ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ [MGNREGS] ಯನ್ನು ಜಾರಿಗೊಳಿಸುವುದು ಮತ್ತು ಉಸ್ತುವಾರಿ ಗ್ರಾಮೀಣಾಭಿವೃದ್ದಿ ಆಯುಕ್ತಾಲಯದ ಜವಾಬ್ದಾರಿಯಾಗಿದೆ.ಕೂಲಿ ಉದ್ಯೋಗದ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಕುಶಲ ದೈಹಿಕ ಕೆಲಸ ಮಾಡಲು ಇಚ್ಛಿಸುವ ಗ್ರಾಮೀಣ ಪ್ರದೇಶದ ವಯಸ್ಕರಿಗೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ನೂರು ದಿನಗಳ ಉದ್ಯೋಗಾವಕಾಶಗಳನ್ನು ಸ್ಥಳೀಯವಾಗಿ ನೀಡಿ, ಬಡಜನರ ಬದುಕನ್ನು ಹಸನಾಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಡಜನರನ್ನು ತೊಡಗಿಸಿಕೊಂಡು ಕೃಷಿ ಕಾರ್ಮಿಕರಿಗೆ ಕೂಲಿ ನೀಡುವ ಉದ್ಯೋಗ, ಆಹಾರಭದ್ರತೆ, ದೀರ್ಘಕಾಲ ಬಾಳಿಕೆ ಬರುವಂತಹ ಸ್ವತ್ತುಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ [MGNREGS] ಕೈಗೊಳ್ಳಲಾಗುತ್ತಿದೆ. ಆದರೆ ಈ ಉದ್ಯೋಗ ಖಾತ್ರಿ ಯೋಜನೆ ಕೆಲವು ನಿಯಮಗಳನ್ನು ಹೊಂದಿದ್ದು ಎಲ್ಲರೂ ತಿಳಿದಿರಬೇಕಾದ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಉದ್ಯೋಗ ಖಾತ್ರಿ ಯೋಜನೆ ಯ ಅಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಗೆ ಕನಿಷ್ಠ ಹದಿನೆಂಟು ವರ್ಷ ವಯಸ್ಸು ಆಗಿರಬೇಕು. ಈ ಯೋಜನೆಯ ಅಡಿಯಲ್ಲಿ ಪ್ರತೀ ಕುಟುಂಬಕ್ಕೆ ಕನಿಷ್ಠ ನೂರು ದಿನಗಳ ಕೆಲಸ ಸಿಗುವುದು. ಹಾಗೂ ಇಲ್ಲಿ ಮಹಿಳೆ ಹಾಗೂ ಪುರುಷ ಎನ್ನುವ ಬೇಧ ಭಾವ ಇಲ್ಲದೆಯೇ ಎಲ್ಲರಿಗೂ ಸಮಾನ ಕೂಲಿ ನೀಡಲಾಗುವುದು. ಇದು ಪ್ರತಿಯೊಬ್ಬ ಕಾರ್ಮಿಕರಿಗೆ ದಿನಕ್ಕೆ ಎರಡು ನೂರಾ ಎಪ್ಪತ್ತೈದು ರೂಪಾಯಿ ದಿನಗೂಲಿ ಸಿಗುವುದು. ಇಲ್ಲಿ ಕೆಲಸಕ್ಕೆ ಬಳಸುವ ಸಲಕರಣಿಗಳಾದ ಹಾರೆ , ಗುದ್ದಲಿ , ಪಿಕಾಸಿ ಮಂಕ್ರಿ ಇವುಗಳನ್ನು ಕಾರ್ಮಿಕರೇ ಸ್ವತಃ ತಂದುಕೊಂಡರೆ ಹೆಚ್ಚುವರಿಯಾಗಿ ಹತ್ತುರುಪಾಯಿ ಪಡೆದು ಹಣವನ್ನು ಪಡೆಯಬಹುದು.
ಇನ್ನು ಇದುವರೆಗೂ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಜಾಬ್ ಕಾರ್ಡ್ ಪಡೆಯದೆ ಇದ್ದರೆ ಗ್ರಾಂ ಪಂಚಾಯತಿ ಯಲ್ಲಿ ಹೋಗಿ ಅರ್ಜಿ ಸಲ್ಲಿಸಿ ಕೂಡಲೇ ಜಾಬ್ ಕಾರ್ಡ್ ಪಡೆಯಬಹುದು. ಇಲ್ಲಿ ಕಂಪ್ಯೂಟರ್ ಆಪರೇಟರ್ ಅಥವಾ ಪಿಡಿಓ ನಿಮಗೆ ಜಾಬ್ ಕಾರ್ಡ್ ನೀಡುತ್ತಾರೆ. ಕಾಯಕ ಮಿತ್ರ ಅಪ್ಲಿಕೇಶನ್ ಬಳಸಿ ಅರ್ಜಿ ಸಲ್ಲಿಸುವ ಮೂಲಕ ಕೂಡಾ ಕಾರ್ಮಿಕರು ಈ ಯೋಜನೆಯಲ್ಲಿ ಕೆಲಸ ಪಡೆದುಕೊಳ್ಳಬಹುದು. ನೀವು ಅರ್ಜಿ ಸಲ್ಲಿಸಿದ ಮೇಲೆ ಗ್ರಾಮ ಪಂಚಾಯತ ಅಧಿಕಾರಿ ನಿಮಗೆ ಕೆಲಸ ನೀಡಬೇಕು ಒಂದುವೇಳೆ ಅರ್ಜಿ ಸಲ್ಲಿಸಿದರೂ ಕೆಲಸ ನೀಡದೆ ಇದ್ದರೆ ಹದಿನೈದು ದಿನಗಳ ನಿರುದ್ಯೋಗ ಭತ್ಯೆ ನೀಡಬೇಕಾಗುವುದು. ಕೆಲಸ ಆರಂಭಿಸಿದ ಹದಿನೈದು ದಿನಗಳಲ್ಲಿ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ನಿಮ್ಮ ಕೂಲಿ ಹಣವನ್ನು ಜಮಾ ಮಾಡಲಾಗುವುದು.
ಅಷ್ಟೇ ಅಲ್ಲದೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನೀವು ನಿಮ್ಮ ಜಮೀನಿನ ಕೆಲಸವನ್ನು ಸಹ ಮಾಡಿಸಿಕೊಳ್ಳಬಹುದು. ಉದಾಹರಣೆಗೆ ಬಂದರು ಹಾಗೂ ನಾಲೆ ಕೆಲಸ ಇಂತಹ ಕೆಲಸಗಳನ್ನು ಸಹ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನಾಗರಿಕರು ಉಚಿತ ದೂರವಾಣಿ ನಂಬರ್ 1800425866 ಈ ನಂಬರಿಗೆ ಕರೆ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.