ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಆಚಾರ ವಿಚಾರ ಸಂಪ್ರದಾಯ ಪದ್ಧತಿಗಳು ನಮಗೆ ಕಾಣ ಸಿಗುತ್ತವೆ. ಹಿಂದಿನ ಕಾಲದಿಂದಲೂ ಮಾಡಿಕೊಂಡು ನಡೆಸಿಕೊಂಡು ಬರುತ್ತಿರುವ ಕೆಲವು ಸಂಪ್ರದಾಯಗಳನ್ನು ನಾವು ಇಂದಿಗೂ ಕೂಡ ಕೆಲವು ಮನೆಗಳಲ್ಲಿ ಕಾಣಬಹುದು. ಇನ್ನೂ ಕೆಲವು ಕಡೆ ಈ ಸಂಪ್ರಾದಯ ಆಚಾರ ವಿಚಾರಗಳು ಜಾರಿಯಲ್ಲಿ ಇರುವುದೇ ಇಲ್ಲ. ನಮ್ಮ ಪೂರ್ವಜರು ಕುಟುಂಬದ ಒಳಿತಿಗಾಗಿ ಕೆಲವೊಂದಿಷ್ಟು ಆಚಾರಗಳನ್ನು ಯಾವುದನ್ನು ಮಾಡಬೇಕು ಮಾಡಬಾರದು ಎಂದು ಸಹ ತಿಳಿಸಿದ್ದಾರೆ. ಹಾಗೆಯೇ.
ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಎಷ್ಟು ಮಹತ್ವ ಇದೆ ಅನ್ನೋದು ಗೊತ್ತಿದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ತುಳಸಿ ಗಿಡವನ್ನು ಪೂಜನೀಯವಾಗಿ ನೋಡಲಾಗುತ್ತದೆ. ಗಿಡವನ್ನು ಎಲ್ಲರ ಮನೆಯ ಎದುರು ಬೆಳೆಸುತ್ತಾ ಇದ್ದರು. ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ನೆಡುವುದಕ್ಕೂ ಒಂದು ಕಾರಣವಿತ್ತು. ಮನೆಯಲ್ಲಿ ಯಾವುದೇ ಕ್ಷುದ್ರ ಶಕ್ತಿಗಳು ಕೆಟ್ಟ ಕಣ್ಣುಗಳು ಮನೆಯ ಮೇಲೆ ಬೀಳಬಾರದು ಎಂಬ ಉದ್ದೇಶದಿಂದ ಪ್ರತಿದಿನ ತುಳಸಿ ಗಿಡಕ್ಕೆ ಪೂಜೆ ಸಹ ಮಾಡಲಾಗುತ್ತಿತ್ತು. ಆದ್ರೆ ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಂಡರೆ ಕೆಲವೊಂದು ನಿಯಮಗಳು ಇವೆ ಅವುಗಳನ್ನ ಈ ರೀತಿಯಾಗಿ ಪಾಲಿಸಬೇಕು.
ದೇವತಾ ಸ್ವರೂಪದಲ್ಲಿ ಕಾಣುವ ತುಳಸಿ ಗಿಡ ಮನೆಯನ್ನು ಯಾವಾಗಲೂ ಪವಿತ್ರವಾಗಿ ಇಡುತ್ತದೆ. ತುಳಸಿ ಗಿಡ ಇರುವ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಇರುವುದಿಲ್ಲ. ಮನೆಯಲ್ಲಿ ತುಳಸಿ ಗಿಡ ಇರುವವರಿಗೆ ಇದರ ಪಾವಿತ್ರ್ಯತೆ ಸ್ವಚ್ಛತೆಯ ಬಗ್ಗೆ ತಿಳಿದೇ ಇರುತ್ತದೆ. ಆದರೂ ತುಳಸಿ ಗಿಡ ನಮ್ಮ ಮನೆಯಲ್ಲಿ ಇರುವಾಗ ನಾವು ಹಲವಾರು ರೀತಿಯ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಇಲ್ಲದೆ ಹೋದರೆ ಅಪಾಯ, ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಗಿ ಬರಬಹುದು. ಮನೆಯಲ್ಲಿ ತುಳಸೀ ಗಿಡ ಇದ್ದರೆ ಇದ್ದು ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ಓಡಿಸಿ ಸಕಾರಾತ್ಮಕ ಶಕ್ತಿಗಳನ್ನು ತುಂಬುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿ ಆರೋಗ್ಯವಾಗಿ, ಸುಖ ಜೀವನ ನಡೆಸುತ್ತೀರಿ. ಯಾವುದೇ ಆರ್ಥಿಕ ಸಮಸ್ಯೆಯಿದ್ದರೆ ಸಹ ನಿವಾರಣೆ ಆಗುತ್ತದೆ. ಒಂದು ರೀತಿಯಲ್ಲಿ ಆಯುರಾರೋಗ್ಯ ಐಶ್ವರ್ಯ ಸಮೃದ್ಧಿಯಾಗಿ ಇರುತ್ತದೆ.
