ಮನೆಯಲ್ಲಿ ದಟ್ಟವಾಗಿ ಹಾಗೂ ಹಸಿರಾಗಿ ಇರುವಂತೆ ತುಳಸಿ ಗಿಡವನ್ನು ಹೇಗೆ ಬೆಳೆಸೋದು ಅನ್ನೋದರ ಮಾಹಿತಿ ಇಲ್ಲಿದೆ. ನೀರು ಸರಾಗವಾಗಿ ಹೊರಗೆ ಹೋಗಲು ಅನುಕೂಲ ಇರುವ ತಳದಲ್ಲಿ ರಂಧ್ರ ಇರುವ ಪಾಟ್ ತೆಗೆದುಕೊಳ್ಳಿ. ಪಾಟ್ ಅಲ್ಲಿ ನೀರು ಹಾಗೆ ಇದ್ದರೆ ನೀರು ಕಟ್ಟಿ ನಾವು ನೆಟ್ಟಿರುವ ತುಳಸಿ ಗಿಡ / ಯಾವುದೇ ಒಂದು ಗಿಡ ಕೊಳೆತು ಹೋಗುತ್ತದೆ. ರಂದ್ರ ಮುಚ್ಚಿ ಇದ್ದರೆ ಅದನ್ನ ಒಂದು ಸೂಜಿ ಯಿಂದ ಬಿಸಿ ಮಾಡಿಕೊಂಡು ರಂದ್ರ ತೆಗೆದುಕೊಳ್ಳಬೇಕು. ಪಾಟ್ ಒಳಗಡೆ ಸ್ವಲ್ಪ ಕಲ್ಲುಗಳನ್ನು ತುಂಬಬೇಕು. ಹೀಗೆ ಮಾಡುವುದರಿಂದ ಮಣ್ಣು ಗಟ್ಟಿ ಆಗಿ ಕುರಲ್ಲ ಹಾಗೆ ಹಾಕಿದ ನೀರು ಕೂಡ ಸರಾಗವಾಗಿ ಇಳಿದು ಹೋಗತ್ತೆ. ಹಾಗೆ ನಾವು ಹಾಕಿರೋ ಮಣ್ಣು ಹದವಾಗಿ ಇರಬೇಕು ಅಂದರೆ ಕಲ್ಲಿನ ಮೇಲೆ ಸ್ವಲ್ಪ ತೆಂಗಿನ ನಾರನ್ನು ಸ್ವಲ್ಪ ಸಣ್ಣದಾಗಿ ಕಟ್ ಮಾಡಿ ಹಾಕಬೇಕು. ಮನೆಯ ಬಳಿ ಮರಗಳು ಇದ್ರೆ, ಆ ಮರದ ಎಲೆಗಳನ್ನು ಸಹ ಗೊಬ್ಬರವಾಗಿ ಬಳಸಬಹುದು. ನಂತರ ಗೊಬ್ಬರ ಮಿಶ್ರಿತ ಮಣ್ಣನ್ನು ಹಾಕಬೇಕು. ಈ ಮಣ್ಣಿಗೆ ಆಕಳ ಸಗಣಿ ಗೊಬ್ಬರವನ್ನು ಸೇರಿಸಿದರೆ ಉತ್ತಮ. ಪಾಟ್ ನ ಮುಕ್ಕಾಲು ಭಾಗ ಮಣ್ಣು ಮತ್ತು ಗೊಬ್ಬರ ಹಾಕಿ ಮೇಲಿಂದ ನೀರು ಹಾಕಿ ೫/೧೦ ನಿಮಿಷ ಹಾಗೆ ಬಿಡಬೇಕು. ನಂತರ ನೀರು ಎಲ್ಲಾ ಹೀರಿಕೊಂಡಮೇಲೆ ಒಂದು ಕೋಲಿನ ಸಹಾಯದಿಂದ ಆಳದವರೆಗೂ ಒಂದು ರಂದ್ರ ತೆಗೆದು ಅದರಲ್ಲಿ ತುಳಸಿಗಿಡವನ್ನ ನೆಟ್ಟು ಸುತ್ತಲೂ ಸ್ವಲ್ಪ ಪ್ರೆಸ್ ಮಾಡಬೇಕು. ಪುಟ್ಟ ತುಳಸಿ ಗಿಡವನ್ನು ನೆಡುವುದರಿಂದ ನಂತರ ಅದು ಬೆಳೆದು ತುಂಬಾ ದಟ್ಟವಾಗಿ ಬೆಳೆಯುತ್ತೆ. ಗಿಡ ಬೆಳೆಯುತ್ತಾ ಬಂದಂತೆ ಅದರ ಕುಡಿಯನ್ನು ಚಿವುಟಿ ತೆಗೆಯಬೇಕು. ಇದರಿಂದ ಗಿಡ ಚೆನ್ನಾಗಿ ಬೆಳೆಯುತ್ತೆ.
