today Daily Horoscope in Kannada prediction on may 16 : ಮೇಷ ರಾಶಿ ತಾಯಿಯ ಬ್ಯಾಂಕ್‌ ಹಾಗೂ ಕಚೇರಿ ಕೆಲಸಗಳು ನಿಮ್ಮ ಜವಾಬ್ದಾರಿಗೆ ಬರುವುದರಿಂದ ತಿರುಗಾಟ ಮಾಡಬೇಕಾಗುವುದು. ಕೆಲವು ವಿಷಯಗಳು ಸರಿಯಾದ ಸಮಯಕ್ಕೆ ಮರೆತು ಹೋಗಿ ತೊಳಲಾಟಕ್ಕೆ ಒಳಗಾಗಬೇಕಾದೀತು. ಅನುಕೂಲಕರ ಬದಲಾವಣೆ ಸಾಧ್ಯತೆ. ನಿರ್ಧಾರಗಳು ಸರಿಯಾಗಿರುತ್ತವೆ.

today Daily Horoscope in Kannada

ವೃಷಭ ರಾಶಿ ಪ್ರತಿಯೊಬ್ಬರ ಬೇಕು ಬೇಡಗಳನ್ನು ನಿಭಾಯಿಸುತ್ತಿರುವವರನ್ನು ಅತಿಥಿಗಳು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ವಿದ್ಯಾಭ್ಯಾಸದ ಸಮಯದಲ್ಲಿ ಏಕಾಗ್ರತೆ ಮುಖ್ಯವಾಗುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಸ್ಥಿತಿ ಇರುತ್ತದೆ. ಸಂತತಿ ಸಿಗಲಿದೆ.

ಮಿಥುನ ರಾಶಿ ಬರಹಗಾರರಾಗಬೇಕು ಎಂಬ ಪಥದಲ್ಲಿ ಸಾಗುತ್ತಿರುವವರಿಗೆ ಪ್ರಸಿದ್ಧ ಬರಹಗಾರರ ಬರಹಗಳನ್ನು ಓದಿ ನಿಮ್ಮ ಬರವಣಿಗೆಗೆ ಒಂದು ರೂಪುರೇಷೆ ದೊರೆಯುತ್ತದೆ. ಎಷ್ಟೇ ತಾಳ್ಮೆ ಹೊಂದಿದ್ದರೂ ಕಡಿಮೆ ಆಗಬಹುದು. ಕಷ್ಟಗಳನ್ನು ಅನುಭವಿಸುವಿರಿ. ಉನ್ನತ ಸ್ಥಾನಮಾನದ ವ್ಯಕ್ತಿಗಳೊಂದಿಗೆ ಪ್ರೀತಿಯ ಸಂಬಂಧಗಳು ಬೆಳೆಯುತ್ತವೆ.

ಕರ್ಕಾಟಕ ರಾಶಿ ಈ ಬಾರಿಯು ನಿಮ್ಮ ಉತ್ತಮ ಕಾರ್ಯಕ್ರಮ ನಿರ್ವಹಣೆಗೆ ಉತ್ತಮ ಪ್ರತಿಕ್ರಿಯೆಗಳು ಬರುತ್ತವೆ.ಯಾವುದೇಕೆಲಸಗಳಿದ್ದರೂ ಮನೆಯ ಜವಾಬ್ದಾರಿ ನಿರ್ವಹಣೆ ಮರೆಯುವುದು ಸೂಕ್ತವಲ್ಲ. ಗೌರವ, ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.

ಸಿಂಹ ರಾಶಿ ಅತ್ಯಂತ ಜಟಿಲ ಸಮಸ್ಯೆಗೆ ಬೇರೆಯವರಿಗೆ ಸುಲಲಿತ ಪರಿಹಾರ ಸೂಚಿಸುವ ನೀವು ನಿಮ್ಮದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಡವುತ್ತೀರಿ.ವಾಹನದ ಖರೀದಿಗೆ ಸೂಕ್ತ ಸಮಯ.ಅದೃಷ್ಟದ ಘಟನೆ ನಡೆಯಲಿದೆ. ಕೆಲವರಿಗೆ ಕೃಪೆ ಸಿಗುತ್ತದೆ.

ಕನ್ಯಾ ರಾಶಿ ಸಂಪೂರ್ಣ ಸಾವಯವ ವ್ಯವಸಾಯ ಮಾಡಿ ತಾಜಾ ತರಕಾರಿ ಹಾಗೂ ಹಣ್ಣುಗಳ ಮಾರಾಟಗಾರರಿಗೆ ಲಾಭ ಅಧಿಕವಾಗಲಿದೆ. ಪೂರ್ಣ ಮನಸ್ಸಿನಿಂದ ಮಾಡಿದ ಕಾರ್ಯಗಳು ಉತ್ತಮ ಫಲ ನೀಡುತ್ತವೆ. ಆರೋಗ್ಯ ಉತ್ತಮವಾಗಿರಲಿದೆ. ನಿಮ್ಮ ನಿರ್ಧಾರಗಳು, ಭವಿಷ್ಯವಾಣಿಗಳು ನಿಖರವಾಗಿರುತ್ತವೆ.

