ಸಾಮಾನ್ಯವಾಗಿ ಕೆಲವರಿಗೆ ಇಂಗ್ಲೀಷ್ ಟೈಪಿಂಗ್ ಮಾಡುವುದು ಕಷ್ಟವಾಗುತ್ತದೆ. ಏಕೆಂದರೆ ಕನ್ನಡದಷ್ಟು ಸುಲಭವಾಗಿ ಇಂಗ್ಲೀಷ್ ಎಲ್ಲರ ತಲೆಗೆ ಹತ್ತುವುದಿಲ್ಲ. ಕನ್ನಡ ನಮ್ಮ ಮಾತೃಭಾಷೆ ಆಗಿರುವುದರಿಂದ ಸುಲಭವಾಗಿ ತಿಳಿಯಬಹುದು.ಹೆಚ್ಚಾಗಿ 20ವರ್ಷಗಳ ಹಿಂದಿನ ಜನರಿಗೆ ಇಂಗ್ಲಿಷ್ ಟೈಪಿಂಗ್ ಬಹಳ ಕಷ್ಟ ಆಗುತ್ತದೆ. ಏಕೆಂದರೆ ಆಗ ಎಲ್ಲರೂ ಶಾಲೆಗೆ ಹೋಗುತ್ತಿರಲಿಲ್ಲ. ಈಗಿನ ಪೀಳಿಗೆಗೆ ಇದು ಕಷ್ಟವಲ್ಲ.ಏಕೆಂದರೆ ಎಲ್ಲರೂ ಶಾಲೆಗೆ ಹೋಗುತ್ತಾರೆ. ನಾವು ಇಲ್ಲಿ ಸುಲಭವಾಗಿ ಕನ್ನಡ ಟೈಪಿಂಗ್ ಮಾಡಿ ಇಂಗ್ಲಿಷ್ ಗೆ ಮಾಡುವುದು ಹೇಗೆ ಎಂದು ತಿಳಿಯೋಣ.
ಕಾಲೇಜಿಗೆ ಹೋಗುವವರು, ಸ್ಕೂಲಿಗೆ ಹೋಗುವವರು ಹಾಗೆಯೇ ಆಫೀಸ್ ಗಳಿಗೆ ಹೋಗುವವರಿಗೆ ಇಂಗ್ಲಿಷ್ ಟೈಪಿಂಗ್ ಮಾಡುವುದು ಕಷ್ಟವಲ್ಲ.ಆದರೆ ಕಲಿಯದೇ ಮನೆಯಲ್ಲಿ ಇರುವವರಿಗೆ ಇಂಗ್ಲಿಷ್ ಟೈಪಿಂಗ್ ಮಾಡುವುದು ಬಹಳ ಕಷ್ಟವಾಗುತ್ತದೆ. ಹೆಚ್ಚಾಗಿ ಹಳ್ಳಿಯಲ್ಲಿ ಇರುವವರಿಗೆ ಇದು ಬಹಳ ಕಷ್ಟ ಸಾಧ್ಯ.ನಗರದಲ್ಲಿ ಇರುವವರು ಹೆಚ್ಚಾಗಿ ವಿದ್ಯಾವಂತರೇ ಆಗಿರುತ್ತಾರೆ.
ಕೆಲವರು ಮೊದಲು ದೊಡ್ಡ ಮೊಬೈಲ್ ನ್ನು ತೆಗೆದುಕೊಂಡಿರುತ್ತಾರೆ.ಆದರೆ ಅವರಿಗೆ ಒಂದೇ ಬಾರಿ ಅದರ ಬಳಕೆ ಹೇಗೆ ಮಾಡಬೇಕು ಎಂದು ತಿಳಿಯುವುದಿಲ್ಲ. ತಿಳಿದವರಿಂದ ಕೇಳಿ ಎಲ್ಲವನ್ನೂ ಕಲಿಯಲು ಶುರು ಮಾಡುತ್ತಾರೆ. ನಂತರ ಅವರಿಗೆ ಕಷ್ಟ ಆಗುವುದು ಒಂದೇ ಅದು ಇಂಗ್ಲೀಷ್ ಟೈಪಿಂಗ್.ಇಂಗ್ಲಿಷ್ ಟೈಪಿಂಗ್ ನ್ನು ಸುಲಭವಾಗಿ ಮಾಡಬಹುದು. ಈ ಆಪ್ ನಿಂದ. ಇದು ಅತೀ ಸುಲಭವಾಗಿ ಇದೆ.
ಮೊದಲು ಮೊಬೈಲ್ ನ ಪ್ಲೇಸ್ಟೋರ್ ಗೆ ಹೋಗಿ ‘ಜಿ-ಬೋರ್ಡ್’ ಎನ್ನುವ ಹೆಸರಿನ ಗೂಗಲ್ ಕೀಬೋರ್ಡ್ ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಈಗ ಅದನ್ನು ಇನ್ಸ್ಟಾಲ್ ಮಾಡಬೇಕು.ಇನ್ಸ್ಟಾಲ್ ಆದ ನಂತರ ಅದನ್ನು ಓಪನ್ ಮಾಡಬೇಕು. ಓಪನ್ ಮಾಡಿದ ತಕ್ಷಣ ‘G’ ಎಂದು ಕಾಣುತ್ತದೆ. ಅದೇ ಗೂಗಲ್ ಕೀಬೋರ್ಡ್.ಅದರ ಮೇಲೆ ಒತ್ತಬೇಕು. ನಂತರ ಟ್ರಾನ್ಸ್ಲೇಶನ್ ಎಂದು ಕಾಣುತ್ತದೆ. ಅದರಲ್ಲಿ ಯಾವ ಭಾಷೆಯಿಂದ ಯಾವ ಭಾಷೆಗೆ ಆಗಬೇಕು ಎಂದು ಸೆಟ್ ಮಾಡಿಕೊಳ್ಳಬೇಕು.ಈಗ ನಿಮ್ಮ ಮಾತೃ ಭಾಷೆಯಲ್ಲಿ ಟೈಪ್ ಮಾಡಿದರೆ ಇಂಗ್ಲೀಷಿನಲ್ಲಿ ಬರುತ್ತದೆ. ಅಂದರೆ ನಿಮ್ಮ ಮಾತೃಭಾಷೆ ಕನ್ನಡ ಆದರೆ ಉದಾಹರಣೆಗೆ ಕನ್ನಡದಲ್ಲಿ ಶುಭೋದಯ ಎನ್ನುವ ಸ್ಪೆಲ್ಲಿಂಗ್ ಟೈಪ್ ಮಾಡಿದಾಗ ಅಲ್ಲಿ ಗುಡ್ ಮಾರ್ನಿಂಗ್ ಎಂದು ಬರುತ್ತದೆ. ಈ ರೀತಿಯಾಗಿ ಮೆಸೇಜ್ ನ್ನು ಕಳುಹಿಸಬಹುದು.