ತುಳಸಿ ಗಿಡವನ್ನು ನೆಟ್ಟು ಆದ ನಂತರ ಅದನ್ನ ಇನ್ನೂ ಚೆನ್ನಾಗಿ ಬೆಳೆಸಬೇಕು ಅಂದರೆ ಅದಕ್ಕೆ ಕಾಕ್ಟೈಲ್ ಸ್ಪ್ರೇ ಹೇಗೆ ಮಾಡೋದು ಅನ್ನೋದನ್ನ ನೋಡೋಣ. ಒಂದು ಬಕೆಟ್ ನಲ್ಲಿ ೩ ಲೀಟರ್ ನೀರು ತೆಗೆದುಕೊಂಡು, ಅದಕ್ಕೆ ಗಿಡಗಳಿಗೆ ಕ್ಯಾಲ್ಸಿಯಂ ಆಗಿ ಸ್ವಲ್ಪ ಹಸಿ ಹಾಲು ಅಥವಾ ಮಜ್ಜಿಗೆಯನ್ನು ಸೇರಿಸಿ ಮಿಕ್ಸ್ ಮಾಡಿ ಒಂದು ಕಡೆ ಇಟ್ಟುಕೊಳ್ಳಬೇಕು. ನಂತರ ಅದಕ್ಕೆ ಸ್ಪೆಷಲ್ ಅದ ಒಂದು ಕಾಂಪೋಸ್ಟ್ ಟಿ ತಯಾರು ಮಾಡಿಕೊಳ್ಳಬೇಕು. ಅದಕ್ಕೆ ಒಂದು ಲೀಟರ್ ನೀರಿಗೆ ದನಕರುಗಳ ಗೊಬ್ಬರ ಅಥವಾ ವರ್ಣಿಕಾಂಪೋಸ್ಟ್ ಸೇರಿಸಿ ಮಿಕ್ಸ್ ಮಾಡಬೇಕು. ಇದನ್ನ ಒಂದು ವಾರ ಮೊದಲೇ ಮಾಡಿಟ್ಟುಕೊಳ್ಳಬೇಕು ಹಾಗೆ ಪ್ರತೀ ದಿನ ಕೈ ಆಡಿಸುತ್ತಾ ಇರಬೇಕು. ಒಂದು ವಾರದ ನಂತರ ಅದನ್ನ ಸೋಸಿಕೊಳ್ಳಬೇಕು. ಈ ಡಿಕಾಕ್ಷನ್ ಅನ್ನು ನೀರು ಮತ್ತು ಹಾಲು ಮಿಕ್ಸ್ ಮಾಡಿಟ್ಟ ಬಕೆಟ್ ಗೆ ಸೇರಿಸಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಅರ್ಧ ಸ್ಪೂನ್ Epsom salt ಸೇರಿಸಿಕೊಳ್ಳಬೇಕು. ಇದನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನ ಗಿಡಗಳಿಗೆ ಹಾಕಬೇಕು. ಅಥವಾ ಸ್ಪ್ರೇ ಬಾಟಲ್ ಗೆ ಹಾಕಿಕೊಂಡು ಕೂಡ ಸ್ಪ್ರೇ ಮಾಡಬಹುದು. ಇದರಿಂದ ಗಿಡಗಳು ತುಂಬಾ ಚೆನ್ನಾಗಿ ಬೆಳವಣಿಗೆ ಹೊಂದುತ್ತವೆ.
ತುಳಸಿ ಬೀಜದಿಂದ ಹೇಗೆ ತುಳಸಿ ಗಿಡವನ್ನ ಬೆಳೆಸೋದು ಅಂತ ನೋಡೋಣ. ಮೇಲೆ ಹೇಳಿದ ಹಾಗೆ ಪಾಟ್ ರೆಡಿ ಮಾಡಿಕೊಂಡು ತುಳಸಿ ಬೀಜಗಳನ್ನು ಕೈ ಅಲ್ಲಿ ಸ್ವಲ್ಪ ಪ್ರೆಸ್ ಮಾಡಿ ತೆಗೆದುಕೊಂಡು ಮಣ್ಣಿನಲ್ಲಿ ಹರಡಬೇಕು. ಮಣ್ಣಿಗೆ ಹಾಕಿ ಹಾಗೆ ಬಿಟ್ರೆ ಇರುವೆಗಳು ತಿನ್ನತ್ತೆ ಹಾಗಾಗಿ ಗೊಬ್ಬರದ ಅಂಗಡಿಗಳಲ್ಲಿ ಇರುವೆ ಓಡಿಸೋಕೆ ಒಂದು ಪೌಡರ್ ಸಿಗತ್ತೆ ಅದನ್ನ ತಂದು ಒಂದ್ ಬಾಟಲ್ ನಲ್ಲಿ ಹಾಕಿ ಆ ಬಾಟಲ್ ನ ಮುಚ್ಚಲಕ್ಕೆ ಪಿನ್ ಅಥವಾ ಸೂಜಿಯಿಂದ ಸಣ್ಣ ರಂದ್ರ ಮಾಡಿಕೊಂಡು ಅದರ ಸಹಾಯದಿಂದ ಹಾಕಬೇಕು. ಇದನ್ನ ಹಾಕುವುದರಿಂದ ತುಳಸಿ ಬೀಜವನ್ನು ಇರುವೆಗಳು ತಿನ್ನದೆ ಚೆನ್ನಾಗಿ ಗಿಡ ಬೆಳೆಯುತ್ತೆ.