ಸರ್ಕಾರ ಅನೇಕ ಯೋಜನೆಗಳನ್ನು ಜನರ ಹಿತಕ್ಕಾಗಿ ಜಾರಿಗೊಳಿಸುತ್ತದೆ. ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಯೋಜನೆಯನ್ನು ಜಾರಿಗೊಳಿಸಿದೆ. ಹಾಗಾದರೆ ಸ್ವಯಂ ಉದ್ಯೋಗ ಯೋಜನೆಗೆ ಯಾರು ಅರ್ಹರು, ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ, ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಿದವರಿಗೆ ಸಹಾಯಧನ ಎಷ್ಟು ಸಿಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸ್ವಯಂ ಉದ್ಯೋಗ ಯೋಜನೆಯಡಿ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಲು ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 5ಲಕ್ಷ ರೂಪಾಯಿಂದ 20 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತದೆ ಹಾಗೂ ಈ ಸಾಲಕ್ಕೆ ಶೇಕಡ 50 ರಿಂದ 70 ಪರ್ಸೆಂಟ್ ಸಬ್ಸಿಡಿ ಸಿಗುತ್ತದೆ. ಈ ಯೋಜನೆಗೆ ಉದ್ಯಮ ಶೀಲತಾ ಯೋಜನೆ ಎಂದು ಕೂಡ ಕರೆಯುತ್ತಾರೆ. ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರು ಹಾಗೂ ಯುವತಿಯರು ಸಣ್ಣಕೈಗಾರಿಕೆ, ಸೇವಾಕ್ಷೇತ್ರ, ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದಿಂದ ಸಹಾಯಧನ ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ.
ಈ ಯೋಜನೆಯಡಿ ಮೂರು ಹಂತದ ಘಟಕ ವೆಚ್ಚಗಳನ್ನು ಆಧರಿಸಿ ಸಹಾಯಧನ ನಿಗದಿಪಡಿಸಲಾಗಿದೆ. ಘಟಕ ವೆಚ್ಚ 5 ಲಕ್ಷ ರೂಪಾಯಿವರೆಗೆ ಶೇಕಡಾ 70 ಅಥವಾ ಗರಿಷ್ಟ ರೂಪಾಯಿ 3,50,000 ಸಹಾಯಧನ ಸಿಗುತ್ತದೆ. ಘಟಕ ವೆಚ್ಚ 5 ಲಕ್ಷದಿಂದ ರೂಪಾಯಿ 10 ಲಕ್ಷದವರೆಗೆ ಶೇಕಡಾ 60 ಅಥವಾ ಗರಿಷ್ಟ 5 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ. ಘಟಕವೆಚ್ಚ 10 ಲಕ್ಷದಿಂದ 20 ಲಕ್ಷ ರೂಪಾಯಿವರೆಗೆ ಶೇಕಡಾ 50 ಅಥವಾ ಗರಿಷ್ಟ 5 ಲಕ್ಷ ರೂಪಾಯಿ ಸಹಾಯಧನ ಸಿಗುತ್ತದೆ.
ನಿಗಮದ ಸಹಾಯಧನ ಹೊರತುಪಡಿಸಿ ಘಟಕವೆಚ್ಚದ ಉಳಿದ ಭಾಗವನ್ನು ಬ್ಯಾಂಕ್ ಸಾಲದಿಂದ ಭರಿಸಲಾಗುವುದು. ಕೆಲವು ಯೋಜನೆಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಹಾಗೂ ಅಭಿವೃದ್ಧಿ ನಿಗಮದಿಂದ ಸಾಲ ಪಡೆದು ನೇರವಾಗಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚದಲ್ಲಿ ಶೇಕಡಾ 5 ರಷ್ಟು ಭಾಗ ಫಲಾನುಭವಿಗಳ ಪಾಲು ಶೇಕಡಾ 20 ಭಾಗ ನಿಗಮದಿಂದ ಅಂಚಿನ ಹಣ ಗರಿಷ್ಟ ರೂಪಾಯಿ ಒಂದು ಲಕ್ಷ ಹಾಗೂ ಉಳಿದ ಶೇಕಡಾ 75 ಭಾಗವನ್ನು ರಾಷ್ಟ್ರೀಯ ಹಣಕಾಸು ಅಭಿವೃದ್ದಿ ನಿಗಮದಿಂದ ಸಾಲದ ರೂಪದಲ್ಲಿ ಭರಿಸಲಾಗುವುದು.
