Vehicle subsidy scheme in Karnataka 2023: ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ನಿರುದ್ಯೋಗ ಎಂದರೆ ತಪ್ಪಲ್ಲ. ಜನರು ಎಷ್ಟೇ ಓದಿದ್ದರು ಸಹ, ಅವರ ಓದಿಗೆ ತಕ್ಕಂಥ ಕೆಲಸ ಸಿಗುತ್ತಿಲ್ಲ. ಇನ್ನು ಕೆಲವರು ಓದಿಲ್ಲ ಎಂದರು ಸಹ ಕೆಲಸ ಮಾಡಲು ಬಯಸುತ್ತಾರೆ, ಅಂಥವರಿಗೂ ಒಳ್ಳೆಯ ಕೆಲಸ ಸಿಗುತ್ತಿಲ್ಲ. ಅಂಥ ಜನರಿಗೆ ಆಟೋ ಅಥವಾ ಕ್ಯಾಬ್ ಓಡಿಸುವುದು ಒಂದು ಆಯ್ಕೆಯ ಕೆಲಸ ಆಗಿದೆ. ಆದರೆ ಆರ್ಥಿಕ ಸಮಸ್ಯೆಯ ಕಾರಣ ಎಲ್ಲರೂ ಹಣ ಕೊಟ್ಟು ವಾಹನ ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ.
ಅಂಥ ಜನರಿಗಾಗಿ ಇದೀಗ ಸರ್ಕಾರ ಒಂದು ಒಳ್ಳೆಯ ಅವಕಾಶ ಕೊಟ್ಟಿದೆ. ನಮ್ಮ ರಾಜ್ಯದ ನಿಗಮಗಳು ಮತ್ತು ಸಮುದಾಯಗಳು ಸಹ ಜನರಿಗೆ ಉಪಯೋಗವಾಗಲಿ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಅಂಥದ್ದೇ ಒಂದು ಯೋಜನೆ ಸಾರಥಿ ಸ್ವಾವಲಂಬಿ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಯುವಕರು ಹೊಸ ವಾಹನ ಖರೀದಿ ಮಾಡಬೇಕು ಎಂದುಕೊಂಡರೆ, ಸರ್ಕಾರದಿಂದ 75% ಸಬ್ಸಿಡಿ ಅಥವಾ 4 ಲಕ್ಷದವರೆಗೂ ಸಬ್ಸಿಡಿ ಸಿಗಲಿದೆ. ಇದು 2023-24ನೇ ವರ್ಷದಲ್ಲಿ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸೇರಿದ ಸಮುದಾಯದ ಯುವಕರು ಟ್ಯಾಕ್ಸಿ ಖರೀದಿ ಮಾಡಬಹುದು.
Vehicle subsidy scheme in Karnataka 2023
ಸ್ವಂತವಾಗಿ ತಮ್ಮ ಕಾಲ ಮೇಲೆ ನಿಂತು ಹಣಗಳಿಕೆ ಮಾಡಲಿ ಎಂದು ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ಅಭಿವೃದ್ಧಿ ನಿಗಮ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ನಿಯಮಗಳು ಇದೆ.
18 ರಿಂದ 55 ವರ್ಷದ ಒಳಗಿನ ವ್ಯಕ್ತಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಒಂದು ಮನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಗೂಡ್ಸ್ ಗಾಡಿ, ಯೆಲ್ಲೋ ಬೋರ್ಡ್ ಟ್ಯಾಕ್ಸಿ ಖರೀದಿಗೆ 75% ವರೆಗು ಅಥವಾ 4 ಲಕ್ಷದವರೆಗೂ ಸಬ್ಸಿಡಿ ಸಿಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಬೇಕಾಗುತ್ತದೆ ಅವುಗಳು ಯಾವುವು ಎಂದರೆ, ಇನ್ಕಮ್ ಸರ್ಟಿಫಿಕೇಟ್, ಕ್ಯಾಸ್ಟ್ ಸರ್ಟಿಫಿಕೇಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ನೀವು ಖರೀದಿ ಮಾಡಬೇಕು ಎಂದುಕೊಂಡಿರುವ ವಾಹನದ ದರದ ಪಟ್ಟಿ ಇದೆಲ್ಲವನ್ನು ಕೊಡಬೇಕಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್ 29ಆಗಿದ್ದು, ಆನ್ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಎಲ್ಲರೂ ಕೂಡ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಹಾಗಾಗಿ ತಪ್ಪದೇ ಅರ್ಜಿ ಸಲ್ಲಿಸಿ ನಿಮ್ಮದೇ ಆದ ಸ್ವಂತ ಕೆಲಸ ಶುರು ಮಾಡಿಕೊಳ್ಳಿ.