Udyoga Mela 2023 Davanagere: ನಮ್ಮ ರಾಜ್ಯದಲ್ಲಿ ಹಲವರು ವಿದ್ಯಾವಂತರಾಗಿದ್ದರು ಕೂಡ ಕೆಲಸ ಸಿಗದೆ ಪರದಾಡುತ್ತಿದ್ದಾರೆ. ಪದವಿ ಓದಿದ್ದರು, ಪ್ರತಿಭೆ ಇದ್ದರು ಕೆಲಸ ಮಾತ್ರ ಸಿಗುತ್ತಿಲ್ಲ ಎಂದು ಪರದಾಡುವವರು ಇದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಇರುವವರಿಗೆ ಈಗ ಒಂದು ಸದವಕಾಶ ಸಿಕ್ಕಿದೆ. ದಾವಣಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 16ರಂದು ಉದ್ಯೋಗ ಮೇಳ ನಡೆಯಲಿದ್ದು, ಇದರಲ್ಲಿ ನೀವು ಕೂಡ ಭಾಗವಹಿಸಬಹುದು.

ಈ ವಿಚಾರದ ಬಗ್ಗೆ ವೆಂಕಟೇಶ್ ಎಂವಿ ಅವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರೆಸ್ ಮೀಟ್ ನಡೆಸಿ ಮಾಹಿತಿ ನೀಡಿದ್ದಾರೆ. ಇನ್ನುಮುಂದೆ ಪ್ರತಿ ಎರಡು ತಿಂಗಳಿಗೆ ಈ ರೀತಿ ಉದ್ಯೋಗ ಮೇಳ ನಡೆಸುವ ಆಶಯವಿದೆ, ಗ್ರಾಮೀಣ ಭಗಾದಲ್ಲಿ ಇರುವ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

Udyoga Mela 2023 Davanagere

ಉದ್ಯೋಗ ಮೇಳದಲ್ಲಿ 10ನೇ ತರಗತಿ, ಪಿಯುಸಿ, ಐಟಿಐ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಮಾಡಿರುವವರು ಪಾಲ್ಗೊಳ್ಳಬಹುದು. ಮೇಳದಲ್ಲಿ ಫಾರ್ಮಸಿ, ಬ್ಯಾಂಕಿಂಗ್, ಐಟಿ, ಆಟೋಮೊಬೈಲ್, ಫೈನಾನ್ಸ್, ಆರೋಗ್ಯ, ಅಗ್ರಿಕಲ್ಚರ್, ಹಾಗೂ ಇನ್ನು 150 ಕಂಪನಿಗಳು ಬರಲಿದೆ. ಆಸಕ್ತಿ ಇರುವವರು ಮೇಳಕ್ಕೆ ಬರಬಹುದು, ಅಕ್ಟೋಬರ್ 16ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:30ರ ವರೆಗು ನಡೆಯುತ್ತದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ತಮ್ಮ ರೇಸ್ಯುಮ್ ಹಾಗೂ ಮೂಲ ದಾಖಲೆಗಳ ಜೊತೆಗೆ ಬರಬೇಕು.

ಇಲ್ಲಿ ಆನ್ ಸ್ಪಾಟ್ ರೆಕ್ರುಟ್ಮೆಂಟ್ ನಡೆಯುವುದು ವಿಶೇಷ, ಡಾಕ್ಯುಮೆಂಟ್ ವೆರಿಫಿಕೇಶನ್ ಮತ್ತು ಇಂಟರ್ವ್ಯೂ ಎರಡು ಅಲ್ಲೇ ನಡೆಯುತ್ತದೆ. ತಕ್ಷಣವೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಈ ಅವಕಾಶವನ್ನು ದಾವಣಗೆರೆ ಜಿಲ್ಲೆಯ ಯುವಕ ಯುವತಿಯರು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು, QR ಕೋಡ್ ಮೂಲಕ ಸ್ಕ್ಯಾನ್ ಮಾಡಿ ರಿಜಿಸ್ಟರ್ ಮಾಡಿಸಿಕೊಳ್ಳಬಹುದು.

ಬೇರೆ ಕೆಲವು ವಿಶೇಷತೆಗಳು ಕೂಡ ಈ ವೇಳೆ ದಾವಣಗೆರೆ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಉದ್ಯೋಗ ಮೇಳ ಅದರಲ್ಲಿ ಒಂದು ಪ್ರಮುಖವಾದ ವಿಚಾರ ಆಗಿದ್ದು, ಇದರಿಂದ ಹಲವರ ಬದುಕಿಗೆ ಬೆಳಕು ಸಿಗಬಹುದು. ಹಾಗಾಗಿ ಎಲ್ಲರೂ ಕೂಡ ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬಹುದು.

ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲ ಎನ್ನುವವರು ನೋಡಿ, ಫೈನಲಿ ಗೃಹಲಕ್ಷ್ಮಿ ಹಣದ ಬಗ್ಗೆ ಮಹತ್ವದ ಸುದ್ದಿ ಹೊರ ಬಂದಿದೆ

By AS Naik

Leave a Reply

Your email address will not be published. Required fields are marked *