ಹನ್ನೆರಡು ರಾಶಿಗಳಲ್ಲಿ ಏಳನೇ ರಾಶಿಯಾದ ತುಲಾ ಶುಕ್ರ ಗ್ರಹದ ಅಧಿಪತ್ಯವಿರುವ ಚಿನ್ಹೆ ಆಗಿದೆ. ಈ ರಾಶಿಯಲ್ಲಿ ಜನಿಸಿದವರು ಆಕರ್ಷಕ ಗುಣದವರೂ ಹಾಗೂ ಎಲ್ಲವನ್ನೂ ಸಮಾನ ದೃಷ್ಟಿಯಿಂದ ಕಾಣುವವರು.,ನ್ಯಾಯದ ಪರವಾಗಿ ಇರುವವರು.ತುಲಾ ರಾಶಿಯವರ ಹುಟ್ಟು ಅವರ ಜೀವನದಲ್ಲಿ ಹೆಚ್ಚು ವ್ಯತ್ಯಾಸವನ್ನು ತೋರುವುದಿಲ್ಲ, ಸ್ವಯಂ ಕೃಷಿ ಅವರ ಜೀವನದಲ್ಲಿ ಬದಲಾವಣೆ ತರುತ್ತದೆ. ಇವರ ನಡುವಳಿಕೆ, ಇವರು ಯಾವ ರೀತಿಯಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ ಅದರ ಆಧಾರದಲ್ಲಿ ಇವರ ಭವಿಷ್ಯ ನಿಂತಿದೆ.

ಇವರೇ ಕಷ್ಟ ಪಡಬೇಕು, ಇವರೇ ಜೀವನದಲ್ಲಿ ಮುಂದೆ ಬರಬೇಕು ಯಾರ ಸಹಾಯವೂ ಇಲ್ಲದಿದ್ದರೂ. ಇವರು ತುಂಬಾ ಕಷ್ಟ ಪಡುವುದರಿಂದ ಪ್ರಾರಂಭದಲ್ಲಿ ಒಂದು ರೀತಿಯಾದ ಜೀವನ ಮತ್ತು ಅಂತ್ಯ ಕಾಲದಲ್ಲಿ ಮತ್ತೊಂದು ರೀತಿಯ ಜೀವನವನ್ನು ತುಲಾ ರಾಶಿಯವರು ನೋಡಬೇಕಾಗುತ್ತದೆ. ಇವರಿಗೆ ಸಾಮಾನ್ಯವಾಗಿ ಸಮಾಜದಲ್ಲಿ ಈ ಒಂದು ಪದವಿ, ಪ್ರತಿಷ್ಠೆ ಎಲ್ಲವೂ ಸಹ ಲಭ್ಯವಾಗುತ್ತವೆ.ಚಿನ್ನವಾಗಲಿ, ಹಣವಾಗಲಿ ಇವರ ಹತ್ತಿರ ಕ್ರೂಢಿಕ್ರೂತವಾಗಿರುತ್ತದೆ. ಈ ರಾಶಿಯಲ್ಲಿ ಹುಟ್ಟಿರುವಂತವರು ತುಂಬಾ ಪ್ರಖ್ಯಾತರಾಗುವಂತಹ ಸಾಧ್ಯ ಇದೆ. ಇವರ ಆಂತರ್ಯದಲ್ಲಿ ಜ್ವಾಲಾಮುಖಿ ಕುದಿಯುತ್ತಿದ್ದರು ಸಹ ಹೊರಗಡೆ ನಗು ಮುಖದಿಂದ ಇರುತ್ತಾರೆ.

 ನೋಡಲು ಸುಂದರವಾಗಿರುತ್ತಾರೆ, ಹಾಗೂ ಇವರು ತುಂಬಾ ದೀರ್ಘಾವಧಿಕಾಲ ಯೋಚನೆ ಮಾಡಿದ ನಂತರವೇ  ವಿಚಾರವನ್ನು ಅರಿತುಕೊಳ್ಳುತ್ತಾರೆ. ಇವರ ಮಾತಿನಿಂದ, ಮುಖದಿಂದ, ನಗುವಿನಿಂದ ಎಲ್ಲರನ್ನೂ ಬಹು ಬೇಗ ಆಕರ್ಷಿಸುತ್ತಾರೆ. ಇವರು ತುಂಬಾ ನೇರವಾದಿಗಳಾಗಿರುತ್ತಾರೆ, ಇವರದ್ದು ಕಪಟವಿಲ್ಲದ ಮಾತು. ದೈವ ಗುರು ಹಿರಿಯರು ಎಂದರೆ ಭಕ್ತಿ ಮತ್ತು ಧಾರ್ಮಿಕ ಯೋಚನೆಗಳನ್ನು ಮಾಡುತ್ತಾರೆ.

ನಿಮ್ಮ ನೆಚ್ಚಿನ ದೇವರನ್ನು ಪೂಜಿಸುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸುತ್ತದೆ. ಆರೋಗ್ಯ ಜೀವನದಲ್ಲಿ ಸಕಾರಾತ್ಮಕ ಪಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ಯಾವುದೇ ನಿಕಟ ದೇವಸ್ಥಾನಕ್ಕೆ ಹೋಗಿ ಪ್ರತಿದಿನ ತುಪ್ಪದ ದೀಪವನ್ನು ಬೆಳಗಿಸಿ. ನಿಯಮಿತವಾಗಿ ಮನೆಯಲ್ಲಿ ಸಮೃದ್ಧಿಯನ್ನು ಪಡೆಯಲು ಸಿದ್ಧ ಕುಂಜಿಕಾ ಸ್ತೋತ್ರವನ್ನು ಪಠಿಸಿ. ಬಡ ಜನರು ಮತ್ತು ಅಗತ್ಯವಿರುವ ಜನರಿಗೆ ಬಿಳಿ ಬಟ್ಟೆಗಳ ದಾನ ಮಾಡುವುದರಿಂದಲೂ ಪ್ರತಿಯೊಂದು ಕೆಲಸದಲ್ಲೂ ನೀವು ಯಶಸ್ಸು ಪಡೆಯುತ್ತಿರಾ.

Leave a Reply

Your email address will not be published. Required fields are marked *