ಶಾಸ್ತ್ರದ ಪ್ರಕಾರ, ಏಕಾದಶಿ, ಭಾನುವಾರ, ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಈ ದಿನಗಳಲ್ಲಿ ತುಳಸಿ ಗಿಡದ ಎಲೆಗಳನ್ನು ಕೀಳಬಾರದು. ಈ ದಿನಗಳಲ್ಲಿ ತುಳಸಿ ಎಲೆಗಳನ್ನು ಕಿತ್ತರೆ ದೋಷ ಅಂಟಿಕೊಳ್ಳುತ್ತದೆ. ಪ್ರತಿ ದಿನ ತುಳಸಿ ಗಿಡಕ್ಕೆ ಪೂಜೆ ಮಾಡಬೇಕು ಹಾಗೂ ಪ್ರತಿ ದಿನ ಸಂಜೆ ದೀಪವನ್ನು ಹಚ್ಚಿ ಆರಾಧನೆ ಮಾಡಬೇಕು. ಹೀಗೆ ಸಂಜೆಯ ಹೊತ್ತಿಗೆ ತುಳಸಿ ಗಿಡಕ್ಕೆ ದೀಪ ಹಚ್ಚಿ ಆರಾಧನೆ ಮಾಡಿದರೆ ಆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳು ಹೇಳುತ್ತವೆ.
ತುಳಸಿ ಗಿಡ ಮನೆಯಲ್ಲಿ ಇದ್ರೆ ಕೆಲವು ವಾಸ್ತು ದೋಷಗಳು ನಿವಾರಣೆ ಆಗಿ ಆರ್ಥಿಕ ಸಮಸ್ಯೆಗಳು ಪರಿಹಾರ ಆಗುತ್ತವೆ. ತುಳಸಿ ಗಿಡ ಒಣಗಿ ಹೋಗಿದ್ದರೆ ಅದನ್ನ ಕೆರೆ ಅಥವಾ ನದಿಯಲ್ಲಿ ನೀರು ಇರುವ ಸ್ಥಳದಲ್ಲಿ ಬಿಡಬೇಕು. ಒಣಗಿದ ತುಳಸಿ ಗಿಡ ಮನೆಯಲ್ಲಿ ಇದ್ದರೆ, ಅದನ್ನು ಅಶುಭ ಅಂತ ಭಾವಿಸಲಾಗುತ್ತದೆ. ತುಳಸಿ ಗಿಡ ಇದ್ದಕ್ಕಿದ್ದಂತೆ ಒಣಗಿ ಹೋದರೆ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆ ಎಂದು ಅರ್ಥ.
ತುಳಸಿಯನ್ನು ಬಹಳಷ್ಟು ಆರೋಗ್ಯವಂತ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ತುಳಸಿಯನ್ನು ಸಂಜೀವಿನಿ ಎಂದು ಭಾವಿಸಲಾಗುತ್ತದೆ. ವಾತಾವರಣದಲ್ಲಿನ ಕೆಟ್ಟ ಬ್ಯಾಕ್ಟೀರಿಯಾ ಗಳನ್ನ ನಾಶ ಮಾಡಿ ಒಳ್ಳೆಯ ವಾತಾವರಣ ಸೃಷ್ಟಿಸಿ ಶುದ್ಧ ಗಾಳಿ ನೀಡುತ್ತದೆ.
ನೆನಪಲ್ಲಿ ಇಡಬೇಕಾದ ಇನ್ನೊಂದು ಮುಖ್ಯ ವಿಷಯ ಎಂದರೆ, ತುಳಸಿ ಎಲೆಗಳನ್ನು ಶಿವಲಿಂಗ ಹಾಗೂ ಗಣಪತಿಯ ಪೂಜೆಗೆ ಬಳಸಬಾರದು. ಇದಕ್ಕೆ ಅನುಗುಣವಾಗಿ ಎರಡು ಕಥೆಗಳು ಚಾಲ್ತಿಯಲ್ಲಿ ಇದೆ. ಈ ಕಥೆಯ ಪ್ರಕಾರ, ಶಿವನು ತುಳಸಿಯ ಗಂಡನಾದ ರಾಜ ಚಾಂಗ್ ಚೂರನನ್ನು ವಧಿಸಿದ. ಹಾಗಾಗಿ ಶಿವನ ಪೂಜೆಗೆ ತುಳಸಿಯನ್ನು ಬಳಸಬಾರದು. ಮತ್ತು ತುಳಸಿ ಸಹಾಯದಿಂದ ಶಿವ ಲಿಂಗಕ್ಕೆ ನೀರನ್ನು ಸಹ ಹಾಕಬಾರದು.
ಇನ್ನೊಂದು ಕಥೆಯ ಪ್ರಕಾರ, ತುಳಸಿಯು ಗಣಪತಿಯನ್ನು ವಿವಾಹ ಆಗಲ್ಲು ಕೇಳಿದಾಗ ಗಣಪತಿ ತಾನು ಬ್ರಹ್ಮಚಾರಿ ಆಗಿರುವುದಾಗಿ ತಿಳಿಸಿ ತಿರಸ್ಕರಿಸಿದ್ದ. ಇದಕ್ಕೆ ಕೋಪಗೊಂಡ ತುಳಸಿ ನಿನಗೆ ಎರಡು ವಿವಾಹ ಆಗಲಿ ಎಂದು ಶಪಿಸುತ್ತಾಳೆ ಇದರಿಂದ ಕೋಪಗೊಂಡ ಗಣಪತಿ ಸಹ ನಿನಗೆ ಒಂದು ರಾಕ್ಷಸನ ಜೊತೆ ವಿವಾಹ ಆಗಲಿ ಎಂದು ತುಳಸಿಗೆ ಶಾಪ ನೀಡುತ್ತಾನೆ. ಹಾಗಾಗಿ ಗಣಪತಿಯ ಪೂಜೆಗೆ ಸಹ ತುಳಸಿಯನ್ನು ಬಳಸಬಾರದು.