ತುಲಾ ರಾಶಿ ಗಣಕಯಂತ್ರದ ತಯಾರಕರು ಹಾಗೂ ಸರಿಪಡಿಸುವ ವ್ಯಕ್ತಿಗಳಿಗೆ ಉತ್ತಮ ದಿನವಾಗಲಿದೆ.ಪ್ರಾಮಾಣಿಕವಾಗಿ ಸಂಪಾದನೆ ಮಾಡುತ್ತಿರುವ ನಿಮಗೆ ಶತ್ರುಗಳ ಭಯ ಬೇಡವೆ ಬೇಡ. ಕಲಹಗಳಲ್ಲಿ ಮೌನವಾಗಿರಿ.ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಮಾನಸಿಕ ನೆಮ್ಮದಿಯನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ ಉದ್ಯೋಗದ ವಿಷಯದಲ್ಲಿ ಉತ್ತಮ ಅವಕಾಶಗಳು ನಿರ್ಲಕ್ಷ್ಯ, ದಿಂದ ಕೈತಪ್ಪುವ ಸಂದರ್ಭಗಳು ಎದುರಾಗಬಹುದು. ತಂದೆ ತಾಯಿಯರ ಸಂತೋಷ ಸಂತಸಕ್ಕೆ ಕಾರಣವಾಗಲಿದೆ. ಉತ್ಸಾಹ, ಭರವಸೆ ಹೆಚ್ಚಲಿದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನೀವು ಸಮೃದ್ಧಿ ಮತ್ತು ಖ್ಯಾತಿಯನ್ನು ಪಡೆಯುತ್ತೀರಿ.

ಧನು ರಾಶಿ ಶೈಕ್ಷಣಿಕ ಹಾಗೂ ಸಾಂಸಾರಿಕ ಪರೀಕ್ಷೆಗಳೆರಡರಲ್ಲೂ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನ ಈಗಿನದ್ದಕ್ಕಿಂತ ಹೆಚ್ಚು ಅಗತ್ಯವಿದೆ. ಸಂತೋಷದಗಳಿಗೆಯಲ್ಲಿ ಯಾರಿಗೂ ಭರವಸೆಗಳನ್ನು ನೀಡದಿರಿ.ಮಕ್ಕಳ ವಿಷಯದಲ್ಲಿ ಒಳ್ಳೆಯ ಘಟನೆ ನಡೆಯಲಿದೆ. ಹಿರಿಯರ ಕೃಪೆಗೆ ಪಾತ್ರರಾಗುವಿರಿ.

ಮಕರ ರಾಶಿ ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಿಕೊಂಡು ಪರಿಹಾರವನ್ನು ಕ್ಲಿಷ್ಟಕರವನ್ನಾಗಿ ಮಾಡಿಕೊಳ್ಳದಿರಿ. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರು ಸಹ ನಿಮ್ಮಊರು ಮನೆಯವರ ವಿಶ್ವಾಸ ಉಳಿಸಿಕೊಳ್ಳಿ.ಆಸ್ತಿ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಮಕ್ಕಳ ವಿಷಯದಲ್ಲಿ ಒಳ್ಳೆಯ ಘಟನೆ ನಡೆಯಲಿದೆ.

ಕುಂಭ ರಾಶಿ ಕುಟುಂಬದವರ ಜೊತೆ ಕಳೆಯುವ ಪ್ರತಿ ಕ್ಷಣ ನೆನಪಿಟ್ಟುಕೊಳ್ಳಬೇಕಾದಂತಹ ಸನ್ನಿವೇಶಗಳಾಗಿರುತ್ತದೆ.ಸಹೋದರ ಸಹೋದರಿಯರ ಜೀವನದ ಮುಖ್ಯಘಟನೆಗಳನ್ನು ಮತ್ತೊಮ್ಮೆ ಸ್ಮರಿಸುವಿರಿ.ಪ್ರಮುಖ ಕೆಲಸಗಳನ್ನು ಮುಂದೂಡಬೇಕು. ಕೆಲವರು ಶತ್ರುಗಳಿಂದ ತೊಂದರೆ ಅನುಭವಿಸುವರು.

ಮೀನ ರಾಶಿ ಸಜ್ಜನರ ಹಾಗು ದುರ್ಜನರ ಸಹವಾಸಗಳು ಅವವೇ ಫಲಗಳನ್ನು ಕೊಡುವುದು ಅನುಭವಕ್ಕೆ ಸರಿಯಾಗಿ ಬರುತ್ತದೆ.ಮನೆಯ ದುರಸ್ತಿ ಕಾರ್ಯಗಳು ಅಥವಾ ನೂತನ ಮನೆ ನಿರ್ಮಾಣವನ್ನು ಬೇಗ ಮುಗಿಸಿ.ಆರ್ಥಿಕ ಲಾಭವು ಉತ್ತಮವಾಗಿರುತ್ತದೆ. ಇದನ್ನೂ ಓದಿ.Temple Story: ಭಕ್ತರು ಬೇಡಿದ ತಕ್ಷಣ ಈ ಆಂಜನೇಯ ಸ್ವಾಮಿಯ ಕಣ್ಣಲ್ಲಿ ನೀರು ಬರುತ್ತೆ ಇದು ಎಲ್ಲಿದೆ ಗೊತ್ತಾ..

Leave a Reply

Your email address will not be published. Required fields are marked *