Tulsi Plant Vastu ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ (Tulsi Plant) ಮಹತ್ತರವಾದ ಸ್ಥಾನಮಾನವಿದೆ ಪ್ರತಿದಿನ ಬೆಳಿಗ್ಗೆ ಸ್ತ್ರೀಯರು ಸ್ನಾನ ಮಾಡಿ ನೀರನ್ನು ಹಾಕಿ ಪೂಜೆಯನ್ನು ಮಾಡುತ್ತಾರೆ ತುಳಸಿಯನ್ನು ಭಗವಂತನ ಸ್ವರೂಪವಾಗಿ ಪೂಜೆ ಮಾಡುತ್ತಾರೆ ತುಳಸಿಯಲ್ಲಿ ಮಹಾಲಕ್ಷ್ಮಿ ನೆಲೆಸಿ ಇರುತ್ತಾಳೆ ಹಾಗಾಗಿ ಪ್ರತಿ ಮನೆಯಲ್ಲಿ ಸಹ ತುಳಸಿಯನ್ನು ನೆಡುತ್ತಾರೆ ಹಾಗೆಯೇ ತುಳಸಿಯಲ್ಲಿ ಹೆಚ್ಚಿನ ರೋಗಗಳಿಗೆ ರೋಗ ನಿವಾರಕ ಶಕ್ತಿಯನ್ನು ಹೊಂದಿದೆ ಹಾಗೆಯೇ ಹಿಂದಿನ ಕಾಲದಿಂದಲೂ ತುಳಸಿಯನ್ನು ಆಯುರ್ವೇದ (Ayurveda) ಔಷಧ ತಯಾರಿಕೆಯಲ್ಲಿ ಬಳಸುತ್ತಿದ್ದರು ಭಗವಾನ ವಿಷ್ಣುವಿಗೆ ತುಳಸಿ ಎಂದರೆ ತುಂಬಾ ಪ್ರಿಯ ಹಾಗೂ ತುಳಸಿ ಸಸ್ಯವು ಭಕ್ತರಿಗೆ ದೇವರಿಗೆ ಹತ್ತಿರವಾಗಲು ಅಥವಾ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ

ಮನೆಯಲ್ಲಿ ಆರ್ಥಿಕ ಸ್ಥಿತಿಯನ್ನು ಅಭಿವೃದ್ದಿ ಪಡಿಸುತ್ತದೆ. ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಅಥವಾ ದುಷ್ಟಶಕ್ತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ ತುಳಸಿಯಲ್ಲಿ ಸತು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ ತುಳಸಿಯಲ್ಲಿರುವ ಫೈಟೊಕೆಮಿಕಲ್ಸ್ ಶ್ವಾಸಕೋಶ ಮತ್ತು ಚರ್ಮ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ನಾವು ಈ ಲೇಖನದ ಮೂಲಕ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಮತ್ತು ತುಳಸಿಯ ಪ್ರಾಮುಖ್ಯತೆ ಬಗ್ಗೆ ತಿಳಿದುಕೊಳ್ಳೋಣ.

