ಹಿಂದೂಗಳ ಮನೆಯಲ್ಲಿ ತುಳಸಿ ಹೆಚ್ಚಾಗಿ ಅಂಗಳದಲ್ಲಿ ಇದ್ದೇ ಇರುತ್ತದೆ. ಹಿಂದೂಗಳಿಗೆ ತುಳಸಿ ತುಂಬಾ ಪವಿತ್ರ. ತುಳಸಿಯಿಂದ ಬಹಳ ಪ್ರಯೋಜನಗಳು ಇವೆ. ಮಹಾಮಾರಿ ಕ್ಯಾನ್ಸರ್, ಮಧುಮೇಹ ಮತ್ತು ಕರುಳುಬೇನೆ ಮುಂತಾದವುಗಳಿಗೆ ಸೇರಿದಂತೆ ಹಲವು ರೋಗಗಳಿಗೆ ರಾಮಬಾಣ ಆಗಿದೆ ತುಳಸಿ. ಹಾಗೆಯೇ ಸೌಂದರ್ಯ ಹೆಚ್ಚಿಸಲು ಸಹ ಇದು ಸಹಕಾರಿ. ತುಳಸಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ತುಳಸಿಯಲ್ಲಿ ಇರುವ ಔಷಧೀಯ ಗುಣಗಳು ಮಾನವನ ದೇಹಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಮಧುಮೇಹ ವಿರೋಧಿ ಗುಣಗಳು ಇದ್ದು ಇದು ಅಸಾಮಾನ್ಯವಾಗಿ ಸಕ್ಕರೆಯ ಅಂಶವನ್ನು ದೇಹದಲ್ಲಿ ಕಡಿಮೆ ಮಾಡುತ್ತದೆ. ಹಾಗೆಯೇ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ನಿಯಂತ್ರಣ ಮಾಡುತ್ತದೆ. ಮಧುಮೇಹದಿಂದ ಕಿಡ್ನಿ ಮತ್ತು ಯಕೃತ್ ನಲ್ಲಿ ಆಗಿರುವ ತೊಂದರೆಗಳು ಸಹ ಕಡಿಮೆ ಆಗುತ್ತವೆ. ಕ್ಯಾನ್ಸರ್ ವಿರುದ್ಧ ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿ ಅದು ಬರದಂತೆ ತಡೆಯುತ್ತದೆ. ನಿಯಮಿತವಾಗಿ ತುಳಸಿ ಚಹಾವನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ನ್ನು ತಡೆಗಟ್ಟಬಹುದು.
ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ನಿಯಮಿತವಾಗಿ ತುಳಸಿ ಸೇವನೆ ಮಾಡುವವರಲ್ಲಿ ಮಾಡದೇ ಇರುವವರಿಗಿಂದ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ವಿಕಿರಣ ವಿಷದಿಂದ ತುಳಸಿ ರಕ್ಷಿಸುತ್ತದೆ. ನಮ್ಮ ಸುತ್ತಮುತ್ತಲಿನ ಕೆಲವು ಹಾನಿಕಾರಕ ಅಂಶಗಳಿಂದ ನಮ್ಮನ್ನು ತುಳಸಿ ರಕ್ಷಿಸುತ್ತದೆ. ಜ್ವರವನ್ನು ಕಡಿಮೆ ಮಾಡಲು ತುಳಸಿ ಸಹಕಾರಿಯಾಗಿದ್ದು ದೇಹದಲ್ಲಿ ಉಂಟಾಗುವ ಸೋಂಕಿನ ವಿರುದ್ಧ ಹೋರಾಡುತ್ತದೆ. ಅಸ್ತಮಾ, ಕೆಮ್ಮು ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದಂತೆ ಬರುವ ಖಾಯಿಲೆಗಳನ್ನು ತುಳಸಿಯು ನಿವಾರಣೆ ಮಾಡುತ್ತದೆ. ದಿನವೂ ತುಳಸಿ ಎಲೆಗಳನ್ನು ಜಗಿದರೆ ಹಲ್ಲು ಮತ್ತು ವಸಡುಗಳ ಸಮಸ್ಯೆ ದೂರವಾಗುತ್ತದೆ. ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾವನ್ನು ದೂರ ಮಾಡಿ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
ಅರೆತಲೆನೋವಿನಿಂದ ಬಳಲುತ್ತಿರುವವರು ತುಳಸಿ ಚಹಾ ಸೇವಿಸಿದರೆ ಬಹಳ ಒಳ್ಳೆಯದು. 10 ರಿಂದ 20ಮಿಲಿಲೀಟರ್ ತುಳಸಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಚರ್ಮದ ತುರಿಕೆ, ಉರಿ ಮುಂತಾದವುಗಳು ದೂರವಾಗುತ್ತವೆ. ಪ್ರತಿದಿನ 5 ತುಳಸಿಯ ಎಲೆಯನ್ನು ನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬುದ್ಧಿಶಕ್ತಿ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ. ಹಲ್ಲು ನೋವು ಆದಾಗ 4 ತುಳಸಿ ಎಲೆಗೆ 2 ಮೆಣಸಿನಕಾಳನ್ನು ಜಜ್ಜಿ ಹಲ್ಲಿಗೆ ಇಟ್ಟುಕೊಳ್ಳುವುದರಿಂದ ಹಲ್ಲುನೋವು ನಿವಾರಣೆ ಆಗುತ್ತದೆ. ತುಳಸಿಯ ಎಲೆ, ಕಾಂಡ ಎಲ್ಲವನ್ನೂ ಒಣಗಿಸಿ ಸೇರಿಸಿ ಪುಡಿಮಾಡಿ ಹಾಲಿನಲ್ಲಿ ದಿನವೂ ಸೇವಿಸುವುದರಿಂದ ಮಂಡಿನೋವು ಕಡಿಮೆಯಾಗುತ್ತದೆ. ತುಳಸಿ ಎಲೆ ಮತ್ತು ಕಡಲೇಹಿಟ್ಟನ್ನು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು.