ತುಳಸಿಗಿಡ ಸಾಮನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಹಿಂದೂ ಪುರಾಣಗಳ ಪ್ರಕಾರ ತುಳಸಿ ಗಿಡವನ್ನ ಪ್ರತಿದಿನ ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳನ್ನ ಸಿದ್ಧಿಪಡಿಸಿಕೊಳ್ಳ ಬಹುದು. ಈ ತುಳಸಿಗಿಡವನ್ನ ಪೂಜೆ ಮಾಡುವುದಷ್ಟೇಯಲ್ಲ, ಇದರಿಂದ ಹಲವು ಆರೋಗ್ಯಕಾರಿ ಲಾಭಗಳನ್ನ ಪಡೆದುಕೊಳ್ಳಬಹುದು. ತುಳಸಿಗಿಡವನ್ನ ಹಿಂದೂ ಸಂಪ್ರದಾಯ ಪಾಲಿಸುವ ಪ್ರತಿಯೊಬ್ಬರ ಮನೆಯಲ್ಲೂ ನಾವು ಕಾಣಬಹುದು.
ತುಳಸಿಗಿಡದಲ್ಲಿ ರೋಗಗಳನ್ನ ಗುಣ ಪಡಿಸುವ ಹಾಗು ಕ್ರಿಮಿಕೀಟಗಳನ್ನ ತಡೆಯುವ ಶಕ್ತಿ ಇದೆ ಎಂದು ಹೇಳುತ್ತಾರೆ, ತುಳಸಿ ಗಿಡದಲ್ಲಿ ಹಲವು ಆರೋಗ್ಯಕಾರಿ ಗುಣಗಳಿವೆ ಎಂದು ಆಯುರ್ವೇದ ಹೇಳುತ್ತದೆ. ಶೀತ ಸಂಬಂದಿ ಹಲವು ರೋಗಗಳಿಗೆ ತುಳಸಿ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ, ಪ್ರತಿ ನಿತ್ಯ ಇದರ ಎಲೆಯನ್ನು ಜಗಿಯುತಿದ್ದರೆ ಶೀತ, ಕಫ, ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಮೂತ್ರ ಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ತುಳಸಿ ಎಲೆಯ ರಸದ ಜೊತೆಗೆ ಜೇನುತುಪ್ಪ ಸೇರಿಸಿ ಕುಡಿಯುತ್ತಿದ್ದರೆ ಒಳ್ಳೆಯದು ಹಾಗಾಗಿ ಮನೆಯ ಸುತ್ತ ತುಳಸಿ ಗಿಡ ನೆಡುವುದು ಉತ್ತಮ. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ಎನ್ನುವವರ ಸಂಖ್ಯೆ ಹೆಚ್ಚು ಅಂತವರು ಮನೆಯ ಸುತ್ತ ಹೆಚ್ಚು ಹೆಚ್ಚು ತುಳಸಿ ಗಿಡ ನೆಟ್ಟು ನೋಡಿ, ಇದರ ಸುವಾಸನೆಗೆ ಸೊಳ್ಳೆ ಹೆಚ್ಚು ಸುಳಿಯುವುದಿಲ್ಲ, ಇದು ನಮ್ಮ ಸುತ್ತಮುತ್ತಲಿನ ಗಾಳಿಯನ್ನು ಶುದ್ದಿಗೊಳಿಸುತ್ತದೆ.
ಇನ್ನು ಬೇರೆ ಸಸ್ಯಗಳಿಗೆ ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ, ಅಂದಾಜು ದಿನಕ್ಕೆ ಇಪತ್ತು ಗಂಟೆಗಳ ಕಾಲ ಆಮ್ಲಜನಕ ಹೊರಸೂಸುತ್ತದೆ ಎನ್ನಲಾಗುತ್ತದೆ, ಅಲ್ಲದೆ ಇದರಿಂದ ಹೊರಹೊಮ್ಮುವ ಸುವಾಸನೆ ನಮ್ಮ ಲಹರಿಯನ್ನು ಉತ್ತಮಗೊಳಿಸುತ್ತದೆ. ಹಾಗಾಗಿ ತುಳಸಿ ಇದ್ರೆ ಉತ್ತಮ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.