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ವನಸ್ಪತಿ ಎಂದು ಹೇಳಲಾಗುತ್ತದೆ ತುಳಸಿ ಗಿಡವು ವಿಷ್ಣುವಿಗೆ ಅತ್ಯಂತ ಪ್ರಿಯವಾದ ಗಿಡವಾಗಿದೆ ಹಾಗಾಗಿ ಪ್ರಾಚೀನ ಗ್ರಂಥಗಳಲ್ಲಿ ತುಳಸಿಗೆ ವಿಶೇಷವಾದ ಪ್ರಾಧಾನ್ಯತೆ ನೀಡಲಾಗಿದೆ ತುಳಸಿಯಲ್ಲಿ ಅನೇಕ ರೋಗವನ್ನು ನಿವಾರಣೆ ಮಾಡುವ ಗುಣ ಇರುತ್ತದೆ ಮನೆಯ ಮುಂದೆ ತುಳಸಿ ಗಿಡ ಇದ್ದರೆ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಋಷಿ ಮುನಿಗಳು ತಮ್ಮ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸಿ ಪೂಜೆ ಮಾಡುತಿದ್ದರು ಆಗಿನಿಂದಲೇ ಸ್ತ್ರೀಯರು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಪೂಜೆಯನ್ನು ಮಾಡುತ್ತಾರೆ ತುಳಸಿಗೆ ನೀರು ಹಾಕಿ ಪೂಜೆ ಮಾಡುವ ಕ್ರಮ ಪ್ರಚಲಿತದಲ್ಲಿದೆ ಕೆಲವು ಗ್ರಂಥಗಳಲ್ಲಿ ತುಳಸಿಯನ್ನು ಮಹಾಲಕ್ಷ್ಮಿ ಸ್ವರೂಪವಾಗಿ ಪೂಜೆ ಮಾಡಲಾಗುತ್ತದೆ.

ತುಳಸಿ ಗಿಡಕ್ಕೆ ಪೂಜೆ ಮಾಡುತ್ತಿದ್ದರೆ ಲಕ್ಷ್ಮಿಯ ಆಗಮನ ಆಗುತ್ತದೆ ಸರಿಯಾದ ದಿಕ್ಕಿನಲ್ಲಿ ತುಳಸಿಯನ್ನು ನೆಟ್ಟಿದ್ದರೆ ಮನೆಯಲ್ಲಿ ಸುಖ ಸಂವೃದ್ದಿ ಇರುತ್ತದೆ ಪ್ರತಿದಿನ ಐದಾರು ತುಳಸಿ ಎಲೆಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮನೆಯಲ್ಲಿ ಆರ್ಥಿಕ ಅಭಿವೃದ್ದಿ ಆಗುತ್ತದೆ ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡುವುದು ಅತ್ಯಂತ ಶುಭಕರವಾಗಿರುತ್ತದೆ ಆದರೆ ಕೆಲವು ದಿನಗಳಲ್ಲಿ ತುಳಸಿ ಗಿಡಕ್ಕೆ ನೀರು ಹಾಕಬಾರದು ಎಂದು ಶಾಸ್ತ್ರಗಳು ಹೇಳುತ್ತದೆ.

ತುಳಸಿ ಗಿಡಕ್ಕೆ (Tulasi Plant) ಏಕಾದಶಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣದ ದಿನಗಳಂದು ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಸೂರ್ಯಾಸ್ತ ಆದ ನಂತರ ತುಳಸಿ ಗಿಡವನ್ನು ಕೀಳಬಾರದು ಒಂದು ವೇಳೆ ಮಾಡಿದರೆ ಮನೆಗೆ ವಾಸ್ತು ದೋಷ ತಗುಲುತ್ತದೆ ಗುರುವಾರ ದಿನದಂದು ಹಸಿ ಹಾಲು ನೈವೆದ್ಯ ಮಾಡುವುದರಿಂದ ಮತ್ತು ಪ್ರತಿದಿನ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಅಂಗಳದಲ್ಲಿ ಇರುವ ತುಳಸಿ ಗಿಡ ಒಣಗಬಾರದು ಸದಾ ಹಸಿರಾಗಿ ಇರುವಂತೆ ನೋಡಿಕೊಳ್ಳಬೇಕು ತುಳಸಿ ಗಿಡ ಒಣಗುವುದು ಅಶುಭ ಸೂಚಕವಾಗಿದೆ.

