಕಿಕೊಳ್ಳುವುದನ್ನ ತಪ್ಪಬಹುದು. ಕೊನೆಯದಾಗಿ ಮೀನ ರಾಶಿ ಯವರಿಗೆ ಈ ತಿಂಗಳಲ್ಲಿ ನಿಮ್ಮ ಕೆಲಸಗಳು ಅರ್ಧಂಬರ್ಧ ಆಗುವ ಸಾಧ್ಯತೆ ಇದೆ ಹಣಕಾಸಿನ ವಿಚಾರದಲ್ಲಿ ಇನ್ನು 15 ದಿನದ ನಂತರ ಒಳ್ಳೆಯ ಸುದ್ದಿಯನ್ನ ಕೇಳುತ್ತೀರಿ ಆದ್ದರಿಂದ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಎಳೆನೀರಿನ ಅಭಿಷೇಕ ಮಾಡುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *