ಪ್ರತಿಯೊಬ್ಬರು ಕೂಡ ಜೀವನದಲ್ಲಿ ಜ್ಯೋತಿಷ್ಯವನ್ನು ನಂಬುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಅದರಲ್ಲಿ ಸತ್ಯ ಸುಳ್ಳು ಎಷ್ಟಿದೆ ಎಂಬುದರ ಬಗ್ಗೆ ಚರ್ಚೆ ನಡೆಸದೆ ಅದರಲ್ಲಿರುವ ಒಳ್ಳೆಯ ವಿಷಯಗಳನ್ನು ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತಿದೆ ಆ ರೀತಿಯಲ್ಲಿ ಮಾಡಿಕೊಳ್ಳದೆ ನಮಗೆ ಅನುಕೂಲವಾದಂತಹ ವಿಷಯಗಳನ್ನು ಜ್ಯೋತಿಷ್ಯ ದಿಂದ ತೆಗೆದುಕೊಳ್ಳುವುದು ತಪ್ಪಲ್ಲ.
ಈಗ ಈ ವಿಷಯವನ್ನು ಏಕೆ ಚರ್ಚಿಸುತ್ತಿದ್ದೇನೆ ಗೊತ್ತೇ ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಹಸ್ತ ಮುಖ ನೋಡಿ ಭವಿಷ್ಯ ಹೇಳುವುದು ಸಾಮಾನ್ಯ. ಕೆಲವೊಂದು ಭವಿಷ್ಯಗಳು ನಿಜವಾದರೆ ಕೆಲವೊಂದು ಭವಿಷ್ಯಗಳು ಸುಳ್ಳು ಆಗಿರುತ್ತವೆ ಅದು ಪ್ರತಿಯೊಬ್ಬರ ಅನುಭವಕ್ಕೂ ಕೂಡ ಬಂದಿರುವುದನ್ನು ಗಮನಿಸಬಹುದು ಅದಕ್ಕೆ ನಾವು ನೀವು ಹೊರತಲ್ಲ ಎಲ್ಲರೂ ಕೂಡ ಜ್ಯೋತಿಷ್ಯಶಾಸ್ತ್ರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಒಳಪಟ್ಟಿರುತ್ತೆವೆ ಆದರೆ ಕೆಲವೊಬ್ಬರು ನಮ್ಮ ತಲೆಯನ್ನು ನೋಡಿ ಭವಿಷ್ಯವನ್ನು ನೋಡುತ್ತಾರೆ. ಅದರಲ್ಲೂ ಕೂಡ ಮನುಷ್ಯನ ನೆತ್ತಿಯ ಮೇಲಿರುವ ಸುಳಿಗಳನ್ನು ನೋಡಿ ಭವಿಷ್ಯವನ್ನು ಹೇಳುವುದು ಸಾಮಾನ್ಯ
ಒಂದು ಅಥವಾ ಎರಡು ಸುಳಿಗಳನ್ನು ಸಾಮಾನ್ಯವಾಗಿ ವ್ಯಕ್ತಿಗಳು ಹೊಂದಿರುತ್ತಾರೆ ಒಂದಕ್ಕಿಂತ ಹೆಚ್ಚು ಸುಳಿಗಳನ್ನು ಹೊಂದಿರುವ ವ್ಯಕ್ತಿಗಳ ಗುಣ ಸ್ವಭಾವ ಹೇಗಿದೆ ಎಂಬುದನ್ನು ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ವರ್ಣಿಸಿದ್ದಾರೆ ಅದರ ಬಗ್ಗೆ ಈ ದಿನ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.
ಒಂದಕ್ಕಿಂತ ಹೆಚ್ಚಿನ ಸುಳಿಯನ್ನು ಹೊಂದಿರುವವರು ನಮ್ಮ ಮನೆಯಲ್ಲೂ ನಮ್ಮ ಸುತ್ತಮುತ್ತಲೂ ಅಥವಾ ನಮ್ಮ ಸ್ನೇಹಿತರ ಗುಂಪಿನಲ್ಲಿ ಇರುತ್ತಾರೆ ಅವರ ಸ್ವಭಾವ ಯಾವ ರೀತಿಯಲ್ಲಿ ಇರುತ್ತದೆ. ಗೊತ್ತೇ ಅವರು ತುಂಬ ಕರುಣಾಮಯಿಯಾಗಿರುತ್ತಾರೆ ಮತ್ತು ಅವರು ಎಂದೂ ಕೂಡ ಕೋಪಿಸಿಕೊಳ್ಳುವುದಿಲ್ಲ ಅವರು ಯಾವುದೇ ಒಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಕೂಡ ನೂರು ಬಾರಿ ಯೋಚಿಸಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರು ಬೇರೆಯವರನ್ನು ಅಂದರೆ ಅವರ ಸುತ್ತಮುತ್ತ ಇರುವವರನ್ನು ಯಾವಾಗಲೂ ಸಂತೋಷದಿಂದ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ
ಅವರು ಕೂಡ ಯಾವಾಗಲೂ ಸಂತೋಷದಿಂದ ಇರುತ್ತಾರೆ. ಅವರು ಅತಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಮತ್ತು ಅವರ ಜೀವನದಲ್ಲಿ ನಿಷ್ಠೆ ಎಂಬುದು ಹೆಚ್ಚಾಗಿರುವುದನ್ನು ನಾವು ಗಮನಿಸಬಹುದು ಮತ್ತು ಒಂದಕ್ಕಿಂತ ಹೆಚ್ಚು ಸುಳಿ ಇರುವ ವ್ಯಕ್ತಿಗಳನ್ನು ಯಾವುದೇ ಭಿನ್ನಾಭಿಪ್ರಾಯಗಳನ್ನು ಮನಸ್ಸಿನಲ್ಲಿ ಹಾಕಿಕೊಳ್ಳದೆ ನಂಬಬಹುದು ಮತ್ತು ಈ ವ್ಯಕ್ತಿಗಳ ನಿರ್ಣಯಗಳನ್ನು ಕೂಡ ಯಾವುದೇ ಸಂದೇಹವಿಲ್ಲದೆ ಒಪ್ಪಿಕೊಳ್ಳಬಹುದು.
ಹಾಗೆ ತಲೆಯಲ್ಲಿ ಎರಡು ಸುಳಿ ಇದ್ದರೆ ಎರಡು ಮದುವೆ ಆಗುತ್ತೆ ಅಂತ ಸಹ ಹೇಳುತ್ತಾರೆ. ಆದರೆ ಇವೆಲ್ಲ ಸತ್ಯಕ್ಕೆ ದೂರವಾದ ವಿಚಾರ. ಇವೆಲ್ಲ ಜ್ಯೋತಿಷ್ಯಶಾಸ್ತ್ರದ ಕೆಲವೊಂದು ಪ್ರಮುಖವಾದಂತಹ ಅಂಶಗಳಾಗಿವೆ ಇದನ್ನು ನಂಬುವುದು ಬಿಡೋದು ನಮ್ಮ ನಮ್ಮ ವೈಯಕ್ತಿಕ ವಿಚಾರಗಳು ಆದರೆ ಈ ರೀತಿ ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವುದರ ಆಧಾರದ ಮೇಲೆ ಈ ಒಂದಕ್ಕಿಂತ ಹೆಚ್ಚು ಸುಳಿಗಳನ್ನು ಹೊಂದಿರುವ ವ್ಯಕ್ತಿ ಈ ರೀತಿ ಇರುತ್ತಾರೆ ಎಂದು ಹೇಳಬಹುದು ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಮಾಹಿತಿಯನ್ನು ತಿಳಿದುಕೊಂಡು ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.