Astrology on Yugadi festival for Sagittarius 2023 ಯುಗಾದಿಯ ನಂತರ ಹನ್ನೆರಡು ರಾಶಿಯವರಿಗೆ ರಾಶಿಚಕ್ರದಲ್ಲಿನ ಬದಲಾವಣೆಯಿಂದ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲ ಹಾಗೂ ಕೆಲವು ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ 2023 ಯುಗಾದಿಯ ನಂತರ ಧನಸ್ಸು (Sagittarius) ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ಹಾಗೆಯೇ ಗುರು ಬಲ ಸಹ ಇರುತ್ತದೆ ಧನಸ್ಸು ರಾಶಿಯವರಿಗೆ ಕೇತು ಲಾಭ ಸ್ಥಾನದಲ್ಲಿ ಇರುತ್ತಾನೆ ಹಾಗಾಗಿ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಧನಲಾಭ ಕಂಡು ಬರುತ್ತದೆ ಶನಿಯು ಮೂರನೇ ಮನೆಯಲ್ಲಿ ಇರುತ್ತಾನೆ ಶನಿಯು ಸಹ ಧನಸ್ಸು ರಾಶಿಯವರಿಗೆ ಶುಭಫಲವನ್ನು ನೀಡುತ್ತಾನೆ

ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ .ಗುರು ಪಂಚಮದಲ್ಲಿ ಇರುವುದರಿಂದ ಉತ್ತಮವಾದ ಫಲವನ್ನು ನೀಡುತ್ತಾನೆ ಹಾಗೆಯೇ ರಾಹುವಿನಿಂದ ಕೆಲವು ಸಣ್ಣ ಪುಟ್ಟ ತೊಂದರೆಯನ್ನು ಎದುರಿಸಬೇಕಾಗುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಯುಗಾದಿಯ ನಂತರ ಧನಸ್ಸು ರಾಶಿಯವರ ಫಲಗಳು ಬಗ್ಗೆ ತಿಳಿದುಕೊಳ್ಳೋಣ.

ಧನಸ್ಸು ರಾಶಿಯವರಿಗೆ ಗುರು ಮತ್ತು ರಾಹು ಪಂಚಮ ಸ್ಥಾನದಲ್ಲಿ ಇರುತ್ತಾರೆ ಹಾಗೆಯೇ ಶನಿಯು ತೃತೀಯ ಭಾಗದಲ್ಲಿ ಇರುತ್ತಾನೆ ಕೇತು ಹನ್ನೊಂದನೇ ಮನೆಯಲ್ಲಿ ಇರುತ್ತಾನೆ ಕೇತು ಲಾಭ ಸ್ಥಾನದಲ್ಲಿ ಇರುತ್ತಾನೆ ಶನಿಯು ಮೂರನೇ ಸ್ಥಾನದಲ್ಲಿ ಇರುವುದರಿಂದ ಅತ್ಯುತ್ತಮವಾದ ಫಲಗಳು ಲಭಿಸುತ್ತದೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಧನಸ್ಸು ರಾಶಿಯವರಿಗೆ ಸಾಡೇಸಾತಿ ಕೊನೆಗೊಂಡು ಅತ್ಯುತ್ತಮವಾದ ಫಲಗಳು ಲಭಿಸುತ್ತದೆ

ಮೂರನೇ ಮನೆಯಲ್ಲಿ ಶನಿ ಇರುವುದರಿಂದ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ .ಗುರು ಪಂಚಮದಲ್ಲಿ ಇರುವುದರಿಂದ ಉತ್ತಮವಾದ ಫಲವನ್ನು ನೀಡುತ್ತಾನೆ ಆದರೆ ಪಾಪ ಗ್ರಹದೊಂದಿಗೆ ಸಮ್ಮಿಲನ ಹೊಂದಿ ಗುರು ಪಾಪಗ್ರಸ್ಥನಾಗಿ ಇರುತ್ತಾನೆ ಗುರುವಿನಿಂದ ಬರುವ ಫಲಾಗಳಿಗೆ ನವೆಂಬರವರೆಗೆ ಕಾಯಬೇಕು ಗುರು ಪಾಪ ಗ್ರಸ್ಥನಾಗಿ ಇರುವುದರಿಂದ ವಿದ್ಯಾಭ್ಯಾಸದ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ ಆಗುವ ಸಾಧ್ಯತೆ ಇರುತ್ತದೆ

ಉನ್ನತ ವಿದ್ಯಾಭ್ಯಾಸದಲ್ಲಿ ಅಡೆತಡೆಯಾಗುವ ಸಾಧ್ಯತೆ ಇರುತ್ತದೆ ಸಂತಾನ ನಿರೀಕ್ಷೆಯಲ್ಲಿ ಇರುವರಿಗು ಸಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಆರನೇ ಮನೆಯಲ್ಲಿ ರಾಹು ಇರುವುದರಿಂದ ಧನಸ್ಸು ರಾಶಿಯವರ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ.

