Unit of Electricity: ಮನುಷ್ಯ ತಾನು ದಿನನಿತ್ಯ ಮಾಡುವ ಎಲ್ಲಾ ಕೆಲಸ ಕಾರ್ಯಗಳ ಮೇಲೆ ಒಂದು ರೀತಿಯ ಲೆಕ್ಕಾಚಾರ ಇಟ್ಟಿರುತ್ತಾನೆ. ಉದಾಹರಣೆಗೆ ತಾನು ತಿನ್ನುವ ಆಹಾರ ಅಥವಾ ಕುಡಿಯುವ ನೀರು ಮನೆಗೆ ತರಬೇಕಾದಂತಹ ಸಾಮಾನುಗಳು ಎಷ್ಟು ಹಾಗೂ ತಿಂಗಳಿಗೆ ಮನೆಗೆ ಖರ್ಚಾಗುವ ವೆಚ್ಚವೆಷ್ಟು, ವಾಹನಗಳ ಚಾರ್ಜ್ (Vehicle charging) ಎಷ್ಟು ಹೀಗೆ ಅನೇಕ ವಿಚಾರಗಳಲ್ಲಿ ಪ್ರತಿದಿನ ಲೆಕ್ಕ ಹಾಕುತ್ತಾನೆ ಆದರೆ ವಿಶೇಷವೆಂದರೆ ಯಾರು ಕೂಡ ಪ್ರತಿದಿನ ನಾವು ಎಷ್ಟು ಯೂನಿಟ್ ಬಿದ್ದಿದನ್ನ ಬಳಸಿದ್ದೇವೆ ಎಂಬ ವಿಷಯದ ಬಗ್ಗೆ ಲಕ್ಷ ಕೊಡುವುದಿಲ್ಲ ಆದ್ದರಿಂದಲೇ ವಿದ್ಯುತ್ ಬಿಲ್ ಗಳಲ್ಲಿ ಬದಲಾವಣೆ ಕಂಡುಬರುತ್ತದೆ.

ಇಷ್ಟು ದಿನಗಳವರೆಗೆ ತಾವು ಬಳಸುವ ವಿದ್ಯುತ್ ಪ್ರಮಾಣವನ್ನ (Power quantity) ತಿಳಿಯಲು ಬಯಸದ ಜನರು ಇದೀಗ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ ಯೋಜನೆ ಜಾರಿಯಾದ ಮೇಲೆ ಇದರ ಕಡೆ ಗಮನಹರಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಇತ್ತೀಚಿಗಷ್ಟೇ ಗೃಹಜೋತಿ ಯೋಜನೆಯನ್ನ ಜಾರಿ ಮಾಡಿದ್ದು ಕರ್ನಾಟಕವನ್ನು ಕತ್ತಲೆ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಿತ್ತು ಈ ಮೂಲಕ ಇತ್ತೀಚಿಗೆ ನಡೆದು ಸಭೆಯಲ್ಲಿ ಈ ಯೋಜನೆಯನ್ನ ಜಾರಿಗೆ ತರುವ ಬಗ್ಗೆ ಮಾತನಾಡಿದ್ದು ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡು ಆದೇಶ ಪತ್ರವನ್ನು ಕೂಡ ಹೊರಡಿಸಿದೆ . ಆದ್ದರಿಂದ ಜನರು ತಾವು ಬಳಸುವ ವಿದ್ಯುತ್ನ ಪ್ರಮಾಣವನ್ನು ತಿಳಿದುಕೊಳ್ಳುವುದರ ಬಗ್ಗೆ ಈಗ ಆಸಕ್ತಿ ವಹಿಸಿದ್ದಾರೆ.

ಮೊದಲಿನ ತರಹ ಮೀಟರ್ ಬಾಕ್ಸ್ ಗಳಲ್ಲಿ ವಿಲ್ ರೂಪದಲ್ಲಿ ವಿದ್ಯುತ್ ರೀಡ್ ಆಗುವುದು ಈಗ ಕಾಣಸಿಗುವುದಿಲ್ಲ ಏಕೆಂದರೆ ಎಲ್ಲರ ಮನೆಯಲ್ಲೂ ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲಾಗಿದೆ ಇದರ ಮೂಲಕ ಜನರು ಬಳಸುವ ವಿದ್ಯುತ್ ನ ಪ್ರಮಾಣ ಸ್ಪಷ್ಟವಾಗಿ ದೊರೆಯುತ್ತದೆ ವಿದ್ಯುತ್ ಮೀಟರ್ ಅನ್ನು ಸರಿಯಾಗಿ ಗಮನಿಸುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಅದರಲ್ಲಿ ಬರುವ ಸಂಖ್ಯೆಗಳನ್ನು ಗಮನಿಸಿದರೆ ಅಂದಿನ ದಿನಾಂಕ ಏನು ಎನ್ನುವುದು ಮೀಟರ್ ಬಾಕ್ಸ್ ಮೇಲೆ ಸಂಖ್ಯೆಗಳಲ್ಲಿ ಕಾಣಿಸುತ್ತದೆ. ಅದಲ್ಲದೆ ಹಳೆಯ ಕರೆಂಟ್ ಬಿಲ್ಲನ್ನು ನೋಡುವುದರ ಮೂಲಕ ನಾವು ಹಿಂದಿನ ತಿಂಗಳು ಎಷ್ಟು ವಿದ್ಯುತ್ ಅನ್ನ ಬಳಸಿದ್ದೇವೆ ಎಂಬುದು ತಿಳಿದು ಬರುತ್ತದೆ.

ಎಷ್ಟು ಎಂಪೈರ್ ಎನ್ನುವುದು A ಎಂಬ ಸಿಂಬಲ್ ಅಲ್ಲಿ ನಾವು ಗುರುತಿಸಬಹುದು kw/h ನ ಜೊತೆಗೆ ಸಂಖ್ಯೆಗಳು ಆ ಸಂಖ್ಯೆಯು ಪ್ರತಿಕ್ಷಣಕ್ಕೂ ಬದಲಾಗುತ್ತಿರುತ್ತದೆ ಇದೇ ನಮ್ಮ ಮೀಟರ್ ಬೋರ್ಡ್ ತೋರಿಸುವ ನಾವು ಬಳಸಿದಂತಹ ವಿದ್ಯುತ್ ನ ಪ್ರಮಾಣವಾಗಿರುತ್ತದೆ ಇದರ ಆಧಾರದ ಮೇಲೆ ನಾವು ಪ್ರತಿದಿನವೂ ಎಷ್ಟು ವಿದ್ಯುತ್ ಬಳಸುತ್ತಿದ್ದೇವೆ. ಹಾಗೂ ಎಷ್ಟು ಯೂನಿಟ್ ಖರ್ಚಾಗುತ್ತಿದೆ ಎಂದು ಲೆಕ್ಕ ಹಾಕಬಹುದು ಆಗಿದೆ ದಿನಾಂಕ ಬದಲಾದಂತೆ ಸಂಖ್ಯೆಯೂ ಕೂಡ ಹೊಸದಾಗಿ ಆರಂಭವಾಗುತ್ತದೆ ಕೊನೆಯಲ್ಲಿ ತಿಂಗಳ ಅಂತ್ಯದಲ್ಲಿ ಎಲ್ಲವನ್ನು ಒಟ್ಟಾರೆಯಾಗಿ ಲೆಕ್ಕ ಹಾಕಿಕೊಂಡು ಕರೆಂಟ್ ಬಿಲ್ ನಮಗೆ ವಿತರಿಸುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!