ಸಾಮಾನ್ಯವಾಗಿ ಎಲ್ಲರೂ ತಮ್ಮ ಮನೆಯ ಎದುರು ತುಳಸಿ ಗಿಡವನ್ನು ನೆಟ್ಟು ಪ್ರತಿದಿನ ಪೂಜೆ ಮಾಡುತ್ತಾರೆ. ಪೂಜೆಗೆ ಒಳಪಡುವ ತುಳಸಿ ಗಿಡ ಅನೇಕ ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯನ್ನು ಸಹ ಹೊಂದಿದೆ. ಹಾಗಾದರೆ ತುಳಸಿ ಎಲೆಯ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ.
ತುಳಸಿ ಗಿಡವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ ಔಷಧೀಯ ಗಿಡವಾಗಿಯೂ ಬಳಸುತ್ತೇವೆ. ಪ್ರತಿದಿನ ಬೇಗ ಎದ್ದು ಯೋಗ ಮಾಡುವುದು, ವಾಕಿಂಗ್ ಮಾಡುವುದು ಒಳ್ಳೆಯದು. ಪ್ರತಿದಿನ ಬೆಳಗ್ಗೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಎದ್ದ ತಕ್ಷಣ ತುಳಸಿ ಎಲೆಯನ್ನು ತಿನ್ನುವುದು ಅಥವಾ ತುಳಸಿ ರಸವನ್ನು ಕುಡಿಯುವುದು ಒಳ್ಳೆಯದು.
ಡಯಾಬಿಟೀಸ್ ಇರುವವರು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಯನ್ನು ಸೇವಿಸಬೇಕು ಇದರಿಂದ ಒಂದೆರಡು ತಿಂಗಳಿನಲ್ಲಿ ಡಯಾಬಿಟೀಸ್ ಕಂಟ್ರೋಲ್ ಬರುತ್ತದೆ. ಮಕ್ಕಳಿಗೆ ಜ್ವರ ಬಂದಾಗ ತುಳಸಿ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುವುದರಿಂದ ಜ್ವರ ನಿವಾರಣೆಯಾಗುತ್ತದೆ ಅಲ್ಲದೆ ಕೆಮ್ಮು, ಶೀತ ಸಹ ತುಳಸಿ ರಸದಿಂದ ನಿವಾರಣೆಯಾಗುತ್ತದೆ.
ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಅನೇಕ ರೋಗಗಳು ನಿವಾರಣೆಯಾಗುತ್ತದೆ. ತುಳಸಿ ರಸಕ್ಕೆ ಜೇಷ್ಠಮಧುವಿನ ಪೇಸ್ಟ್ ಅನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ. ಪ್ರತಿದಿನ ತುಳಸಿ ಎಲೆಯನ್ನು ಸೇವಿಸುತ್ತಾ ಬಂದರೆ ಇಮ್ಯೂನಿಟಿ ಪವರ್ ಹೆಚ್ಚಾಗುತ್ತದೆ.
ತುಳಸಿ ಎಲೆಯನ್ನು ಸೇವಿಸುತ್ತಾ, ತುಳಸಿ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. 5-6 ದಾಸವಾಳದ ಎಲೆ ಅಥವಾ ಹೂವು, 2 ಇಂಚು ಆಲೋವೆರಾ, 3-4 ತುಳಸಿ ಎಲೆಯನ್ನು ಹಾಕಿ ಕೊಬ್ಬರಿ ಎಣ್ಣೆಯಲ್ಲಿ ಕಾಸಿ ತಣ್ಣಗಾದ ನಂತರ ತಲೆಗೆ ಅಪ್ಲೈ ಮಾಡಬೇಕು. ಪ್ರತಿದಿನ ತುಳಸಿ ಎಲೆಯನ್ನು ಸೇವಿಸುವುದರಿಂದ ಹೊಟ್ಟೆ ಹಸಿವು ಆಗುತ್ತದೆ.
ಚಿಕ್ಕ ಮಕ್ಕಳಿಗೆ ಹೊಟ್ಟೆ ಹುಳ ಜಾಸ್ತಿ ಆಗುತ್ತದೆ ಅವರಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ತುಳಸಿ ರಸವನ್ನು ಕುಡಿಸಬೇಕು. ಕೆಲವರು ತುಳಸಿ ಗಿಡಕ್ಕೆ ಔಷಧಿಯನ್ನು ಸಿಂಪಡಿಸುತ್ತಾರೆ ಒಂದು ವಾರ ನೀರು ಹಾಕುತ್ತಾ ಬಂದರೆ ಔಷಧಿ ಹೋಗುತ್ತದೆ. ಕೆಮಿಕಲ್ ಹೋಗದೆ ತುಳಸಿ ಎಲೆಯನ್ನು ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ. ಮನೆ ಮುಂದೆ ತುಳಸಿ ಗಿಡಗಳನ್ನು ಬೆಳೆಯುವುದರಿಂದ ಬ್ಯಾಕ್ಟೀರಿಯಾ, ಡೆಂಗ್ಯೂ ಸೊಳ್ಳೆಗಳು ಇನ್ನಿತರ ಕ್ರಿಮಿ ಕೀಟಗಳು ಮನೆ ಒಳಗೆ ಬರುವುದಿಲ್ಲ.
ತುಳಸಿ ಗಿಡದಿಂದ ಬರುವ ಗಾಳಿಯೂ ಉತ್ತಮವಾಗಿರುತ್ತದೆ. ರಾತ್ರಿ ಮಲಗುವಾಗ ಒಂದು ಲೀಟರ್ ನೀರಿಗೆ 5-6 ತುಳಸಿ ಎಲೆಯನ್ನು ಹಾಕಿದರೆ 8 ಗಂಟೆ ಒಳಗೆ ನೀರನ್ನು ಶುದ್ಧೀಕರಿಸುತ್ತದೆ, ಆ ನೀರನ್ನು ಬೆಳಗ್ಗೆ ಕುಡಿಯುವುದರಿಂದ ದೇಹದಲ್ಲಿ ಬ್ಯಾಕ್ಟೀರಿಯಾ, ವೈರಸ್ ನಾಶವಾಗುತ್ತದೆ. ತುಳಸಿ ಎಲೆಯನ್ನು ಅಗೆದು ತಿನ್ನಬಾರದು ಅದು ನಮ್ಮ ಹಲ್ಲನ್ನು ಡ್ಯಾಮೇಜ್ ಮಾಡುತ್ತದೆ ಆದ್ದರಿಂದ ತುಳಸಿ ಎಲೆಯನ್ನು ನುಂಗಬೇಕು ಅಥವಾ ತುಳಸಿ ರಸವನ್ನು ಕುಡಿಯಬೇಕು.
ತುಳಸಿ ಗಿಡಗಳಲ್ಲಿ ಎರಡು ವಿಧ ಅದರಲ್ಲಿ ಕೃಷ್ಣ ತುಳಸಿ ಎಂಬ ಕಪ್ಪು ಬಣ್ಣದ ತುಳಸಿ ಎಲೆಯನ್ನು ಸೇವಿಸಬೇಕು. ಇಷ್ಟೊಂದು ಆರೋಗ್ಯಕರ ಪ್ರಯೋಜನಗಳು ಇರುವ ತುಳಸಿ ಗಿಡವನ್ನು ತಪ್ಪದೆ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲೂ ಬೆಳೆಸಿ.