today Sagittarius Horoscope in Kannada: ಧನಸ್ಸು ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ ಹೇಗಿರುತ್ತದೆ ಎಂದು ನಾವು ಇಲ್ಲಿ ನೋಡಬಹುದು. ಜೂನ್ ತಿಂಗಳಲ್ಲಿ ಧನಸ್ಸು (Sagittarius) ರಾಶಿಯವರಿಗೆ ಶನಿಗ್ರಹದಿಂದ ಉತ್ತಮ ಫಲ ದೊರಕುತ್ತದೆ.

ಧನಸ್ಸು ರಾಶಿಯವರಿಗೆ ಬುಧ ಗ್ರಹ ಮೇಷ (Aries) ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡಿದ ಸಂದರ್ಭದಲ್ಲಿ ನಿಮಗೆ ನೀವು ಮಾಡುವಂತಹ ಕೆಲಸದಲ್ಲಿ ವಿಜಯ ದೊರಕುತ್ತದೆ ಹಾಗೂ ನಿಮ್ಮ ಉದ್ಯೋಗದಲ್ಲೂ ಕೂಡ ಉನ್ನತಿ ಪ್ರಾಪ್ತಿ ಆಗುತ್ತದೆ. ಶುಕ್ರ ಗ್ರಹ ಅಷ್ಟಮ ಬಾಹುವಿನಲ್ಲಿ ಸ್ಥಿರವಾಗಿದ್ದ ಸಂದರ್ಭದಲ್ಲಿ ವಿವಾಹ ಅಪೇಕ್ಷೆಗಳಿಗೆ ಈ ಸಮಯ ಉತ್ತಮವಾಗಿದೆ ಹಾಗೂ ಗುರುಬಲ ಕೂಡ ಚೆನ್ನಾಗಿದೆ.

ಈ ತಿಂಗಳಲ್ಲಿ ಮತ್ತೊಂದು ವಿಶೇಷತೆ ಏನೆಂದರೆ ಶನಿ ಗ್ರಹ ಕುಂಭ ರಾಶಿಯಲ್ಲಿ ವಕ್ರನಾಗುತ್ತಾನೆ ಈ ಸಮಯದಲ್ಲಿ ಗ್ರಹದ ಬಲ ಹೆಚ್ಚಾಗುತ್ತದೆ ಹಾಗಾಗಿ ಅದು ಉತ್ತಮವಾದ ಫಲವನ್ನು ನಿಮಗೆ ನೀಡುತ್ತದೆ. ವಾಹನ ವಿಷಯದಲ್ಲಿ (Vehicle matter) ಅಭಿವೃದ್ಧಿಯಾಗುತ್ತದೆ ಹಾಗೂ ಹೊಸ ವಾಹನವನ್ನು ಖರೀದಿ ಮಾಡಲು ಒಳ್ಳೆಯ ಸಮಯವಾಗಿದೆ. ಹಣಕಾಸಿನ ವಿಷಯದಲ್ಲೂ ಕೂಡ ಬೆಳವಣಿಗೆ ಆಗುತ್ತದೆ.

ಆರೋಗ್ಯದ (Health Matter) ವಿಷಯದಲ್ಲಿ ಸ್ವಲ್ಪ ಮುಂಜಾಗರು ಕಥೆ ಇರಬೇಕಾಗುತ್ತದೆ. ನೀವು ಇಷ್ಟ ಪಟ್ಟಂತ ವಸ್ತು ತೆಗೆದುಕೊಳ್ಳಲು ಆಗಿರಲಿಲ್ಲ ಅಂತಾದರೆ ಈ ಸಮಯದಲ್ಲಿ ಆ ವಸ್ತು ಪ್ರಾಪ್ತಿ ಆಗುತ್ತದೆ. ಧಾರ್ಮಿಕ ವಿಷಯದಲ್ಲಿ ಸ್ವಲ್ಪ ನಿರಾಶಕ್ತಿ ಉಂಟಾಗಬಹುದು. ಚಂಡಾಳ ಯೋಗ ಪ್ರಮುಖವಾಗಿ ಅದು ನಿಮ್ಮ ಮೇಲೆ ಪ್ರಭಾವ ಬೀರಬಹುದು ಏಕೆಂದರೆ ಅದು ನಿಮಗೆ ಪಂಚಮಬಾಹುವಿನಲ್ಲಿ ಉಂಟಾಗುವಂತದ್ದು.

ವಿದ್ಯಾರ್ಥಿಗಳು (Students) ತಮ್ಮ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕಾಗುತ್ತದೆ ಏಕೆಂದರೆ ನಿಮ್ಮ ಮನಸ್ಥಿತಿ ಬೇರೆ ಕಡೆ ಎಳೆಯುವಂತಹ ಸಾಧ್ಯತೆಗಳು ಇರುತ್ತದೆ. ಆರೋಗ್ಯದ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆಗಳು ತುಂಬಾ ಇದೆ. ಕುಟುಂಬಕ್ಕೆ ಸಂಬಂಧಪಟ್ಟಂತಹ ವಿಷಯದಲ್ಲಿ ಈ ಮಾಸ ತುಂಬಾ ಉತ್ತಮವಾಗಿದೆ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದರಿಂದ ನಿಮ್ಮ ಕಷ್ಟಗಳು ಪರಿಹಾರಗೊಳ್ಳುತ್ತದೆ. ಇದನ್ನೂ ಓದಿ..Libra Horoscope: ತುಲಾ ರಾಶಿಯವರು ಬರುವ ಮೇ ತಿಂಗಳು ನೀವು ಬಹಳ ಎಚ್ಚರವಾಗಿರಬೇಕು ಯಾಕೆಂದರೆ..

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!