ಮನೆ ಎಂದು ಇದ್ದ ಮೇಲೆ ಆಚಾರ ವಿಚಾರದ ಆಚರಣೆ ಇರಲೇಬೇಕು. ಅದರಲ್ಲಿ ಮುಂಜಾವಿಗೆ ಮತ್ತು ಮುಂಸಂಜೆಗೆ ದೇವಿಗೆ ದೀವಿಗೆ ಹೊತ್ತಿಸಿದ ಹಾಗೆ ತುಳಸಿ ಮಾತೆಗು ಕೂಡ ದೀಪ ಬೆಳಗಿ ಪೂಜೆ ಮಾಡಬೇಕು ಎನ್ನುವುದು ಧಾರ್ಮಿಕ ಕಾರಣ.
ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ತುಳಸಿ ಮಾನವರಿಗೆ ಆಮ್ಲಜನಕ ಪೂರೈಕೆ ಮಾಡುತ್ತದೆ ಅದಕ್ಕೆ ಅದನ್ನು ಮನೆ ಮುಂದೆ ಇಡುತ್ತಾರೆ. ಇಂದು ನಾವು ತುಳಸಿ ಗಿಡದ ವಿಶೇಷತೆ ಬಗ್ಗೆ ತಿಳಿಯೋಣ.
ತುಳಸಿ ಗಿಡಕ್ಕೆ ಪ್ರತಿದಿನ ನೀರನ್ನು ಸಮರ್ಪಣೆ ಮಾಡುವುದರಿಂದ ದಿನ ಶುಭಕರವಾಗಿ ಇರುತ್ತದೆ. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸೂರ್ಯ ಉದಯವಾದ ಸಮಯದಲ್ಲಿ ಸೂರ್ಯನಿಗೆ ಮೊದಲು ನೀರನ್ನು ಸಮರ್ಪಿಸಿದ ನಂತರವೇ ತುಳಸಿಗೆ ನೀರು ಹಾಕಬೇಕು ಎಂದು ಹೇಳಲಾಗುತ್ತದೆ.
ತುಳಸಿ ಗಿಡ ಹಿಂದೂ ಧರ್ಮದಲ್ಲಿ ವಿಶೇಷ ಆದ್ಯತೆಯನ್ನು ಪಡೆದಿದೆ. ಇಲ್ಲಿನ ಪ್ರತಿ ಮನೆಯಲ್ಲೂ ತುಳಸಿ ಗಿಡ ತಪ್ಪದೇ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡಿ ಸೂರ್ಯನಿಗೆ ನೀರನ್ನು ಅರ್ಪಣೆ ಮಾಡುವುದರ ಜೊತೆಗೆ ತುಳಸಿಗೆ ನೀರು ಹಾಕಬೇಕು ಎಂದು ಹೇಳಲಾಗುತ್ತದೆ.
ತುಳಸಿ ಹೆಚ್ಚು ಔಷಧೀಯ ಹಾಗೂ ಧಾರ್ಮಿಕ ಗುಣಗಳಿಂದ ಕೂಡಿದೆ ಎಂದು ಪರಿಗಣಿಸಲಾಗಿದೆ. ತುಳಸಿಯನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿಯು ವಿಷ್ಣುವಿಗೆ ಬಹಳ ಪ್ರಿಯ ಏಕೆಂದರೆ ಅದರಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ.
ತುಳಸಿಗೆ ನೀರನ್ನು ಸಮರ್ಪಣೆ ಮಾಡುವುದರಿಂದ ಹಣದ ವಿಚಾರದಲ್ಲಿ ಲಾಭವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ತುಳಸಿಗೆ ನೀರು ಹಾಕುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೋಡೋಣ :-
- ತುಳಸಿಗೆ ನೀರನ್ನು ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬಂದು ನೆಲೆಸುತ್ತದೆ.
- ತುಳಸಿಗೆ ನೀರನ್ನು ಅರ್ಪಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ ಅದರಲ್ಲಿ ಲಕ್ಷ್ಮಿ ವಾಸವಿರುತ್ತಾಳೆ.
- ತುಳಸಿಗೆ ನೀರನ್ನು ಅರ್ಪಣೆ ಮಾಡುವುದರಿಂದ ಜೀವನದಲ್ಲಿ ಬರುವ ತೊಂದರೆಗಳಿಗೆ ಮುಕ್ತಿ ಸಿಗುತ್ತದೆ ಮತ್ತು ಜೀವನದಲ್ಲಿ ಆನಂದ, ಸುಖ ಮತ್ತು ಶಾಂತಿ ನೆಲೆಸುತ್ತದೆ.
- ತುಳಸಿಗೆ ನೀರನ್ನು ಅರ್ಪಿಸುವಾಗ, ಶ್ರೀಗಂಧದ ತಿಲಕವನ್ನು ಹಣೆಗೆ ಹಚ್ಚಿ, ಇದನ್ನು ಮಾಡುವುದರಿಂದ ನೀವು ಭಗವಾನ್ ಶ್ರೀ ವಿಷ್ಣುವಿನ ಆಶೀರ್ವಾದವನ್ನು ಪಡೆಯುವರು.
- ಹಾಗೆಯೇ ಪೂಜೆ ಮಾಡುವಾಗ ತುಪ್ಪದ ದೀಪವನ್ನು ಹಚ್ಚಿದರೆ ಒಳ್ಳೆಯದು.
ತುಳಸಿ ಪೂಜೆ ಮಂತ್ರ :-ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯು ತುಳಸಿಯಲ್ಲಿ ನೆಲೆಸಿದ್ದಾಳೆ ಎನ್ನುವ ನಂಬಿಕೆ ಇದೆ. ಆದ್ದರಿಂದ ತುಳಸಿಯು ವಿಷ್ಣುವಿಗೆ ತುಂಬಾ ಪ್ರಿಯ ಮತ್ತು ವಿಶೇಷ. ಈ ಕಾರಣಕ್ಕಾಗಿಯೇ ತುಳಸಿ ಎಲೆಗಳನ್ನು ವಿಶೇಷವಾಗಿ ವಿಷ್ಣುವನ್ನು ಪೂಜಿಸುವಾಗ ಮತ್ತು ಪ್ರಸಾದದಲ್ಲಿ ಬಳಸಲಾಗುತ್ತದೆ. ಅದೇ ರೀತಿ ತುಳಸಿಗೆ ನೀರನ್ನು ಅರ್ಪಿಸುವಾಗ 11 ಅಥವಾ 21 ಬಾರಿ ಓಂ ಎಂದು ಜಪಿಸಬೇಕು ತುಳಸಿ ಗಿಡದಲ್ಲಿ ಹೆಚ್ಚು ಔಷಧೀಯ ಗುಣಗಳು ಇರುವುದರಿಂದ ಅದು ಮನೆ ಮದ್ದಾಗಿ ಕೂಡ ಪ್ರಸಿದ್ಧ. ಕೆಮ್ಮು ಕಫವನ್ನು ಬೇಗ ಗುಣ ಮಾಡುತ್ತದೆ. ತುಳಸಿ ಧಾರ್ಮಿಕ ಮತ್ತು ವೈದ್ಯಕೀಯ ಹಿನ್ನಲೆಯನ್ನು ಹೊಂದಿದೆ.