ತುಲಾ ರಾಶಿಯವರಿಗೆ ಯಾವ ದೇವರ ಕೃಪೆಯಿಂದ ನಿಮ್ಮ ಅದೃಷ್ಟ ಬದಲಾಗುತ್ತೆ ಗೊತ್ತಾ

0 8

ದ್ವಾದಶರಾಶಿಗಳಲ್ಲಿ 12 ರಾಶಿಗಳು ತನ್ನದೆಆದ ಪ್ರಾಮುಖ್ಯತೆಯನ್ನು ಹೊಂದಿದೆ. ರಾಶಿಗಳಲ್ಲಿ ತುಲಾ ರಾಶಿ ಒಂದು ಪ್ರಮುಖ ರಾಶಿಯಾಗಿದೆ, ತುಲಾ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ತುಲಾ ರಾಶಿಯವರಿಗೆ ಪಂಚಮಶನಿ ನಡೆಯುತ್ತಿರುವ ಸಂದರ್ಭ ಇದಾಗಿದ್ದು ಅನೇಕ ನಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಯಾವ ದೇವರ ಆರಾಧನೆ ಮಾಡುವುದರಿಂದ ತುಲಾ ರಾಶಿಯವರು ನಷ್ಟದಿಂದ ದೂರವಾಗುತ್ತಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ತುಲಾ ರಾಶಿಯವರಿಗೆ ಪಂಚಮಶನಿ ನಡೆಯುತ್ತಿರುವುದರಿಂದ ಕಷ್ಟ-ನಷ್ಟಗಳಲ್ಲಿ ಇದ್ದಾರೆ. ತುಲಾರಾಶಿಗೆ ಭಾಗ್ಯಾಧಿಪತಿ ಬುಧಗ್ರಹ ಆದ್ದರಿಂದ ಬುಧಗ್ರಹದ ಆರಾಧನೆ ಮಾಡಿಕೊಂಡರೆ ನಷ್ಟ ಉಂಟಾಗುವುದನ್ನು ತಪ್ಪಿಸಬಹುದು. ತುಲಾ ರಾಶಿಯವರಿಗೆ ಅದೃಷ್ಟ ಕೊಡುವುದು ಬುಧನಾಗಿರುತ್ತಾನೆ. ತುಲಾ ರಾಶಿಯವರಿಗೆ ಬುಧ ಗ್ರಹ ಚೆನ್ನಾಗಿದ್ದರೆ ಅದೃಷ್ಟ ಚೆನ್ನಾಗಿರುತ್ತದೆ, ಅದೃಷ್ಟ ಬರಬೇಕೆಂದರೆ ತುಲಾ ರಾಶಿಯವರು ಬುಧನ ಆರಾಧನೆ ಮಾಡಬೇಕು. ತುಲಾ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗಬೇಕು ಎಂದಾದರೆ ಬುಧನ ಆರಾಧನೆ ಮಾಡಬೇಕು.

ತುಲಾ ರಾಶಿಯವರ ತಂದೆಯ ಜೊತೆಗಿನ ಸಂಬಂಧ ಸರಿಯಾಗಿಲ್ಲದಿದ್ದರೆ, ತಂದೆಗೆ ಹೆಚ್ಚಿನ ಸಮಯದಲ್ಲಿ ಅನಾರೋಗ್ಯ ಕಾಣಿಸಿಕೊಂಡರೆ ತುಲಾ ರಾಶಿಯವರ ಜಾತಕದಲ್ಲಿ ಬುಧನ ಬಲ ಕಡಿಮೆಯಾಗಿದೆ ಎಂದು ಅರ್ಥ. ಬುಧನ ಆರಾಧನೆ ಮಾಡಿದರೆ ತಂದೆ ಹಾಗೂ ಅವರ ಸಂಬಂಧ ಉತ್ತಮವಾಗಿರುತ್ತದೆ. ಬುಧನ ಬಲ ಕಡಿಮೆ ಆದಾಗ ತುಲಾ ರಾಶಿಯವರು ಬಂಗಾರ, ಹಣವನ್ನು ಕಳೆದುಕೊಳ್ಳುವ ಸಂಭವ ಇರುತ್ತದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರಬಹುದು. ಇಂತಹ ಸಮಸ್ಯೆಗಳಿಗೆ ತುಲಾ ರಾಶಿಯವರು ಬುಧನ ಆರಾಧನೆ ಮಾಡಬೇಕು.

ಹಾಕಿದ ಬಂಡವಾಳ ನಷ್ಟ ಆಗದಂತೆ ನೋಡಿಕೊಳ್ಳಲು ಬುಧನ ಆರಾಧನೆ ಮಾಡಬೇಕು. ಪ್ರತಿದಿನ ಬೆಳೆಗೆ ಎದ್ದು ವಿಷ್ಣು ಅಷ್ಟೋತ್ತರ ಅಥವಾ ಬುಧನ ಅಷ್ಟೊತ್ತರವನ್ನು ಅಥವಾ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು ವಿಷ್ಣು, ಸಹಸ್ರನಾಮವನ್ನು ಓದಲು ಕಷ್ಟವಾದರೆ ಕೇಳಬಹುದು ಇದರಿಂದಲೂ ಪುಣ್ಯ ಲಭಿಸುತ್ತದೆ. ವಿಷ್ಣುವಿನ ಆರಾಧನೆಯಿಂದ ನಷ್ಟ ಆಗುವುದು ತಪ್ಪುತ್ತದೆ. ಬುಧವಾರದಂದು ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಹಸಿರು ಬಟ್ಟೆಯಲ್ಲಿ ಹೆಸರುಕಾಳನ್ನು ದಾನ ಮಾಡಬೇಕು ಇದರಿಂದ ಪುಣ್ಯ ಲಭಿಸುತ್ತದೆ. ದೇವಾಲಯದಲ್ಲಿ ಹಾಲಿನ ಅಭಿಷೇಕ ಮಾಡಿಸುವುದರಿಂದಲೂ ಒಳ್ಳೆಯದಾಗುತ್ತದೆ.

ಜೂನ್ 14 ರಂದು ವಟಸಾವಿತ್ರಿ ವ್ರತದ ದಿನವಾಗಿದ್ದು ಅಂದು ಬುಧ ಶಾಂತಿ ಹೋಮವನ್ನು ಮಾಡಿಸಬಹುದು ಇದರಿಂದ ತುಲಾ ರಾಶಿಯವರಿಗೆ ಒಳ್ಳೆಯದಾಗುತ್ತದೆ. ತುಲಾ ರಾಶಿಯವರು ಬುಧನ ಆರಾಧನೆಯನ್ನು ಮಾಡುವುದರಿಂದ ತಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ತುಲಾ ರಾಶಿಯವರಿಗೆ ತಿಳಿಸಿ ಹಾಗೂ ಬುಧನ ಆರಾಧನೆ ಮಾಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಿ.

Leave A Reply

Your email address will not be published.