ಚಪ್ಪಲಿ ಅಂಗಡಿ, ಬ್ಯೂಟಿ ಪಾರ್ಲರ್, ಸಾಫ್ಟ್ ಡ್ರಿಂಕ್ಸ್ ಘಟಕ, ದಿನಸಿ ಅಥವಾ ಸ್ಟೇಷನರಿ ಅಂಗಡಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆ, ವಕೀಲರ ಕಚೇರಿ, ಇಲೆಕ್ಟ್ರಿಕಲ್ ಶಾಪ್, ರೆಡಿಮೇಡ್ ಗಾರ್ಮೆಂಟ್ಸ್, ಆಟೋ ರಿಕ್ಷಾ, ಗೂಡ್ಸ್ ಕ್ಯಾರಿಯರ್, ಪ್ಯಾಸೆಂಜರ್ ಕಾರ್, ಸಿಮೆಂಟ್ ಬ್ರಿಕ್ಸ್ ಅಥವಾ ಇಟ್ಟಿಗೆ ತಯಾರಿಕೆ ಹಾಗೂ ಇತರೆ ಯಾವುದೆ ಲಾಭದಾಯಕ ಸಣ್ಣ ಕೈಗಾರಿಕೆ, ಸೇವಾ ಘಟಕ, ವ್ಯಾಪಾರ ಉದ್ದಿಮೆ ಪ್ರಾರಂಭಿಸಲು ಈ ಯೋಜನೆಯಡಿ ಅವಕಾಶವಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿದಾರನು ಪರಿಶಿಷ್ಟ ಜಾತಿಗೆ ಸೇರಿರಬೇಕು. ಅರ್ಜಿದಾರನು 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸಿರಬೇಕು. ಅರ್ಜಿದಾರನ ವಯಸ್ಸು 18-50 ವರ್ಷ ಇರಬೇಕು. ಅರ್ಜಿದಾರನ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರಿಯಲ್ಲಿ ಇರಬಾರದು. ಅರ್ಜಿದಾರನ ಕುಟುಂಬದ ಯಾವುದೇ ಸದಸ್ಯರು ಈ ಮೊದಲು ಸರ್ಕಾರದಿಂದ ಒಂದು ಲಕ್ಷ ರೂಪಾಯಿ ಸಹಾಯಧನ ಪಡೆದಿದ್ದರೆ ಅವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುವುದಿಲ್ಲ.
ಅರ್ಜಿದಾರನು ಸ್ವಯಂ ಉದ್ಯೋಗ ಸ್ಥಾಪಿಸಲು ಬೇಕಾಗುವ ಸ್ಥಳಾವಕಾಶವನ್ನು ಹೊಂದಿರಬೇಕು. ಅರ್ಜಿದಾರನ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಭಾಗದಲ್ಲಿ 1,50,000 ರೂಪಾಯಿ, ನಗರ ಭಾಗದಲ್ಲಿ 2,00,000 ರೂಪಾಯಿ ಮೀರಿರಬಾರದು. ಈ ಯೋಜನೆಯಡಿಯಲ್ಲಿ ಅರ್ಜಿದಾರನು ಅರ್ಜಿಯೊಂದಿಗೆ ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕು. ಅರ್ಜಿದಾರನು ಅರ್ಜಿಯೊಂದಿಗೆ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ವಾಹನ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸುವವರು ಡ್ರೈವಿಂಗ್ ಲೈಸೆನ್ಸ್ ಕೊಡಬೇಕಾಗುತ್ತದೆ ಮತ್ತು ಕೃಷಿ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸುವವರು ಜಮೀನಿನ ಆರ್ ಟಿಸಿ ಸಲ್ಲಿಸಬೇಕು. ಅರ್ಜಿದಾರನು ಈಗಾಗಲೆ ತರಬೇತಿ ಅಥವಾ ಅನುಭವ ಹೊಂದಿದ್ದರೆ ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಸಲ್ಲಿಸಬೇಕು. ದರಪಟ್ಟಿ ಅಥವಾ ಯೋಜನಾ ವರದಿ ಸಲ್ಲಿಸಬೇಕು.
ಅರ್ಜಿದಾರನು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅಗತ್ಯ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಇಲ್ಲದೆ ಇದ್ದಲ್ಲಿ ಆಯ್ಕೆ ಸಮಿತಿಗೆ ಅರ್ಜಿಯನ್ನು ಮಂಡಿಸಲಾಗುವುದಿಲ್ಲ. ಸ್ವೀಕರಿಸಿದ ಅರ್ಜಿಗಳನ್ನು ವಿಧಾನಸಭಾ ಕ್ಷೇತ್ರವಾರು ಪಟ್ಟಿಮಾಡಿ ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿ ಸಭೆಗೆ ಮಂಡಿಸಲಾಗುವುದು. ಮಹಿಳೆಯರಿಗೆ ಶೇಕಡ 33.33 ಮತ್ತು ಅಂಗವಿಕಲರಿಗೆ ಶೇಕಡ 30ರಷ್ಟು ಮೀಸಲಾತಿ ಅನ್ವಯ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅರ್ಜಿದಾರನಿಗೆ ಅಂಚೆ ಅಥವಾ ಎಸ್ಎಂಎಸ್ ಮೂಲಕ ತಿಳಿಸಲಾಗುವುದು. ಆಯ್ಕೆಯಾದ ಅರ್ಜಿದಾರನ ಸ್ಥಳ ಪರಿಶೀಲನೆ ಮಾಡಲಾಗುತ್ತದೆ.
ಅರ್ಜಿದಾರನು ತಮ್ಮ ಮೂಲ ದಾಖಲಾತಿಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಬ್ಯಾಂಕಿನ ಮೂಲಕ ಅರ್ಜಿದಾರನಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಅರ್ಜಿದಾರನಿಗೆ ಒಂದು ವೇಳೆ ಬ್ಯಾಂಕ್ ನಿಂದ ಮೋಸವಾದರೆ ನಿಗಮವು ಅರ್ಜಿದಾರನಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸುತ್ತದೆ. ಪರಿಶಿಷ್ಟ ಜಾತಿಯ ನಿರುದ್ಯೋಗ ಯುವಕ, ಯುವತಿಯರು ಉದ್ಯೋಗ ಮಾಡುವುದಾದರೆ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲಾ ಪರಿಶಿಷ್ಟ ಜಾತಿಯವರಿಗೆ ತಿಳಿಸಿ, ನಿರುದ್ಯೋಗ ಪ್ರಮಾಣ ಕಡಿಮೆಯಾಗಲು ಸಹಕರಿಸೋಣ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466