ತುಳಸಿ ಗಿಡವನ್ನು ಈಶಾನ್ಯ ಅಥವಾ ಪೂರ್ವ ದಿಕ್ಕಿಗೆ ಇಡಬೇಕು ಈ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ ಹಾಗೆಯೇ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿಗೆ ಇಡಬಾರದು ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿಗೆ ತುಳಸಿ ಗಿಡವನ್ನು ಇಟ್ಟರೆ ಮನೆಗೆ ಹಾನಿಯಾಗುತ್ತದೆ ವಿಷ್ಣು ಪೂಜೆಯ ಸಮಯದಲ್ಲಿ ತುಳಸಿಯನ್ನು ಅರ್ಪಿಸಿದರೆ ಸಂಪ್ರಿತನಾಗುತ್ತಾನೆ. ಮಗು ತುಂಬಾ ಹಠಮಾರಿಯಾಗಿದ್ದರೆ ತುಳಸಿ ಗಿಡವನ್ನು ಪೂರ್ವ ದಿಕ್ಕಿನ ಕಿಟಕಿಯ ಮೇಲೆ ಇಡಬೇಕು ಇದರಿಂದ ಮಕ್ಕಳ ಹಠ ಕಡಿಮೆ ಆಗುತ್ತದೆ ಮಕ್ಕಳ ಮದುವೆ ವಿಚಾರ ವಿಳಂಬ ಆಗುತ್ತಿದ್ದರೆ ತುಳಸಿ ಗಿಡವನ್ನು ಆಗ್ನೇಯ ದಿಕ್ಕಿಗೆ ಇರಿಸಬೇಕು ಮದುವೆ ಹುಡುಗಿಯ ಕೈ ಯಿಂದ ನೀರು ಹಾಕಿಸಬೇಕು ಪೂಜೆ ಮಾಡಿಸಬೇಕು ಇದರಿಂದ ಆದಷ್ಟು ಹೇಗೆ ವಿವಾಹ ನಡೆಯುತ್ತದೆ

ವ್ಯವಹಾರದಲ್ಲಿ ನಷ್ಟ ಆಗುತ್ತಿದ್ದರೆ ತುಳಸಿಯನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು ಪ್ರತಿದಿನ ಹಸಿ ಹಾಲು ಸಿಹಿ ಪದಾರ್ಥ ಗಳಿಂದ ನೈವೇದ್ಯ ಮಾಡಬೇಕು ಸಿಹಿ ತಿನಿಸುಗಳನ್ನು ಮುತೈದೆಗೆ ತಿನ್ನಲು ಕೊಡಬೇಕು ಇದರಿಂದ ವ್ಯಾಪಾರ ವ್ಯವಹಾರ ಅಭಿವೃದ್ದಿ ಆಗುತ್ತದೆ ತುಳಸಿ ಗಿಡವು ಮುಂದೆ ಎದುರಾಗುವ ಸಮಸ್ಯೆಯನ್ನು ಮುನ್ಸೂಚನೆ ನೀಡುತ್ತದೆ ಎಂದು ಧರ್ಮ ಗ್ರಂಥಗಳು ಹೇಳುತ್ತದೆ ಮನೆಯಲ್ಲಿ ಅಶಾಂತಿ ಕಂಡು ಬರುತ್ತದೆಯೋ ತುಳಸಿ ಗಿಡ ಸೂಚನೆಯನ್ನು ತಿಳಿಸುತ್ತದೆ ಹೀಗೆ ತುಳಸಿ ಗಿಡ ಪುರಾತನ ಕಾಲದಿಂದಲೂ ಪ್ರಸಿದ್ದಿಯನ್ನು ಪಡೆದಿದ್ದು ಅನೇಕ ರೋಗಗಳಿಗೆ ರೋಗ ನಿವಾರಣೆ ಮಾಡುವ ಶಕ್ತಿಯನ್ನು ಒಳಗೊಂಡಿದೆ ಹಾಗೆಯೇ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಸಹ ತುಳಸಿ ರಸ ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನೂ ಓದಿ Cancer Horoscope: ಈ ರಾಶಿಯವರಿಗೆ ಸಾಲಗಳು ಕಳೆದು, ಮನೆ ಹಾಗೂ ಜಮೀನು ಖರೀದಿಗೆ ಒಳ್ಳೆಯ ಸಮಯ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!