Today’s Zodiac Sign: ಬೇಡಿದ ವರವನ್ನು ನೀಡುವ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಇವತ್ತಿನ ರಾಶಿಫಲ ತಿಳಿದುಕೊಳ್ಳಿ

Astrology

Today’s Zodiac Sign May 12: ಮೇಷ ರಾಶಿ ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಕೌಶಲ ವೃದ್ಧಿಸಿಕೊಳ್ಳಲು ಹೊಸ ಅವಕಾಶಗಳು ದೊರೆಯಲಿದೆ.ತಂದೆಯವರ ಮಾತು ವೇದವಾಕ್ಯ ಎಂದು ಪರಿಪಾಲಿಸುವುದರಿಂದ ಅಭಿವೃದ್ಧಿಯ ಪಥದಲ್ಲಿ ಸಾಗುವಿರಿ. ದುಗುಡಗಳು ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಸರ್ವೇಸಾಮಾನ್ಯ ಆದರೆ ಅದನ್ನು ನಿರ್ವಹಿಸುವ ಸಾಮರ್ಥ್ಯವನ್ನು ಅರಿಯುವುದು ಉತ್ತಮ.

Today’s Zodiac Sign

ವೃಷಭ ರಾಶಿ ವೃತ್ತಿಭೂಮಿಕೆಯಲ್ಲಿ ಕೆಲವರು ನಾಯಕರಾಗುವ ಸಂಭವವಿದೆ. ಹೆಚ್ಚುವರಿ ಜವಾಬ್ದಾರಿಗಳನ್ನು ಜಾಗ್ರತೆಯಿಂದ ನಿರ್ವಹಿಸಿ, ಸುತ್ತಣ ಪರಿಸರದ ಲ್ಲಿರುವ ಬುದ್ಧಿವಂತ ವ್ಯಕ್ತಿಗಳಿಂದ ಹೆಚ್ಚಿನಲಾಭ ಉಂಟಾಗುವುದು.ಬೃಹತ್ ಮಟ್ಟದ ವಾಹನ ಖರೀದಿಸುವವರಿಗೆ ಇದು ಸೂಕ್ತ ಸಮಯವವಲ್ಲ.

ಮಿಥುನ ರಾಶಿ (Mithuna Rashi) ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಕಠಿಣ ಸವಾಲುಗಳು ಎದುರಾಗುತ್ತವೆ. ರಾಜಕೀಯ ಪಕ್ಷದ ನಾಯಕರು ಅಧಿಕಾರವ್ಯಾಪ್ತಿಯನ್ನು ಹೆಚ್ಚಿಸುವಿರಿ. ಹಣಕಾಸಿನ ಲೆಕ್ಕಾಚಾರ ಇಂದು ಹೆಚ್ಚಿರುತ್ತದೆ.ಜಾಗರೂಕರಾಗಿ ನಡೆಸಿ. ತಂದೆ ತಾಯಿಯ ಜತೆ ಆಸ್ತಿ ಪಾಲುದಾರಿಕೆಯ ವಿಷಯವಾಗಿ ಮಾತನಾಡುವುದಿದ್ದಲ್ಲಿ ಮಾತಿನ ಮೇಲೆ ಹಿಡಿತವಿರಲಿ.

ಕರ್ಕಾಟಕ ರಾಶಿ ಬೆಳವಣಿಗೆಯ ಹಾದಿಯಲ್ಲಿ ದಿಕ್ಕು ತಪ್ಪಿಸುವವರೇ ಹೆಚ್ಚಿರುವು ದರಿಂದ ನಿಮ್ಮತನವನ್ನು ಪ್ರದರ್ಶಿಸುವುದು ಸ್ವಲ್ಪ ಕಷ್ಟವಾದೀತು.ನಿಲುವು ಸರಿಯಾಗಿದೆ ಎಂದು ಅನಿಸಿದಲ್ಲಿ ನಿಮ್ಮ ನಿರ್ಧಾರದಲ್ಲಿ ಧೃಡ ನಂಬಿಕೆ ಇರಲಿ.ಒಡಹುಟ್ಟಿದವರನ್ನು ಹೊರಗಿನವರಂತೆ ಕಾಣುವುದು ಸರಿಯಲ್ಲ. ತರಕಾರಿ ಮಾರಾಟಗಾರರಿಗೆ ಲಾಭ.

ಸಿಂಹ ರಾಶಿ (Simha Rashi) ಆರೋಗ್ಯದ ವಿಚಾರವಾಗಿ ಗಮನ ಹರಿಸಿ.ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳುವುದರಿಂದ ನಕಾರಾತ್ಮಕ ಅಂಶದೂರವಾಗುತ್ತದೆ. ಏಳೆಗೆ ನೆರವಾಗುವವರ ಸಹಾಯ ಸಿಗುವುದು.

ಕನ್ಯಾ ರಾಶಿ (Kanya Rashi) ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಪ್ರಶಂಸಾ ನುಡಿ ದೊರೆಯುತ್ತದೆ.ಸಂಗೀತ ಸಾಹಿತ್ಯದಂತಹಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ ಹಿರಿಯ ಕಲಾವಿದರ ಭೇಟಿ ಮಾಡುವ ಅವಕಾಶವಿದೆ. ರಾಜಕೀಯದಲ್ಲಿ ಇದ್ದವರಿಗೆ ನಿಮ್ಮ ನಾಯಕರಿಂದ ಕಾರ್ಯಕರ್ತರವರಿಗೆ ಪ್ರಶಂಸೆ ಸುರಿಮಳೆ ಬರಲಿದೆ.

