TTD Recruitment 2023: ತಿರುಪತಿ ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಅತಿಹೆಚ್ಬು ಪ್ರಸಿದ್ಧಿ ಪಡೆದಿರುವ ದೇವಸ್ಥಾನಗಳಲ್ಲಿ ಒಂದು. ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಭಕ್ತರು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದಿನವೂ ಕೂಡ ಲಕ್ಷಗಟ್ಟಲೇ ಜನರು ತಿರುಪತಿಗೆ ಹೋಗುತ್ತಾರೆ. ಪ್ರತಿದಿನ ಅಲ್ಲಿ ರಶ್ ಇರುತ್ತದೆ. ಭಕ್ತರು ಅತಿಹೆಚ್ಚಾಗಿ ಬರುವ ಈ ದೇವಸ್ಥಾನದಲ್ಲಿ ಈಗ ಹಲವು ಹುದ್ದೆಗಳು ಖಾಲಿ ಇವೆ.

ಹೌದು, ಟಿಟಿಡಿಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ. ಈಗ ಟಿಟಿಡಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬರೋಬ್ಬರಿ 56 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ. ಈ ಕಾರಣಕ್ಕೆ ಆಸಕ್ತಿ ಇರುವ ಎಲ್ಲರೂ ಕೂಡ ಟಿಟಿಡಿಯಲ್ಲಿ ಖಾಲಿ ಇರುವ ಈ ಹುದ್ದೆಗೆ ಈಗಲೇ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಉಳಿದಿರುವುದು ಇನ್ನು 7 ದಿನಗಳು ಮಾತ್ರ, ಹಾಗಾಗಿ ಬೇಗ ಅರ್ಜಿ ಸಲ್ಲಿಸಿ.

ಟಿಟಿಡಿಯಲ್ಲಿ ಈಗ ಈ ಹುದ್ದೆಗಳ ಕೊರತೆ ಇದ್ದು, ತಕ್ಷಣವೇ ನೇಮಕ ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ, ಎಇಇ ಸಿವಿಲ್ ವಿಭಾಗದಲ್ಲಿ 27 ಹುದ್ದೆಗಳು ಖಾಲಿ ಇದೆ, ಒಸಿ ಹುದ್ದೆಗೆ 12, ಬಿಸಿಎ ವಿಭಾಗದಲ್ಲಿ 2 ಹುದ್ದೆ, ಬಿಸಿಬಿ ಹುದ್ದೆಗೆ 2 ಹುದ್ದೆ, ಬಿಸಿಡಿ ಗೆ 2 ಹುದ್ದೆ, ಎಸ್ಸಿ ಗೆ 5 ಹುದ್ದೆ, ಎಸ್ಟಿಗೆ 2, EW SC ಗೆ 2 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗಳಿಗೆ ಕೆಲವು ಅರ್ಹತೆಗಳು ಸಹ ಇದ್ದು, ಬಿಇ ನಲ್ಲಿ ಸಿವಿಲ್ ಅಥವಾ ಮೆಕ್ಯಾನಿಕಲ್ ಪದವಿ ಮುಗಿಸಿರಬೇಕು.

ಈ ಹುದ್ದೆಗಳಿಗೆ ಸಿಗಬಹುದಾದ ಸಂಬಳ ಎಷ್ಟು ಎಂದು ನೋಡುವುದಾದರೆ, 57,100 ಇಂದ 1,47,760 ರೂಪಾಯಿಗಳ ವರೆಗು ಇರುತ್ತದೆ. ಎಇ ಸಿವಿಲ್ ವಿಭಾಗದಲ್ಲಿ 10 ಹುದ್ದೆಗಳನ್ನು ಸಹ ಭರ್ತಿ ಮಾಡುವುದಕ್ಕೆ ಟಿಟಿಡಿ ನಿರ್ಧಾರ ಮಾಡಿದೆ. ಒಸಿಗೆ 3, ಬಿಸಿಬಿಗೆ 1, ಬಿಸಿಎಗೆ 1, ಬಿಸಿಡಿಗೆ 1, ಎಸ್ಸಿಗೆ 2 ಮತ್ತು ಇಡಬ್ಲ್ಯೂಎಸ್ ಗೆ 1 ಹುದ್ದೆ ಖಾಲಿ ಇದೆ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು LCE ತೇರ್ಗಡೆ ಆಗಿರಬೇಕು. ಇವರು ಇಂಥದ್ದೇ ಕೋರ್ಸ್ ಮಾಡಿರಬೇಕು. ಇವರಿಗೆ ತಿಂಗಳ ಸಂಬಳ 48,440 ಇಂದ 1,37,220 ರೂಪಾಯಿ ಆಗಿರುತ್ತದೆ.

ಈ ಹುದ್ದೆಗಳಿಗೆ ವಯೋಮಿತಿ ಎಷ್ಟು ಎಂದು ಹೇಳುವುದಾದರೆ, 2023ರ ಜುಲೈ1ಕ್ಕೆ 42 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23/11/2023 ಆಗಿದೆ https://ttd-recruitment.aptonline.in/TTDRecruitment/Views/Dashboard.aspx ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಇನ್ನಿತರ ಮಾಹಿತಿಗಳಿಗೆ https://www.tirumala.org/ ವೆಬ್ಸೈಟ್ ಗೆ ಭೇಟಿ ನೀಡಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!