ಕೆಲವು ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡದೆ ಇರುವಂತಹ ಸಮಸ್ಯೆ ಕಂಡು ಬರುತ್ತದೆ ಹನ್ನೊಂದನೇ ಮನೆಯಲ್ಲಿ ಕೇತು ಇರುವುದರಿಂದ ನ್ಯಾಯಯುತವಾಗಿ ಬರುವ ಎಲ್ಲಾ ಸೌಲಭ್ಯಗಳು ಸಹ ದೊರಕುತ್ತದೆ ಉದ್ಯೋಗ ಕ್ಷೇತ್ರದಲ್ಲಿ ಹಾಗೆಯೇ ಸಾಮಾಜಿಕ ಕ್ಷೇತ್ರದಲ್ಲಿ ಇನ್ನಿತರ ಯಾವುದೇ ಕ್ಷೇತ್ರದಲ್ಲಿ ಸಹ ನ್ಯಾಯಯುತವಾದ ಅಥವಾ ಮಾಡಿದ ಕರ್ಮಕ್ಕೆ ತಕ್ಕಂತೆ ಫಲವನ್ನು ಕೊಡುತ್ತಾನೆ ಲಾಭ ಸ್ಥಾನದಲ್ಲಿ ಕೇತು ಇರುತ್ತಾನೆ ಧನಸ್ಸು ರಾಶಿಯವರು ನಾಗ ದೇವರ ಆರಾಧನೆ ಮಾಡಬೇಕು

ನಾಗದೇವತೆಗೆ ಶಿರಾಭಿಷೇಕ ಮಾಡಿಸಬೇಕು ಕುಕ್ಕೆ ಸುಬ್ರಮಣ್ಯ ಅಥವಾ ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಭೇಟಿ ನೀಡಬೇಕು ಹಾಗೆಯೇ ಧನಸ್ಸು ರಾಶಿಯವರು ಉದ್ದಿನಬೇಳೆಯನ್ನು ದಾನ ಮಾಡಬೇಕು. ನೈರುತ್ಯ ದಿಕ್ಕಿಗೆ ಸ್ನಾನ ಮಾಡಿ ಹಣೆಗೆ ತಿಲಕವನ್ನು ಇಟ್ಟುಕೊಂಡು ನೈರುತ್ಯ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳಬೇಕು ನಂತರ ಓಂ ರಾಹುವೆ ನಮ್ಹ ಎಂದು ನೂರಾ ಎಂಟು ಬಾರಿ ಹೇಳಬೇಕು ಇದರಿಂದ ಒಳ್ಳೆಯ ಫಲ ಲಭಿಸುತ್ತದೆ

ಇದನ್ನೂ ಓದಿ..2023 ಕೊನೆಯವರೆಗೂ ರಾಜಯೋಗ ಹೊಂದುವ ಟಾಪ್ 6 ರಾಶಿಗಳಿವು

ಹೀಗೆ ಯುಗಾದಿಯ ನಂತರ ಧನಸ್ಸು ರಾಶಿಯವರಿಗೆ ಶುಭಫಲ ಲಭಿಸುತ್ತದೆ ಹಾಗೆಯೇ ಕೆಲವು ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ರಾಹುವಿನ ಆರಾಧನೆಯ ಮೂಲಕ ಹೋಗಲಾಡಿಸಿಕೊಳ್ಳಬಹುದು ಹಾಗೆಯೇ ಕೇತು ಧನಸ್ಸು ರಾಶಿಯವರಿಗೆ ಲಾಭದಾಯಕವಾಗಿ ಇರುತ್ತಾನೆ ಇದರಿಂದ ಹೆಚ್ಚಿನ ಯಶಸ್ಸು ಸಿಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!