ತುಲಾ ರಾಶಿ (Tula Rashi) ವಿದ್ಯುತ್ ಸಂಬಂಧಿ ವಸ್ತುಗಳ ಬಳಕೆಯನ್ನು ಮಾಡುವಾಗ ಹೆಚ್ಚಿನ ಮುಂಜಾಗ್ರತೆವಹಿಸಿ.ಬ್ಯಾಂಕ್ ಉದ್ಯೋಗಿಗಳಿಗೆ ಮೇಲಧಿಕಾರಿಗಳೊಂದಿಗೆ ಹೊಸ ಯೋಜನೆಯನ್ನು ಕುರಿತು ಗಹನವಾದ ಚರ್ಚೆಯು ವಡೆಯುವ ಸಾಧ್ಯತೆ. ಮನೆಯಲ್ಲಿ ಶುಭಕಾರ್ಯ ಆರಂಭವಾಗಲಿದೆ.

ವೃಶ್ಚಿಕ ರಾಶಿ (Vruschika Rashi) ಕೆಲಸವನ್ನು ಪೂರೈಸಲು ಮಾಡಿದ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತೆ ಆಗದಿರಲು ಮುನ್ನೆಚ್ಚರಿಕೆ ವಹಿಸಿ.ಜಾಣೆಯ ನಡೆಯಿಂದಾಗಿ ಬಂಧುಮಿತ್ರರಲ್ಲಿ ವೈಮನಸ್ಸು ಉಂಟಾಗುವುದನ್ನು ತಪ್ಪಿಸಬಹುದು. ಕುಟುಂಬದ ಜೊತೆಗೆ ಧರ್ಮ ಕ್ಷೇತ್ರಕ್ಕೆ ಭೇಟಿ ನೀಡಲಿದ್ದೀರಾ.

ಧನು ರಾಶಿ (Dhanu Rashi) ಅನಗತ್ಯವದಂತಿಗೆ ಕಿವಿ ಕೊಡದಿರಿ.ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸದಿದ್ದರೆ ಅಭ್ಯುದಯ ಅಸಾಧ್ಯ. ಯಾವ ವಿಷಯದಲ್ಲಿ ಹಿಂದುಳಿದಿರುವಿರಿ ಎಂದು ಕಂಡುಕೊಂಡು ತಜ್ಞರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಿರಿ. ತೀರ್ಥಯಾತ್ರೆಗಳನ್ನು ಮಾಡಬೇಕೆಂದುಕೊಂಡವರು ಅಬಗ್ಗೆಯಾಗಿ ಯೋಚಿಸಲು ಇದು ಪ್ರಶಸ್ತ ಸಮಯ ಸ್ನೇಹಿತರೊಂದಿಗೆ ಮರೆಯಲಾಗದ ಕ್ಷಣಗಳನ್ನು ಕಳೆಯುವಿರಿ.

ಮಕರ ರಾಶಿ (Makara Rashi) ಹಿರಿಯರಿಂದ ಪಡೆದ ಸಲಹೆಯು ಜೀವನಕ್ಕೆ ಹೊಸ ಬುನಾದಿಯಾಗಲಿದೆ.ತೆಂಗು ಅಡಿಕೆ ಬೆಳೆಗಾರಗಿಗೆ ಅಧಿಕ ಲಾಭವಿರುವುದು.ಕೆಲವರಿಗೆ ನಿಮ್ಮಮೇಲಿದ್ದ ಸಂಶಯದ ಮನೋಭಾವ ನಿವಾರಣೆಯಾಗುವುದು.ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಜಯ

ಕುಂಭ ರಾಶಿ (Kumba Rashi) ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ವಿಶ್ವಾಸಿಗಳಿಂದ ವೈದ್ಯರ ಸಂಪರ್ಕ ಮತ್ತು ಸಹಾಯ ಹಸ್ತಸಿಗುವುದು. ಇಂದಿನ ಖರ್ಚುವೆಚ್ಚಗಳು ಹಚ್ಚೆ ಇರುವುದರಿಂದ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ.ಹೆಚ್ಚಿನ ಕಡೆ ಜಗಳವನ್ನು ತಣಿಸಲು ಪ್ರಯೋಜನವಾಗುವ ಹಾಸ್ಯಪ್ರವೃತ್ತಿ ಇಂದು ಕೈಬಿಡುವ ಸಾಧ್ಯತೆ ಇದೆ.

ಮೀನ ರಾಶಿ (Meena Rashi) ವಾಣಿಜ್ಯ ರಂಗದಲ್ಲಿ ಹೊಸ ತಿರುವು ಮೂಡಲಿದೆ.ಇಂದು ಕೋರ್ಟು ಕಚೇರಿಯ ಕೆಲಸ ಕೇವಲ ಅಲೆದಾಟವನ್ನು ಮಾಡಿಸುವುದು, ಹೂಡಿಕೆಯ ಬಗ್ಗೆ ಎಚ್ಚರಿಕೆಯಿಂದ ತೀರ್ಮಾನವನ್ನು ಕೈಗೊಳ್ಳುವುದು ಉತ್ತಮ.ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಡಿರುವ ಯೋಗ ಪಟುಗಳಿಗೆ ಉತ್ತಮ ಅವಕಾಶ ಬರಲಿವೆ.

Leave a Reply

Your email address will not be published. Required fields are marked *