ಮಹಿಳೆಯರಿಗೆ ಮುಜುಗರ ಉಂಟು ಮಾಡುವಂತಹ ಸಮಸ್ಯೆ ಎಂದರೆ ಅದು ಮುಖದ ಮೇಲೆ ಹಾಗೂ ಕೈ ಕಾಲುಗಳ ಮೇಲೆ ಬೇಡವಾದ ಕೂದಲಿನ ಸಮಸ್ಯೆ. ಬೇಡವಾದ ಕೂದಲನ್ನು ಮನೆಯಲ್ಲೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಶಾಶ್ವತವಾಗಿ ಕೂದಲನ್ನು ತೆಗೆದುಹಾಕುವ ಒಂದು ಸುಲಭವಾದ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಈ ಮನೆಮದ್ದನ್ನು ಮಾಡುವುದಕ್ಕೆ ಮೊದಲನೆಯದಾಗಿ ಕೋಲ್ಗೇಟ್ ಟೂತ್ ಪೇಸ್ಟ್ ತೆಗೆದುಕೊಳ್ಳಬೇಕು. ಅರ್ಧ ಚಮಚದಷ್ಟು ಇಲ್ಲಿ ಬಳಸಬೇಕು. ಕೋಲ್ಗೇಟ್ ಟೂತ್ ಪೇಸ್ಟ್ ಬೇಡವಾದ ಕೂದಲನ್ನು ತೆಗೆಯುವುದರಲ್ಲಿ ತುಂಬಾ ಸಹಾಯಕವಾಗಿದೆ ಹಾಗೂ ಬೇಡವಾದ ಕೂದಲು ಬರದಂತೆ ತಡೆಯುತ್ತದೆ. ಒಂದು ವೇಳೆ ಕೈಗಳಿಗೆ ಕಾಲುಗಳಿಗೆ ಬಳಸಬೇಕೆಂದರೆ ಒಂದು ಚಮಚದಷ್ಟು ಕೋಲ್ಗೇಟ್ ಟೂತ್ ಪೇಸ್ಟ್ ಅನ್ನು ಬಳಸಬಹುದು. ಇದರ ಜೊತೆ ಅರ್ಧ ಚಮಚದಷ್ಟು ಅಡುಗೆ ಸೋಡಾವನ್ನು ಬಳಸಬೇಕು ಇದನ್ನು ಒಂದು ಚಮಚ ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅಡಿಗೆ ಸೋಡಾ ಬೇಡವಾದ ಕೂದಲನ್ನು ತೆಗೆಯಲು ಸಹಾಯ ಮಾಡುತ್ತದೆ. ಒಂದು ಒಳ್ಳೆ ಕ್ಲೆಂಸರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಬೇಡವಾದ ಕೂದಲು ಇರುವ ಜಾಗ ಕಪ್ಪಾಗಿದ್ದರೆ ಅದನ್ನು ಬೆಳ್ಳಗೆ ಮಾಡಲು ಅಡುಗೆ ಸೋಡಾ ಸಹಾಯಮಾಡುತ್ತದೆ. ಮುಂದಿನ ದಿನಗಳಲ್ಲಿ ಬೇಡವಾದ ಕೂದಲು ಬರದಂತೆ ತಡೆಯಲು ಸಹಾಯಕವಾಗಿದೆ.
ಕೈ ಹಾಗೂ ಕಾಲುಗಳ ಹಾಗೂ ಮುಖದ ಮೇಲಿನ ಬೇಡವಾದ ಕೂದಲಿರುವ ಜಾಗಕ್ಕೆ ಒಂದು ಹತ್ತಿಯ ಸಹಾಯದಿಂದ ಇದನ್ನು ಹಚ್ಚಬೇಕು. ಹಚ್ಚುವ ಮುಂಚಿತವಾಗಿ ಮುಖವನ್ನು ಸೋಪಿನ ಮೂಲಕ ಚೆನ್ನಾಗಿ ತೊಳೆದುಕೊಳ್ಳಬೇಕು. ಹತ್ತಿಯ ಸಹಾಯದಿಂದ ಕೂದಲಿರುವ ಮುಖದ ಹಾಗೂ ಕೈ ಕಾಲುಗಳ ಜಾಗದ ಮೇಲೆ ಹಚ್ಚಬೇಕು. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಬೇಕು. ನಂತರ ತಣ್ಣೀರಿನಿಂದ ತೊಳೆದು ನಂತರ ಕಡ್ಡಾಯವಾಗಿ ಮೋಷ್ಚರೈಸರ್ ಕ್ರೀಂ ಹಚ್ಚಬೇಕು. ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡುತ್ತಾ ಬಂದರೆ ಬೇಡವಾದ ಕೂದಲು ಬರದಂತೆ ತಡೆಯಬಹುದು ಹಾಗೂ ಕಪ್ಪಾದ ಜಾಗವನ್ನು ಶುಭ್ರಗೊಳಿಸಿ ಬೆಳ್ಳಗಾಗಲು ಕೂಡ ಸಹಾಯಮಾಡುತ್ತದೆ. ಈ ಮನೆ ಮದ್ದಿನಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ. ಇದನ್ನು ಎಲ್ಲಾ ರೀತಿಯ ಚರ್ಮದವರು ಕೂಡ ಮಾಡಬಹುದು. ಈ ಮನೆ ಮದ್ದನ್ನು ಬಳಸಿ ಒಳ್ಳೆಯ ಪರಿಣಾಮ ಪಡೆಯಿರಿ.